Viral Video: ವಾಕಿಂಗ್ ಸ್ಟಿಕ್‍ನಿಂದ ಚಿರತೆ ಓಡಿಸಿದ ಮಹಿಳೆ; ಸಿಸಿಟಿವಿಯಲ್ಲಿ ಸೆರೆಯಾಯ್ತು ಸಂಘರ್ಷದ ದೃಶ್ಯ!

ಮಹಿಳೆ ಮತ್ತು ಚಿರತೆ ಸಂಘರ್ಷದ ದೃಶ್ಯಗಳು ಮನೆ ಮುಂಭಾಗದಲ್ಲಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಸಿಸಿಟಿವಿ ದೃಶ್ಯ

ಸಿಸಿಟಿವಿ ದೃಶ್ಯ

  • Share this:
    ಮುಂಬೈ (ಸೆ. 30): ವಾಕಿಂಗ್ ಸ್ಟಿಕ್ ನಿಂದ ಚಿರತೆಯನ್ನು ಓಡಿಸಿದ ಮಧ್ಯವಯಸ್ಕ ಮಹಿಳೆಯ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ. ಅನಾರೋಗ್ಯಕ್ಕೆ ಒಳಗಾಗಿದ್ರೂ ಮಹಿಳೆಯ ಶೌರ್ಯ ಕಂಡ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸದ್ಯ 55 ವರ್ಷದ ಮಹಿಳೆಯ ವೀಡಿಯೋವನ್ನು ಶೇರ್ ಮಾಡಿಕೊಳ್ಳುತ್ತಿದ್ದು, ಚಿರತೆಯನ್ನ ಹಿಮ್ಮೆಟ್ಟಿಸಿದ ಬಗ್ಗೆ ಕುರಿತು ತಮ್ಮದೇ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಮುಂಬೈನ ಆರೇ ಮಿಕ್ಸ್ ಕಾಲೋನಿಯಲ್ಲಿ ಘಟನೆ ನಡೆದಿದೆ.

    ಚಿರತೆಯನ್ನು ಹಿಮ್ಮೆಟ್ಟಿಸಿದ್ದು ರಣರೋಚಕ:
    55 ವರ್ಷದ ನಿರ್ಮಲಾ ದೇವಿ ಚಿರತೆಯನ್ನು ಹಿಮ್ಮೆಟ್ಟಿಸಿದ ಮಹಿಳೆ. ಈ ದಾಳಿ ಸಂಜೆ 7.45ಕ್ಕೆ ನಡೆದಿದೆ. ಮೂರು ಕಾಲುಳ್ಳ ವಾಕಿಂಗ್ ಸ್ಟಿಕ್ ಸಹಾಯದಿಂದ ಹೊರ ಬಂದು ಮನೆಯ ಮುಂಭಾಗದ ಕಟ್ಟೆ ಮೇಲೆ ಕುಳಿತಿದ್ದಾರೆ. ಪಕ್ಕದ ಮರಗಳ ಮರೆಯಲ್ಲಿ ಅವಿತಿದ್ದ ಚಿರತೆ ಮಹಿಳೆ ಮೇಲೆ ದಾಳಿ ನಡೆಸಿದೆ. ನಿರ್ಮಲಾ ದೇವಿ ಕೂಡಲೇ ವಾಕಿಂಗ್ ಸ್ಟಿಕ್ ನಿಂದ ಚಿರತೆಯನ್ನ ತಳ್ಳುವ ಪ್ರಯತ್ನ ಮಾಡಿದ್ದಾರೆ. ಅಷ್ಟರಲ್ಲಿಯೇ ನಿರ್ಮಲಾ ದೇವಿ ಹಿಂದಕ್ಕೆ ಬೀಳುತ್ತಿದ್ದಂತೆ ಚಿರತೆ ಸಂಪೂರ್ಣವಾಗಿ ಮೈಮೇಲೆ ಎರಗಿದೆ. ಆದ್ರೂ ಧೈರ್ಯ ಕಳೆದುಕೊಳ್ಳದ ನಿರ್ಮಲಾದೇವಿ ವಾಕಿಂಗ್ ಸ್ಟಿಕ್ ನಿಂದಲೇ ಚಿರತೆಯನ್ನು ಹಿಮ್ಮೆಟ್ಟಿಸಿದ್ದಾರೆ.



    ಮಹಿಳೆಯ ಕಿರುಚಾಟ ಕೇಳಿ ಕುಟುಂಬಸ್ಥರು ಹೊರ ಬಂದಿದ್ದಾರೆ. ನಂತರ ಮಹಿಳೆ ನಡೆದ ಘಟನೆಯನ್ನು ವಿವರಿಸಿದ್ದಾರೆ. ಚಿರತೆ ದಾಳಿಯಲ್ಲಿ ನಿರ್ಮಲಾ ದೇವಿ ಅವರಿಗೆ ಸಣ್ಣ ಪ್ರಮಾಣದಲ್ಲಿ ತರಚಿದ ಗಾಯಗಳಾಗಿದ್ದು, ಚಿಕಿತ್ಸೆ ಪಡೆದು ಮನೆಗೆ ಹಿಂದಿರುಗಿರುವ ಬಗ್ಗೆ ವರದಿಯಾಗಿದೆ. ಮಹಿಳೆ ಮತ್ತು ಚಿರತೆ ಸಂಘರ್ಷದ ದೃಶ್ಯಗಳು ಮನೆ ಮುಂಭಾಗದಲ್ಲಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

    ಇದನ್ನು ಓದಿ: ಮೊದಲ ಪುಸ್ತಕ ಬಿಡುಗಡೆ ಸಂಭ್ರಮದಲ್ಲಿ ಕನ್ನಡತಿ ನಟಿ ರಂಜನಿ ರಾಘವನ್

    ಸದ್ಯ ವೀಡಿಯೋ ವೈರಲ್ ಬಳಿಕ ಕೆಲ ಚರ್ಚೆಗಳು ಮುನ್ನಲೆಗೆ ಬಂದಿವೆ. ಪ್ರಾಣಿಗಳ ಸ್ಥಳಗಳನ್ನು ನಾವು ಆವರಿಸುತ್ತಾ ತೆರಳಿದ್ರೆ ಅವುಗಳು ಇರೋದಾದ್ರೂ ಎಲ್ಲಿ?. ಕೆಲ ವರ್ಷಗಳಿಂದ ಜನವಸತಿ ಪ್ರದೇಶಗಳತ್ತ ಕಾಡು ಪ್ರಾಣಿಗಳು ಆಗಮಿಸುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಕಾಡು ಪ್ರಾಣಿಗಳ ದಾಳಿಯಿಂದ ಸಾವು-ನೋವುಗಳು ಸಹ ಸಂಭವಿಸುತ್ತಿವೆ.

    ಇದನ್ನು ಓದಿ: WhatsApp Payments : ಚಾಟ್ ಕಂಪೋಸರ್​ನಲ್ಲಿ ಭಾರತದ ₹ ಚಿಹ್ನೆ ಬಳಕೆ

    ಕೆಲವೊಮ್ಮೆ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿರುವ ಗ್ರಾಮಗಳಿಗೆ ಬರುವ ನವಿಲು, ಜಿಂಕೆ ಸೇರಿದಂತೆ ಹಲವು ಪ್ರಾಣಿಗಳು ಪ್ರಾಣ ಕಳೆದುಕೊಂಡ ಉದಾಹರಣೆಗಳಿವೆ. ಉಡುಪಿ, ಮಂಗಳೂರು ಮತ್ತು ಉತ್ತರ ಕನ್ನಡ ಭಾಗದಲ್ಲಿ ಆಹಾರ ಅರಸಿ ಗ್ರಾಮಗಳತ್ತ ಬರುವ ಪ್ರಾಣಿಗಳು ರೈತರು ತೋಟಕ್ಕೆ ಹಾಕಿದ್ದ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿರುವ ಘಟನೆಗಳು ವರದಿಯಾಗಿತ್ತಿರುತ್ತವೆ.

    ಮಲೆನಾಡು ಭಾಗದಲ್ಲಿ ಮಿತಿಮೀರಿದ ಆನೆಗಳ ಹಾವಳಿ:
    ಹಾಸನ ಜಿಲ್ಲೆಯ ಸಕಲೇಶಪುರ-ಆಲೂರು ತಾಲೂಕಿನಲ್ಲಿ ಆನೆಗಳ ಹಾವಳಿ ಹೆಚ್ಚಾಗಿದ್ದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೊಡಗು ಜಿಲ್ಲೆಯಿಂದಲೂ ಆನೆಗಳು ಹಾಸನ ಭಾಗಕ್ಕೆ ಬರುತ್ತಿರೋದರಿಂದ ರೈತರು ಗಜಪಡೆಯನ್ನು ಹಿಮ್ಮೆಟ್ಟಿಸುವಲ್ಲಿ ಹೈರಾಣಾಗುತ್ತಿದ್ದಾರೆ. ಇದುವರೆಗೂ ಹಾಸನ ಭಾಗದಲ್ಲಿ 95ಕ್ಕೂ ಹೆಚ್ಚು ಜನ ಕಾಡಾನೆಗಳ ದಾಳಿಯಿಂದ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನೂ ರೈತರು ಕಾಫಿ, ಮೆಣಸು, ಬಾಳೆ, ಭತ್ತ ಸೇರಿದಂತೆ ಅಪಾರ ಪ್ರಮಾಣದ ಬೆಳೆ ಕಳೆದುಕೊಂಡು, ಪರಿಹಾರ ಸಿಗವೂ ಸಿಗದೇ ಕಂಗಲಾಗಿದ್ದಾರೆ.

    -ಮಹ್ಮದ್​ ರಫೀಕ್​​. ಕೆ
    Published by:Seema R
    First published: