ಆರ್ಟಿಫಿಶಿಯಲ್ (Artificial) ಇಂಟಲಿಜೆನ್ಸ್ (Intelligence) ಅಥವಾ ಕೃತಕ ಬುದ್ಧಿಮತ್ತೆ ಎಂಬುದು ಇದೀಗ ಉದ್ಯಮ (Job) ವಲಯದಲ್ಲಿ ಹೆಚ್ಚಾಗಿ ಕೇಳಿಬರುತ್ತಿರುವ ಟೆಕ್ನಾಲಜಿಯಾಗಿದೆ (technology). ಇಂದು ಹಣಕಾಸು ಕ್ಷೇತ್ರದಿಂದ ಆರಂಭಿಸಿ ಆರೋಗ್ಯ (Health) ರಕ್ಷಣೆಯವರೆಗೆ (Security) ವಿವಿಧ ಕೈಗಾರಿಕೆಗಳಲ್ಲಿ ಈ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಯಂತ್ರಗಳು ಮಾನವನ ಬುದ್ಧಿವಂತಿಕೆ ಪ್ರಕ್ರಿಯೆಗಳನ್ನು ಅನುಕರಿಸುವ ವಿಧಾನವೇ ಕೃತಕ ಬುದ್ಧಿಮತ್ತೆ ಎಂದೆನಿಸಿದೆ. ಇಲ್ಲಿ ಮಾನವರ ಬದಲಿಗೆ ಯಂತ್ರಗಳೇ ಹಲವಾರು ಸಮಸ್ಯೆಗಳನ್ನು ಪರಿಹರಿಸುವಷ್ಟು ಜಾಣ್ಮೆಯನ್ನು ಪಡೆದುಕೊಂಡಿರುತ್ತವೆ.
ಕೇಸು ವಾದಿಸಲು ಕೃತಕ ಬುದ್ಧಿಮತ್ತೆ ಬಳಕೆ
ಇದೇ ಪ್ರಕ್ರಿಯೆಯನ್ನು ನ್ಯಾಯಾಲಯದಲ್ಲಿ ಕೇಸು ವಾದಿಸಲು ಬಳಸಿಕೊಳ್ಳಲಾಗುತ್ತಿದೆ ಎಂದು ಸುದ್ದಿಮಾಧ್ಯಮ ವರದಿ ಮಾಡಿದೆ. ಇದೊಂದು ರೀತಿಯ ಪ್ರೊಗ್ರಾಮ್ ಆಗಿದ್ದು ಆರ್ಟಿಫಿಶಿಯಲ್ ಇಂಟಲಿಜೆನ್ಸಿಯ ಸಹಾಯದಿಂದ ಇದಕ್ಕೆ ತರಬೇತಿ ನೀಡಲಾಗಿದೆ ಹಾಗೂ ಈ ಪ್ರೋಗ್ರಾಮ್ ಪ್ರತಿವಾದಿಗೆ ನ್ಯಾಯಾಲಯದಲ್ಲಿ ತನ್ನ ಕೇಸು ವಾದಿಸಲು ಸಹಾಯ ಮಾಡಲಿದೆ.
ಇದರಿಂದ ವಕೀಲರ ಸಹಾಯವಿಲ್ಲದೆಯೇ ಪ್ರತಿವಾದಿ ಕೃತಕ ಬುದ್ಧಿಮತ್ತೆಯ ಸಹಾಯದಿಂದ ವಾದಿಸಬಹುದಾಗಿದೆ.
ಇಯರ್ಫೋನ್ ಮೂಲಕ ಸಲಹೆ
ಸ್ಮಾರ್ಟ್ಫೋನ್ನಲ್ಲಿ ಈ ಪ್ರೋಗ್ರಾಮ್ ಚಾಲನೆಗೊಳ್ಳುತ್ತಿದ್ದು ಪ್ರತಿವಾದಿಗೆ ಇಯರ್ಫೋನ್ ಮೂಲಕ ಸೂಕ್ತ ಪ್ರತಿಕ್ರಿಯೆಗಳನ್ನು ಕೃತಕ ಬುದ್ಧಿಮತ್ತೆ ಒದಗಿಸುತ್ತದೆ, ನಂತರ ಈ ಪ್ರತಿಕ್ರಿಯೆಗಳನ್ನು ನ್ಯಾಯಾಲಯದಲ್ಲಿ ಬಳಸಬಹುದಾಗಿದೆ.
ಕೃತಕ ಬುದ್ಧಿಮತ್ತೆ ಸಾಧನೆಗಳು
ಹಿಂದೆಂದೂ ಕಾಣದ ಅದ್ಭುತವಾದ ಸಾಧನೆಗಳನ್ನು ಕೃತಕ ಬುದ್ಧಿಮತ್ತೆ ಕ್ಷೇತ್ರ ಸಾಧಿಸಿದೆ. ಕವನಗಳನ್ನು ಬರೆಯುವುದು, ಕಂಪ್ಯೂಟರ್ ಕೋಡ್ ಬರೆಯುವುದು, ಕಾಲೇಜು ಪ್ರಬಂಧಗಳನ್ನು ಬರೆಯುವುದು ಹೀಗೆ ಕೃತಕ ಬುದ್ಧಿಮತ್ತೆ ಪ್ರವೇಶಿಸದ ಕ್ಷೇತ್ರಗಳಿಲ್ಲ. ಕಲಾರಂಗವನ್ನು ಪ್ರವೇಶಿಸಿರುವ AI ತನ್ನಸೃಜನಾತ್ಮಕ ಕಲಾತ್ಮಕ ಅಂಶವನ್ನು ಪ್ರದರ್ಶಿಸಿದೆ.
ವಕೀಲರೇ ಬೇಕಾಗಿಲ್ಲ
ಹೊಸ ಬೆಳವಣಿಗೆ ಎಂಬಂತೆ AI ಗೆ ತರಬೇತಿ ನೀಡುತ್ತಿರುವ DoNotPay ಎಂಬ ಕಂಪನಿ ಫೆಬ್ರವರಿ 2023 ರಲ್ಲಿ ಅಮೆರಿಕಾದ ನ್ಯಾಯಾಲಯದಲ್ಲಿ ವಿಚಾರಣೆಗೆ ಬರಲಿರುವ ಪ್ರಕರಣವನ್ನು ಪಾರ್ಕಿಂಗ್ ಕೇಸುಗಳು, ಟ್ರಾಫಿಕ್ ಕೇಸುಗಳನ್ನು ವಕೀಲರ ಅಗತ್ಯ ಇಲ್ಲದೆಯೇ ಇತ್ಯರ್ಥಗೊಳಿಸುವಷ್ಟು ನಿಷ್ಣಾತವಾಗಿದೆ ಎಂದು ಹೇಳಿಕೊಂಡಿದೆ.
ವಕೀಲರಿಗೆ ಪರ್ಯಾಯವಾಗಿ ಆರ್ಟಿಫಿಶಿಯಲ್ ಇಂಟಲಿಜೆನ್ಸಿ
2015 ರಲ್ಲಿ ಸ್ಥಾಪಿತವಾಗಿರುವ DoNotPay ಸಂಸ್ಥೆಯು, ತಪ್ಪಾದ ಶುಲ್ಕ ಪಾವತಿ, ನಿರಂತರ ರೋಬೋಕಾಲಿಂಗ್ ಅಥವಾ ಪಾರ್ಕಿಂಗ್ ಟಿಕೆಟ್ಗಳಿಗೆ ಸಂಬಂಧಿಸಿದಂತೆ ಸಾಮಾನ್ಯರಿಗೆ ನೆರವಾಗುವ ಗುರಿಯನ್ನು ಹೊಂದಿದೆ.
ಕಂಪನಿ ತಿಳಿಸಿರುವಂತೆ ಇಂತಹ ಕೇಸುಗಳಲ್ಲಿ ಜಯಗಳಿಸಬಹುದಾಗಿದ್ದರೂ ಕಾನೂನು ಶುಲ್ಕವನ್ನು ಸಾಮಾನ್ಯ ಪ್ರತಿವಾದಿಗಳಿಗೆ ಭರಿಸಲಾಗುವುದಿಲ್ಲ ಅಂತೆಯೇ ಅವರ ಬಳಿ ಅಷ್ಟೊಂದು ಸಾಮರ್ಥ್ಯ ಹಾಗೂ ಸಮಯ ಇರುವುದಿಲ್ಲ ಎಂದು ತಿಳಿಸಿದೆ.
ಈ ಸಮಯದಲ್ಲಿ ಸಂಸ್ಥೆ ಅಂತಹ ವ್ಯಕ್ತಿಗಳಿಗೆ ನೆರವಾಗುತ್ತದೆ ಹಾಗೂ ಕೃತಕ ಬುದ್ಧಿಮತ್ತೆಯನ್ನು ಉಪಕರಣವಾಗಿ ಅವರಿಗೆ ನೀಡಲಾಗುತ್ತದೆ. ಪ್ರೋಗ್ರಾಮ್ ಅವರಿಗೆ ತಿಳಿಸುವ ಸಲಹೆಯನ್ನು ನ್ಯಾಯಾಲಯದ ಮುಂದೆ ಪ್ರಸ್ತುತಪಡಿಸಿ ವಾದಿಸುತ್ತಾರೆ.
ಇದು ವಿಫಲವಾದರೆ ಮುಂದೇನು?
ಕೃತಕ ಬುದ್ಧಿಮತ್ತೆ ಕೈಗೆತ್ತಿಕೊಂಡಿರುವ ಮೊದಲ ಪ್ರಕರಣ ಇದಾಗಿರುವುದರಿಂದ ಎಲ್ಲಿಯಾದರೂ ಕೃತಕ ಬುದ್ಧಿಮತ್ತೆಯ ಸಲಹೆಯು ಪ್ರತಿವಾದಿಗೆ ಸಹಕಾರಿಯಾಗದಿದ್ದರೆ ಶಿಕ್ಷೆಯ ಹೊರೆಯನ್ನು DoNotPay ತೆಗೆದುಕೊಳ್ಳಲು ಸಿದ್ಧವಾಗಿದೆ ಎಂದು ತಿಳಿಸಿದೆ.
ಇದು ಸ್ಪೀಡಿಂಗ್ ಟಿಕೆಟ್ ಆಗಿರುವುದರಿಂದ (ಟ್ರಾಫಿಕ್, ಪಾರ್ಕಿಂಗ್ ಶುಲ್ಕ) DoNotPay ಈ ಟಿಕೆಟ್ಗೆ ಪಾವತಿಸುತ್ತದೆ. ಇದು ಜಯಶಾಲಿಯಾದರೆ ಇದೊಂದು ಅಭೂತಪೂರ್ವ ಯಶಸ್ಸಾಗಿ ಪರಿಗಣಿತವಾಗುತ್ತದೆ.
ಕಾನೂನು ಬಾಹಿರ ಪ್ರಕ್ರಿಯೆಯೇ?
ಆದರೆ ಇಲ್ಲಿಯೂ ಒಂದು ಸಮಸ್ಯೆ ಇದೆ, ಅದೇನೆಂದರೆ ಇಂತಹ ವ್ಯವಸ್ಥೆ ನ್ಯಾಯಾಲಯದಲ್ಲಿ ಕಾನೂನುಬದ್ಧವಾಗಿರುತ್ತದೆಯೇ ಎಂಬುದಾಗಿದೆ.
ಇಯರ್ಫೋನ್ಗಳ ಮೂಲಕ ಆಲಿಸುವುದು ನ್ಯಾಯಾಲಯದ ನಿಯಮಗಳಿಗೆ ಒಳಪಡುವುದರಿಂದ ಇದು ಕಾನೂನು ಬಾಹಿರ ಎಂದೆನಿಸುವುದಿಲ್ಲ ಎಂಬುದು ಸಿಇಒ ಜೋಶುವಾ ಬ್ರೌಡರ್ ಮಾತಾಗಿದೆ.
ಇದನ್ನೂ ಓದಿ: Robot: 7ನೇ ಕ್ಲಾಸ್ ಬಾಲಕ ರೋಬೋಟ್ ತಯಾರಿಸಿದ! ಇದು ಸೇನೆಗೂ ಸಹಾಯ ಮಾಡುತ್ತೆ!
ಸಾಮಾನ್ಯರಿಗೆ ನೆರವು
ಕೃತಕ ಬುದ್ಧಿಮತ್ತೆಯನ್ನು ನ್ಯಾಯಾಲಯದ ಪ್ರಕರಣಗಳಲ್ಲಿ ಕಾನೂನು ಸಲಹೆಗಾರರಾಗಿ ಸ್ವೀಕರಿಸುವುದು ಕಾನೂನಿಗೆ ಸಮರ್ಪಕವಾಗಿದೆಯೇ ಎಂಬುದು ಇನ್ನೂ ತಿಳಿದುಬಂದಿಲ್ಲ.
ಆದರೆ ತಪ್ಪಾಗಿ ದಂಡ ವಿಧಿಸುವ ದೊಡ್ಡ ದೊಡ್ಡ ಸಂಸ್ಥೆಗಳ ವಿರುದ್ಧ ಸಾಮಾನ್ಯರಿಗೆ ನೆರವನ್ನು ನೀಡುವ ಕೃತಕ ಬುದ್ಧಿಮತ್ತೆಯ ಪ್ರೊಗ್ರಾಮಿಂಗ್ ಅನೇಕ ರೀತಿಯಲ್ಲಿ ಪರಿಣಾಮಕಾರಿ ಎಂದೆನಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ