ಮುಂಬೈ: ಮುಂಬೈನ ಗಂದೇವಿ ಪೊಲೀಸ್ ಠಾಣೆ ವ್ಯಾಪ್ತಿಯಡಿ ಬರುವ ಕಾರ್ಮೈಕಲ್ ರಸ್ತೆಯಲ್ಲಿ ಅನುಮಾನಾಸ್ಪದ ವಾಹನವೊಂದು ಇಂದು ಸಂಜೆ ಪತ್ತೆಯಾಗಿದೆ. ಅನುಮಾನಾಸ್ಪದವಾಗಿ ವಾಹನ ನಿಂತಿರುವುದು ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ವಾಹನ ಪತ್ತೆಯಾಗಿರುವ ಈ ಕಾರ್ಮೈಕಲ್ ರಸ್ತೆಯಲ್ಲಿ ದೇಶದ ದೊಡ್ಡ ದೊಡ್ಡ ಶ್ರೀಮಂತರು ಹಾಗೂ ಖ್ಯಾತ ಉದ್ಯಮಿಗಳು ವಾಸವಾಗಿದ್ದಾರೆ.
ಇದನ್ನು ಓದಿ: ಗ್ರೀನ್ ಕಾರ್ಡ್ ವಿತರಣೆ ಮೇಲಿನ ನಿಷೇಧ ತೆರವು, ಅಮೆರಿಕದಲ್ಲಿರುವ ಲಕ್ಷಾಂತರ ಭಾರತೀಯರಿಗೆ ರಿಲೀಫ್
ಆ ಕೂಡಲೇ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ತಂಡ (ಬಿಡಿಡಿಎಸ್) ಹಾಗೂ ಇತರೆ ಪೊಲೀಸ್ ತಂಡ ಕೂಡಲೇ ಸ್ಥಳಕ್ಕೆ ದೌಡಾಯಿಸಿ, ವಾಹನವನ್ನು ಸಂಪೂರ್ಣವಾಗಿ ತಪಾಸಣೆಗೆ ಒಳಪಡಿಸಿವೆ. ವಾಹನದಲ್ಲಿ ಕೆಲ ಸ್ಪೋಟಕಗಳು ಪತ್ತೆಯಾಗಿವೆ. ಆದರೆ, ಇವು ಜೋಡಣೆಗೊಂಡ ಸ್ಪೋಟಕಗಳಲ್ಲ ಎಂದು ತಿಳಿದುಬಂದಿದೆ. ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ.
(ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ...)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ