ಅಗತ್ಯ ಸರಕುಗಳ ಕಾಯ್ದೆಗೆ ಕೇಂದ್ರದಿಂದ ಮಹತ್ವದ ತಿದ್ದುಪಡಿ; ರೈತರಿಗೆ ವರದಾನವಾಗಲಿದೆಯಾ ಈ ನೂತನ ನಿಯಮ?

ಸ್ಥಳೀಯ ಮಾರುಕಟ್ಟೆ ಅಥವಾ ಎಪಿಎಂಸಿ ಸಮಿತಿಗಳು ಅಧಿಸೂಚಿತ ಮಾರುಕಟ್ಟೆಯಲ್ಲಿ ಪರವಾನಗಿ ಪಡೆದ ಮಧ್ಯವರ್ತಿಗಳ ಬಳಿಯೇ ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಬೇಕು ಎಂದು ಬಲವಂತ ಮಾಡುತ್ತವೆ. ಇದರಿಂದ ರೈತರು ತಮ್ಮ ಬೆಳೆಗೆ ನ್ಯಾಯಯುತವಾದ ಬೆಲೆ ಪಡೆಯುವುದು ಅಸಾಧ್ಯವಾಗಿದೆ ಎಂದು ಸಚಿವ ಪ್ರಕಾಶ್‌ ಜಾವಡೇಕರ್‌ ಅಭಿಪ್ರಾಯಪಟ್ಟಿದ್ದಾರೆ.

news18-kannada
Updated:June 3, 2020, 6:13 PM IST
ಅಗತ್ಯ ಸರಕುಗಳ ಕಾಯ್ದೆಗೆ ಕೇಂದ್ರದಿಂದ ಮಹತ್ವದ ತಿದ್ದುಪಡಿ; ರೈತರಿಗೆ ವರದಾನವಾಗಲಿದೆಯಾ ಈ ನೂತನ ನಿಯಮ?
ಸಾಂದರ್ಭಿಕ ಚಿತ್ರ
  • Share this:
ನವ ದೆಹಲಿ (ಜೂನ್ 03); ಕೇಂದ್ರ ಸರ್ಕಾರ ಇಂದು 1955 ಅಗತ್ಯ ಸರಕುಗಳ ಕಾಯ್ದೆಗೆ ತಿದ್ದುಪಡಿ ಮಾಡಿದೆ. ಈ ಮೂಲಕ ರೈತರು ತಮ್ಮ ಉತ್ಪನ್ನಗಳನ್ನು ತಮ್ಮ ರಾಜ್ಯದಿಂದ ಹೊರಗೂ ಮಾರಾಟ ಮಾಡಲು ಅನುವು ಮಾಡಿಕೊಟ್ಟಿದೆ. ಅಲ್ಲದೆ, ಸ್ಥಳೀಯ ಎಂಪಿಎಂಸಿ ಮಾರುಕಟ್ಟೆಯಲ್ಲೇ ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಬೇಕು ಎಂಬ ನಿರ್ಬಂಧವನ್ನೂ ತೆಗೆದುಹಾಕಿದೆ.

ರೈತರು ದಶಕಗಳಿಂದ ತಮ್ಮ ಉತ್ಪನ್ನಗಳನ್ನು-ಬೆಳೆಗಳನ್ನು ಹಳೆಯ ಕೃಷಿ ಉತ್ಪಾದನಾ ಮಾರುಕಟ್ಟೆ ಸಮಿತಿ ಅದರೆ ಎಪಿಎಂಸಿಗಳಲ್ಲಿ ಮಾರಾಟ ಮಾಡುತ್ತಿದ್ದರು. ಈ ಮಾರುಕಟ್ಟೆ ವ್ಯವಸ್ಥೆಯಲ್ಲಿ ರೈತರಿಗೆ ಅನ್ಯಾಯ ಎಸಗಲಾಗುತ್ತಿದೆ ಎಂದು ಅನೇಕ ಬಾರಿ ದೂರು ಕೇಳಿ ಬಂದಿತ್ತು. ಈ ನಿಟ್ಟಿನಲ್ಲಿ ಇಂದು ಮಹತ್ವದ ತಿದ್ದುಪಡಿಗೆ ಮುಂದಾಗಿರುವ ಕೇಂದ್ರ ಸರ್ಕಾರ ರೈತರು ಇನ್ನು ಎಂಪಿಎಂಸಿಗಳಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲೇಬೇಕು ಎಂಬ ನಿಯಮವನ್ನು ಅಧಿಕೃತವಾಗಿ ಮುರಿದಿದೆ.

ಈ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರುವ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮ್, "ರೈತರ ಪಾಲಿಗೆ ಇಂದು ಐತಿಹಾಸಿಕ ದಿನ. ಭಾರತಕ್ಕೆ 1947 ರಲ್ಲಿ ಸ್ವಾತಂತ್ರ್ಯ ಸಿಕ್ಕಿತು, ಆದರೆ ರೈತರಿಗೆ ಇಂದು ಸ್ವಾತಂತ್ಯ್ರ ಸಿಕ್ಕಿದೆ” ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

"ಸ್ಥಳೀಯ ಮಾರುಕಟ್ಟೆ ಅಥವಾ ಎಪಿಎಂಸಿ ಸಮಿತಿಗಳು ಅಧಿಸೂಚಿತ ಮಾರುಕಟ್ಟೆಯಲ್ಲಿ ಪರವಾನಗಿ ಪಡೆದ ಮಧ್ಯವರ್ತಿಗಳ ಬಳಿಯೇ ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಬೇಕು ಎಂದು ಬಲವಂತ ಮಾಡುತ್ತವೆ. ಇದರಿಂದ ರೈತರು ತಮ್ಮ ಬೆಳೆಗೆ ನ್ಯಾಯಯುತವಾದ ಬೆಲೆ ಪಡೆಯುವುದು ಅಸಾಧ್ಯವಾಗಿದೆ. ಅಲ್ಲದೆ, ಮಧ್ಯವರ್ತಿಗಳು ಕೆಲವು ಸಂದರ್ಭದಲ್ಲಿ ಅವರ ಬೆಳೆಯನ್ನು ಖರೀದಿಸದಿದ್ದರೆ ರೈತರು ಅದನ್ನು ರಸ್ತೆಗೆ ಎಸೆದುಹೋಗುವ ಘಟನೆಗಳು ಸಾಕಷ್ಟು ವರದಿಯಾಗುತ್ತಲೇ ಇರುತ್ತವೆ.

ಮಧ್ಯವರ್ತಿಗಳು ತಮ್ಮ ಬೆಳೆಗೆ ಬೆಲೆ ನಿಗದಿಪಡಿಸುವ ಸಂಪ್ರದಾಯದಿಂದಾಗಿ ದೇಶದ ರೈತರು ಈಗಾಗಲೇ ಸಾಕಷ್ಟು ಸಂಕಷ್ಟ ಅನುಭವಿಸಿದ್ದಾರೆ. ಹೀಗಾಗಿ ಈ ಕಾಯ್ದೆಯನ್ನು ತಿದ್ದುಪಡಿ ಮಾಡುವ ಮೂಲಕ ಎಪಿಎಂಸಿಯ ನಿರ್ಬಂಧಗಳಿಂದ ರೈತರನ್ನು ಮುಕ್ತಗೊಳಿಸಲಾಗಿದೆ. ಅವರು ಇನ್ನು ತಮ್ಮ ಉತ್ಪನ್ನಗಳನ್ನು ಯಾವ ರಾಜ್ಯದಲ್ಲಿ ಯಾರಿಗೆ ಬೇಕಾದರೂ ಮಾರಾಟ ಮಾಡಿಕೊಳ್ಳಬಹುದು” ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ರಾಜ್ಯಸಭೆಗೆ ಮಲ್ಲಿಕಾರ್ಜುನ ಖರ್ಗೆ ಅಥವಾ ದೇವೇಗೌಡ; ಕಾಂಗ್ರೆಸ್ ಹೈಕಮಾಂಡ್ ನಿರ್ಧಾರವೇನು?
First published: June 3, 2020, 6:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading