Food: ಆಹಾರದ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡುವವರ ದೇಹದ ತೂಕ ಹೆಚ್ಚುತ್ತದೆಯಂತೆ..!

Weight Gain: ನೀವೂ ಆಹಾರ ಸೇವಿಸುವ ಮೊದಲು ಅದರ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡುತ್ತೀರಾ..? ಹಾಗಿದ್ದರೆ ನಿಮ್ಮ ದೇಹದ ತೂಕ ಹೆಚ್ಚಾಗುತ್ತದೆಯಂತೆ.

ಸಾಂದರ್ಭಿಕ ಚಿತ್ರ (PC: Instagram)

ಸಾಂದರ್ಭಿಕ ಚಿತ್ರ (PC: Instagram)

  • Share this:
ಸಾಮಾಜಿಕ ಜಾಲತಾಣಗಳಾದ ಇನ್‍ಸ್ಟಾಗ್ರಾಂ, ಫೇಸ್‍ಬುಕ್, ಟ್ವಿಟರ್​ ಹಾಗೂ ವಾಟ್ಸ್‌ಆ್ಯಪ್‌ಗಳಲ್ಲಿ ಆಹಾರದ ಫೋಟೋಗಳನ್ನು ಹಂಚಿಕೊಳ್ಳುವುದು, ಆಹಾರದ ರುಚಿ, ಹೇಗೆ ಮಾಡುವುದು, ಎಲ್ಲಿ ಸಿಗುತ್ತದೆ ಹೀಗೆ ಹಲವಾರು ವಿವರಣೆಗಳೊಂದಿಗೆ ಅಪ್‍ಲೋಡ್ ಮಾಡುತ್ತಲೇ ಇರುತ್ತಾರೆ. ಇನ್‍ಸ್ಟಾಗ್ರಾಂನಲ್ಲಿ ಆಹಾರದ ಚಿತ್ರಗಳನ್ನು ಪೋಸ್ಟ್ ಮಾಡುವ ಆಹಾರ ಪ್ರಿಯರು, ಬೇರೆಯವರಿಗೆ ಹೋಲಿಸಿದರೆ ತಮ್ಮ ಅನುಭವವನ್ನು ಇತರರೊಂದಿಗೆ ಹಂಚಿಕೊಳ್ಳಲು ಹೆಚ್ಚಿನದಾಗಿ ಬಯಸುತ್ತಾರೆ. ಇದು ಅವರ ತೂಕ, ಸೊಂಟದ ಸುತ್ತಳತೆ ಮೇಲೆ ಪರಿಣಾಮ ಬೀರುತ್ತದೆ ಎಂದು ಅಧ್ಯಯನವು ಕಂಡುಕೊಂಡಿದೆ. ಅಂದರೆ ಇಂತಹ ವ್ಯಕ್ತಿಗಳ ದೇಹ ತೂಕ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತಿದೆ.

ಸಮೀಕ್ಷೆಗಳ ಪ್ರಕಾರ ಎಂಬತ್ತು ಮತ್ತು ತೊಂಬತ್ತರ ದಶಕದಲ್ಲಿ ಜನಿಸಿದ ಶೇಕಡಾ 70ರಷ್ಟು ಮಂದಿ ಆಹಾರ ತಿನ್ನುವ ಮೊದಲು ನಿಯಮಿತವಾಗಿ ಚಿತ್ರಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಇದು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಅತ್ಯಂತ ಸಾಮಾನ್ಯವಾದ ವಿಷಯವಾಗಿದೆ ಎಂದು ಡೈಲಿ ಮೇಲ್ ವರದಿ ಮಾಡಿದೆ.

posting food photos on instagram, food gramming may lead to gain weight, food bloggers, Food joints of Bengaluru, Food, Instagram, Photography, Weight Gain, Health, ಆಹಾರ, ಇನ್‍ಸ್ಟಾಗ್ರಾಮ್, ಛಾಯಾಚಿತ್ರ, ದೇಹತೂಕ ಏರಿಕೆ, ಆರೋಗ್ಯ, A Study says Food-gramming may lead to gain weight
ಸಾಂದರ್ಭಿಕ ಚಿತ್ರ (PC: Instagram)


ಅಮೆರಿಕದ ಜಾರ್ಜಿಯಾ ಸದರ್ನ್ ಯೂನಿವರ್ಸಿಟಿಯ ಸಂಶೋಧಕರ ನೇತೃತ್ವದ ಅಧ್ಯಯನವು ತಮ್ಮ ಊಟವನ್ನು ಫೋಟೋ ತೆಗೆಯುವ ಮತ್ತು ಇನ್‍ಸ್ಟಾಗ್ರಾಂನಂತಹ ಸಾಮಾಜಿಕ ಮಾಧ್ಯಮ ತಾಣಗಳಲ್ಲಿ ಅಪ್‍ಲೋಡ್ ಮಾಡುವ ಜನರು ಊಟವನ್ನು ಸಂಪೂರ್ಣವಾಗಿ ಅನುಭವಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ ಎಂದು ತೋರಿಸಿದೆ. ಇಂತಹ ಮಂದಿ ಎರಡನೇ ಬಾರಿ ಹಾಕಿಸಿಕೊಂಡು ತಿನ್ನುವ ಸಾಧ್ಯತೆ ಹೆಚ್ಚು ಎಂದು ಹೇಳಿದೆ.

ಇದನ್ನೂ ಓದಿ: Namita Weight Loss: ದೇಹದ ತೂಕ ಇಳಿಸಿಕೊಂಡು ಬಳುಕುವ ಬಳ್ಳಿಯಂತಾದ ನಟಿ ನಮಿತಾ..!

ಹಿಂದಿನ ಅಧ್ಯಯನಗಳು ಕೆಲವು ಪ್ರಯೋಜನಗಳನ್ನು ಕೂಡ ಪತ್ತೆ ಹಚ್ಚಿದೆ. ಅಂತಹ ಒಂದು ಅಧ್ಯಯನದ ಪ್ರಕಾರ, ಸಾಮಾಜಿಕ ಮಾಧ್ಯಮದಲ್ಲಿ ಆಹಾರ ಚಿತ್ರಗಳನ್ನು ಹಂಚಿಕೊಳ್ಳುವುದರಿಂದ ಆಹಾರದ ರುಚಿ ಅವರನ್ನು ಬೇರೆಯವರಿಗಿಂತ ಹೆಚ್ಚಾಗಿ ಸೆಳೆಯುತ್ತದೆ. ಏಕೆಂದರೆ ಫೋಟೋ ತೆಗೆದುಕೊಳ್ಳುವ ವೇಳೆ ಮೆದುಳು ಆಹಾರದ ವಾಸನೆ ಮತ್ತು ರುಚಿಯ ಮೇಲೆ ಹೆಚ್ಚು ಗಮನಹರಿಸುತ್ತದೆ ಎಂದು ತಿಳಿಸಿದೆ.

ಅಪೆಟೈಟ್ ಎಂಬ ಜರ್ನಲ್‍ನಲ್ಲಿ ಪ್ರಕಟವಾದ ಹೊಸ ಅಧ್ಯಯನದ ಪ್ರಕಾರ, 145 ವಿದ್ಯಾರ್ಥಿಗಳ ತಂಡವನ್ನು ನೇಮಿಸಲಾಯಿತು ಮತ್ತು ಅವರನ್ನು ಎರಡು ಗುಂಪುಗಳಾಗಿ ವಿಭಜಿಸಲಾಯಿತು. ಇಬ್ಬರಿಗೂ ಚೀಸ್ ಕ್ರ್ಯಾಕರ್ಸ್ ಪ್ಲೇಟ್‍ಗಳನ್ನು ನೀಡಲಾಯಿತು. ಆದರೆ ಅರ್ಧಕ್ಕೆ ನಿಲ್ಲಿಸಿ ಮೊದಲು ಚಿತ್ರ ತೆಗೆಯಿರಿ ಎಂದು ಹೇಳಲಾಗಿದೆ ಎಂದು ವರದಿ ಹೇಳಿದೆ. ಅವುಗಳನ್ನು ತಿಂದ ತಕ್ಷಣ, ಸ್ವಯಂಸೇವಕರಿಗೆ ಅವರಿಗೆ ಆಹಾರ ಎಷ್ಟು ಇಷ್ಟವಾಯಿತು ಮತ್ತು ಅವರು ಹೆಚ್ಚು ಬಯಸುವ ಬಗ್ಗೆ ರೇಟ್ ಮಾಡಲು ಕೇಳಲಾಯಿತು. ಫಲಿತಾಂಶಗಳು ಕ್ರ್ಯಾಕರ್​ಗಳ ಸ್ನ್ಯಾಪ್‍ಗಳನ್ನು ತೆಗೆದುಕೊಳ್ಳುವವರು ಆಹಾರವನ್ನು ಅನುಭವಿಸುವ ವಿಷಯದಲ್ಲಿ ಮತ್ತು ಬಯಸುವುದರಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ ಎಂದು ತೋರಿಸಿದೆ ಈ ಅಧ್ಯಯನ.

ಇದನ್ನೂ ಓದಿ: Weight Loss: ಸೂರ್ಯ ನಮಸ್ಕಾರ ಮಾಡಿ ದೇಹದ ತೂಕ ಇಳಿಸಿ..!

ಸಂಶೋಧಕರ ಪ್ರಕಾರ, ಚಿತ್ರ ತೆಗೆಯುವುದರಿಂದ ಮೆದುಳು ಆಹಾರವನ್ನು ಗ್ರಹಿಸುವ ರೀತಿಯನ್ನು ಬದಲಿಸುತ್ತದೆ ಮತ್ತು ಕ್ಯಾಲೋರಿಗಳ ಪ್ರಮಾಣವನ್ನು ಹೆಚ್ಚಿಸುತ್ತದೆ ಎಂದು ಹೇಳಿದ್ದಾರೆ ಅವರು.

"ಆಹಾರದ ನೆನಪುಗಳು ಮತ್ತು ರೆಕಾರ್ಡಿಂಗ್ ಸೇವನೆಯ ಕ್ರಿಯೆಯು ನಾವು ಎಷ್ಟು ತಿನ್ನುತ್ತೇವೆ ಎಂಬುದರ ಮೇಲೆ ಪರಿಣಾಮ ಬೀರಬಹುದು. ಚಿತ್ರ ತೆಗೆದುಕೊಳ್ಳುವಿಕೆಯು ಸೇವನೆಯ ನಂತರ ಆಹಾರದ ಹೆಚ್ಚಿನ ಬೇಡಿಕೆಗೆ ಕಾರಣವಾಗುತ್ತದೆ ಎಂಬ ಫಲಿತಾಂಶ ದೊರೆತಿದೆ ಎಂದು ಸಂಶೋಧಕರು ಪತ್ರಿಕೆಯಲ್ಲಿ ಹೇಳಿದ್ದಾರೆ. 6 ಕ್ರ್ಯಾಕರ್‌ಗಳನ್ನು ನೀಡುವ ಮೊದಲು ಸಣ್ಣ ಸಣ್ಣ ಭಾಗದ ಒಟ್ಟು 12 ಕ್ರ್ಯಾಕರ್‌ಗಳನ್ನು ನೀಡಿ ಆಹಾರ ಪರಿಣಾಮಗಳನ್ನು ಗಮನಿಸಲಾಗಿದೆ ಎನ್ನುತ್ತಾರೆ ಸಂಶೋಧಕರು.
Published by:Anitha E
First published: