ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲು ಕಳ್ಳರು ಮಾಡುವ ಉಪಾಯಗಳು ಒಂದಲ್ಲ ಎರಡಲ್ಲ. ಆದರೆ ಕಳ್ಳ ಚಾಪೆ ಕೆಳಗೆ ನುಸುಳಿದರೆ, ರಂಗೋಲಿ ಕೆಳಗೆ ನುಸುಳುವ ಪೊಲೀಸರೂ ಇದ್ದಾರೆ. ಕೆಲವೊಮ್ಮೆ ಕಳ್ಳರು ತಾವು ತೋಡಿದ ಹಳ್ಳಕ್ಕೆ ತಾವೇ ಬೀಳುವುದುಂಟು. ಹಾಗೆ ಹಳ್ಳಕ್ಕೆ ಬಿದ್ದ ಆರೋಪಿಯೊಬ್ಬನ ಪ್ರಕರಣ ಇಲ್ಲಿದೆ. ಪೊಲೀಸರ ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಮೂರು ದಿನಗಳ ವರೆಗೆ ಪ್ರಜ್ಞೆ ತಪ್ಪಿದ ನಾಟಕವಾಡಿದ ಆ ಆರೋಪಿಗೆ, ದನದ ಮಾಂಸದ ಮಸಾಲೆ ಅನ್ನದ ಪರಿಮಳ ಮೂಗಿಗೆ ಬಡಿದದ್ದೇ ತಡ, ಎದ್ದೇಳದಿರಲು ಸಾಧ್ಯವಾಗಲೇ ಇಲ್ಲವಂತೆ. ಈ ಪ್ರಕರಣ ನಡೆದದ್ದು ಇಲ್ಲಲ್ಲ, ನಮ್ಮ ಪಕ್ಕದ ಚೀನಾದಲ್ಲಿ.
ಚೀನಾದ ಹೂಬೆಯ ಶಿಯೋಗನ್ ಪ್ರಾಂತ್ಯದಲ್ಲಿ ಜುಲೈ 7ರಂದು ವ್ಯಕ್ತಿಯೊಬ್ಬನನ್ನು ವಂಚನೆಯ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದರು. ಆದರೆ ಆ ವ್ಯಕ್ತಿಗೆ ಹೇಗಾದರೂ ಮಾಡಿ ಪೊಲೀಸರ ವಿಚಾರಣೆಯಿಂದ ತಪ್ಪಿಸಿಕೊಳ್ಳಬೇಕಿತ್ತು. ಅದಕ್ಕಾಗಿ ಆ ಕಿಲಾಡಿ ಮಾಡಿದ್ದೇನು ಗೊತ್ತೇ? ಆಘಾತಕ್ಕೆ ಒಳಗಾಗಿ ಪ್ರಜ್ಞೆ ತಪ್ಪಿದವನಂತೆ ನಟಸಿದ್ದು.
ಹಾಗಂತ ಪೊಲೀಸರೇನು ಅವನನ್ನು ಅಲ್ಲೇ ಬಿಟ್ಟು ಹೋಗಲಿಲ್ಲ. ಅವನನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ವೈದ್ಯರು ಅವನಿಗೆ ಪ್ರಜ್ಞೆ ಬರಿಸಲು ನಾನಾ ರೀತಿಯ ಪ್ರಯತ್ನಗಳನ್ನು ಮಾಡಿದರು. ಆದರೆ ಜಪ್ಪಯ್ಯ ಅಂದರೂ ವೈದ್ಯರಿಂದ ಆ ಭೂಪನನ್ನು ಎಚ್ಚರಿಸಲು ಸಾಧ್ಯವಾಗಲೇ ಇಲ್ಲ. ಹೀಗೆಒಂದಲ್ಲ, ಎರಡು ದಿನ ಕಳೆಯಿತು.
ಅಂತೂ ಇಂತೂ ಮೂರನೇ ದಿನ ಆತ ಎಚ್ಚರಗೊಂಡ. ಆದರೆ ವೈದ್ಯರ ಪ್ರಯತ್ನದ ಫಲವಾಗಿಯಂತೂ ಖಂಡಿತ ಅಲ್ಲ. ಮತ್ತೆ ಹೇಗಪ್ಪಾ ಅಂತೀರಾ? ಅವನು ಎಚ್ಚರಗೊಂಡದ್ದು ಊಟದ ಪರಿಮಳದಿಂದ ! ಹೌದು, ಪೊಲೀಸ್ ಅಧಿಕಾರಿಯೊಬ್ಬರು ಆತ ಮಲಗಿದ್ದ ಹಾಸಿಗೆಯ ಪಕ್ಕ ಕುಳಿತು ಊಟ ಮಾಡುತ್ತಿದ್ದರಂತೆ. ಅದು ಅಂತಿಂಥ ಊಟವಲ್ಲ ಚೀನೀಯರಿಗೆ ಇಷ್ಟದ ಖಾದ್ಯಗಳಲ್ಲಿ ಒಂದಾದ ದನದ ಮಾಂಸದ ಮಸಾಲೆ ಅನ್ನ. ಪ್ರಜ್ಞೆ ತಪ್ಪಿದಂತೆ ನಟಿಸುತ್ತಿದ್ದ ಆರೋಪಿಗೆ ಆ ಸೊಗಸಾದ ಭೋಜನದ ಸುವಾಸನೆ ಮೂಗಿಗೆ ಬಡಿದದ್ದೇ ತಡ, ಎದ್ದೇಳದೆ ಇರಲು ಸಾಧ್ಯವಾಗಲಿಲ್ಲ.
ಇದನ್ನೂ ಓದಿ: Dia Mirza-Baby Boy: ಎರಡು ತಿಂಗಳ ಮುಂಚೆಯೇ ತಾಯಿಯಾದ ದಿಯಾ ಮಿರ್ಜಾ: ಮಗನ ಹೆಸರು ರಿವೀಲ್ ಮಾಡಿದ ನಟಿ..!
ಅನ್ನದ ಪರಿಮಳ ತೀವ್ರವಾಗಿತ್ತು ಮತ್ತು ನಾನು ಅದನ್ನು ತಿನ್ನುತ್ತಿರುವಾಗ ಅದರ ಪರಿಮಳ ಇಡೀ ಕೋಣೆಯನ್ನು ಆವರಿಸಿಕೊಂಡಿತ್ತು. ಆಗ ಅವನು ತನ್ನ ತಲೆಯನ್ನು ಅಲ್ಲಾಡಿಸ ತೊಡಗಿದ ಮತ್ತು ನಿಧಾನವಾಗಿ ಮೇಲಕ್ಕೆ ಎದ್ದು ಕುಳಿತ ಎಂದು ಆ ಪೊಲೀಸ್ ಅಧಿಕಾರಿ ದ ಗ್ಲೋಬಲ್ ಟೈಮ್ಸ್‌ಗೆ ಹೇಳಿದ್ದಾರೆ.
ಊಟದ ಪರಿಮಳದ ಕಾರಣದಿಂದಲೇ ತಾನು ಎದ್ದೇಳಲು ಕಾರಣ ಎಂದು ಆರೋಪಿ ಒಪ್ಪಿಕೊಂಡಿದ್ದಾನೆ. ನಾನು ಮೂರು ದಿನಗಳಿಂದ ಏನೂ ತಿಂದಿರಲಿಲ್ಲ. ನನ್ನ ಸುತ್ತಮುತ್ತ ಊಟದ ಪರಿಮಳ ಬರತೊಡಗಿದ ಕೂಡಲೇ ನನ್ನ ಹೊಟ್ಟೆಗೆ ಇನ್ನು ಹಸಿವನ್ನು ತಡೆದುಕೊಳ್ಳುವುದು ಸಾಧ್ಯವಾಗಲಿಲ್ಲ ಎಂದು ಆತ ಹೇಳಿದ್ದಾನೆ.
ಇದನ್ನೂ ಓದಿ: ದರ್ಶನ್ ಕಡೆಯಿಂದ ಸಿಕ್ತು ಸಿಹಿ ಸುದ್ದಿ: ದಾಸನ 55ನೇ ಸಿನಿಮಾಗೆ ಬಂಡವಾಳ ಹೂಡಲಿದ್ದಾರೆ ಶೈಲಜಾ ನಾಗ್
ಕಳೆದ ತಿಂಗಳು, ಜೊರ್ಹಾತ್‍ನಲ್ಲಿ ಕೋವಿಡ್ -19 ನಿರ್ಬಂಧಗಳ ಮಧ್ಯೆ ತನ್ನ ಸ್ನೇಹಿತೆಯ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗವಹಿಸಲು ಟೈಟಾಬೋರ್‍ನ ಜಿಲ್ಲಾ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಆಗಿ ನಟಿಸಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದರು. ಬಿಸ್ವಜಿತ್ ದತ್ತ ಎಂಬವನು ದೇಕೈಜೂಲಿಯಲ್ಲಿ ತನ್ನ ಸ್ನೇಹಿತೆಯ ಹುಟ್ಟು ಹಬ್ಬದ ಪಾರ್ಟಿಯಲ್ಲಿ ಪಾಲ್ಗೊಳ್ಳಲು ಕಾರೊಂದನ್ನು ಬಾಡಿಗೆಗೆ ಪಡೆದಿದ್ದ. ಆ ಕಾರಿನ ಮುಂಭಾಗಕ್ಕೆ ‘ ಜಿಲ್ಲಾ ಮ್ಯಾಜಿಸ್ಟ್ರೇಟ್’ ಎಂದು ಬರೆದ ಪ್ರಿಂಟ್‍ಔಂಟನ್ನು ಅಂಟಿಸಿದ್ದ. ಕಾರಿನ ಚಾಲಕನಿಗೆ ಹಣ ನೀಡುವುದಾಗಿ ಹೇಳಿ, ಬಳಿಕ ಅವನಿಗೂ ದತ್ತಾ ಮೋಸ ಮಾಡಿದ್ದ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ