Boy Death: 2ನೇ ವರ್ಷದ ಹುಟ್ಟುಹಬ್ಬವೇ ಕೊನೆಯಾಯ್ತು, ಸ್ವಿಮ್ಮಿಂಗ್ ಪೂಲ್‌ ಬಳಿ ಪಾರ್ಟಿ ಮಾಡುವಾಗಲೇ ದುರಂತ!

ಬಂಗಲೆಯಲ್ಲಿ 2 ವರ್ಷದ ಬಾಲಕನ ಹುಟ್ಟುಹಬ್ಬದ ವೇಳೆ ದುರಂತವೊಂದು ಸಂಭವಿಸಿದೆ. ಕುಟುಂಬಸ್ಥರು, ಸಂಬಂಧಿಕರು, ಅತಿಥಿಗಳೆಲ್ಲ ಸಂಭ್ರದಲ್ಲಿದ್ದಾಗ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಾಗಿದ್ದ ಬಾಲಕ ಸಾವನ್ನಪ್ಪಿದ್ದಾನೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಪುಣೆ, ಮಹಾರಾಷ್ಟ್ರ: ಆ ಪುಟ್ಟ ಬಾಲಕನಿಗೆ (Small Boy) ಬರೀ ಎರಡೇ ವರ್ಷ. ಇನ್ನು ಜಗತ್ತನ್ನು ಸರಿಯಾಗಿ ನೋಡದ ವಯಸ್ಸು. ಇನ್ನೂ ಬಾಳಿ ಬದುಕಬೇಕಾಗಿದ್ದ ವಯಸ್ಸು. ಇಂದು ಆತನ ಹುಟ್ಟುಹಬ್ಬವೂ (Birthday) ಇತ್ತು. ಇದಕ್ಕಾಗಿ ಆತನ ತಂದೆ (Father), ತಾಯಿ (Mother) ಎಲ್ಲ ಭರ್ಜರಿ ತಯಾರಿ ನಡೆಸಿದ್ದರು. ಬಂಗಲೆಯ (bungalows) ಸ್ವಿಮ್ಮಿಂಗ್ ಪೂಲ್‌ (Swimming Pool) ಬಳಿ ಗ್ರ್ಯಾಂಡ್ ಪಾರ್ಟಿ (grand party) ಅರೇಂಜ್ ಆಗಿತ್ತು. ಇನ್ನೇನು ಕೇಕ್ (Cake) ಕಟ್‌ ಮಾಡಿ, ಬರ್ತ್‌ ಡೇ ಸೆಲಬ್ರೇಟ್ (Celebrate) ಮಾಡಬೇಕು ಎನ್ನುವಷ್ಟರಲ್ಲಿ ದುರಂತವೇ ನಡೆದುಹೋಯ್ತು. 2 ವರ್ಷದ ಹುಟ್ಟುಹಬ್ಬವೇ ಆ ಬಾಲಕನ ಪಾಲಿಗೆ ಕೊನೆಯ ಹುಟ್ಟುಹಬ್ಬವಾಯ್ತು. ಸಂಭ್ರಮದಲ್ಲಿದ್ದ ಆ ಕುಟುಂಬ (Family) ಕ್ಷಣ ಮಾತ್ರದಲ್ಲೇ ಸಾವಿನ ಮನೆಯಾಯ್ತು.

2 ವರ್ಷದ ಬಾಲಕನ ಹುಟ್ಟುಹಬ್ಬದ ಸಂಭ್ರಮ

ಮಹಾರಾಷ್ಟ್ರದ ಲೋನಾವಾಲಾದ ಬಂಗಲೆಯಲ್ಲಿ 2 ವರ್ಷದ ಬಾಲಕನ ಹುಟ್ಟುಹಬ್ಬದ ವೇಳೆ ದುರಂತವೊಂದು ಸಂಭವಿಸಿದೆ. ಕುಟುಂಬಸ್ಥರು, ಸಂಬಂಧಿಕರು, ಅತಿಥಿಗಳೆಲ್ಲ ಸಂಭ್ರದಲ್ಲಿದ್ದಾಗ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಾಗಿದ್ದ ಬಾಲಕ ಸಾವನ್ನಪ್ಪಿದ್ದಾನೆ.

ಹುಟ್ಟುಹಬ್ಬಕ್ಕಾಗಿ ಬಂಗ್ಲೆ ಬುಕ್ ಮಾಡಿದ ಕುಟುಂಬಸ್ಥರು

ಲೋನಾವಾಲಾದ ಬಂಗಲೆಯಲ್ಲಿ ಬಾಲಕನ ಹುಟ್ಟುಹಬ್ಬ ಆಚರಿಸುವ ಉದ್ದೇಶದಿಂದ ನಾಸಿಕ್ ಮೂಲದ ಹುಡುಗನ ಕುಟುಂಬವು ಅದನ್ನು ಬುಕ್ ಮಾಡಿತ್ತು. ಬಳಿಕ ಅಲ್ಲಿ ನೆರೆದಿತ್ತು. ಹುಟ್ಟುಹಬ್ಬ ನಡೆಯುತ್ತಿರುವಾಗಲೇ ದುರಂತ ನಡೆದಿದೆ.

ಇದನ್ನೂ ಓದಿ: Nupur Sharma: ನೂಪುರ್ ಶರ್ಮಾ ಕೊಲ್ಲಲು ಪಾಕಿಸ್ತಾನದಿಂದ ಬಂದ ವ್ಯಕ್ತಿ, ಗಡಿ ನುಸುಳಿದವನ ಬಳಿ ಇತ್ತು 11 ಇಂಚಿನ ಚಾಕು!

ಅಂಬೆಗಾಲಿಡುತ್ತಲೇ ಸ್ವಿಮ್ಮಿಂಗ್ ಪೂಲ್‌ನಲ್ಲಿ ಬಿದ್ದ ಬಾಲಕ

ಮಗು ಅಂಬೆಗಾಲಿಡುತ್ತ ಈಜುಕೊಳದ ಬಳಿ ಹೋಗಿದೆ. ಆ ವೇಳೆ ನಿಯಂತ್ರಣ ತಪ್ಪಿ ಸ್ವಿಮ್ಮಿಂಗ್ ಪೂಲ್ ಒಳಗೆ ಬಿದ್ದಿದೆ. ಈ ವೇಳೆ ಪೋಷಕರು ಮತ್ತು ಇತರ ಕುಟುಂಬ ಸದಸ್ಯರು ಬಂಗಲೆಯ ಮೊದಲ ಮಹಡಿಯಲ್ಲಿ ನಿರತರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

15 ನಿಮಿಷದ ಬಳಿಕ ಪತ್ತೆಯಾಯ್ತು ಶವ

ಬಾಲಕ ನಾಪತ್ತೆಯಾಗಿರುವುದು ಕುಟುಂಬಸ್ಥರಿಗೆ ಗೊತ್ತಾಗಲು 10ರಿಂದ 15 ನಿಮಿಷ ತೆಗೆದುಕೊಂಡಿದ್ದು, ತೀವ್ರ ಹುಡುಕಾಟದ ಬಳಿಕ ಕೊಳದಲ್ಲಿ ಶವ ಪತ್ತೆಯಾಗಿತ್ತು. ಈ ಸಂಬಂಧ ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನೀರಿನ ಹೊಂಡದಲ್ಲಿ ಬಿದ್ದು ಬಾಲಕ ಸಾವು

ಮನೆಯ ಪಕ್ಕ ಆಟವಾಡುತ್ತಿದ್ದ ಸಂದರ್ಭದಲ್ಲಿ ನೀರಿನ ಹೊಂಡಕ್ಕೆ ಬಿದ್ದು ಬಾಲಕನೋರ್ವ ಮೃತಪಟ್ಟಿದ್ದಾನೆ. ಈ ದುರ್ಘಟನೆ ಬ್ರಹ್ಮಾವರದ ಉಪ್ಪೂರು ತೆಂಕಬೆಟ್ಟುನಲ್ಲಿ ಕಳೆದ 5 ದಿನಗಳ ಹಿಂದೆ ಮೃತಪಟ್ಟಿದ್ದಾನೆ. ಮೃತ ದುರ್ದೈವಿ ಬಾಲಕನನ್ನು 5 ವರ್ಷದ ಲಾರೆನ್ ಲೂವಿಸ್ ಎಂದು ಗುರುತಿಸಲಾಗಿದೆ. ಈತ ಉಪ್ಪೂರಿನ ನಾರ್ಮನ್ ಮತ್ತು ಸಿಲ್ವಿಯಾ ದಂಪತಿಯ ಪುತ್ರ.

ಇತ್ತೀಚಿಗಷ್ಟೇ ಕುವೈತ್‌ನಿಂದ ಮರಳಿದ್ದ ಕುಟುಂಬಸ್ಥರು

ಕುವೈತ್‌ ನಲ್ಲಿ ವಾಸವಾಗಿದ್ದ ಲಾರೆನ್ ಕುಟುಂಬ ಇತ್ತೀಚೆಗಷ್ಟೇ ಊರಿಗೆ ಮರಳಿತ್ತು. ದೂರದ ಊರಿಂದ ಬಂದ ಬಾಲಕನಿಗೆ ಇಲ್ಲಿಯ ಪರಿಸರ ಕಂಡು ಖುಷಿಯಾಗಿದ್ದಾನೆ. ಅಂತೆಯೇ ಲಾರೆನ್ ಮನೆಯ ಪಕ್ಕವೇ ಆಟವಾಡುತ್ತಿದ್ದ. ಈ ಸಂದರ್ಭದಲ್ಲಿ ಆತನ ಕಾಲು ಜಾರಿ ನೀರಿನ ಹೊಂಡಕ್ಕೆ ಬಿದ್ದಿದ್ದಾನೆ. ಪರಿಣಾಮ ಈಜಲು ಬಾರದೇ ಮೃತಪಟ್ಟಿದ್ದಾನೆ. ಇನ್ನು ಈ ಸಂಬಂಧ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Cave Restaurant: ಮಿಲಿಯನ್​ಗಳಷ್ಟು ಹಳೆಯ ಗುಹೆಯಲ್ಲಿ ರೆಸ್ಟೋರೆಂಟ್! ಸಾವು ಸಂಭವಿಸುವ ಭಯವೇಕೆ?

ಮರಬಿದ್ದು ಬಾಲಕ ಸಾವು

ಅತ್ತ ಕೇರಳದ ಕಾಸರಗೋಡಿನಲ್ಲಿ ಭಾರೀ ಗಾಳಿಗೆ ಬಾಲಕನ ಮೇಲೆ ತೆಂಗಿನ ಮರವೊಂದು ಮುರಿದು ಬಿದ್ದ ಪರಿಣಾಮ ಬಾಲಕ ಮೃತಪಟ್ಟ ಧಾರುಣ ಘಟನೆ ನಡೆದಿದೆ.  ಬಂದಿಯೋಡ್ ಕಯ್ಯಾರಿನ ನಿವಾಸಿ, ಪತ್ರಕರ್ತ ಸ್ಟೀಫನ್ ಕ್ರಾಸ್ತಾ ಅವರ ಪುತ್ರ ಸೋನು ಕ್ರಾಸ್ತಾ (13) ಮೃತ ಪಟ್ಟ ಬಾಲಕ. ಈತ ಮನೆ ಬಳಿಯ ತೋಟದಲ್ಲಿ ಆಟವಾಡುತ್ತಿದ್ದ ವೇಳೆ ಭಾರೀ ಗಾಳಿ ಬಂದಿದೆ. ಪರಿಣಾಮ ತೆಂಗಿನ ಮರವೊಂದು ಮುರಿದು ಬಾಲಕನ ಮೈ ಮೇಲೆ ಬಿದ್ದಿದ್ದು, ಬಾಲಕ ಗಂಭೀರವಾಗಿ ಗಾಯಗೊಂಡಿದ್ದನು ಎನ್ನಲಾಗಿದೆ. ತಕ್ಷಣ ಆತನನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಮೃತಪಟ್ಟಿದ್ದಾನೆ.
Published by:Annappa Achari
First published: