• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Corona Virus: ಕೋವಿಡ್‌ ವಿಚಾರದಲ್ಲಿ ನಮ್ಮನ್ನು ದೂಷಿಸುವ ಮೂಲಕ ಅಮೆರಿಕಾ ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತಿದೆ; ಚೀನಾ

Corona Virus: ಕೋವಿಡ್‌ ವಿಚಾರದಲ್ಲಿ ನಮ್ಮನ್ನು ದೂಷಿಸುವ ಮೂಲಕ ಅಮೆರಿಕಾ ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತಿದೆ; ಚೀನಾ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೋವಿಡ್ ಮಹಾಮಾರಿ ಬಂದು ಇಡೀ ಜಗತ್ತನ್ನೇ ತಲ್ಲಣಗೊಳಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಕೊರೊನಾ ವೈರಸ್‌ಗೆ ಇಡೀ ವಿಶ್ವದಾದ್ಯಂತ ಲಕ್ಷಾಂತರ ಜನರು ಸಾವನ್ನಪ್ಪಿದ್ದು ಮಾತ್ರವಲ್ಲದೇ ಜಗತ್ತಿನ ಆರ್ಥಿಕ ಚಟುವಟಿಕೆಯೇ ಸ್ಥಗಿತಗೊಂಡಿತ್ತು. ಕೊರೊನಾ ಆರ್ಭಟ ತಣ್ಣಗಾಗಿ ವಿಶ್ವದಾದ್ಯಂತ ಜನಜೀವನ ಎಂದಿನಂತೆ ಸಹಜಗೊಂಡರೂ ಕೋವಿಡ್ ಎಲ್ಲಿಂದ ಶುರುವಾಗಿದ್ದು, ಇದಕ್ಕೆ ಮೂಲ ಎಲ್ಲಿ ಅನ್ನೋದರ ಬಗ್ಗೆ ಚೀನಾ ಮತ್ತು ಅಮೆರಿಕಾ ಮಧ್ಯೆ ಪರಸ್ಪರ ಕೆಸರೆರಚಾಟ ಶುರುವಾಗಿದೆ.

ಮುಂದೆ ಓದಿ ...
  • Share this:

ವಾಷಿಂಗ್ಟನ್: ವಿಶ್ವಕ್ಕೆ ಗೊತ್ತಿರುವಂತೆ ಕೋವಿಡ್ ಮಹಾಮಾರಿ (Corona Virus) ಜಗತ್ತಿನಾದ್ಯಂತ ಹಲವು ಸಂಕಷ್ಟಗಳನ್ನು ತಂದೊಡ್ಡಿದೆ. ಕೋಟಿ ಕೋಟಿ ಡಾಲರ್‌ಗಳಷ್ಟು ಆರ್ಥಿಕ ನಷ್ಟ ಉಂಟಾಗಿರೋದು ಮಾತ್ರವಲ್ಲದೇ, ಈ ಮಹಾಮಾರಿಗೆ ಲಕ್ಷಾಂತರ ಜನರು ವಿಶ್ವಾದ್ಯಂತ ಪ್ರಾಣ ತೆತ್ತಿದ್ದಾರೆ. ಆ ಸಂದರ್ಭದಲ್ಲೇ ಚೀನಾದ (China) ವುಹಾನ್ ಪ್ರಾಂತ್ಯದಲ್ಲಿ ವೈರಸ್ (Covid 19) ಪ್ರಯೋಗಾಲಯದಿಂದ ಕೋವಿಡ್ ಸ್ಫೋಟಗೊಂಡಿದೆ ಎಂಬ ಸುದ್ದಿ ಬಲವಾಗಿ ಹರಿದಾಡಿದ್ದವು.


ಆ ನಂತರ ವಿಶ್ವ ಆರೋಗ್ಯ ಸಂಸ್ಥೆ ಮಧ್ಯ ಪ್ರವೇಶಿಸಿ ಆ ರೀತಿಯ ಪರಿಸ್ಥಿತಿ ಇಲ್ಲವೆಂದಾಗ ಚೀನಾದಿಂದ ಕೋವಿಡ್ ಹರಡಿರುವ ಸುದ್ದಿ ಶಾಂತವಾಗಿ ನೆನೆಗುದಿಗೆ ಬಿದ್ದಿತ್ತು. ಆದರೆ, ಈ ನಡುವೆ ಅಮೆರಿಕ ತಾನು ನಡೆಸಿರುವ ತನಿಖೆಯಿಂದ ವುಹಾನ್ ಪ್ರಾಂತ್ಯದಿಂದಲೇ ಕೋವಿಡ್ ಹೊರಬಂದಿರಬಹುದೆಂಬುದಕ್ಕೆ ಸಾಕ್ಷ್ಯ ಕಂಡುಬರುತ್ತಿವೆ ಎಂದು ಹೇಳಿದ್ದು ಮತ್ತೆ ತಹಬದಿಗೆ ಬಿದ್ದಿದ್ದ ಸುದ್ದಿ ಮುನ್ನೆಲೆಗೆ ಬಂದಿದ್ದಲ್ಲದೆ ಚೀನಾವನ್ನು ಕೆರಳಿಸಿತ್ತು.


ಈ ಬಗ್ಗೆ ಇತ್ತೀಚೆಗೆ ಮಾತನಾಡಿದ್ದ ಅಮೆರಿಕದ ಎಫ್‍ಬಿಐ ನಿರ್ದೇಶಕ ಕ್ರಿಸ್ಟೋಫರ್ ರೆ ತನ್ನ ಅಧ್ಯಯನದನುಸಾರ ಕೋವಿಡ್-19 ರ ಮೂಲ ವುಹಾನ್ ಆಗಿರಬಹುದು ಎಂದು ಹೇಳಿದ್ದರು.  ಫಾಕ್ಸ್ ಸುದ್ದಿ ಮಾಧ್ಯಮದೊಂದಿಗೆ ಮಾತನಾಡುವಾಗ ಅವರು ಈ ಹೇಳಿಕೆ ನೀಡಿದ್ದರು.


ಇದನ್ನೂ ಓದಿ: COVID Fear: ಕೊರೊನಾ ಭಯಕ್ಕೆ 3 ವರ್ಷಗಳ ಕಾಲ ಮಗನೊಂದಿಗೆ ಮಹಿಳೆ ಮನೆಯಲ್ಲೇ ಲಾಕ್​; ಗಂಡನಿಗೂ ನೋ ಎಂಟ್ರಿ!


ಚೀನಾದ ಸಾರ್ವಭೌಮತ್ವದ ಮೇಲೆ ಪ್ರಹಾರ

ಇದಕ್ಕೆ ತಕ್ಷಣ ಪ್ರತಿಕ್ರಿಯೆ ನೀಡಿರುವ ಚೀನಾ, ಇದೊಂದು ಚೀನಾದ ವಿರುದ್ಧ ಮಾಡಲಾಗುತ್ತಿರುವ ಪಿತೂರಿ ಎಂದು ಜರಿದಿದ್ದಲ್ಲದೆ, ಅಮೆರಿಕ ಈಗ ಮತ್ತೆ ಅಸಮಂಜಸವಾದ ವಿಷಯಕ್ಕೆ ಕೈಹಾಕಿ ಕೋವಿಡ್ ಮೂಲ ವುಹಾನ್ ಆಗಿರಬಹುದು ಎಂದು ಹೇಳುವ ಮೂಲಕ ಚೀನಾದ ಸಾರ್ವಭೌಮತ್ವ ಮೇಲೆ ಪ್ರಹಾರ ಮಾಡಿದೆ. ಆದರೆ ಇದರಿಂದ ಅಮೆರಿಕ ಚೀನಾದ ಮೌಲ್ಯವನ್ನು ಕಿತ್ತುಕೊಳ್ಳಲಾಗದು, ಬದಲಾಗಿ ಅವರು ತಮ್ಮದೆ ವಿಶ್ವಾಸಾರ್ಹತೆಯನ್ನು ಇನ್ನಷ್ಟು ಕಳೆದುಕೊಳ್ಳುತ್ತಿದ್ದಾರೆ ಎಂದು ಹೇಳಿದೆ.


ಈ ಒಟ್ಟಾರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಚೀನಾದ ವಿದೇಶಾಂಗ ವಕ್ತಾರ ಮಾವೋ ನಿಂಗ್, ಈ ಮೇಲಿನ ಹೇಳಿಕೆಯನ್ನು ನೀಡುತ್ತಾ ಅಮೆರಿಕದ ವಿರುದ್ಧ ಹರಿಹಾಯ್ದಿದ್ದಾರೆ. ಅಷ್ಟಕ್ಕೂ ಕ್ರಿಸ್ಟೋಫರ್ ಅವರು ಚೀನಾದ ಬಗೆಗಿನ ಹೇಳಿಕೆ ನೀಡುವ ಒಂದು ವಾರದ ಹಿಂದಷ್ಟೆ ಅಮೆರಿಕದ ಎನರ್ಜಿ ಡಿಪಾರ್ಟ್ಮೆಂಟ್, ಚೀನಾದ ಪ್ರಯೋಗಾಲಯದಲ್ಲುಂಟಾದ ವೈರಸ್ ಸೋರಿಕೆಯಿಂದಲೇ ಕೋವಿಡ್ ಉಲ್ಬಣ ಉಂಟಾಗಿರಬಹುದು ಎಂದು ಕಂಡುಕೊಂಡಿತ್ತು.


ಅಮೆರಿಕದ ಎನರ್ಜಿ ಡಿಪಾರ್ಟ್ಮೆಂಟ್ ವಿಶೇಷ

ಅಂದ ಹಾಗೆ ಅಮೆರಿಕದ ಎನರ್ಜಿ ಡಿಪಾರ್ಟ್ಮೆಂಟ್ ಶೋಧಿಸಿದ ಅಂಶಗಳನ್ನು ಏಕಾಏಕಿ ಅಲ್ಲಗಳೆಯಲು ಸಾಧ್ಯವಿಲ್ಲ. ಏಕೆಂದರೆ ಇದೊಂದು ಪ್ರತಿಷ್ಠಿತ ಇಲಾಖೆಯಾಗಿದ್ದು ರಾಷ್ಟ್ರೀಯ ಪ್ರಯೋಗಾಲಯಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತದೆ. ಅದರಲ್ಲಿ ಕೆಲ ಪ್ರಯೋಗಾಲಯಗಳು ಅತ್ಯಂತ ಮುಂದುವರಿದ ಹಾಗೂ ಸುಧಾರಿತ ಪ್ರಯೋಗಾಲಯಗಳಾಗಿವೆ ಎಂಬುದನ್ನು ಇಲ್ಲಿ ಗಮನಿಸಬಹುದು.


ಆದರೆ, ಅಮೆರಿಕದಲ್ಲೇ ಎನರ್ಜಿ ಇಲಾಖೆಯ ಶೋಧನೆ ಬಗ್ಗೆ ಅಷ್ಟೊಂದು ಸಕಾರಾತ್ಮಕ ಸ್ಪಂದನೆಯಿಲ್ಲ. ಅಮೆರಿಕದ ಇಂಟೆಲಿಜನ್ಸ್ ಸಮುದಾಯದ ಹಲವು ಏಜನ್ಸಿಗಳು, ಕೋವಿಡ್ ಸಹಜವಾಗಿಯೇ ಜಗತ್ತಿನಲ್ಲಿ ಸೃಷ್ಟಿಯಾಗಿರಬಹುದಾಗಿದೆ ಎಂಬ ವಿಷಯವನ್ನೇ ಬೆಂಬಲಿಸಿವೆ.


ಗುರುವಾರದ ಮಾಧ್ಯಮ ಸಂವಾದದಲ್ಲಿ ಕ್ರಿಸ್ಟೋಫರ್ ಅವರು, ಅಮೆರಿಕ ಈ ನಿಟ್ಟಿನಲ್ಲಿ ತನಿಖೆಯನ್ನು ಸ್ಪಷ್ಟವಾಗಿ ಮಾಡಲು ಪ್ರಯತ್ನಿಸುತ್ತಿರುವಾಗ ಅದರ ಪ್ರಯತ್ನಗಳಿಗೆ ಚೀನಾ ತಡೆಗಳನ್ನೊಡ್ಡುತ್ತಿದೆ. ನಾವು ಕೋವಿಡ್ ಉಲ್ಬಣಕ್ಕೆ ಕಾರಣವಾದ ಅಂಶವನ್ನು ಗಂಭೀರವಾಗಿ ತನಿಖೆ ನಡೆಸುತ್ತಿರುವಾಗ ಚೀನಾ ಸರ್ಕಾರವು ತನ್ನ ಸಾಮರ್ಥ್ಯ ಮೀರಿ ಈ ತನಿಖೆಯ ಹಾದಿಯನ್ನು ತಪ್ಪಿಸಲು ಪ್ರಯತ್ನಿಸುತ್ತಿದೆ, ಇದು ನಿಜಕ್ಕೂ ದುರದೃಷ್ಟಕರ ಎಂದು ಹೇಳಿದ್ದಾರೆ.


ಇದನ್ನೂ ಓದಿ: Marburg Virus: ಕೊರೊನಾ ಅಬ್ಬರ ತಗ್ಗಿತು, ಮತ್ತೊಂದು ವೈರಸ್ ಪತ್ತೆಯಾಯ್ತು! ಆಫ್ರಿಕಾದಲ್ಲಿ ಈಗ ಮಹಾಮಾರಿಯದ್ದೇ ರುದ್ರತಾಂಡವ!


ಇದಕ್ಕೂ ಮುನ್ನ ಬುಧವಾರ ನಡೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾವೋ ಅವರು ಚೀನಾದ ತನ್ನ ನಿಲುವನ್ನು ಮತ್ತೆ ಹೊರಹಾಕುವ ಮೂಲಕ ಅಮೆರಿಕಕ್ಕೆ ಎದುರೇಟು ನೀಡಿದ್ದರು. ಮಾವೋ ಅವರ ಪ್ರಕಾರ, ಅಮೆರಿಕದ ಮೇರಿಲ್ಯಾಂಡಿನ ಫೋರ್ಟ್ ಡೆಟ್ರಿಕ್ ನಲ್ಲಿರುವ ಯುಎಸ್ ಮಿಲಿಟರಿ ಸಂಶೋಧನಾ ಪ್ರಯೋಗಾಲಯದಿಂದ ಕೋವಿಡ್ ವೈರಾಣು ಸೋರಿಕೆಯಾಗಿದೆ. ಈ ಅಂಶವನ್ನೇ ಅವರು ತಮ್ಮ ಸುದ್ದಿಗೋಷ್ಠಿಯಲ್ಲಿ ಪುನರುಚ್ಛರಿಸಿದ್ದರು.


ಈ ಸಂದರ್ಭದಲ್ಲಿ ಮಾವೋ ಅವರು, "ಅಮೆರಿಕವು ವಿಜ್ಞಾನ ಹಾಗೂ ಸತ್ಯಾಂಶಗಳಿಗೆ ಗೌರವ ನೀಡಬೇಕು, ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಸಹಯೋಗಿಸಬೇಕು, ಜಗತ್ತಿನಾದ್ಯಂತ ಪರಿಣಿತರನ್ನು, ತನ್ನ ದೇಶದಲ್ಲಿ ಎಲ್ಲಿ ಹೇಗೆ ಸೋರಿಕೆಯಾಗಿರಬಹುದು ಎಂಬುದನ್ನು ಪತ್ತೆ ಹಚ್ಚಲು ಆಮಂತ್ರಣ ನೀಡಬೇಕು. ತದನಂತರ ಇದರಿಂದ ಹೊರಬರುವ ಫಲಿತಾಂಶವನ್ನು ಅಂತಾರಾಷ್ಟ್ರೀಯವಾಗಿ ಪ್ರಕಟಿಸಬೇಕು" ಎಂದಿದ್ದಾರೆ.

First published: