• Home
  • »
  • News
  • »
  • national-international
  • »
  • Dangerous Virus: ಹಳ್ಳಿಯಿಂದ 36 ಗಂಟೆಗಳಲ್ಲಿ ಈ ವೈರಸ್ ಜಗತ್ತನ್ನೇ ತಲುಪುತ್ತಂತೆ! ಏನಿದು ಶಾಕಿಂಗ್ ನ್ಯೂಸ್?

Dangerous Virus: ಹಳ್ಳಿಯಿಂದ 36 ಗಂಟೆಗಳಲ್ಲಿ ಈ ವೈರಸ್ ಜಗತ್ತನ್ನೇ ತಲುಪುತ್ತಂತೆ! ಏನಿದು ಶಾಕಿಂಗ್ ನ್ಯೂಸ್?

ವಿಶ್ವ ಆರೋಗ್ಯ ಸಂಸ್ಥೆಯ ಮಾಜಿ ಮುಖ್ಯ ವಿಜ್ಞಾನಿ ಡಾ.ಸೌಮ್ಯಾ ಸ್ವಾಮಿನಾಥನ್

ವಿಶ್ವ ಆರೋಗ್ಯ ಸಂಸ್ಥೆಯ ಮಾಜಿ ಮುಖ್ಯ ವಿಜ್ಞಾನಿ ಡಾ.ಸೌಮ್ಯಾ ಸ್ವಾಮಿನಾಥನ್

ವಿಶ್ವ ಆರೋಗ್ಯ ಸಂಸ್ಥೆಯ ಮಾಜಿ ಮುಖ್ಯ ವಿಜ್ಞಾನಿ ಡಾ.ಸೌಮ್ಯಾ ಸ್ವಾಮಿನಾಥನ್ ಅವರು ಮಾತನಾಡಿ, ಜಾಗತಿಕ ಸಮಸ್ಯೆಗಳನ್ನ ಬಿಚ್ಚಿಟ್ಟಿದ್ದಾರೆ. ಅದರಲ್ಲೂ ವೈರಸ್ ವಿಷಯವಾಗಿ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ಸುಮಾರು 36 ಗಂಟೆಗಳಲ್ಲಿ ದೂರದ ಹಳ್ಳಿಯಿಂದ ವೈರಸ್ ಒಂದು ಜಗತ್ತನ್ನು ತಲುಪಬಹುದು ಎಂದು ಹೇಳಿದ್ದಾರೆ.

ಮುಂದೆ ಓದಿ ...
  • Share this:

    ಇಂದಿನ ದಿನಗಳಲ್ಲಿ ಸೋಂಕು, ವೈರಸ್ (Virus) ಹಾವಳಿ ಹೆಚ್ಚಿದೆ. ಅದರಲ್ಲೂ ಕೊರೊನಾ (Corona) ಬಾಧಿಸಿದ ನಂತರ ಎಷ್ಟೋ ವೈರಸ್ ಗಳು ವ್ಯಕ್ತಿಯ (Person) ಮೂಲಕ ಒಂದು ದೇಶದಿಂದ (Country) ಮತ್ತೊಂದು ದೇಶಕ್ಕೆ ಸುಲಭವಾಗಿ ಪ್ರಯಾಣಿಸುತ್ತವೆ (Travel). ಇದೇ ವಿಷಯವನ್ನು ವಿಶ್ವ ಆರೋಗ್ಯ ಸಂಸ್ಥೆಯ ಮಾಜಿ ಮುಖ್ಯ ವಿಜ್ಞಾನಿ ಡಾ.ಸೌಮ್ಯಾ ಸ್ವಾಮಿನಾಥನ್ ಅವರು ಹೇಳಿದ್ದಾರೆ. ಇಂದು ಆಧುನೀಕತೆ ಹಾಗೂ ತಂತ್ರಜ್ಞಾನ ಸಾಕಷ್ಟು ಬೆಳೆದಿದೆ. ಹೀಗಿರುವಾಗ ಒಂದು ವೈರಸ್ ಇಡೀ ಜಗತ್ತನ್ನು ಬಾಧಿಸಬಲ್ಲದು. ಅದಕ್ಕೆ ಉದಾಹರಣೆ ಕೊರೊನಾ ವೈರಸ್. ಇತ್ತೀಚಿನ ದಿನಗಳಲ್ಲಿ ಕೆಲವು ಹಳ್ಳಿಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಅಥವಾ ಯಾವುದೋ ಒಂದು ಮೂಲೆಯಲ್ಲಿ ಮಾತ್ರ ಇರುತ್ತಿದ್ದ ವೈರಸ್ ಈಗ ಹಲವು ಪ್ರದೇಶಗಳನ್ನು ಸುತ್ತುವರೆದಿದೆ.


    36 ಗಂಟೆಗಳಲ್ಲಿ ದೂರದ ಹಳ್ಳಿಯಿಂದ ವೈರಸ್ ಜಗತ್ತಿನಾದ್ಯಂತ ಹರಡಬಹುದು


    ಇಂದು ವಿಶ್ವ ಆರೋಗ್ಯ ಸಂಸ್ಥೆಯ ಮಾಜಿ ಮುಖ್ಯ ವಿಜ್ಞಾನಿ ಡಾ.ಸೌಮ್ಯಾ ಸ್ವಾಮಿನಾಥನ್ ಅವರು ಮಾತನಾಡಿ, ಜಾಗತಿಕ ಸಮಸ್ಯೆಗಳನ್ನ ಬಿಚ್ಚಿಟ್ಟಿದ್ದಾರೆ. ಅದರಲ್ಲೂ ವೈರಸ್ ವಿಷಯವಾಗಿ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ಸುಮಾರು 36 ಗಂಟೆಗಳಲ್ಲಿ ದೂರದ ಹಳ್ಳಿಯಿಂದ ವೈರಸ್ ಒಂದು ಜಗತ್ತನ್ನು ತಲುಪಬಹುದು ಎಂದು ಹೇಳಿದ್ದಾರೆ.


    ಈ ರೀತಿಯ ವೈರಸ್ ಹುಟ್ಟಲು ಮತ್ತು ಅದು ಜಾಗತಿಕವಾಗಿ ಹರಡಿ, ಸಮಸ್ಯೆಯಾಗಲು ಜಾಗತಿಕ ತಾಪಮಾನ, ಅರಣ್ಯ ನಾಶ, ನಗರೀಕರಣ, ಕಾಡು ಮತ್ತು ಸಾಕು ಪ್ರಾಣಿಗಳ ನಡುವಿನ ಸಂಪರ್ಕ, ಅಕ್ರಮ ವನ್ಯಜೀವಿ ವ್ಯಾಪಾರ ಮತ್ತು ಜಾಗತೀಕರಣ ಮುಖ್ಯವಾಗಿದ್ದು, ಇದನ್ನು ಸಕ್ರಿಯಗೊಳಿಸುತ್ತದೆ ಎಂದು ಅವರು ಹೇಳಿದರು.


    ಅಷ್ಟೇ ಅಲ್ಲದೇ ಈ ರೀತಿಯ ಸಮಸ್ಯೆಗಳನ್ನು ನಾವು ಏಕಾಏಕಿ ತಡೆಯಲು ಸಾಧ್ಯವಿಲ್ಲ. ಇದು ಮನುಷ್ಯನ ಸಾಮರ್ಥ್ಯ ಮೀರಿ ಬೆಳೆದಿರುತ್ತದೆ ಎಂದು ನಾನು ಭಾವಿಸಿದ್ದೇನೆ ಅಂತಾ ಅಭಿಪ್ರಾಯ ಪಟ್ಟಿದ್ದಾರೆ.


    ಜಾಗತಿಕ ತಾಪಮಾನ ಹೆಚ್ಚುತ್ತಿದೆ


    ಹೌದು ಇತ್ತೀಚಿನ ದಿನಗಳಲ್ಲಿ ಜಾಗತಿಕ ತಾಪಮಾನ ಹೆಚ್ಚುತ್ತಿದೆ. ಅರಣ್ಯ ನಾಶ ಅತಿಯಾಗಿ ಆಗುತ್ತಿದ್ದು, ವನ್ಯ ಜೀವಿಗಳು ಹೆಚ್ಚು ಗ್ರಾಮ ಮತ್ತು ನಗರದತ್ತ ದಾಂಗುಡಿಯಿಡುತ್ತಿವೆ. ಇತ್ತೀಚಿನ ದಿನಗಳಲ್ಲಿ ವನ್ಯ ಜೀವಿಗಳು ಗ್ರಾಮ ಮತ್ತು ನಗರಗಳಲ್ಲಿ ಹಾವಳಿ ಎಬ್ಬಿಸುತ್ತಿವೆ. ಸಾಕಷ್ಟು ಪ್ರಾಣಿ ಮತ್ತು ಮನುಷ್ಯರನ್ನು ಬಲಿ ಪಡೆದಿವೆ. ಇದಕ್ಕೆ ಮುಖ್ಯ ಕಾರಣ ಅರಣ್ಯ ನಾಶ.


    ಅರಣ್ಯವು ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಕೊಂಡಿ


    ಅರಣ್ಯವು ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಕೊಂಡಿಯಾಗಿದೆ. ಆದ್ರೆ ಕಾಡು ನಶಿಸುತ್ತಿದ್ದು, ಪ್ರಾಣಿಗಳು ಆಹಾರ ಮತ್ತು ನೀರಿಗಾಗಿ ಅರಣ್ಯ ಪ್ರದೇಶದ ಗ್ರಾಮಗಳಿಗೆ ನುಗ್ಗುತ್ತಿವೆ. ಇತ್ತೀಚಿನ ದಿನಗಳಲ್ಲಿ ಇದೊಂದು ಮುಖ್ಯ ಸಮಸ್ಯೆ ಮತ್ತು ಗ್ರಾಮಸ್ಥರು ಹಾಗೂ ಅರಣ್ಯಾಧಿಕಾರಿಗಳಿಗೆ ತಲೆನೋವಿನ ಸಂಗತಿಯಾಗಿ ಮಾರ್ಪಟ್ಟಿದೆ.


    ಅಷ್ಟೇ ಅಲ್ಲದೇ ಕೆರೆಗಳ ಒತ್ತುವರಿ ಹೆಚ್ಚಿದೆ. ಎಲ್ಲಾ ಕಡೆ ಹಸಿರು ಮರಗಳ ನಾಶವಾಗಿ ಎಲ್ಲಿ ನೋಡಿದ್ರೂ ಕಾಂಕ್ರೀಟ್ ಕಾಡು ತಲೆ ಎತ್ತಿದೆ. ಹೀಗಾಗಿ ನಗರ ಬೆಳೆಯುತ್ತಿದ್ದು, ನಗರೀಕರಣ ಹೆಚ್ಚು ಪ್ರಾಶಸ್ತ್ಯ ಪಡೆದಿದೆ. ಅಲ್ಲದೇ ಪ್ರಯಾಣ ಮತ್ತು ತಂತ್ರಜ್ಞಾನ ಬೆಳೆದಿದ್ದು, ಈಗ ಕಾಯಿಲೆಗಳು ಜಾಗತಿಕವಾಗಿ ಹರಡಿ, ಜನರನ್ನು ಬಾಧಿಸುತ್ತಿವೆ.


    ಇದನ್ನೂ ಓದಿ: ಸರ್ಕಾರಿ ಕೆಲ್ಸ ಅಂತ ಕಳ್ಳಾಟ ಮಾಡ್ತೀರೋರಿಗೆ ಶಾಕ್! ಗ್ಯಾಚ್ಯುಟಿ, ಪಿಂಚಣಿಗೆ ಬೀಳುತ್ತೆ ಕತ್ತರಿ!


    ಅಲ್ಲದೇ ಪರಿಸರ ಸಮತೋಲನ ಕಾಪಾಡಬೇಕಿದ್ದ ಬಹತೇಕ ಪ್ರಾಣಿಗಳು, ಕೀಟ ಮತ್ತು ಪಕ್ಷಿಗಳ ಸಂತತಿ ಅವನತಿಯತ್ತ ಸಾಗಿದೆ. ಕಾಡು ಮತ್ತು ಸಾಕು ಪ್ರಾಣಿಗಳ ನಡುವಿನ ಸಂಪರ್ಕ ಕಳಚಿ ಹೋಗುತ್ತಿದೆ. ಅಕ್ರಮ ವನ್ಯಜೀವಿ ವ್ಯಾಪಾರ ಮತ್ತು ಜಾಗತೀಕರಣ ತಲೆ ಎತ್ತಿದ್ದು, ವೈರಸ್ ಸೇರಿ ಹಲವು ಸಮಸ್ಯೆ ಕಾಡುತ್ತಿವೆ.

    Published by:renukadariyannavar
    First published: