ಲಕ್ನೋ: ದಾಂಪತ್ಯ ಎಂದ ಮೇಲೆ ಜಗಳಗಳು ಸಾಮಾನ್ಯವಾಗಿ ನಡೆಯುತ್ತಿರುತ್ತದೆ. ಅದಕ್ಕೆ ಗಂಡ-ಹಂಡತಿ ಜಗಳ ಉಂಡು ಮಲಗೋ ತನಕ ಎಂಬ ಗಾದೆಯೇ ಇದೆ. ಒಂದೊಂದು ಸಲ ಜಗಳ (Quarrel) ವಿಕೋಪಕ್ಕೆ ತಿರುಗಿ ಹಲ್ಲೆಗಳಾಗಿರುವುದು, ಹತ್ಯೆ ಮಾಡಿರುವುದನ್ನು ನಾವು ದಿನನಿತ್ಯ ಕೇಳಿದ್ದೇವೆ. ಆದರೆ ಲಕ್ನೋದಲ್ಲಿ (Lucknow) ದಂಪತಿ (Couple) ಜಗಳ ಮಾಡಿಕೊಂಡಿದ್ದು, ಪತ್ನಿಯೇ ತನ್ನ ಪತಿಯ ನಾಲಗೆಯನ್ನು (Tongue) ಕಚ್ಚಿ ತುಂಡರಿಸಿದ್ದಾಳೆ ಎಂದು ತಿಳಿದುಬಂದಿದೆ. ಉತ್ತರ ಪ್ರದೇಶದ (Uttar Pradesh) ಲಕ್ನೋದ ಠಾಕುರ್ಗಂಜ್ ಎಂಬಲ್ಲಿ ಶುಕ್ರವಾರ ಈ ಘಟನೆ ನಡೆದಿದ್ದು, ಪತಿಯ ನಾಲಗೆ ಕತ್ತರಿಸಿದ್ದಕ್ಕೆ ಪತ್ನಿ ಮೇಲೆ ದೂರು ದಾಖಲಾಗಿದ್ದು, ಪೊಲೀಸರು (Police) ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಪೊಲೀಸರ ಪ್ರಕಾರ ಈ ದಂಪತಿ ಮೂರು ವರ್ಷಗಳ ಹಿಂದೆ ಮುನ್ನಾ ಮತ್ತು ಸಲ್ಮಾ ಎಂಬುವವರು ವಿವಾಹವಾಗಿದ್ದರು. ಕುಟುಂಬದಲ್ಲಿ ವೈಮನಸ್ಸು ಉಂಟಾಗಿ ಕಳೆದ ಒಂದು ವರ್ಷದಿಂದ ಇಬ್ಬರು ಬೇರೆ ಬೇರೆ ವಾಸಿಸುತ್ತಿದ್ದರು. ಮಕ್ಕಳು ಪತ್ನಿಯ ಜೊತೆಯಲ್ಲಿ ಅವರ ತವರಿನಲ್ಲಿದ್ದ ಮನೆಯಲ್ಲಿದ್ದರು. ಈ ವೇಳೆ ಆಟೋ ಚಾಲಕನಾಗಿರುವ ಮುನ್ನಾ ತನ್ನ ಮಕ್ಕಳನ್ನು ನೋಡಲು ಹೋದಾಗ ಗಂಡ ಹೆಂಡತಿಯ ಮಧ್ಯೆ ಜಗಳ ನಡೆದು, ಅಂತಿಮವಾಗಿ ಹೆಂಡತಿ ಗಂಡನ ನಾಲಗೆಯನ್ನೇ ಕಚ್ಚಿದ್ದಾಳೆ.
ಮಕ್ಕಳನ್ನು ನೋಡಲು ಬಿಡದ ಪತ್ನಿ
ಶುಕ್ರವಾರ ಈ ಘಟನೆ ನಡೆದಿದ್ದು, ಆಟೋ ಚಾಲಕನಾಗಿರುವ ಮುನ್ನಾ ಪತ್ನಿಯ ಮನೆ ರಾಧಗ್ರಾಮ್ಗೆ ತನ್ನ ಮಕ್ಕಳನ್ನು ನೋಡಲು ಹೋಗಿದ್ದಾನೆ. ಆದರೆ ಪತ್ನಿ ಸಲ್ಮಾ ಮಕ್ಕಳನ್ನು ನೋಡಲು ಬಿಡಲಿಲ್ಲ. ಈ ವೇಳೆ ಮಾತಿಗೆ ಮಾತು ಬೆಳೆದು ಜಗಳ ನಡೆದಿದೆ. ಮಾತಿನ ಚಕಮಕಿ ನಡೆದಿದೆ. ಈ ವೇಳೆ ಪತ್ನಿಯನ್ನು ಗಟ್ಟಿಯಾಗಿ ಹಿಡಿದು ಹೊಡೆಯಲು ಪ್ರಯತ್ನಿಸಿದ್ದಾನೆ. ಮುನ್ನ ದಾಳಿಯಿಂದ ಬಿಡಿಸಿಕೊಳ್ಳಲಾಗದ ಪತ್ನಿ ಆತನ ನಾಲಗೆಯನ್ನು ಕಚ್ಚಿದ್ದಾಳೆ ಎಂದು ಲಕ್ನೋ ಪಶ್ಚಿಮ ವಿಭಾಗದ ಹೆಚ್ಚುವರಿ ಡಿಸಿಪಿ ಚಿರಂಜೀವ್ ಸಿನ್ಹಾ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Gorakhpur: 28 ವರ್ಷದ ಸೊಸೆಯನ್ನೇ ಮದುವೆಯಾದ 70ರ ಮಾವ: ಸದ್ದಿಲ್ಲದೇ ನಡೆದ ಮದುವೆಯ ಫೋಟೋ ವೈರಲ್!
ಆಸ್ಪತ್ರೆಗೆ ದಾಖಲಿಸಿದ ಪೊಲೀಸರು
ನಾಲಗೆಯನ್ನು ಕಚ್ಚಿದ್ದರಿಂದ ಆಟೋ ಚಾಲಕನಿಗೆ ತೀವ್ರ ರಕ್ತಸ್ರಾವವಾಗಿದೆ. ಆತ ಪ್ರಜ್ಞೆ ಕಳೆದುಕೊಂಡಿದ್ದಾನೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಗಂಭೀರವಾಗಿ ಗಾಯಗೊಂಡು ಪ್ರಜ್ಞೆ ತಪ್ಪಿ ಬಿದ್ದಿದ್ದ ಮುನ್ನಾನನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಪತ್ನಿಯನ್ನು ವಶಕ್ಕೆ ಪಡೆದ ಪೊಲೀಸ್
ಈ ದಂಪತಿಯ ಮಧ್ಯೆ ಮೂರು ವರ್ಷಗಳಿಂದ ಜಗಳ ನಡೆಯುತ್ತಿತ್ತು ಎನ್ನಲಾಗಿದ್ದು, ಶುಕ್ರವಾರ ಗಂಡ ತನ್ನ ಮಕ್ಕಳನ್ನು ಭೇಟಿಯಾಗಲು ಹಾಗೂ ಮನವಲಿಸಿ ಮನೆಗೆ ವಾಪಸ್ ಕರೆದುಕೊಂಡು ಹೋಗಲು ಮುನ್ನಾ ಬಂದಿದ್ದ. ಆದರೆ ಇದಕ್ಕೆ ಪತ್ನಿ ಸಲ್ಮಾ ವಿರೋಧಿಸಿ ಗಲಾಟೆ ಮಾಡಿದ್ದಾಳೆ. ಜಗಳದ ವೇಳೆ ಪತಿಯ ನಾಲಗೆ ಕಚ್ಚಿದ್ದಾಳೆ. ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆಕೆಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಸ್ಪಷ್ವವಾಗಿ ಮಾತನಾಡುವುದು ಕಷ್ಟ
ಘಟನೆಯಲ್ಲಿ ರೋಗಿಯ ನಾಲಿಗೆಯ ಮೇಲ್ಭಾಗವು ಗಂಭೀರವಾಗಿ ಗಾಯಗೊಂಡಿದೆ. ನಾವು ಗಾಯವನ್ನು ಸ್ವಚ್ಛಗೊಳಿಸಿ ಹೊಲಿಗೆಗಳಿಂದ ರಕ್ತನಾಳವನ್ನು ಮುಚ್ಚಿದ್ದೇವೆ. ಹೆಚ್ಚಿನ ರಕ್ತ ಪೂರೈಕೆಯಿಂದಾಗಿ ಗಾಯಗಳನ್ನು ಗುಣಪಡಿಸುವ ಸಾಮರ್ಥ್ಯ ನಾಲಗೆಗೆ ಇತರ ಅಂಗಗಳಿಗಿಂತ ಹೆಚ್ಚಿರುವುದರಿಂದ ಭವಿಷ್ಯದಲ್ಲಿ ರೋಗಿಯು ಮಾತನಾಡಲು ಸಾಧ್ಯವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ. ಆದರೆ ಮಾತನಾಡುವ ಪದಗಳ ಸ್ಪಷ್ಟತೆಯಿಂದ ಕೇಳದಿರಬಹುದು ಎಂದು ಕೆಜಿಎಂಯು ಪ್ಲಾಸ್ಟಿಕ್ ಸರ್ಜರಿ ವಿಭಾಗದ ಫ್ರೊ. ವಿಜಯ್ ಕುಮಾರ್ ಮಾಹಿತಿ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ