ರೈಲ್ವೆ ನಿಲ್ದಾಣದಲ್ಲಿ ಕುಡಿಯುವ ನೀರಿನ ಟ್ಯಾಂಕ್‌ಗೆ ಟಾಯ್ಲೆಟ್ ಪೈಪ್‌ಲೈನ್ ಜೋಡಣೆ; ನೌಕರನ ಜತೆಗೆ ಸ್ಟೇಷನ್‌ ಮಾಸ್ಟರ್ ಅಮಾನತು

ಈ ಘಟನೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಬಳಿಕ ಎಚ್ಚೆತ್ತುಕೊಂಡ ರೈಲ್ವೆ ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಮಧ್ಯ ಪ್ರದೇಶದ ರೈಲ್ವೆ ಸ್ಟೇಷನ್‌ವೊಂದರಲ್ಲಿ ಹೊರಗುತ್ತಿಗೆ ನೈರ್ಮಲ್ಯ ಕಾರ್ಮಿಕರೊಬ್ಬರು ಕುಡಿಯುವ ನೀರು ಹೊಂದಿರುವ ಟ್ಯಾಂಕ್‌ಗೆ ಟಾಯ್ಲೆಟ್ ಪೈಪ್‌ಲೈನ್ ಜೋಡಿಸಿದ ಭೀಕರಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಮಧ್ಯಪ್ರದೇಶದ ಮಂಡಸೂರು ಜಿಲ್ಲೆಯ ರೈಲ್ವೆ ಸ್ಟೇಷನ್ ಮಾಸ್ಟರ್ ಅನ್ನು ಸಹ ಅಮಾನತಿನಲ್ಲಿಡಲಾಗಿದೆ. ಇನ್ನು, ಘಟನೆಗೆ ಕಾರಣನಾದ ಕಾರ್ಮಿಕನನ್ನು ಕರ್ತವ್ಯದಿಂದ ತೆಗೆದುಹಾಕಲಾಗಿದೆ ಎಂದು ತಿಳಿದುಬಂದಿದೆ. ರೈಲ್ವೆಯ ಕೋಟಾ ವಿಭಾಗದ ವ್ಯಾಪ್ತಿಗೆ ಬರುವ ಗರೋತ್ ರೈಲು ನಿಲ್ದಾಣದಲ್ಲಿ ಮಾರ್ಚ್ 1 ರಂದು ಈ ಘಟನೆ ನಡೆದಿದೆ ಎಂದು ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಅಜಯ್ ಕುಮಾರ್ ಪಾಲ್ ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

  "ಖಾಸಗಿ ಸಂಸ್ಥೆಯ ನೈರ್ಮಲ್ಯ ಕಾರ್ಮಿಕರೊಬ್ಬರು ಕುಡಿಯುವ ನೀರಿನ ತೊಟ್ಟಿಗೆ ಶೌಚಾಲಯದ ಪೈಪ್‌ಲೈನ್ ಅನ್ನು ಜೋಡಿಸಿದ್ದಾರೆ. ಈ ದೋಷ ಕಂಡುಬಂದ ನಂತರ ಸಂಪೂರ್ಣವಾಗಿ ಸ್ವಚ್ಛಗೊಳಿಸಲಾಯಿತು ಮತ್ತು ಆ ನೀರು ಕುಡಿಯಲು ಬರುತ್ತದೋ ಇಲ್ಲವೋ ಎಂಬ ಸಾಮರ್ಥ್ಯದ ಬಗ್ಗೆ ಪರೀಕ್ಷಿಸಲಾಯಿತು. ಈ ಘಟನೆ ಸಂಬಂಧ ಸ್ಟೇಷನ್ ಮಾಸ್ಟರ್ ಚೌಥ್ಮಲ್ ಮೀನಾ ಅವರನ್ನು ಅಮಾನತುಗೊಳಿಸಲಾಗಿದೆ ಮತ್ತು ಈ ಎಡವಟ್ಟಿಗೆ ಕಾರಣನಾದ ಸ್ಯಾನಿಟೇಷನ್‌ ಕಾರ್ಮಿಕನನ್ನು ಕೆಲಸದಿಂದ ತೆಗೆದುಹಾಕಲಾಗಿದೆ” ಎಂದು ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಅಜಯ್ ಕುಮಾರ್ ಪಾಲ್ ಮಾಹಿತಿ ನೀಡಿದರು.

  ಈ ಘಟನೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಬಳಿಕ ಎಚ್ಚೆತ್ತುಕೊಂಡ ರೈಲ್ವೆ ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ. ಪಶ್ಚಿಮ ಸೆಂಟ್ರಲ್ ರೈಲ್ವೆ ಈ ಸಂಬಂಧ ಮಾರ್ಚ್ 5 ರಂದು ಹೇಳಿಕೆ ನೀಡಿದ್ದು, ಈ ಘಟನೆಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದರು. ಈ ಘಟನೆ ಬಗ್ಗೆ ನೆಟ್ಟಿಗರು ತೀವ್ರ ಖಂಡನೆ ವ್ಯಕ್ತಪಡಿಸಿದ್ದರು. ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟುಟ್ರೋಲ್‌ಗೂ ಕಾರಣವಾಗಿತ್ತು.

  ಇದನ್ನು ಓದಿ: ಕೋವಿಡ್​ ಪ್ರಕರಣದಲ್ಲಿ ಏರಿಕೆ; ಮುಂಬೈನಲ್ಲಿ ಜಾರಿಯಾಗಲಿದೆಯಾ ಮತ್ತೊಂದು ಲಾಕ್​ಡೌನ್​?

  ಮಹಾರಾಷ್ಟ್ರ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಕೊರೊನಾವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಮಧ್ಯೆ ಈ ಆಘಾತಕಾರಿ ಸುದ್ದಿ ವರದಿಯಾಗಿದೆ. ಇತ್ತೀಚೆಗೆ ಕೋವಿಡ್ -19 ಹೊಸ ರೂಪಾಂತರದ ಪ್ರಕರಣಗಳಲ್ಲಿ ಸಹ ಮಹಾರಾಷ್ಟ್ರದಲ್ಲಿ ಹೆಚ್ಚಳ ಕಂಡು ಬಂದಿದೆ.

  ಪ್ರಯಾಣಿಕರ ಸೌಲಭ್ಯಗಳನ್ನು ಸಂಗ್ರಹಿಸಲು ರೈಲ್ವೆಯ ಕೋಟಾ ಮಂಡಲ್ ಪ್ರವಾಸದ ಮಧ್ಯೆ ಈ ಘಟನೆ ಬೆಳಕಿಗೆ ಬಂದಿದೆ. ರೈಲ್ವೆಯ ಅಸಡ್ಡೆ ವರ್ತನೆ ಮತ್ತು ಪ್ರಯಾಣಿಕರ ಆರೋಗ್ಯಕ್ಕೆ ಬೆದರಿಕೆ ಇರುವುದರಿಂದ ಹಲವಾರು ಪ್ರಯಾಣಿಕರು ದೂರು ನೀಡಿದ್ದಾರೆ ಎಂದು ನ್ಯೂಸ್ 18 ರಾಜಸ್ಥಾನ್ ವರದಿ ಮಾಡಿದೆ. ಈ ಸಂಬಂಧ ನ್ಯೂಸ್‌ 18 ರಾಜಸ್ಥಾನ ಟ್ವೀಟ್‌ ಸಹ ಮಾಡಿತ್ತು. ಅಲ್ಲದೆ, ಈ ಟ್ವೀಟ್‌ಗೆ ರೈಲ್ವೆ ಇಲಾಖೆ ಪ್ರತಿಕ್ರಿಯೆ ನೀಡಿದೆ.
  Published by:Seema R
  First published: