ಕೇರಳ: ಇಂದು ಇಡೀ ಜಗತ್ತೇ ಪ್ರೀತಿಯಲ್ಲಿ (Love) ಮುಳುಗಿ ಹೋಗಿದೆ. ಇಡೀ ಜಗತ್ತಿನ ಪ್ರೇಮಿಗಳೆಲ್ಲ ಪ್ರೇಮಲೋಕದಲ್ಲಿ (Love World) ವಿಹರಿಸುತ್ತಾ ಇದ್ದಾರೆ. ಯಾಕೆ ಅಂದರೆ ಇಂದು ಪ್ರೇಮಿಗಳ ದಿನ ಅಥವಾ ವ್ಯಾಲೆಂಟೈನ್ಸ್ ಡೇ (valentine's Day) ಇಂದು ಹುಡುಗ (Boy) ಅಥವಾ ಹುಡುಗಿ (Girl), ತಾನು ಇಷ್ಟಪಟ್ಟ ಪ್ರೇಯಸಿ ಹಾಗೂ ಪ್ರಿಯಕರನ ಮುಂದೆ ಪ್ರೇಮ ಪ್ರಸ್ತಾಪ (Love Proposal) ಇಡುವ ಅಥವಾ ಪ್ರಪೋಸ್ (Prapose) ಮಾಡುವ ದಿನ. “ನಾನು ನಿನ್ನ ಪ್ರೀತಿಸ್ತೀನಿ ಕಣೋ” ಅಂತ ಹುಡುಗಿ ಗ್ರೀನ್ ಸಿಗ್ನಲ್ ಕೊಡುವ, “ನಾನು ನಿನ್ನ ಜೊತೆ ಇರ್ತೀನಿ” ಅಂತ ಹುಡುಗ ಪ್ರೇಮದ ಮುದ್ರೆ ಒತ್ತುವ ವಿಶೇಷ ದಿನ (Special Day) ಇವತ್ತು. ಇಂತಹ ವಿಶೇಷ ದಿನದಲ್ಲೇ ಕೇರಳದಲ್ಲಿ (Kerala) ‘ವಿಶೇಷ’ ಮದುವೆಯೊಂದು (Special Marriage) ನಡೆಯುತ್ತಿದೆ. ಪ್ರೇಮಿಗಳ ದಿನ ಅದೇಷ್ಟೋ ಜನರು ಮದುವೆಯಾಗುತ್ತಾರೆ, ಅದರಲ್ಲೇನು ವಿಶೇಷ ಅಂತ ನೀವು ಕೇಳ ಬಹುದು. ಆದರೆ ಇದರಲ್ಲೇ ವಿಶೇಷ ಇರೋದು ಸ್ವಾಮೀ.. ಈ ವಿಶೇಷ ಮದುವೆ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ ಓದಿ…
ಇಂದಿನ ‘ವಿಶೇಷ’ ಜೋಡಿ ಯಾರು?
ಕೇರಳ ರಾಜ್ಯದ ತಿರುವನಂತಪುರಂನ ಮನು ಕಾರ್ತಿಕ್ ಹಾಗೂ ಶ್ಯಾಮ ಪ್ರಭಾ ಎಂಬುವವರೇ ಈ ವಿಶೇಷ ಜೋಡಿ. ಇಂದು ಪ್ರೇಮಿಗಳ ದಿನದಂದೇ ಶ್ಯಾಮ ಪ್ರಭಾ ಹಾಗೂ ಮನು ಕಾರ್ತಿಕ್ ಹೊಸ ಬದುಕಿಗೆ ಹೆಜ್ಜೆಯಿಟ್ಟಿದ್ದಾರೆ. ವಿವಾಹ ವಿಶೇಷ ಕಾಯ್ದೆಯಡಿ ತಮ್ಮ ಮದುವೆಯನ್ನು ನೋಂದಣಿ ಮಾಡಿಸಿಕೊಂಡಿದ್ದಾರೆ.
ತಮ್ಮ ಐಡಿ ಕಾರ್ಡ್ಗಳಲ್ಲಿ ‘ಪುರುಷ’ ಮತ್ತು ‘ಮಹಿಳೆ’ ಎಂದು ಗುರುತು ಪಡೆದಿರುವ ಈ ಟ್ರಾನ್ಸ್ಜೆಂಡರ್ ಜೋಡಿ, ಕುಟುಂಬದ ಆಶೀರ್ವಾದ ಪಡೆದೇ ಹಿಂದೂ ಸಂಪ್ರದಾಯದಂತೆ ಮದುವೆ ಆಗಿದ್ದಾರೆ.
‘ಅವನಾಗಿದ್ದ’ ಶ್ಯಾಮ ಪ್ರಭಾ ‘ಅವಳಾಗಿ’ ಬದಳಾಗಿದ್ದಳು
ಇಲ್ಲಿ ವಧುವಾಗಿರುವ ಶ್ಯಾಮ ಪ್ರಭಾ ಮೂಲತಃ ಹುಡುಗ. ಹುಡುಗನಾಗಿ ಹುಟ್ಟಿ, ಮಾನಸಿಕ ಬದಲಾವಣೆಯಾಗಿ, ಬಳಿಕ ಹುಡುಗಿಯಾಗಿ ಬದಲಾಗಿದ್ದವಳು. ಶ್ಯಾಮ ಪ್ರಭಾಳನ್ನು ಪ್ರೀತಿಸಿದ್ದ ಮನು ಕಾರ್ತಿಕ್ ಇಂದು ಆಕೆಯ ಕೈ ಹಿಡಿದಿದ್ದಾನೆ.
ಇದನ್ನೂ ಓದಿ: Relationship Tips: ಪ್ರೀತಿ, ಸಂಬಂಧಗಳನ್ನು ಗಟ್ಟಿಗೊಳಿಸಲು ಸಂಗಾತಿಗಳಿಗೆ ಇಲ್ಲಿದೆ ಸೂಪರ್ ಟಿಪ್ಸ್
2017ರಿಂದಲೂ ಇಬ್ಬರ ನಡುವೆ ಪ್ರೇಮ
ತಿರುವನಂತಪುರಂ ನಿವಾಸಿಯಾಗಿರುವ ಶ್ಯಾಮ ಎಸ್. ಪ್ರಭಾ, ಕೇರಳ ಸಾಮಾಜಿಕ ನ್ಯಾಯ ಇಲಾಖೆಯ ಟ್ರಾನ್ಸ್ಜೆಂಡರ್ ಸೆಲ್ ಅಡಿಯಲ್ಲಿ ರಾಜ್ಯ ಯೋಜನಾ ಅಧಿಕಾರಿಯಾಗಿದ್ದಾರೆ. ಇನ್ನು ಮನು ಕಾರ್ತಿಕ್ ಅವರು ಎಂಎನ್ಸಿ ಕಂಪನಿ ಒಂದರಲ್ಲಿ ಮಾನವ ಸಂಪನ್ಮೂಲ ವಿಭಾಗದಲ್ಲಿ ಉದ್ಯೋಗಿಯಾಗಿದ್ದಾರೆ. 2017ರಲ್ಲಿ ಮನು ಹಾಗೂ ಶ್ಯಾಮಪ್ರಭಾ ಒಬ್ಬರಿಗೊಬ್ಬರು ಪರಿಚಿತರಾದರು. ಆಗಿನಿಂದಲೇ ಇಬ್ಬರ ನಡುವೆ ಪ್ರೀತಿ ಬೆಳೆದಿದೆ ಎನ್ನಲಾಗಿದೆ.
ವಿಶೇಷ ಕಾಯ್ದೆಯಡಿ ವಿವಾಹ ನೋಂದಣಿ
ವಿಶೇಷ ವಿವಾಹ ಕಾಯಿದೆಯಡಿಯಲ್ಲಿ ಅಡಿಯಲ್ಲಿ ಇವರಿಬ್ಬರು ತಮ್ಮ ಮದುವೆಯನ್ನು ನೋಂದಾಯಿಸಿದ್ದಾರೆ. ಆದರೂ 2014ರ ಟ್ರಾನ್ಸ್ಜೆಂಡರ್ ವ್ಯಕ್ತಿಗಳ ಹಕ್ಕುಗಳ ಮಸೂದೆ ಅಡಿಯಲ್ಲಿ ತಮ್ಮ ಮದುವೆ ನೋಂದಣಿ ಮಾಡಲು ಕೇರಳ ಹೈಕೋರ್ಟ್ಗೂ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದಾರೆ.
ಪ್ರೇಮಿಗಳಿಗೆ ಕುಟುಂಬದ ಬೆಂಬಲ
ಮನು ಕಾರ್ತಿಕ್ ಹಾಗೂ ಶ್ಯಾಮ ಪ್ರಭಾ 2017ರಿಂದಲೇ ಒಬ್ಬರಿಗೊಬ್ಬರು ಪ್ರೀತಿಸುತ್ತಾ ಇದ್ದರು. ಇದು ಮನೆಯವರಿಗೂ ತಿಳಿದು, ಇಬ್ಬರ ಮದುವೆಗೆ ಒಪ್ಪಿಗೆಯನ್ನೂ ಕೊಟ್ಟಿದ್ದರು. ಆದರೆ ಆ ಸಮಯದಲ್ಲಿ ಇಬ್ಬರಿಗೂ ಒಳ್ಳೆಯ ಕೆಲಸ ಇರಲಿಲ್ಲ. ಹೀಗಾಗಿ ಆರ್ಥಿಕವಾಗಿ ಸದೃಢವಾಗುವರೆಗೆ ಮದುವೆ ಬೇಡ ಅಂತ ನಿರ್ಧರಿಸಿದ್ದರು.
ಇದನ್ನೂ ಓದಿ: Holiday Plan: ಈ Valentine's Day ದಿನ ನಿಮ್ಮ ಪ್ರೇಯಸಿ ಜೊತೆ ಈ ಬೀಚ್ಗಳಿಗೆ ವಿಸಿಟ್ ಕೊಡಿ
ತಿರುವನಂತಪುರಂನಲ್ಲೇ ಮುಂದಿನ ಜೀವನ
ಇದೀಗ ಇಬ್ಬರೂ ಒಳ್ಳೆಯ ಉದ್ಯೋಗದಲ್ಲಿದ್ದಾರೆ. ಹೀಗಾಗಿ ಮದುವೆಯ ನಿರ್ಧಾರ ಮಾಡಿದ್ದು, ಇಬ್ಬರೂ ಇಂದು ಹಸೆಮಣೆ ಏರಿದ್ದಾರೆ. ಇನ್ನು ಇಬ್ಬರೂ ಕೇರಳದ ಬೇರೆ ಬೇರೆ ಊರಿನವರಾಗಿದ್ದು, ಮದುವೆ ಬಳಿಕ ತಿರುವನಂತಪುರಂನಲ್ಲೇ ಇರುವುದಾಗಿ ಹೇಳಿದ್ದಾರೆ.
ಇದೀಗ ಇವರ ಮದುವೆ ಫೋಟೋಗಳು, ಸಾಕಷ್ಟು ವೈರಲ್ ಆಗಿದೆ. ಪ್ರೀತಿಗೆ ಯಾವುದೇ ತಾರತಮ್ಯ ಇಲ್ಲ ಅಂತ ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ