ದೆಹಲಿ ಮೆಟ್ರೋದಲ್ಲಿ ಯುವ ಜೋಡಿಯೊಂದು ಸಾರ್ವಜನಿಕರ ಮುಂದೆಯೇ ಲಿಪ್‌ಲಾಕ್ ಮಾಡುವ ಮೂಲಕ ಅನುಚಿತ ವರ್ತನೆ ತೋರಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದೆಹಲಿ ಮೆಟ್ರೋದ ಕೋಚ್‌ವೊಂದರಲ್ಲಿ ನೆಲದ ಮೇಲೆ ಕುಳಿತ ಇಬ್ಬರು ಪ್ರೇಮಿಗಳು ತನ್ನ ಮುಂದೆ ಎಲ್ಲರೂ ಕುಳಿತಿದ್ದರೂ ಕೂಡ ಈ ರೀತಿ ವರ್ತನೆ ಮಾಡಿರೋದಕ್ಕೆ ಸಾರ್ವಜನಿಕ ವಲಯದಿಂದ ಆಕ್ರೋಶ ಕೇಳಿ ಬಂದಿದೆ.
ಯುವಕ ಮತ್ತು ಯುವತಿ ಲಿಪ್‌ಲಾಕ್ ಮಾಡುವ ದೃಶ್ಯವನ್ನು ಅವರ ಎದುರು ಕುಳಿತಿದ್ದ ಯುವಕನೊಬ್ಬ ವಿಡಿಯೋ ಮಾಡಿದ್ದು, ಆತ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾನೆ.
ಇದೀಗ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಸಾರ್ವಜನಿಕ ವಲಯದಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಅನೇಕರು ಆ ಜೋಡಿ ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲವಾಗಿ ವರ್ತಿಸಿದ್ದಕ್ಕೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ದೆಹಲಿ ಮೆಟ್ರೋ ನಿಗಮ ಎಚ್ಚೆತ್ತಿದ್ದು, ತನ್ನ ಪ್ರಯಾಣಿಕರಿಗೆ ಜನರ ಮಧ್ಯೆ ಇಂತಹ ಅಶ್ಲೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಾರದು ಎಂದು ಹೇಳಿದೆ.
ಅಲ್ಲದೇ, ಇಂತಹ ಕೃತ್ಯಗಳು ನಡೆದಾಗ ಸಮೀಪದ ಮೆಟ್ರೋ ಸಿಬ್ಬಂದಿ ಅಥವಾ ಸಿಐಎಸ್ಎಫ್ ಸಿಬ್ಬಂದಿಗೆ ತಕ್ಷಣ ತಿಳಿಸಬೇಕು. ಆಗ ಅಂತವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬಹುದು ಎಂದು ಮೆಟ್ರೋ ಸಿಬ್ಬಂದಿ ಪ್ರಯಾಣಿಕರಿಗೆ ತಿಳಿಸಿದ್ದಾರೆ.
ಇತ್ತೀಚೆಗೆ ದೆಹಲಿ ಮೆಟ್ರೋದಲ್ಲಿ ಯುವಕನೊಬ್ಬ ಸಾರ್ವಜನಿಕರ ಮುಂದೆಯೇ ಹಸ್ತಮೈಥುನ ಮಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆರೋಪಿ ವಿರುದ್ಧ ಸಿಕ್ಕಾಪಟ್ಟೆ ಆಕ್ರೋಶವೂ ವ್ಯಕ್ತವಾಗಿತ್ತು.
top videos
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ