Special ₹75 Coin: ಸಂಸತ್ ಭವನದ ಉದ್ಘಾಟನೆ ದಿನ ₹75 ನಾಣ್ಯ ಅನಾವರಣ, ಏನಿದರ ವಿಶೇಷತೆ ಗೊತ್ತಾ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

75 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸುತ್ತಿರುವ ಭಾರತಕ್ಕೆ ಗೌರವಾರ್ಥವಾಗಿ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ನಾಣ್ಯವನ್ನು ಭಾನುವಾರ ಅನಾವರಣಗೊಳಿಸಲಿದ್ದಾರೆ.

  • News18 Kannada
  • 4-MIN READ
  • Last Updated :
  • New Delhi, India
  • Share this:

ನವದೆಹಲಿ: ನೂತನ ಸಂಸತ್ ಭವನ ಸೆಂಟ್ರಲ್‌ ವಿಸ್ತಾದ (Central Vista) ಲೋಕಾರ್ಪಣೆಯ ನೆನಪಿಗಾಗಿ 75 ರೂಪಾಯಿಯ ವಿಶೇಷ ನಾಣ್ಯವನ್ನು ಬಿಡುಗಡೆ ಮಾಡುವುದಾಗಿ ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ. 75 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸುತ್ತಿರುವ ಭಾರತಕ್ಕೆ ಗೌರವಾರ್ಥವಾಗಿ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಈ ನಾಣ್ಯವನ್ನು ಭಾನುವಾರ ಅನಾವರಣಗೊಳಿಸಲಿದ್ದಾರೆ.


75 ರೂಪಾಯಿಯ ವಿಶೇಷ ನಾಣ್ಯದ ಒಂದು ಬದಿಯಲ್ಲಿ ಅಶೋಕ ಸ್ತಂಭದ ಸಿಂಹದ ಲಾಂಛನ ಇರಲಿದ್ದು, ಅದರ ಕೆಳಗಡೆ ಸತ್ಯಮೇವ ಜಯತೆ ಎಂದು ಬರೆಯಲಾಗಿದೆ. ಎಡಭಾಗದಲ್ಲಿ ‘ಭಾರತ್’ ಎಂದು ದೇವನಾಗರಿ ಲಿಪಿ ಹಾಗೂ ಬಲ ಭಾಗದಲ್ಲಿ ‘ಇಂಡಿಯಾ’ ಎಂದು ಇಂಗ್ಲಿಷ್‌ನಲ್ಲಿ ಬರೆಯಲಾಗುತ್ತದೆ. ಸಿಂಹದ ಲಾಂಛನದ ಕೆಳಗಡೆ ಮುಖಬೆಲೆಯನ್ನು ತೋರಿಸುವ ರೂಪಾಯಿ ಚಿಹ್ನೆಯೊಂದಿಗೆ 75 ಎಂದು ಇಂಗ್ಲಿಷ್ ಅಂಕೆಯಲ್ಲಿ ಬರೆಯಲಾಗುತ್ತದೆ ಎಂದು ತಿಳಿದು ಬಂದಿದೆ.


ಇದನ್ನೂ ಓದಿ: Central Vista: ನೂತನ ಸಂಸತ್ ಭವನದ ಉದ್ಘಾಟನೆಯನ್ನು ಬಹಿಷ್ಕರಿಸಿದ ತೃಣಮೂಲ ಕಾಂಗ್ರೆಸ್, ಆಮ್ ಆದ್ಮಿ!


ನಾಣ್ಯದ ಬಗ್ಗೆ ಒಂದಿಷ್ಟು ಮಾಹಿತಿ


ಇನ್ನು, ನ್ಯಾಣದ ಮತ್ತೊಂದು ಬದಿಯಲ್ಲಿ ಸಂಸತ್​ ಸಂಕೀರ್ಣದ ಫೋಟೋ ಇರಲಿದೆ. “ಸಂಸದ್ ಸಂಕುಲ್” ಪದಗಳನ್ನು ಮೇಲಿನ ಪರಿಧಿಯಲ್ಲಿ ದೇವನಾಗರಿ ಲಿಪಿಯಲ್ಲಿ ಮತ್ತು ಕೆಳಗಿನ ಪರಿಧಿಯಲ್ಲಿ ಪಾರ್ಲಿಮೆಂಟ್ ಕಾಂಪ್ಲೆಕ್ಸ್ ಅನ್ನು ಇಂಗ್ಲಿಷ್‌ನಲ್ಲಿ ಬರೆಯಲಾಗುತ್ತದೆ. ಇನ್ನು ಈ ನಾಣ್ಯವು 44 ಮಿಲಿಮೀಟರ್ ವ್ಯಾಸವನ್ನು ಹೊಂದಿರುವ ವೃತ್ತಾಕಾರದ ಆಕಾರದಲ್ಲಿರಲಿದ್ದು, ಅದರ ಅಂಚುಗಳ ಉದ್ದಕ್ಕೂ 200 ತೋಡು ಅಂಚನ್ನು ಹೊಂದಿರುತ್ತದೆ. 50% ಬೆಳ್ಳಿ, 40% ತಾಮ್ರ, 5% ನಿಕಲ್ ಮತ್ತು 5% ಸತುವನ್ನು ಒಳಗೊಂಡಿರುವ ನಾಲ್ಕು ಭಾಗಗಳ ಮಿಶ್ರ ಲೋಹದಿಂದ 35 ಗ್ರಾಂ ತೂಕದ ನಾಣ್ಯವನ್ನು ತಯಾರಿಸಲಾಗುತ್ತದೆ.


ಇದನ್ನೂ ಓದಿ: Central Vista: ಒಂದಲ್ಲ ಎರಡಲ್ಲ, ಬರೋಬ್ಬರಿ 20 ವಿಪಕ್ಷಗಳಿಂದ ನೂತನ ಸಂಸತ್ ಭವನ ಉದ್ಘಾಟನೆಗೆ ಬಹಿಷ್ಕಾರ!


ವಿಪಕ್ಷಗಳ ವಿರೋಧ


ಇನ್ನು ಹೊಸದಾಗಿ ನಿರ್ಮಾಣ ಆಗಿರುವ ಸಂಸತ್ ಕಟ್ಟಡವನ್ನು ಮೇ 28ರಂದು ಭಾನುವಾರ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದು, ದೇಶದ ಎಲ್ಲಾ ಪಕ್ಷಗಳಿಗೂ ಆಹ್ವಾನವನ್ನು ನೀಡಲಾಗಿದೆ. ಆದರೆ ಕಾಂಗ್ರೆಸ್, ಆಪ್, ತೃಣಮೂಲ ಕಾಂಗ್ರೆಸ್, ಶಿವಸೇನೆ, ಎಡಪಕ್ಷಗಳು ಮತ್ತು ಸಮಾಜವಾದಿ ಪಕ್ಷಗಳು ಈ ಕಾರ್ಯಕ್ರಮವನ್ನು ಬಹಿಷ್ಕಾರ ಮಾಡಿವೆ. ಸಂಸತ್ ಭವನದ ಉದ್ಘಾಟನೆಯನ್ನು ದೇಶದ ಪ್ರಥಮ ಪ್ರಜೆ ರಾಷ್ಟ್ರಪತಿ ಅವರಲ್ಲಿ ಮಾಡಿಸಬೇಕಿತ್ತು. ಆದರೆ ಪ್ರಧಾನಿ ತಾವೇ ಉದ್ಘಾಟನೆ ಮಾಡುವ ಮೂಲಕ ಸಂವಿಧಾನಕ್ಕೂ, ರಾಷ್ಟ್ರಪತಿಗಳಿಗೆ ಅವಮಾನ ಮಾಡಿದೆ ಎಂದು ವಿಪಕ್ಷಗಳು ಆರೋಪ ಮಾಡಿವೆ.


top videos



    ಇನ್ನು ಕರ್ನಾಟಕದಿಂದ ಜೆಡಿಎಸ್ ಪಕ್ಷದ ವರಿಷ್ಠ ಎಚ್‌ಡಿ ದೇವೇಗೌಡ ಅವರು ಸಂಸತ್ ಭವನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತೇನೆ ಎಂದಿದ್ದಾರೆ. ಇದು ಬಿಜೆಪಿ, ಆರೆಸ್ಸೆಸ್ ಕಾರ್ಯಕ್ರಮವಲ್ಲ. ದೇಶದ ಜನರ ತೆರಿಗೆ ಹಣದಿಂದ ನಿರ್ಮಾಣವಾಗಿರುವ ಸಂಸತ್ ಭವನ ನಿರ್ಮಾಣವಾಗಿದೆ ಎಂದು ಎಚ್‌ಡಿ ದೇವೇಗೌಡ ಹೇಳಿದ್ದಾರೆ.

    First published: