Mask Gown: ಮಾಸ್ಕ್​ಗಳನ್ನು ಬಳಸಿ ಮದುವೆಯ ಗೌನ್ ವಿನ್ಯಾಸ ಮಾಡಿದ ಡಿಸೈನರ್​..!

ಡಿಸೈನರ್ ಒಬ್ಬರು ಸುಮಾರು 1500 ಮಾಸ್ಕ್‌ಗಳನ್ನು ಬಳಸಿ ಮದುವೆಯ ಬಿಳಿ ಬಣ್ಣದ ಗೌನ್ ತಯಾರಿಸಿದ್ದಾರೆ. ಡಿಸೈನರ್ ಟಾಮ್ ಸಿಲ್ವರ್​ವುಡ್​ ವೆಡ್ಡಿಂಗ್ ಪ್ಲಾನರ್ ವೆಬ್‍ಸೈಟ್ ‘ಹಿಚ್ಡ್’ ಮೂಲಕ ಕ್ರೋಢಿಕರಿಸಿ ಗೌನ್ ತಯಾರಿಸಿದರು. ಈ ಮಾಸ್ಕ್​ಗಳೆಲ್ಲ ಅಪ್​ಸೈಕಲ್ಡ್​ ಆಗಿವೆ. ಹೌದು, ಅಪ್​​ಸೈಕಲ್​ ಮಾಡಿರುವ ಮಾಸ್ಕ್​ಗಳನ್ನೇ ಮರು ಬಳಕೆ ಮಾಡಿ ಈ ಗೌನ್​ ತಯಾರಿಸಲಾಗಿದೆ.

ಮಾಸ್ಕ್​ನಿಂದ ತಯಾರಿಸಿದ ಗೌನ್​

ಮಾಸ್ಕ್​ನಿಂದ ತಯಾರಿಸಿದ ಗೌನ್​

  • Share this:
ಸತತ ಎರಡು ವರ್ಷದಿಂದ ಜಗತ್ತು, ದೇಶವನ್ನು ತಲ್ಲಣಗೊಳಿಸಿದ ಕೊರೋನಾ ವೈರಸ್ ತಡೆಗಟ್ಟಲು ಪ್ರಮುಖ ಪಾತ್ರ ವಹಿಸಿದ್ದು ಮಾಸ್ಕ್‌ಗಳು ಹಾಗೂ ಸ್ಯಾನಿಟೈಜರ್‌ಗಳು. ಫೇಸ್ ಮಾಸ್ಕ್ ಇಲ್ಲದೇ ಜನರು ಹೊರಗೆ ಬರುವಂತಿಲ್ಲ,  ಹಾಗೇನಾದರೂ  ಮಾಸ್ಕ್ ಇಲ್ಲದೆ ಹೊರ ಬಂದರೆ ಕಾನೂನು ಕ್ರಮ ಜರುಗಿಸುತ್ತೇವೆ ಎಂಬ ಆಜ್ಞೆಯನ್ನು ಹೊರಡಿಸಲಾಯಿತು. ಇದರಿಂದ ದಿನೇ ದಿನೇ ಮಾಸ್ಕ್‌ಗಳ ಪ್ರಾಮುಖ್ಯತೆ ಹೆಚ್ಚುತ್ತಲೇ ಹೋಯಿತು. ಈ ಮೂಲಕ ವಿವಿಧ ರೀತಿಯ ಮಾಸ್ಕ್‌ಗಳ ತಯಾರಾದವು. ಇದರೊಟ್ಟಿಗೆ ಉದ್ಯಮಗಳು ಬೆಳೆದು ಎಷ್ಟೋ ಜನರ ಹೊಟ್ಟೆಯನ್ನು ತುಂಬಿಸಿದ್ದವು. ವಾಯು ಮಾಲಿನ್ಯದಿಂದ ಅನೇಕ ರೋಗಗಳಿಗೆ ತುತ್ತಾಗಿದ್ದ ವ್ಯಕ್ತಿಗಳಿಗೆ ಮಾಸ್ಕ್‌ಗಳು ಆರೋಗ್ಯ ವಾಹಿನಿಗಳಾದವು. ಅಲ್ಲದೇ ತ್ಯಾಜ್ಯದ ರೂಪವಾಗಿಯೂ ಮಾಸ್ಕ್ ಬದಲಾದದ್ದು ಇನ್ನು ದುರಾದೃಷ್ಟವೇ ಸರಿ.

ಆದರೆ, ಕಸದಿಂದಲೇ ರಸ ಎಂಬ ಮಾರ್ಗವನ್ನು ಯುಕೆಯ ಡಿಸೈನರ್ ಒಬ್ಬರು ಅನುಸರಿಸಿದ್ದಾರೆ. ಹೌದು, ಇಷ್ಟೆಲ್ಲ ಪ್ರಯೋಜನಗಳನ್ನು ಹೊಂದಿದ್ದ ಮಾಸ್ಕ್‌ಗಳನ್ನು ಬಳಸಿ ಮದುವೆಯ ಗೌನ್ ಅನ್ನು ಯುಕೆಯಲ್ಲಿ ತಯಾರಿಸಲಾಗಿದೆ. ಇದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಡಿಸೈನರ್ ಸುಮಾರು 1500 ಮಾಸ್ಕ್‌ಗಳನ್ನು ಬಳಸಿ ಮದುವೆಯ ಬಿಳಿ ಬಣ್ಣದ ಗೌನ್ ತಯಾರಿಸಿದ್ದಾರೆ. ಡಿಸೈನರ್ ಟಾಮ್ ಸಿಲ್ವರ್​ವುಡ್​ ವೆಡ್ಡಿಂಗ್ ಪ್ಲಾನರ್ ವೆಬ್‍ಸೈಟ್ ‘ಹಿಚ್ಡ್’ ಮೂಲಕ ಕ್ರೋಢಿಕರಿಸಿ ಗೌನ್ ತಯಾರಿಸಿದರು. ಈ ಮಾಸ್ಕ್​ಗಳೆಲ್ಲ ಅಪ್​ಸೈಕಲ್ಡ್​ ಆಗಿವೆ. ಹೌದು, ಅಪ್​​ಸೈಕಲ್​ ಮಾಡಿರುವ ಮಾಸ್ಕ್​ಗಳನ್ನೇ ಮರು ಬಳಕೆ ಮಾಡಿ ಈ ಗೌನ್​ ತಯಾರಿಸಲಾಗಿದೆ.

ಇದನ್ನೂ ಓದಿ: Bigg Boss Season 8 Kannada: ಚಕ್ರವರ್ತಿ ಮೀಸೆಗೆ ಕತ್ತರಿ ಹಾಕಿದ ಪ್ರಶಾಂತ್​ ಸಂಬರಗಿ..!

ರೂಪದರ್ಶಿ ಜೆಮಿಮಾ ಹ್ಯಾಂಬ್ರೊ ಲಂಡನ್‍ನ ಸೇಂಟ್ ಪಾಲ್ಸ್ ಕ್ಯಾಥೆಡ್ರಲ್ ಬಳಿ ಸುಂದರವಾದ ಬಿಳಿ ಬಣ್ಣದ ಮಾಸ್ಕ್ ನಿಂದ ತಯಾರಾದ ವಿವಾಹದ ಗೌನ್ ಧರಿಸಿ ಫೋಟೋ ಶೂಟ್ ಮಾಡಿದ್ದಾರೆ. ಪರಿಸರಕ್ಕೆ ಹಾನಿತಂದೊಡ್ಡುವ ಎಸೆಯಲಾದ ಪಿಪಿಇ ಕಿಟ್ ಅನ್ನು ಈ ಡ್ರೆಸ್ ತಯಾರಿಸಲು ಬಳಸಲಾಗಿದೆ. ಯುಕೆಯಲ್ಲಿ ಪ್ರತಿವಾರ 100 ಮಿಲಿಯನ್ ಮಾಸ್ಕ್​ಗಳನ್ನು ಎಸೆಯಲಾಗುತ್ತದೆ ಎಂದು ಹಿಚ್ಡ್ ಹೇಳಿದೆ.

ಹಿಚ್ಡ್‍ನ ಸಂಪಾದಕ ಸಾರಾ ಅಲ್ಲಾರ್ಡ್, ಇಂಗ್ಲೆಂಡ್‍ನಲ್ಲಿ ಇಂದಿನಿಂದ ಕೋವಿಡ್ ನಿರ್ಬಂಧಗಳನ್ನು ತೆರವುಗೊಳಿಸಿ ವಿವಾಹಗಳನ್ನು ನಡೆಸಲು ಅನುಮತಿ ದೊರೆತಿದೆ. ಈ ಬೇಸಿಗೆ ಸಾವಿರಾರು ವಿವಾಹಗಳು ಜರುಗಲಿವೆ. ಜೋಡಿಗಳು ಪುನಃ ಡ್ಯಾನ್ಸ್ ಫ್ಲೋರ್ ಕಡೆ ಸಂತೋಷದಿಂದ ಮುಖ ಮಾಡಬಹುದು. ಆರತಕ್ಷತೆಯಲ್ಲಿ ಪಾಲ್ಗೊಳ್ಳಬಹುದು. ಪಿಪಿಇ ಕಿಟ್ ಧರಿಸದೆ ಸುಂದರವಾದ ಬಟ್ಟೆಗಳನ್ನು ತೊಟ್ಟು ವಿವಾಹದ ಸಂಭ್ರಮವನ್ನು ಆನಂದಿಸಬಹುದು ಎಂದು ಹೇಳಿದರು.

ಇದನ್ನೂ ಓದಿ: ಕಣ್ಣೀರಿಟ್ಟು ನಾನು ಬಿಗ್ ಬಾಸ್​ ಮನೆಯ ಬ್ಯಾಡ್ ಬಾಯ್​​ ಎಂದಿದ್ದೇಕೆ ಬ್ರೋ ಗೌಡ

ಕೋವಿಡ್ ಪರಿಣಾಮವಾಗಿ ಸೃಷ್ಟಿಯಾದ ತ್ಯಾಜ್ಯದ ಸಮಸ್ಯೆಯನ್ನು ನಾವು ನಿರ್ಲಕ್ಷಿಸುವಂತಿಲ್ಲ. ಕೊನೆಗೂ ಮಾಸ್ಕ್​ನ ಪ್ರತಿರೂಪ ಬದಲಾಗಿದೆ. ಮಾಸ್ಕ್​ಗಳು ಉಡುಪಿನ ರೂಪ ತಳೆಯುತ್ತಿವೆ. ಈ ಮೂಲಕ ಬಳಕೆಯಾಗದ ಮಾಸ್ಕ್ ಬಳಕೆ ವಸ್ತುವಾಗಿ ಬದಲಾಗಿದೆ. ಇದು ರಾಷ್ಟ್ರೀಯ ಉದ್ಯಮವಾಗಿ ಬದಲಾಗಿರುವುದನ್ನು ಸಾಂಕೇತಿಸುತ್ತದೆ.

ಮಾಸ್ಕ್​ಗಳನ್ನು ಇಲ್ಲಿ ಧರಿಸಲೇಬೇಕು ಎಂದು ಕಾನೂನು ಬದ್ಧವಲ್ಲದಿದ್ದರೂ, ಮದುವೆಯ ದಿನದಂದು ನವಜೋಡಿಗಳು, ಅತಿಥಿಗಳು, ಸಪ್ಲೈಯರ್‌ಗಳಿಗೆ ಮಾಸ್ಕ್ ಧರಿಸುವಂತೆ ಶಿಫಾರಸ್ಸು ಮಾಡುತ್ತೇವೆ. ಆದರೆ ಇಲ್ಲಿ ತಬ್ಬಿಕೊಳ್ಳುವುದು, ನೃತ್ಯ ಇವುಗಳಿಗೆ ಇನ್ನು ಮುಂದೆ ಅನುಮತಿ ಇಲ್ಲದಿರುವುದು ಮಾತ್ರ ಬೇಸರ ತರಿಸಿದೆ ಎಂದು ಹೇಳಿದರು.ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.


Published by:Anitha E
First published: