Alert: ಉಕ್ರೇನ್‌ನಿಂದ ನಿಮ್ಮ ಮಕ್ಕಳನ್ನು ಕರ್ಕೊಂಡು ಬರ್ತೀವಿ ಅಂತ ಇವರು ನಿಮಗೆ ಮೋಸ ಮಾಡಬಹುದು ಹುಷಾರ್!

ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಭಾರತ ಸರ್ಕಾರ ಏರ್‌ಲಿಫ್ಟ್ ಕಾರ್ಯಾಚರಣೆ ನಡೆಸುತ್ತಲೇ ಇದೆ. ಆದರೂ ಅನೇಕರು ಅಲ್ಲಿಂದ ಬರಲಾಗದೇ ಪರದಾಡುತ್ತಿದ್ದಾರೆ. ಇತ್ತ ಅವರ ಪೋಷಕರೂ ಆತಂಕದಲ್ಲೇ ಇದ್ದಾರೆ. ಆದರೆ ಇದನ್ನೆೇ ಕೆಲ ಖದೀಮರು ಬಂಡವಾಳ ಮಾಡಿಕೊಳ್ಳುತ್ತಿದ್ದಾರೆ. ಭಾರತ ಸರ್ಕಾರದ ಹೆಸರಲ್ಲೇ ನಿಮ್ಮನ್ನು ನಂಬಿಸಿ, ಹಣ ಪಡೆದು, ಯಾಮಾರಿಸುತ್ತಾರೆ ಹುಷಾರ್...

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಮಧ್ಯಪ್ರದೇಶ: ರಷ್ಯಾ (Russia) ಹಾಗೂ ಉಕ್ರೇನ್ (Ukraine) ನಡುವಿನ ಯುದ್ಧ (War) ಮುಂದುವರೆದಿದೆ. ಸದ್ಯ ಉಕ್ರೇನ್ ದೇಶವನ್ನು ರಷ್ಯಾ ಸೇನಾಪಡೆ (Military Force) ಅಕ್ಷರಶಃ ಬಗ್ಗು ಬಡಿಯುತ್ತಿದೆ. ಅಲ್ಲಿನ ನಾಗರಿಕರಲ್ಲದೇ (Citizens), ವಿದೇಶಿಗರೂ (Foreigners) ಸಹ ಉಕ್ರೇನ್‌ನಲ್ಲಿ ಸಿಲುಕಿ ಪರದಾಡುತ್ತಿದ್ದಾರೆ. ಈ ಪೈಕಿ ಅನೇಕ ಭಾರತೀಯರೂ (Indians) ಅಲ್ಲಿ ಸಿಲುಕಿಕೊಂಡಿದ್ದರು. ಅವರಲ್ಲಿ ಬಹುತೇಕರನ್ನು ಏರ್‌ಲಿಫ್ಟ್ (Air Lift) ಮೂಲಕ ಸುರಕ್ಷಿತವಾಗಿ ಭಾರತಕ್ಕೆ ವಾಪಸ್ ಕರೆತರಲಾಗಿದೆ. ಇನ್ನೂ ಕರೆತರುವ ಕಾರ್ಯ ಮುಂದುವರೆದಿದೆ. ಈ ನಡುವೆಯೂ ಅನೇಕ ಭಾರತೀಯರು ಇನ್ನೂ ಉಕ್ರೇನ್‌ನಲ್ಲೇ ಸಿಲುಕಿದ್ದು, ನಮ್ಮನ್ನು ಯಾರು ಕೇಳುತ್ತಿಲ್ಲ ಅಂತ ಆತಂಕ ತೋಡಿಕೊಳ್ಳುತ್ತಿದ್ದಾರೆ. ಇತ್ತ ಅವರ ಹೆತ್ತವರು, ಕುಟುಂಬಸ್ಥರೆಲ್ಲ ಆತಂಕಗೊಂಡಿದ್ದಾರೆ. ಆದರೆ ಇದನ್ನೇ ಖದೀಮರು ಬಂಡವಾಳ ಮಾಡಿಕೊಳ್ಳುತ್ತಿದ್ದಾರೆ. ನಿಮ್ಮ ಮಕ್ಕಳನ್ನು ನಾವು ಕರೆತರುತ್ತೇವೆ ಅಂತ ನಿಮ್ಮನ್ನು ನಂಬಿಸಿ, ಹಣ ಪಡೆದು ಮೋಸ ಮಾಡುವ ಸಾಧ್ಯತೆಯೂ ಇದೆ. ಯಾಕೆಂದರೆ ಮಧ್ಯ ಪ್ರದೇಶದಲ್ಲಿ ಓರ್ವ ಮಹಿಳೆ ಇದೇ ರೀತಿ ಮೋಸ ಹೋಗಿದ್ದಾಳೆ.

ಮಗಳು ವಾಪಸ್ಸಾಗದೇ ಕಂಗಾಲಾಗಿದ್ದ ಮಧ್ಯ ಪ್ರದೇಶದ ಮಹಿಳೆ

ಮಧ್ಯ ಪ್ರದೇಶದ ಭೋಪಾಲ್‌ನಲ್ಲಿ ಲ್ಯಾಬ್‌ ಒಂದರಲ್ಲಿ ಸಹಾಯಕಿಯಾಗಿದ್ದ ವೈಶಾಲಿ ವಿಲ್ಸನ್ ಎಂಬ ಮಹಿಳೆಗೆ ವಂಚಕನೊಬ್ಬ ಮೋಸ ಮಾಡಿದ್ದಾನೆ. ಈಕೆಯ ಪುತ್ರಿ ಸೃಷ್ಟಿ ಎಂಬುವಳು ಉಕ್ರೇನ್‌ನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಾ ಇದ್ದಳು. ಯುದ್ಧ ಪ್ರಾರಂಭವಾಗುತ್ತಿದ್ದಂತೆ ದೇಶಕ್ಕೆ ವಾಪಸ್ ಬರುವುದಕ್ಕೆ ನಿರ್ಧರಿಸಿದ್ದಾಳೆ. ಆದರೆ ಯಾವುದೇ ಸೌಲಭ್ಯಗಳಿಲ್ಲದೇ, ಹತಾಶೆಯಿಂದ ತಾಯಿಗೆ ತಿಳಿಸಿದ್ದಾಳೆ.

ಕೇಂದ್ರ, ರಾಜ್ಯ ಸರ್ಕಾರಗಳಿಗೆ ಮನವಿ ಮಾಡಿದ್ದ ಮಹಿಳೆ

ತನ್ನ ಮಗಳು ಉಕ್ರೇನ್‌ನಲ್ಲಿ ಸಿಲುಕಿರುವುದರಿಂದ ಕಂಗಾಲಾದ ಮಹಿಳೆ ವೈಶಾಲಿ, ಮಗಳನ್ನು ಕರೆಸುವ ಪ್ರಯತ್ನ ಮಾಡಿದಳು. ಆದರೆ ಎಲ್ಲವೂ ವಿಫಲವಾದಾಗ ಮಧ್ಯ ಪ್ರದೇಶ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳಿಗೆ ಮನವಿ ಮಾಡಿ, ಟ್ವೀಟ್ ಹಾಗೂ ಈ ಮೇಲ್ ಮಾಡಿದ್ದಳು.

ಇದನ್ನೂ ಓದಿ: Air Lift: ಉಕ್ರೇನ್‌ನಿಂದ ಭಾರತಕ್ಕೆ ಬಂದ ವಿದ್ಯಾರ್ಥಿಗಳು, 13 ಮಂದಿ ಕನ್ನಡಿಗರ ಆಗಮನ, ಇನ್ನೂ ಹಲವರ ಪರದಾಟ

ಟ್ವೀಟ್ ನೋಡಿ ಕಾಲ್ ಮಾಡಿದ್ದ ವಂಚಕ

ಮಹಿಳೆ ಮಾಡಿದ್ದ ಟ್ವೀಟ್‌ ನೋಡಿದ್ದ ವಂಚಕನೊಬ್ಬ ಅದೇ ನಂಬರ್‌ಗೆ ಕಾಲ್ ಮಾಡಿದ್ದಾನೆ. ನಾನು ಪ್ರಧಾನಮಂತ್ರಿಗಳ ಕಛೇರಿಯಲ್ಲಿ (PMO) 'ಪರ್ಸನಲ್ ಅಸಿಸ್ಟೆಂಟ್' ಎಂದು ಹೇಳಿ ನಂಬಿಸಿದ್ದಾನೆ. ನಿಮ್ಮ ಮಗಳನ್ನು ಸುರಕ್ಷಿತವಾಗಿ ಕರೆದುಕೊಂಡು ಬರುವುದಾಗಿ ಭರವಸೆ ನೀಡಿದ್ದಾನೆ. ಇದರಿಂದ ವೈಶಾಲಿ ಆತನನ್ನು ಸಂಪೂರ್ಣವಾಗಿ ನಂಬಿದ್ದಾಳೆ.

42 ಸಾವಿರ ರೂಪಾಯಿ ನೀಡುವಂತೆ ಕೇಳಿದ ಅಪರಿಚಿತ

ನಿಮ್ಮ ಮಗಳನ್ನು ಕರೆಸಲು ವ್ಯವಸ್ಥೆ ಮಾಡಿದ್ದೇನೆ. ವಿಮಾನ ಟಿಕೆಟ್ ವ್ಯವಸ್ಥೆ ಮಾಡಲು ಈಗಲೇ 42 ಸಾವಿರ ರೂಪಾಯಿ ಕಳಿಸಿಕೊಡುವಂತೆ ಅಪರಿಚಿತ ಹೇಳಿದ್ದಾನೆ. ಇದನ್ನು ನಂಬಿದ ವೈಶಾಲಿ, ಹಿಂದೆ ಮುಂದೆ ನೋಡದೆ ಆತನ ಖಾತೆಗೆ 42 ಸಾವಿರ ರೂಪಾಯಿ ಹಣ ವರ್ಗಾವಣೆ ಮಾಡಿದ್ದಾರೆ.

5 ಸಾವಿರ ವಾಪಸ್ ಕಳಿಸಿದ ವಂಚಕ

ಬಳಿಕ 5 ಸಾವಿರ ವಾಪಸ್ ಕಳಿಸಿದ ವಂಚಕ, ಕೆಲವು ನಕಲಿ ದಾಖಲಾತಿಗಳನ್ನು ಕಳಿಸಿದ್ದಾನೆ ಎನ್ನಲಾಗಿದೆ. ಬಳಿಕ ಕರೆ ಮಾಡಿದರೆ ಆತನ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಈ ವೇಳೆ ವೈಶಾಲಿ ಅವರಿಗೆ ತಾವು ಮೋಸ ಹೋಗಿರುವುದು ತಿಳಿದಿದೆ.

ದೆಹಲಿಯಲ್ಲಿ ಸಿಕ್ಕಿ ಬಿದ್ದ ವಂಚಕ

ಬಳಿಕ ವೈಶಾಲಿ ಸ್ಥಳೀಯ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ದೆಹಲಿಯಲ್ಲಿ ಆರೋಪಿಯನ್ನು ಪತ್ತೆ ಮಾಡಿದ್ದಾರೆ. ಆತ ತನ್ನ ಹೆಸರನ್ನು ಪ್ರಿನ್ಸ್ ಅಂತ ಹೇಳಿಕೊಂಡಿದ್ದು, ಇದೀಗ ವಿಚಾರಣೆ ಕೈಗೊಂಡಿದ್ದಾರೆ.

ಇದನ್ನೂ ಓದಿ: Explained: ಉಕ್ರೇನ್ ದೇಶ ಹುಟ್ಟಿದ್ದು ಹೇಗೆ? Russiaಗೇಕೆ ಇದರ ಮೇಲೆ ಅಷ್ಟೊಂದು ಆಸಕ್ತಿ?

ಕೇಂದ್ರ, ರಾಜ್ಯ ಸರ್ಕಾರಗಳಿಂದ ಭರವಸೆ

ಉಕ್ರೇನ್‌ನಲ್ಲಿ ಸಿಲುಕಿರುವ ಎಲ್ಲಾ ಭಾರತೀಯರನ್ನೂ ಸುರಕ್ಷಿತವಾಗಿ ವಾಪಸ್ ಕರೆದುಕೊಂಡು ಬರುವುದಾಗಿ ಕೇಂದ್ರ ಸರ್ಕಾರ ಹಾಗೂ ಮಧ್ಯ ಪ್ರದೇಶ ಸರ್ಕಾರ ಭರವಸೆ ನೀಡಿದೆ. ಸಚಿವರೂ ಕೂಡ ಮೋಸ ಹೋದ ಮಹಿಳೆ ವೈಶಾಲಿಗೆ ನಿಮ್ಮ ಮಗಳನ್ನು ಸೇಫ್ ಆಗಿ ಕರೆ ತರುವುದಾಗಿ ಭರವಸೆ ನೀಡಿದ್ದಾರೆ.
Published by:Annappa Achari
First published: