Pulwama Attack: ಪುಲ್ವಾಮಾ ಉಗ್ರರ ದಾಳಿಗೆ 4 ವರ್ಷ! ಅಷ್ಟಕ್ಕೂ 2019 ಫೆಬ್ರುವರಿ 14ರಂದು ನಡೆದಿದ್ದೇನು?

ಪುಲ್ವಾಮಾ ದಾಳಿ

ಪುಲ್ವಾಮಾ ದಾಳಿ

2009ರಿಂದ ಭಾರತೀಯರ ಪಾಲಿಗೆ ಫೆಬ್ರವರಿ 14 ಪ್ರೇಮಿಗಳ ದಿನಕ್ಕಿಂತಲೂ ಪುಲ್ವಾಮಾ ದಾಳಿಯ ಕಾರಣಕ್ಕೆ ಕಹಿಯಾಗಿ ಕಾಡುತ್ತಿದೆ. ಹೌದು.. 14 ಫೆಬ್ರುವರಿ 2019 ರ ಆ ದಿನ ಭಾರತೀಯರನ್ನು ಅಕ್ಷರಶಃ ಕಣ್ಣೀರಿನಲ್ಲಿ ಕೈ ತೊಳೆಸಿದ ದಿನ.

 • Trending Desk
 • 3-MIN READ
 • Last Updated :
 • Share this:

ಫೆಬ್ರವರಿ 14 ಪ್ರೇಮಿಗಳ (Valentines Day) ದಿನಕ್ಕೆ ಫೇಮಸ್. ಈ ದಿನ ಪ್ರೇಮಿಗಳು ಎಲ್ಲೆಂದರಲ್ಲಿ ಹಾಯಾಗಿ ಸುತ್ತಾಡ್ತಾ ಮಜಾ ಮಾಡ್ತಾರೆ. ಆದರೆ 2009ರಿಂದ ಭಾರತೀಯರ ಪಾಲಿಗೆ ಫೆಬ್ರವರಿ 14 ಪ್ರೇಮಿಗಳ ದಿನಕ್ಕಿಂತಲೂ ಪುಲ್ವಾಮಾ ದಾಳಿಯ (Pulwama terror Attack) ಕಾರಣಕ್ಕೆ ಕಹಿಯಾಗಿ ಕಾಡುತ್ತಿದೆ. ಹೌದು.. 14 ಫೆಬ್ರುವರಿ 2019 ರ ಆ ದಿನ ಭಾರತೀಯರನ್ನು (Indians)ಅಕ್ಷರಶಃ ಕಣ್ಣೀರಿನಲ್ಲಿ ಕೈ ತೊಳೆಸಿದ ದಿನ.


ಜಮ್ಮು ಮತ್ತು ಕಾಶ್ಮೀರದಲ್ಲಿ ಸಿಆರ್‌ಪಿಎಫ್ ಬೆಂಗಾವಲು ವಾಹನವನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ 40 ಮಂದಿ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಸಿಬ್ಬಂದಿ ಹುತಾತ್ಮರಾಗಿದ್ದರು. ಈ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳ ನಡುವೆ ಗಡಿಯುದ್ದಕ್ಕೂ ವಾರಗಳ ಕಾಲ ತೀವ್ರವಾದ ಮಿಲಿಟರಿ ಘರ್ಷಣೆಗಳು ನಡೆದಿತ್ತು.


ಪುಲ್ವಾಮಾ ಭಯೋತ್ಪಾದಕ ದಾಳಿಯ ಟೈಮ್ಲೈನ್ ಇಲ್ಲಿದೆ ನೋಡಿ:


14 ಫೆಬ್ರವರಿ 2019


 • ಜಮ್ಮು ಮತ್ತು ಕಾಶ್ಮೀರದಲ್ಲಿ ಸಿಆರ್‌ಪಿಎಫ್ ಯೋಧರು ಪ್ರಯಾಣಿಸುತ್ತಿದ್ದ ಎರಡು ಸೇನಾ ಬಸ್‌ಗಳು ಆತ್ಮಾಹುತಿ ಬಾಂಬ್ ದಾಳಿಗೆ ಗುರಿಯಾದ ಪರಿಣಾಮ 40 ಸಿಬ್ಬಂದಿಗಳು ಸಾವನ್ನಪ್ಪಿದ್ದರು. ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದ ಅರೆಸೈನಿಕ ವಾಹನಗಳ ದೊಡ್ಡ ಬೆಂಗಾವಲು ಪಡೆಯ ವಾಹನ ಇದಾಗಿತ್ತು.

 • ದಾಳಿಯ ಸ್ವಲ್ಪ ಸಮಯದ ನಂತರ, ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆ ದಾಳಿಯ ಜವಾಬ್ದಾರಿಯನ್ನು ಹೊತ್ತು ವೀಡಿಯೋವನ್ನು ಬಿಡುಗಡೆ ಮಾಡಿತು. ವೀಡಿಯೋದಲ್ಲಿ, ಆತ್ಮಾಹುತಿ ಬಾಂಬರ್ ತನ್ನನ್ನು ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಕಾಕಪೊರಾದ ಗುಂಡಿಬಾಗ್ ನಿವಾಸಿ ಸ್ಥಳೀಯ ಕಾಶ್ಮೀರಿ ಜಿಹಾದಿ ಆದಿಲ್ ಅಹ್ಮದ್ ದಾರ್ ಎಂದು ಗುರುತಿಸಿಕೊಂಡಿದ್ದನು.


ಇದನ್ನೂ ಓದಿ: Today in History: ಸರೋಜಿನಿ ನಾಯ್ಡು ಜನ್ಮದಿನ ಸೇರಿ ಫೆಬ್ರವರಿ 13ರಂದು ನಡೆದ ಐತಿಹಾಸಿಕ ಘಟನೆಗಳ ಒಂದು ನೋಟ!


15 ಫೆಬ್ರವರಿ 2019


 • ಪಾಕಿಸ್ತಾನ ಭಯೋತ್ಪಾದನೆಯನ್ನು ಬೆಂಬಲಿಸುತ್ತಿದೆ ಎಂದು ಎಂಇಎ ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿತ್ತು. ಜೆಇಎಂ ನಾಯಕ ಮಸೂದ್ ಅಜರ್ ಗೆ ಪಾಕಿಸ್ತಾನದ ನಿಯಂತ್ರಣದಲ್ಲಿರುವ ಪ್ರದೇಶಗಳಲ್ಲಿ ತನ್ನ ಭಯೋತ್ಪಾದಕ ಚಟುಟಿಕೆಯನ್ನು ನಿರ್ವಹಿಸಲು ಮತ್ತು ವಿಸ್ತರಿಸುವುದರ ಜೊತೆಗೆ ಭಾರತದಲ್ಲಿ ನಿರ್ಭೀತಿಯಿಂದ ದಾಳಿ ನಡೆಸಲು ಪಾಕಿಸ್ತಾನ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಿದೆ ಎಂದು ಆ ವಿಡಿಯೋದಲ್ಲಿ ಹೇಳಿದ್ದ.

 • ಅದರ ಬೆನ್ನಲ್ಲೇ ಪುಲ್ವಾಮಾ ದಾಳಿಯಲ್ಲಿ ತನ್ನ ಕೈವಾಡವಿದೆ ಎಂಬ ಆರೋಪವನ್ನು ಪಾಕಿಸ್ತಾನ ತಳ್ಳಿಹಾಕಿತು. ಇತ್ತ ಮಸೂದ್ ಅಜರ್ ಭಯೋತ್ಪಾದಕನಲ್ಲ ಎಂದು ಚೀನಾ ಸರ್ಕಾರ ಹೇಳಿಕೆ ನೀಡಿತು. ಇದರ ಬೆನ್ನಲ್ಲೇ ಇಂತಹ ದಾಳಿಗಳನ್ನು ಆಯೋಜಿಸುವ ಮೂಲಕ ಭಾರತವನ್ನು ದುರ್ಬಲಗೊಳಿಸಲು ಸಾಧ್ಯವಿಲ್ಲ ಎಂದು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ ಪ್ರಧಾನಿ ನರೇಂದ್ರ ಮೋದಿ, ಇದಕ್ಕೆ ಕಾರಣರಾದವರು ಭಾರೀ ಬೆಲೆ ತೆರಬೇಕಾಗುತ್ತದೆ ಮತ್ತು ಭಯೋತ್ಪಾದಕರನ್ನು ಎದುರಿಸಲು ಭದ್ರತಾ ಪಡೆಗಳಿಗೆ ಮುಕ್ತ ಅವಕಾಶ ನೀಡಲಾಗುವುದು ಎಂದು ಹೇಳಿದ್ದರು.

 • ಪುಲ್ವಾಮಾ ಭಯೋತ್ಪಾದಕ ದಾಳಿಯ ನಂತರ ಅಲ್ಲಲ್ಲಿ ಪ್ರತಿಭಟನೆಗಳು ಹೆಚ್ಚಾಗ್ತಿದ್ದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಜಮ್ಮುವಿನಲ್ಲಿ ಕರ್ಫ್ಯೂ ವಿಧಿಸಲಾಗಿತ್ತು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಮಿಲಿಟರಿ ಪಡೆಗಳನ್ನು ನಿಯೋಜಿಸಲಾಯಿತು.

 • ಭಾರತವು ಪಾಕಿಸ್ತಾನದ ವಿರುದ್ಧ ರಾಜತಾಂತ್ರಿಕ ದಾಳಿಯನ್ನು ಪ್ರಾರಂಭಿಸಿತು, ಅಂತರಾಷ್ಟ್ರೀಯ ಸಭೆಯಲ್ಲಿ ಜೆಎಂ ನಡೆಸಿದ ಪುಲ್ವಾಮಾ ದಾಳಿಯ ಬಗ್ಗೆ 25 ದೇಶಗಳ ರಾಯಭಾರಿಗಳಿಗೆ ವಿವರಿಸಲಾಯಿತು.

 • ಜೊತೆಗೆ ಪುಲ್ವಾಮಾದಲ್ಲಿ ಜೆಇಎಂ ಜೊತೆ ನಂಟು ಹೊಂದಿದ ಆರೋಪದ ಮೇಲೆ ಕನಿಷ್ಠ ಏಳು ಜನರನ್ನು ಬಂಧಿಸಲಾಯಿತು.


16 ಫೆಬ್ರವರಿ 2019

 • ರಾಜಕೀಯ ಪಕ್ಷಗಳು, ಭದ್ರತಾ ಪಡೆಗಳನ್ನು ಬೆಂಬಲಿಸುವ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿದವು, ಅದರ ನಂತರ ಎಲ್ಲಾ ಪಾಕಿಸ್ತಾನಿ ಸರಕುಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇಕಡಾ 200ಕ್ಕೆ ಹೆಚ್ಚಿಸಲಾಯಿತು.

 • ಮಾರಣಾಂತಿಕ ದಾಳಿಯಲ್ಲಿ ಪಾಕಿಸ್ತಾನದ ಪಾಲ್ಗೊಳ್ಳುವಿಕೆಯ ಪುರಾವೆಗಳನ್ನು ಹಂಚಿಕೊಳ್ಳಲು ಭಾರತ ಸಿದ್ಧವಿದ್ದರೆ, ದಾಳಿಗೆ ಕಾರಣರಾದ ವ್ಯಕ್ತಿಗಳನ್ನು ಕಂಡುಹಿಡಿಯಲು ಸಹಕರಿಸಲು ಸಿದ್ಧರಿದ್ದೇವೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವರು ಭರವಸೆ ನೀಡಿದರು.

 • ದಾಳಿಯ ನಂತರ, ಭಾರತವು ಪಾಕಿಸ್ತಾನದ ಮೋಸ್ಟ್ ಫೇವರ್ಡ್ ನೇಷನ್ ಸ್ಥಾನಮಾನವನ್ನು ಹಿಂತೆಗೆದುಕೊಂಡಿತು. ಪಾಕಿಸ್ತಾನವನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಮನಿ ಲಾಂಡರಿಂಗ್ ಕುರಿತ ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (ಎಫ್ಎಟಿಎಫ್) ಅನ್ನು ಭಾರತ ಸರ್ಕಾರ ಒತ್ತಾಯಿಸಿತು. ಫೆಬ್ರವರಿ 17 ರಂದು, ಜಮ್ಮು ಮತ್ತು ಕಾಶ್ಮೀರ ಆಡಳಿತವು ಪ್ರತ್ಯೇಕತಾವಾದಿ ನಾಯಕರಿಗೆ ಭದ್ರತಾ ನಿಬಂಧನೆಗಳನ್ನು ಹಿಂತೆಗೆದುಕೊಂಡಿತು.


ಇದನ್ನೂ ಓದಿ: Today In History: ಫೆ 14 ಪ್ರೇಮಿಗಳ ದಿನವಷ್ಟೇ ಅಲ್ಲ, ಇನ್ನೂ ಇದೆ ಹತ್ತಾರು ಮಹತ್ವದ ಘಟನೆಗಳು! ಇಲ್ಲಿದೆ ಈ ದಿನದ ವಿಶೇಷ


26 ಫೆಬ್ರವರಿ 2019


 • ಈ ದಾಳಿ ನಡೆದ 12 ದಿನಗಳ ನಂತರ, ಫೆಬ್ರವರಿ 26 ರಂದು ಮುಂಜಾನೆ, ಭಾರತೀಯ ವಾಯುಪಡೆಯ ಜೆಟ್ ಗಳು ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾದ ಬಾಲಕೋಟ್ ನಲ್ಲಿರುವ ಜೆಎಂ ಶಿಬಿರದ ಮೇಲೆ ಬಾಂಬ್ ದಾಳಿ ನಡೆಸಿದವು. 1971 ರ ಭಾರತ-ಪಾಕಿಸ್ತಾನ ಯುದ್ಧದ ನಂತರ ಮೊದಲ ಬಾರಿಗೆ ಆಕ್ರಮಣಕಾರಿ ಯುದ್ಧ ವಿಮಾನಗಳು ನಿಯಂತ್ರಣ ರೇಖೆಯನ್ನು ದಾಟಿದ್ದವು.

 • ವರದಿಗಳ ಪ್ರಕಾರ, 12 ಮಿರಾಜ್ 2000 ಜೆಟ್ ಗಳು ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದವು. 12 ಐಎಎಫ್ ಜೆಟ್ ಗಳು ನಿಯಂತ್ರಣ ರೇಖೆಯ ಉದ್ದಕ್ಕೂ ಮತ್ತು ಪಾಕಿಸ್ತಾನದ ಜೈಶ್-ಎ-ಮೊಹಮ್ಮದ್ ಶಿಬಿರಗಳ ಮೇಲೆ 1,000 ಕೆಜಿ ಬಾಂಬ್ ಗಳನ್ನು ಹಾಕುವ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದವು. ಈ ಕಾರ್ಯಾಚರಣೆಯು ಪಾಕಿಸ್ತಾನದ ಬಾಲಕೋಟ್ ಸೆಕ್ಟರ್ ನಲ್ಲಿರುವ ಜೆಎಂ ಶಿಬಿರವನ್ನು ಸಂಪೂರ್ಣವಾಗಿ ನಾಶಪಡಿಸಲು ಕಾರಣವಾಯಿತು ಎಂದು ವರದಿಯಾಗಿತ್ತು.


27 ಫೆಬ್ರವರಿ 2019

 • ಪಾಕಿಸ್ತಾನದ ಎಫ್-16 ಯುದ್ಧ ವಿಮಾನಗಳು ಭಾರತದ ವಾಯುಪ್ರದೇಶವನ್ನು ಪ್ರವೇಶಿಸಿದ್ದವು. ಅವರು ಭಾರತೀಯ ಮಿಲಿಟರಿ ಸಂಸ್ಥೆಗಳನ್ನು ಗುರಿಯಾಗಿಸಲು ಉದ್ದೇಶಿಸಿದ್ದರು ಎಂದು ವರದಿಗಳು ತಿಳಿಸಿದ್ದವು. ಎರಡು ಮಿಗ್ 21 ಬೈಸನ್ ಮತ್ತು ಒಂದು ಎಫ್ -16 ಜೆಟ್ ಅನ್ನು ಭಾರತ ನಾಶಪಡಿಸಿತು.

 • ಇಬ್ಬರು ಐಎಎಫ್ ಪೈಲಟ್ ಗಳನ್ನು ಸೆರೆಹಿಡಿದಿರುವುದಾಗಿ ಪಾಕಿಸ್ತಾನ ಹೇಳಿಕೊಂಡಿತ್ತು. ನಂತರ ಅದು ತನ್ನ ಹೇಳಿಕೆಯನ್ನು ಬದಲಾಯಿಸಿ, ಕೇವಲ ಒಬ್ಬ ಐಎಎಫ್ ಪೈಲಟ್ ಮಾತ್ರ ಪಾಕಿಸ್ತಾನದ ವಶದಲ್ಲಿದ್ದಾರೆ ಎಂದು ಹೇಳಿತ್ತು. ಐಎಎಫ್ ಪೈಲಟ್ ವಿಂಗ್ ಕಮಾಂಡರ್ ಅಭಿನಂದನ್ ಅವರ ವೀಡಿಯೋವನ್ನು ಪಾಕಿಸ್ತಾನ ಬಿಡುಗಡೆ ಮಾಡಿತ್ತು.

 • ಈ ಕಾರ್ಯಾಚರಣೆಯಲ್ಲಿ ಒಬ್ಬ ಐಎಎಫ್ ಪೈಲಟ್ ಕಾಣೆಯಾಗಿದ್ದಾನೆ ಎಂದು ಎಂಇಎ ಸಹ ದೃಢಪಡಿಸಿತ್ತು.


28 ಫೆಬ್ರವರಿ 2019  • ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಪಾಕಿಸ್ತಾನ ಬಿಡುಗಡೆ ಮಾಡಲಿದೆ ಎಂದು ಇಮ್ರಾನ್ ಖಾನ್ ಘೋಷಿಸಿದರು.


 • ಫೆಬ್ರವರಿ 27ರಂದು ಭಾರತದ ವಿರುದ್ಧ ಪಾಕಿಸ್ತಾನದ ಎಫ್-16 ಯುದ್ಧ ವಿಮಾನಗಳನ್ನು ಬಳಸಿದ್ದಕ್ಕೆ ಪುರಾವೆಗಳನ್ನು ಮೂರು ಸೇನಾಪಡೆಗಳ ಮುಖ್ಯಸ್ಥರು ಪತ್ರಿಕಾಗೋಷ್ಠಿಯಲ್ಲಿ ಮಂಡಿಸಿದರು.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು