HOME » NEWS » National-international » A TEACHER KILLED HER SON AND CONFESSED CRIME AS SACRIFICE TO ALLAH AT KERALA LG

ಮಗನನ್ನು ಕೊಂದು ಅಲ್ಲಾಹನನ್ನು ಮೆಚ್ಚಿಸಲು ಮಾಡಿದ ತ್ಯಾಗ ಎಂದ ತಾಯಿ

ಕೊಲೆ ಮಾಡಿದ ಬಳಿಕ ಪಾಲಕ್ಕಾಡ್ ಎಮೆರ್ಜೆನ್ಸಿ ಕಂಟ್ರೋಲ್​ ರೂಮ್​ಗೆ ಕರೆ ಮಾಡಿ, ತಾನು ಎಸಗಿದ ಕೃತ್ಯವನ್ನು ಒಪ್ಪಿಕೊಂಡಿದ್ದಾಳೆ. ಈ ಘಟನೆ ನಡೆದಿರುವುದು ಮುಂಜಾನೆ 3ರಿಂದ 4 ಗಂಟೆ ಸಮಯದಲ್ಲಿ. ಈ ವಿಷಯ ಪಕ್ಕದ ಕೋಣೆಯಲ್ಲೇ ಮಲಗಿದ್ದ ಗಂಡ ಮತ್ತು ಇನ್ನಿಬ್ಬರು ಮಕ್ಕಳಿಗೆ ತಿಳಿದಿರಲಿಲ್ಲ.

news18-kannada
Updated:February 8, 2021, 11:03 AM IST
ಮಗನನ್ನು ಕೊಂದು ಅಲ್ಲಾಹನನ್ನು ಮೆಚ್ಚಿಸಲು ಮಾಡಿದ ತ್ಯಾಗ ಎಂದ ತಾಯಿ
ಸಾಂದರ್ಭಿಕ ಚಿತ್ರ
  • Share this:
ಕೇರಳ(ಫೆ.08): ಇತ್ತೀಚೆಗಷ್ಟೇ ಹೈದ್ರಾಬಾದ್​​ನಲ್ಲಿ ಸುಶಿಕ್ಷಿತ ತಂದೆ-ತಾಯಿ ಮೌಢ್ಯತೆಯ ಹೆಸರಿನಲ್ಲಿ ತಮ್ಮ ಮಕ್ಕಳನ್ನು ಹತ್ಯೆ ಮಾಡಿದ್ದರು. ಪುನರ್ಜನ್ಮದ ಮೂಢನಂಬಿಕೆಯಲ್ಲಿ ಮಕ್ಕಳನ್ನೇ ಕೊಂದಿದ್ದರು. ಇದು ಮೌಢ್ಯತೆಯ ಪರಮಾವಧಿಗೆ ಹಿಡಿದ ಕನ್ನಡಿಯಾಗಿತ್ತು. ಈ ಘಟನೆ ಮಾಸುವ ಮುನ್ನವೇ ನೆರೆಯ ರಾಜ್ಯ ಕೇರಳದಲ್ಲಿ ಇಂತಹದ್ದೇ ಒಂದು ದುರಂತ ನಡೆದಿದೆ. ಶಿಕ್ಷಕಿಯಾಗಿದ್ದ ತಾಯಿ ತನ್ನ ಮಗನನ್ನು ಅಲ್ಲಾಹನಿಗೆ ಅರ್ಪಿಸಿದ್ದೇನೆ ಎಂದು ಕೊಲೆ ಮಾಡಿದ್ದಾಳೆ. ಇದೆಲ್ಲವನ್ನೂ ನೋಡಿದರೆ, ಅನಕ್ಷರಸ್ಥರು ಇಂತಹ ಕೆಲಸ ಮಾಡುತ್ತಿಲ್ಲ. ಒಳ್ಳೆಯ ಶಿಕ್ಷಣ ಪಡೆದು ಸಮಾಜದಲ್ಲಿ ಉನ್ನತ ಸ್ಥಾನಮಾನದಲ್ಲಿರುವವರೇ ಇಂತಹ ಕೃತ್ಯ ಎಸಗುತ್ತಿದ್ದಾರೆ ಎಂಬುದು ತಿಳಿದು ಬರುತ್ತದೆ. ಮಕ್ಕಳ ಭವಿಷ್ಯ ರೂಪಿಸಬೇಕಾದ ಪೋಷಕರೇ ಇಂತಹ ಹೀನ ಕೃತ್ಯದಲ್ಲಿ ತೊಡಗಿಕೊಂಡು ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದಾರೆ ಎಂಬುವುದರಲ್ಲಿ ಎರಡು ಮಾತಿಲ್ಲ.

ಈ ಘಟನೆ ಕೇರಳದ ಪಾಲಕ್ಕಾಡ್​ ಜಿಲ್ಲೆಯಲ್ಲಿ ನಡೆದಿದೆ. ತಾಯಿ ಮಗನನ್ನು ಕೊಂದ ಬಳಿಕ ಪೊಲೀಸರಿಗೆ ಕರೆ ಮಾಡಿ, ತಾನೇ ಈ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾಳೆ. ಅಲ್ಲದೇ ನಾನು ನನ್ನ ಮಗನನ್ನು, ಅಲ್ಲಾಹನನ್ನು ಮೆಚ್ಚಿಸಲು ತ್ಯಾಗದ ಅರ್ಪಣೆ ಮಾಡಲು ಕೊಂದಿದ್ದೇನೆ ಎಂದು ಕೊಲೆಪಾತಕಿ ತಾಯಿ ಪೊಲೀಸರ ಮುಂದೆ ಹೇಳಿದ್ದಾಳೆ. ಇಷ್ಟೆಲ್ಲಾ ಘಟನೆ ನಡೆಯುವಾಗ ಮಹಿಳೆಯ ಗಂಡ ಮತ್ತು ಇನ್ನಿಬ್ಬರು ಮಕ್ಕಳು ಪಕ್ಕದ ಕೋಣೆಯಲ್ಲೇ ಮಲಗಿದ್ದರು. ಅವರಿಗೆ ಈ ಕೃತ್ಯ ನಡೆದಿರುವುದು ತಿಳಿದಿಲ್ಲ ಎನ್ನಲಾಗಿದೆ.

ಭಾನುವಾರ ಮುಂಜಾನೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಗನನ್ನು ಕೊಲೆ ಮಾಡಿದ ತಾಯಿ ಪೊಲೀಸರಿಗೆ ಕರೆ ಮಾಡಿ, ಮನೆಯ ಗೇಟ್ ಬಳಿ ಕಾಯುತ್ತಿದ್ದಳು. ಕೊಲೆ ಆರೋಪಿಯನ್ನು ಶಾಹಿದಾ(31) ಎಂದು ಗುರುತಿಸಲಾಗಿದೆ. ಈ ಸಂಬಂಧ ಪಾಲಕ್ಕಾಡ್​ ಸೌತ್ ಸ್ಟೇಷನ್​ನಲ್ಲಿ ಪ್ರಕರಣ ದಾಖಲಾಗಿದೆ.

ಪುತ್ತುಪಲ್ಲಿಥೆರುವ್​ನ ಶಾಹಿದಾ ಎಂಬಾಕೆಗೆ ಮೂವರು ಮಕ್ಕಳಿದ್ದರು. ಈಕೆ ಅಲ್ಲಾಹನಿಗೆ ಅರ್ಪಣೆ ಮಾಡಲು ತನ್ನ ಮೂರನೇ ಮಗುವನ್ನು ಕೊಲೆ ಮಾಡಿದ್ದಾಳೆ ಎಂದು ತಿಳಿದು ಬಂದಿದೆ. ಕೊಲೆ ಮಾಡಿದ ಬಳಿಕ ಪಾಲಕ್ಕಾಡ್ ಎಮೆರ್ಜೆನ್ಸಿ ಕಂಟ್ರೋಲ್​ ರೂಮ್​ಗೆ ಕರೆ ಮಾಡಿ, ತಾನು ಎಸಗಿದ ಕೃತ್ಯವನ್ನು ಒಪ್ಪಿಕೊಂಡಿದ್ದಾಳೆ. ಈ ಘಟನೆ ನಡೆದಿರುವುದು ಮುಂಜಾನೆ 3ರಿಂದ 4 ಗಂಟೆ ಸಮಯದಲ್ಲಿ. ಈ ವಿಷಯ ಪಕ್ಕದ ಕೋಣೆಯಲ್ಲೇ ಮಲಗಿದ್ದ ಗಂಡ ಮತ್ತು ಇನ್ನಿಬ್ಬರು ಮಕ್ಕಳಿಗೆ ತಿಳಿದಿರಲಿಲ್ಲ.

ಕಾಲೇಜಿಗೆ ಬಂಕ್ ಹಾಕಿ ಎಣ್ಣೆ ಪಾರ್ಟಿ ಮಾಡಲು ಬಾರ್​​ಗೆ ಹಾಜರಾದ ವಿದ್ಯಾರ್ಥಿಗಳು..!

ಅಲ್ಲಾಹ್​​ಗೆ ತ್ಯಾಗವಾಗಿ ತನ್ನ 6 ವರ್ಷದ ಮಗ ಅಮಿಲ್​​​​​​​ನನ್ನು ಕೊಲೆ ಮಾಡಿ ಅರ್ಪಿಸಿರುವುದಾಗಿ ಶಾಹಿದಾ ಪೊಲೀಸರ ಬಳಿ ಹೇಳಿದ್ದಾಳೆ. ಈಕೆ ಜನಮೈತ್ರಿ ಪೊಲೀಸ್ ಠಾಣೆಯ ಕಂಟ್ರೋಲ್ ರೂಂ ನಂಬರ್​​ನನ್ನು ಘಟನೆ ನಡೆದ ಹಿಂದಿನ ರಾತ್ರಿ ನೆರೆಹೊರೆಯವರ ಬಳಿ ಕೇಳಿ ತೆಗೆದುಕೊಂಡಿದ್ದಳು ಎನ್ನಲಾಗಿದೆ.

ವಿಷಯ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕಾಗಮಿಸಿದ್ದಾರೆ.ಮಗುವಿನ ಮೃತದೇಹವು ಸ್ನಾನದ ಮನೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿತ್ತು. ತಾಯಿ ಶಾಹಿದಾ ಮಗುವಿನ ಗಂಟಲು ಸೀಳಿ, ಕಾಲುಗಳನ್ನು ಕಟ್ಟಿಹಾಕಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.ಶಾಹಿದಾ ಮದರಸಾದಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಳು. ಈಕೆ ಮೂರು ತಿಂಗಳ ಗರ್ಭಿಣಿ ಎಂದು ತಿಳಿದು ಬಂದಿದೆ. ಈಕೆಯ ಗಂಡ ಸುಲೈಮಾನ್ ಪಾಲಕ್ಕಾಡ್ ನಗರದಲ್ಲಿ ಟ್ಯಾಕ್ಸಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

ಕೊಲೆ ಆರೋಪಿತೆ ಶಾಹಿದಾ ಮೇಲೆ ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈಕೆ ಅಲ್ಲಾಹನಿಗೆ ತ್ಯಾಹ ಮಾಡಲು ಈ ಕೊಲೆ ಮಾಡಿದ್ದಾಳೋ ಅಥವಾ ಬೇರೆ ಕಾರಣಕ್ಕೋ ಎಂಬುದನ್ನು ತನಿಖೆ ನಡೆಸಿದ ನಂತರವೇ ನಿರ್ಧರಿಸಲಾಗುತ್ತದೆ ಎಂದು ಎಸ್​​ಪಿ ಆರ್​. ವಿಶ್ವನಾಥ್ ತಿಳಿಸಿದ್ದಾರೆ.
Published by: Latha CG
First published: February 8, 2021, 10:06 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories