ಹರಿಯಾಣ: ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ (Online)ಬಳಕೆ ಹೆಚ್ಚಾಗುತ್ತಿದೆ. ಮೆನೆಯಿಂದಲೇ ಕುಳಿತು ಕೆಲಸ (Work From Home) ಮಾಡುವುದು, ಆನ್‌ಲೈನ್ ಮೂಲಕ ಹಣ ವರ್ಗಾಹಿಸುವುದು, ಆನ್‌ಲೈನ್ ಮೂಲಕವೇ ಪಾಠ ಮಾಡುವುದು ಹೀಗೆ ಹಲವಾರು ಕೆಲಸ-ಕಾರ್ಯಗಳನ್ನು ಆನ್ಲೈನ್ನಲ್ಲೇ ನಡೆಯುತ್ತಿವೆ. ಆದರೆ ಹರಿಯಾಣದ (haryana) ಕರ್ನಾಲ್ನಲ್ಲಿ ಆನ್ಲೈನ್ನಲ್ಲೇ ಮದುವೆ ನಡೆದಿದ್ದು, ಇದು ಆ ರಾಜ್ಯ ಮಾತ್ರವಲ್ಲದೆ ಇಡೀ ದೇಶದಲ್ಲಿ ಸುದ್ದಿಯಾಗುತ್ತಿದೆ. ಮಾರ್ಚ್ 19ರಂದು ಕರ್ನಾಲ್ ನಿವಾಸಿ ಅಶು ಎಂಬ ಯುವತಿ ಸೋನಿಪತ್‌ನ (Sonipat) ಅಮಿತ್ ಎಂಬವವರೊಡನೆ ವಿವಾಹವಾಗಿದ್ದಾರೆ. ವಿಶೇಷವೆಂದರೆ ವದು ವರರು ಅಮೆರಿಕಾದಲ್ಲಿದ್ದರೆ (America)ಮದುವೆ ನಡೆದಿದ್ದು ಮಾತ್ರ ಭಾರತದಲ್ಲಿ ಎನ್ನುವುದು ವಿಶೇಷ.
ಕಾರ್ಯಕ್ರಮವನ್ನು ಟಿವಿಯಲ್ಲಿ ವೀಕ್ಷಿಸಿದ ವಧು-ವರರು
ಹರಿಯಾಣದಲ್ಲಿ ಕುಟುಂಬಸ್ಥರು ವಿವಾಹ ಪೂರ್ವ ಕಾರ್ಯಕ್ರಮವನ್ನು ಬಹಳ ಅದ್ದೂರಿಯಾಗಿ ನೆರೆವೇರಿಸಿದರು. ಹರಿಯಾಣದ ಸಂಪ್ರದಾಯದಂತೆ ಸೋನಿಪತ್ನಿಂದ ವರನ ಕಡೆಯವರು ಕರ್ನಾಲ್ ವರೆಗೆ ಅದ್ದೂರಿಯಾಗಿ ಮೆರವಣಿಗೆ ನಡೆಸಿದರು. ಇತ್ತ ವಧುವಿನ ಕಡೆಯವರೂ ಕೂಡ ಮೆರವಣಿಗೆ ನಡೆಸಿ ಕಲ್ಯಾಣ ಮಂಟಪಕ್ಕೆ ಬಂದಿದ್ದಾರೆ. ಆದರೆ ಈ ಮೆರವಣಿಗೆಯಲ್ಲಿ ವಧು-ವರರು ಇರಲಿಲ್ಲ, ಅವರು ವಿದೇಶದಲ್ಲಿ ಕುಳಿತು ಇದನ್ನೆಲ್ಲಾ ಟಿವಿ ಮುಖಾಂತರ ವೀಕ್ಷಣೆ ಮಾಡಿದರು.
ಇದನ್ನೂ ಓದಿ: Viral News: ಸುಳ್ಳು ಹೇಳಿದ ವರನನ್ನು ಅರ್ಧದಾರಿಯಲ್ಲೇ ಬಿಟ್ಟು ತವರಿಗೆ ಮರಳಿದ ನವ ವಧು!
ಹರಿಯಾಣ ಸಂಪ್ರದಾಯದಂತೆ ವಿವಾಹ
ಕರ್ನಾಲ್‌ನ ನಿವಾಸಿ ಆಶು ಮತ್ತು ಸೋನಿಪತ್‌ನ ನಿವಾಸಿ ಅಮಿತ್ ಅವರು ಹರಿಯಾಣ ಸಂಪ್ರದಾಯದಲ್ಲೇ ವಿವಾಹವಾದರು. ಅವರಿಬ್ಬರು ಹಿರಿಯರಿಂದ ಟಿವಿ ಪರದೆಯ ಮೂಲಕವೇ ಆಶೀರ್ವಾದ ಪಡೆದುಕೊಂಡರು. ಮದುವೆ ನಿಶ್ಚಯವಾದ ನಂತರ ಕಾರಣಾಂತರಗಳಿಂದ ವಧು-ವರರು ಅಮೆರಿಕಾದಿಂದ ಭಾರತಕ್ಕೆ ಬರುವುದಕ್ಕೆ ಸಾಧ್ಯವಾಗಿರಲಿಲ್ಲ. ನಂತರ ಮದುವೆಯ ಎಲ್ಲಾ ವಿಧಿವಿಧಾನಗಳನ್ನು ಆನ್‌ಲೈನ್‌ನಲ್ಲಿ ಮಾಡಲು ಕುಟುಂಬ ಸದಸ್ಯರು ನಿರ್ಧರಿಸಿದ್ದಾರೆ. ಇದಕ್ಕಾಗಿ ಹೈ ಸ್ಪೀಡ್ ಇಂಟರ್ನೆಟ್ನೊಂದಿಗೆ ಟಿವಿ ಸ್ಕ್ರೀನ್ ವ್ಯವಸ್ಥೆ ಮಾಡಿ ವಿವಾಹದ ಕಾರ್ಯಕ್ರಮವನ್ನು ನೆರೆವೇರಿಸಲಾಗಿದೆ.
ಮಾರ್ಚ್ 19 ರಂದು ಇಬ್ಬರೂ ವಿವಾಹವಾದರು. ಮದುವೆಯ ಎಲ್ಲಾ ವಿಧಿವಿಧಾನಗಳನ್ನು ಅಲ್ಲಿ ನಡೆಸಲಾಯಿತು. ಇದಕ್ಕೂ ಮುನ್ನ ವರನ ಸಂಬಂಧಿಕರು ಸೋನಿಪತ್‌ನ ಖಾಸಗಿ ಬ್ಯಾಂಕ್ವೆಟ್ ಹಾಲ್‌ನಲ್ಲಿ ಟೀಕಾ ಮತ್ತು ನಿಶ್ಚಿತಾರ್ಥ ಕಾರ್ಯಕ್ರಮವನ್ನು ಆಯೋಜಿಸಿದ್ದರು. ವಧುವಿನ ಕುಟುಂಬದವರು ಅಲ್ಲಿಗೆ ತೆರಳಿ ಟೀಕಾ ಸಂಪ್ರದಾಯವನ್ನು ಪೂರ್ಣಗೊಳಿಸಿ ಬಂದಿದ್ದರು.
ಸಂಬಂಧಿಕರಿಂದ ಹಳದಿ ಶಾಸ್ತ್ರ
ಇನ್ನು ವಧುವಿನ ಕೆಲವು ಸಂಬಂಧಿಕರು ಅಮೆರಿಕಾದಲ್ಲಿ ವಾಸಿಸುತ್ತಿದ್ದು, ಅವರು ಅಲ್ಲಿ ಹರಿಸಿನ ಶಾಸ್ತ್ರ, ಸಪ್ತಪದಿ ತುಳಿಸುವುದು ಸೇರಿದಂತೆ ಹಲವು ವಿವಾಹದ ವಿಧಿವಿಧಾನಗಳನ್ನು ಪುರೋಹಿತರ ಸಲಹೆಯಂತೆ ನೆರೆವೇರಿಸಿದ್ದಾರೆ ಎಂದು ಸಂಬಂಧಿಕರು ತಿಳಿಸಿದ್ದಾರೆ.
ಇಬ್ಬರ ನಡುವೆ ಪ್ರೀತಿಯಾಗಿದ್ದೇಗೆ?
ಅಮೆರಿಕಾದಲ್ಲಿ ವರ ಅಮಿತ್ ಲಾಕ್ರಾ ಮತ್ತು ಕರ್ನಾಲ್‌ನ ಆಶು ಪ್ರತ್ಯೇಕ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅಮಿತ್ 2014ರಲ್ಲಿ ಮಲೇಷ್ಯಾದಲ್ಲಿ ಮರ್ಚೆಂಟ್ ನೇವಿ ಸೇರಿದ್ದರು. ನಂತರ ಅವರು ವಿವಿಧ ದೇಶಗಳಲ್ಲಿ ಕೆಲಸ ಮಾಡಿದ್ದಾರೆ. 2017ರಿಂದ ಟ್ರ್ಯಾಕಿಂಗ್ ಕಂಪನಿಯನ್ನು ಸ್ಥಾಪಿಸಿಕೊಂಡು ಕೆಲಸ ಮಾಡುತ್ತಿದ್ದಾರೆ. ಆಶು ಕೂಡ ತನ್ನ ಸ್ವಂತ ಕಂಪನಿ ಹೊಂದಿದ್ದು, ಅಮೆರಿಕಾದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇತ್ತೀಚೆಗೆ ಇಬ್ಬರೂ ಭೇಟಿಯಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡು ವಿವಾಹವಾಗಲು ನಿರ್ಧರಿಸಿದ್ದಾರೆ. ಇದಕ್ಕೆ ಇಬ್ಬರ ಮನೆಯವರೂ ಈ ಮದುವೆಗೆ ಒಪ್ಪಿಗೆ ಸೂಚಿಸಿದ್ದಾರೆ. ಆನ್‌ಲೈನ್ ಮೂಲಕವೇ ಅಮಿತ್- ಆಶು ಜೋಡಿಯ ಸಂಬಂಧಿಕರು ಕೂಡಾ ಪರಸ್ಪರ ಪರಿಚಯವಾಗಿದ್ದರು. ಕೊನೆಗೆ ಆನ್ಲೈನ್ನಲ್ಲೇ ವಿವಾಹವನ್ನು ನೆರವೇರಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ