ಕೆಲ ಪ್ರೀತಿ, ಸ್ನೇಹ ಎಲ್ಲಿಂದ ಆರಂಭವಾಯಿತು ಅನ್ನೋದರ ಹಿಂದೆ ಒಂದೊಂದು ಕಥೆ ಇರುತ್ತದೆ. 'ಅವರು ನನಗೆ ಆಕಸ್ಮಾತ್ ಆಗಿ ಸಿಕ್ಕರು ಅಂದಿನಿಂದ ನಾವಿಬ್ಬರೂ ಉತ್ತಮ ಸ್ನೇಹಿತರು, ಅವರು ನನಗೆ ಬೇರೋಬ್ಬರಿಂದ ಪರಿಚಯವಾದರೂ ಅಲ್ಲಿಂದ ಪ್ರೀತಿ ಶುರುವಾಯಿತು.' ಹೀಗೆ ಕೆಲ ಸಂಬಂಧ, ಪ್ರೀತಿ, ಸ್ನೇಹದ ಹಿಂದೆ ಒಂದೊಂದು ಸುಂದರ ಕಥೆ ಇರುತ್ತದೆ.
ಸ್ನೇಹಿತರೂ ಕೂಡ ನಮ್ಮ ತರಗತಿಯವರು, ಪಕ್ಕದ ಮನೆಯವರೇ ಆಗಿರಬೇಕೆಂದಿಲ್ಲ. ಎಲ್ಲಿಂದವಾದರೂ ಈ ಸ್ನೇಹ ಹುಟ್ಟಿಕೊಳ್ಳುತ್ತದೆ. ಸ್ನೇಹಕ್ಕೆ ವಯಸ್ಸಿನ ಮಿತಿ ಇಲ್ಲ, ಗಡಿಗಳ ಭಯವಿಲ್ಲ, ಜಾತಿಯ ಹಂಗಿರುವುದಿಲ್ಲ. ಎರಡು ಸಮಾನ ಜೀವಗಳು ಪರಸ್ಪರ ಕಷ್ಟ ಸುಖಗಳಿಗೆ ಸ್ಪಂದಿಸಿದಾಗ, ಇಬ್ಬರೂ ಮಾತನಾಡುವಾಗ ಸ್ನೇಹ ಹುಟ್ಟಿಕೊಳ್ಳಬಹುದು. ಹೀಗೆ ಇಲ್ಲೊಬ್ಬರು ತಮ್ಮ ಸುಂದರ ಸ್ನೇಹ ಸಂಬಂಧದ ಕಥೆಯನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: IRCTC: ಸಿಂಗಾಪುರ, ಮಲೇಷ್ಯಾಗೆ ಪ್ರಯಾಣಿಸೋದಕ್ಕೆ ಸುವರ್ಣಾವಕಾಶ, ಕಡಿಮೆ ಹಣದಲ್ಲಿ ವಿದೇಶ ಸುತ್ತಬಹುದು!
ಜೇಮ್ಸ್ ಹಂಚಿಕೊಂಡ ಸುಂದರ ಫ್ರೆಂಡ್ಶಿಪ್ ಸ್ಟೋರಿ
46 ರ ಹರೆಯದ ಜೇಸನ್ ಜೇಮ್ಸ್ ಬೌಡ್ರೆಕ್ಸ್ ಮತ್ತು 28ರ ಹರೆಯದ ಕೆವಿನ್ ಜೋನ್ಸ್ ಇಬ್ಬರೂ ಈಗ ಜೀವದ ಗೆಳೆಯರು. ಇಬ್ಬರೂ ಒಂದೇ ಶಾಲೆಯಲ್ಲಿ ಓದಿದವರಲ್ಲ, ಪಕ್ಕದ ಮನೆಯವರಲ್ಲ, ಒಂದೇ ಕಂಪನಿಯ ಉದ್ಯೋಗಿಗಳೂ ಅಲ್ಲ. ಹೀಗೆ ಯಾವುದೋ ಒಂದು ಸಂದರ್ಭದಲ್ಲಿ ಸಹಾಯಕ್ಕಾದ ಇವರು ಪ್ರಸ್ತುತ ಉತ್ತಮ ಸ್ನೇಹಿತರು.
ದಿನಸಿ ಬಿಲ್ ಪಾವತಿಸಿದ ವ್ಯಕ್ತಿ ಈಗ ಜೀವದ ಗೆಳೆಯ
ಜೇಸನ್ ಜೇಮ್ಸ್ ಬೌಡ್ರೆಕ್ಸ್ ತಮ್ಮ ಈ ಸುಂದರ ಸ್ನೇಹ ಹೇಗೆ ಆರಂಭವಾಯಿತು ಎಂಬುವುದನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ಹೀಗೆ ಒಂದು ದಿನ ಜೇಮ್ಸ್ ದಿನಸಿಕೊಳ್ಳಲು ಸೂಪರ್ ಮಾರ್ಕೆಟ್‌ಗೆ ತೆರಳಿದ್ದರು. ಬೇಕಿದ್ದನ್ನೆಲ್ಲಾ ತೆಗೆದುಕೊಂಡು ಬಿಲ್‌ಕೌಂಟರ್ ಹತ್ತಿರ ಬಂದು ಬಿಲ್ ಮಾಡಿಸಿ ಇನ್ನೇನೂ ಹಣ ಪಾವತಿಸಬೇಕು ಅನ್ನುವಷ್ಟರಲ್ಲಿ ಕಾರ್ಡ್‌ನಲ್ಲಿ ಹಣವಿಲ್ಲ ಅಂತಾ ಸಿಬ್ಬಂದಿ ಕಾರ್ಡ್ ವಾಪಸ್ ನೀಡುತ್ತಾರೆ.
ಇದಕ್ಕೂ ಮುನ್ನ ಜೇಮ್ಸ್ ತನ್ನ ಸಂಬಳದ ಚೆಕ್ ಅನ್ನು ತನ್ನ ಅಕೌಂಟ್‌ಗೆ ಹಾಕಿ ಬಂದಿದ್ದರು. ಆದರೆ ದುರದೃಷ್ಟವಶಾತ್ ಆ ಹಣ ಇನ್ನೂ ಅವರ ಖಾತೆಗೆ ಜಮಾ ಆಗಗಿರಲಿಲ್ಲ. ಹೀಗಾಗಿ ಜೇಮ್ಸ್‌ಗೆ ದಿನಸಿಗೆ ಹಣ ಪಾವತಿಸಲು ಸಾಧ್ಯವಾಗಲಿಲ್ಲ. ಇನ್ನೇನು ಮಾಡುವುದು ಅಂತಾ ಯೋಚನೆ ಮಾಡುವಷ್ಟರಲ್ಲಿ ಆಪತ್ಬಾಂಧವನಂತೆ ಕೆವಿನ್ ಜೋನ್ಸ್, ಜೇಮ್ಸ್ ಸಹಾಯಕ್ಕೆ ಬರುತ್ತಾರೆ. ಚಿಂತೆ ಮಾಡಬೇಡಿ ನಿಮ್ಮ ಹಣ ನಾನು ಪಾವತಿಸುತ್ತೇನೆ ಅಂತಾ ಕೆವಿನ್ ಹೇಳುತ್ತಾರೆ.
ಜೇಮ್ಸ್ ಇದಕ್ಕೆ ಸ್ವಲ್ಪ ನಿಬ್ಬೆರಗಾಗಿ, ಬೇಡ ಅದು ತುಂಬಾ ದೊಡ್ಡ ಮೊತ್ತದ ಹಣ ಅಂತಾ ಹೇಳುತ್ತಾರೆ, ಆದರೂ ಕೆವಿನ್ ಹಣವನ್ನು ಪಾವತಿಸಿ ಹೊರಡುತ್ತಾರೆ. ಅದಕ್ಕೂ ಮುನ್ನ ಜೇಮ್ಸ್ ಆತನ ಜೊತೆ ಫೋಟೋವನ್ನು ತೆಗೆದುಕೊಳ್ಳುತ್ತಾರೆ.
ಇದನ್ನೂ ಓದಿ: Hotel Food: ಬೇಕಂತಲೇ ಕೆಟ್ಟ ರಿವ್ಯೂ ಇರೋ ಹೋಟೆಲ್‌ನ ಊಟ ಆರ್ಡರ್ ಮಾಡಿದ ವಿದೇಶಿ ಪ್ರಜೆ, ಆಮೇಲಾಗಿದ್ದು ಸಖತ್ ಸುದ್ದಿ!
ಸಹಾಯ ಮಾಡಿದ ವ್ಯಕ್ತಿಯನ್ನು ಪತ್ತೆ ಹಚ್ಚಿದ ಜೇಮ್ಸ್
ನಂತರ ಆತನನ್ನು ಹೇಗಾದರೂ ಸಂಪರ್ಕಿಸಬೇಕು ಎಂದು ಯೋಚಿಸಿದ ಜೇಮ್ಸ್ ಆತನ ಜೊತೆ ತೆಗೆಸಿಕೊಂಡ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಈತನನ್ನು ಗುರುತಿಸುವಂತೆ ವಿನಂತಿಸಿ ಪೋಸ್ಟ್ ಮಾಡುತ್ತಾನೆ.
ಹೀಗೆ ಸುಮಾರು ಜನರ ಸಹಾಯದಿಂದ ಜೇಮ್ಸ್ ಅಂತೂ ಸಹಾಯ ಮಾಡಿದ ಕೆವಿನ್ಸ್ ಅವರನ್ನು ಪತ್ತೆ ಹಚ್ಚುತ್ತಾನೆ. ನಂತರ ಅವರ ಫೋನ್ ನಂಬರ್ ಪಡೆದು ಇಬ್ಬರೂ ಪರಸ್ಪರ ಪರಿಚಯ ಮಾಡಿಕೊಳ್ಳುತ್ತಾರೆ.
ದಿನಸಿ ಬಿಲ್ ಪಾವತಿಸಿದ ಕೆವಿನ್ ಅನ್ನು ಊಟಕ್ಕೆ ಆಹ್ವಾನಿಸಿದ ಜೇಮ್ಸ್
ನಂತರ ಜೇಮ್ಸ್, ಕೆವಿನ್ ಅವರನ್ನು ಊಟಕ್ಕೆ ಆಹ್ವಾನಿಸಿ ಪರಸ್ಪರ ಕುಟುಂಬದವರು ಭೇಟಿ ಮಾಡುತ್ತಾರೆ. ಇಲ್ಲಿಂದ ಆರಂಭವಾದ ಸ್ನೇಹ ಗಟ್ಟಿಯಾಗಿ ಉಳಿದುಕೊಂಡಿದೆ ಎಂದು ಜೇಮ್ಸ್ ಫೇಸ್‌ಬುಕ್‌ನಲ್ಲಿ ತಿಳಿಸಿದ್ದಾರೆ.
ನಾವಿಬ್ಬರೂ ಶೀಘ್ರದಲ್ಲೇ ಮೀನುಗಾರಿಕೆಗೆ ಹೋಗಲಿದ್ದೇವೆ. ಕೆವಿನ್ ಈಗ ನನ್ನ ಸ್ನೇಹಿತ ಮಾತ್ರವಲ್ಲದೇ ನನಗೆ ಸಹೋದರ ಕೂಡ. ನಾವಿಬ್ಬರೂ ಜೀವದ ಗೆಳೆಯರು. ನಮ್ಮ ಗೆಳೆತನ ಹೀಗೆ ಇರುತ್ತದೆ ಎಂದು ಜೇಸನ್ ಜೇಮ್ಸ್ ಬೌಡ್ರೆಕ್ಸ್ ತಮ್ಮ ಪೋಸ್ಟ್‌ಲ್ಲಿ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ