• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Viral News: ದೇವಾಲಯದಲ್ಲಿ ಆಭರಣ ಕದ್ದಿದ್ದ ಕಳ್ಳನಿಗೆ ಪಶ್ಚಾತಾಪ! 9 ವರ್ಷಗಳ ನಂತರ ತಪ್ಪುಕಾಣಿಕೆ ಸಹಿತ ಲಕ್ಷಾಂತರ ಮೌಲ್ಯದ ಒಡವೆ ವಾಪಸ್ ನೀಡಿದ ಚೋರ್!

Viral News: ದೇವಾಲಯದಲ್ಲಿ ಆಭರಣ ಕದ್ದಿದ್ದ ಕಳ್ಳನಿಗೆ ಪಶ್ಚಾತಾಪ! 9 ವರ್ಷಗಳ ನಂತರ ತಪ್ಪುಕಾಣಿಕೆ ಸಹಿತ ಲಕ್ಷಾಂತರ ಮೌಲ್ಯದ ಒಡವೆ ವಾಪಸ್ ನೀಡಿದ ಚೋರ್!

ದೇವಾಲಯದ ಆಭರಣಗಳು

ದೇವಾಲಯದ ಆಭರಣಗಳು

ದೇವಸ್ಥಾನದಲ್ಲಿ ಯಜ್ಞ ನಡೆಯುತ್ತಿದ್ದಾಗ ಆಭರಣಗಳನ್ನು ತೆಗೆದುಕೊಂಡು ಹೋಗಿದ್ದೆ. ಒಂಬತ್ತು ವರ್ಷಗಳಲ್ಲಿ ನಾನು ಜೀವನದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದೆ. ಆದ್ದರಿಂದ, ನಾನು ದೇವರ ಮುಂದೆ ಶರಣಾಗಲು ಮತ್ತು ಆಭರಣಗಳನ್ನು ಹಿಂದಿರುಗಿಸಲು ನಿರ್ಧರಿಸಿದ್ದೇನೆ ಎಂದು ಕಳ್ಳ ತಿಳಿಸಿದ್ದಾನೆ.

ಮುಂದೆ ಓದಿ ...
  • Share this:

ಭುವನೇಶ್ವರ: ಹುಟ್ಟುತ್ತಲೇ ಯಾರೂ ಕಳ್ಳರಾಗುವುದಿಲ್ಲ (Thief), ಸಮಯ, ಪರಿಸ್ಥತಿ ಕೆಲವರನ್ನು ಆ ದಾರಿಗೆ ತಳ್ಳುತ್ತದೆ. ಆದರೆ ಅವರಿಗೂ ಕೂಡ ಮನಸ್ಸು ಒಮ್ಮೊಮ್ಮೆ ಬದಲಾಗುತ್ತದೆ ಎನ್ನುವುದಕ್ಕೆ ಇಲ್ಲೊಬ್ಬ ಕಳ್ಳನೊಬ್ಬ ಸಾಕ್ಷಿಯಾಗಿದ್ದಾನೆ. ತಾನೂ ಕದ್ದಿದ್ದ ಲಕ್ಷಾಂತರ ಮೌಲ್ಯದ ದೇವಾಲಯದ ಆಭರಣವನ್ನು (Temple Jewellery) ವಾಪಸ್​ ನೀಡಿದ್ದಾನೆ. ತನ್ನ ತಪ್ಪಿನ ಅರಿವಾಗಿದೆ. ಒಡಿಶಾದ (Odisha) ಗೋಪಿನಾಥಪುರದ ಗೋಪಿನಾಥ ದೇಗುಲದಲ್ಲಿ ಶ್ರೀಕೃಷ್ಣನ ಆಭರಣಗಳನ್ನು (Shri krishna Temple) 9 ವರ್ಷಗಳ ಹಿಂದೆ ಕಳ್ಳನೊಬ್ಬ ಕದ್ದು ಹೋಗಿದ್ದ. ಆದರೆ ಆತನ ಮನಸ್ಸು ಇದ್ದಕ್ಕಿದ್ದಂತೆ ಬದಲಾಗಿದ್ದು, ಅವುಗಳನ್ನು ಹಿಂದಿರುಗಿಸಿದ್ದಾನೆ. ತಾನೂ ವಾಪಸ್ ನೀಡಿದ್ದ ಆಭರಣದ ಜೊತೆಗೆ ಒಂದು ಪತ್ರವನ್ನು ಬಿಟ್ಟು ಹೋಗಿದ್ದು, ಅದರಲ್ಲಿ ತನಗೆ ಕೆಲವು ದಿನಗಳಿಂದ ದುಃಸ್ವಪ್ನಗಳು ಕಾಡುತ್ತಿವೆ, ನನ್ನ ಮನಸ್ಸು ಬದಲಾಗಿದೆ ಎಂದು ಹೇಳಿ ಆಭರಣಗಳನ್ನು ಮರಳಿಸಿದ್ದಾನೆ. ಅದರಲ್ಲಿ ತನ್ನ ಕೃತ್ಯಕ್ಕೆ ಕ್ಷಮೆ ಕೇಳಿದ್ದಲ್ಲದೆ , ಪ್ರಾಯಶ್ಚಿತ್ತವಾಗಿ ಒಂದಿಷ್ಟು ಹಣವನ್ನು ಬಿಟ್ಟು ಹೋಗಿದ್ದಾನೆ ಎಂದು ತಿಳಿದುಬಂದಿದೆ.


2014ರಲ್ಲಿ ಕಳ್ಳತನ


ಆಭರಣವನ್ನು ವಾಪಸ್ ನೀಡಿರುವ ಕಳ್ಳ 2014 ರ ಮೇ ತಿಂಗಳಲ್ಲಿ ಆಭರಣಗಳನ್ನು ಕದ್ದು ಪರಾರಿಯಾಗಿದ್ದ. ಆದರೆ ಆಭರಣ ಕದ್ದಾಗಿಂದ ಬಹಳಷ್ಟು ಸಮಸ್ಯೆಗಳನ್ನು ಎದುರಿಸಿದ್ದಾಗಿ ಪತ್ರದಲ್ಲಿ ತಿಳಿಸಿದ್ದಾರೆ. ತಾನೂ ಅನುಭವಿಸಿದ ಕಷ್ಟಗಳು ನನ್ನನ್ನು ಇಂದು ಆಭರಣವನ್ನು ವಾಪಸ್​ ನೀಡುವಂತೆ ಮಾಡಿದೆ. ಹಾಗಾಗಿ ನಾನು ಅವುಗಳನ್ನು ಒಪ್ಪಿಸುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದಾನೆ.


ಇದನ್ನೂ ಓದಿ: Explained: ತಾಮ್ರದ ಬಿಕ್ಕಟ್ಟಿಗೆ ಪರಿಹಾರ ಹುಡುಕಿದ ಗಣಿಗಾರಿಕೆ ಸಂಸ್ಥೆಗಳು, ಇಲ್ಲಿದೆ ನೋಡಿ ಸಂಪೂರ್ಣ ವಿವರ


ಯಜ್ಞ ನಡೆಯುತ್ತಿರುವಾಗ ಕಳ್ಳತನ


ದೇವಸ್ಥಾನದಲ್ಲಿ ಯಜ್ಞ ನಡೆಯುತ್ತಿದ್ದಾಗ ಆಭರಣಗಳನ್ನು ತೆಗೆದುಕೊಂಡು ಹೋಗಿದ್ದೆ. ಒಂಬತ್ತು ವರ್ಷಗಳಲ್ಲಿ ನಾನು ಜೀವನದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದೆ. ಆದ್ದರಿಂದ, ನಾನು ದೇವರ ಮುಂದೆ ಶರಣಾಗಲು ಮತ್ತು ಆಭರಣಗಳನ್ನು ಹಿಂದಿರುಗಿಸಲು ನಿರ್ಧರಿಸಿದ್ದೇನೆ. ನನ್ನ ಹೆಸರು, ವಿಳಾಸ ಅಥವಾ ಗ್ರಾಮವನ್ನು ನಾನು ಉಲ್ಲೇಖಿಸುತ್ತಿಲ್ಲಎಂದು ಪತ್ರದಲ್ಲಿ ಕಳ್ಳ ಬರೆದಿದ್ದಾನೆ.




ಏನೇನು ಆಭರಣಗಳಿದ್ದವು?


ವರದಿ ಪ್ರಕಾರ ಕಳ್ಳತನವಾಗಿದ್ದ ಶಿರಸ್ತ್ರಾಣ, ಕಿವಿಯೋಲೆ, ಬಳೆ, ಕೊಳಲು ಇದ್ದ ಬ್ಯಾಗ್‌ನ ಆಭರಣಗಳನ್ನು ಕಳ್ಳ 2014ರಲ್ಲಿ ಯಜ್ಞ ಮಾಡಿದ್ದ ಅರ್ಚಕ ದೇಬೇಶ್ ಚಂದ್ರ ಮೊಹಂತಿ ಅವರ ಮನೆ ಮುಂದೆ ಇಟ್ಟು, ಹೋಗಿದ್ದೇನೆ. ಈ ಆಭರಣಗಳ ಜೊತೆಗೆ ಹೆಚ್ಚುವರಿಯಾಗಿ 300 ರೂ.ಗಳನ್ನು ಬಿಟ್ಟು ಹೋಗಿದ್ದೇನೆ ಎಂದು ಪೊಲೀಸರು ತಿಳಿಸಿದ್ದಾರೆ.


ತಪ್ಪುಕಾಣಿಕೆ ಸಲ್ಲಿಸಿದ ಕಳ್ಳ


ಕಳ್ಳ ಇಂಗ್ಲೀಷ್ ಭಾಷೆಯಲ್ಲಿ ಪತ್ರ ಬರೆದಿದ್ದಾನೆ. ಆಭರಣದ ಜೊತೆಗೆ 301 ರೂಪಾಯಿ ತಪ್ಪು ಕಾಣಿಕೆ ನೀಡಿದ್ದಾನೆ. ಇದರಲ್ಲಿ 201 ರೂಪಾಯಿ ದೇವಸ್ಥಾನದ ದೇಣಿಗೆಯಾಗಿದೆ. ಉಳಿದ 100 ರೂ ದಂಡವಾಗಿ ನೀಡುತ್ತಿದ್ದೇನೆ ಎಂದು ಬರೆದಿದ್ದಾನೆ. ಅಲ್ಲದೆ ದೇವಸ್ಥಾನದಲ್ಲಿ ಯಾಗ ನಡೆಯುವಾಗ ಆಭರಣಗಳನ್ನು ಕದ್ದಿದ್ದೆ ಎಂದು ಹೇಳಿದ್ದಾನೆ. ಆದರೆ ಚಿನ್ನಾಭರಣಗಳನ್ನು ಕದ್ದ ನಂತರ ಒಂಬತ್ತು ವರ್ಷಗಳಲ್ಲಿ ನಾನು ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಿದೆ ಮತ್ತು ಅದಕ್ಕಾಗಿಯೇ ನಾನು ಆಭರಣವನ್ನು ಹಿಂದಿರುಗಿಸಲು ನಿರ್ಧರಿಸಿದೆ ಎಂದು ತಿಳಿಸಿದ್ದಾನೆ.


ಇದನ್ನೂ ಓದಿ: India-Russia: ಭಾರತೀಯ ಬ್ಯಾಂಕ್‌ಗಳಲ್ಲಿದೆ ರಷ್ಯಾದ ಕೋಟ್ಯಂತರ ಹಣ; ಆದರೆ ಮುಟ್ಟಂಗೂ ಇಲ್ಲ, ಬಿಡಂಗೂ ಇಲ್ಲ!

 ಪವಾಡಕ್ಕಿಂತ ಕಡಿಮೆ ಏನಲ್ಲ


ಇದೇ ವೇಳೆ ದೇವಸ್ಥಾನದ ಅರ್ಚಕ ಕೈಲಾಶ್ ಪಾಂಡಾ ಅವರು ಕದ್ದ ಚಿನ್ನಾಭರಣ ವಾಪಸ್ ಪಡೆಯುವುದು ಪವಾಡಕ್ಕಿಂತ ಕಡಿಮೆ ಏನಲ್ಲ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ. ಇಷ್ಟು ವರ್ಷಗಳಾದರೂ ಕಳ್ಳನನ್ನು ಹಿಡಿಯುವಲ್ಲಿ ಪೊಲೀಸರು ವಿಫಲರಾಗಿದ್ದರು. ಹೀಗಾಗಿ ಚಿನ್ನಾಭರಣ ಸಿಗುವ ಭರವಸೆಯನ್ನೆಲ್ಲ ಕೈಬಿಟ್ಟಿದ್ದೆವು. ಬಹಳ ಕಷ್ಟಪಟ್ಟು ಭಗವಂತನಿಗೆ ಹೊಸ ಆಭರಣಗಳನ್ನು ಖರೀದಿಸಿದೆವು. ಕದ್ದ ಚಿನ್ನಾಭರಣವನ್ನು ಸ್ವತಃ ಹಿಂದಿರುಗಿಸಿದ ಕಳ್ಳನಿಗೆ ದೇವರು ಶಿಕ್ಷೆ ನೀಡಿದ್ದಾನೆ ಎಂದು ಅವರು ತಿಳಿಸಿದ್ದಾರೆ.

First published: