HOME » NEWS » National-international » A SEER HAS DIED FROM COVID 19 IN HARIDWAR KUMBAMELA SESR

KumbaMela: ಕುಂಭ ಮೇಳದಲ್ಲಿ ಏರಿಕೆಯಾಗುತ್ತಲೇ ಇದೆ ಸೋಂಕಿತರ ಸಂಖ್ಯೆ; ಕೋವಿಡ್​​ನಿಂದ ಸಾಧು ಸಾವು

ಮಹಾಮಂಡಲೇಶ್ವರ ಕಪಿಲ್​ ದೇವ್​ ಅವರಿಗೆ ಸೋಂಕು ಕಾಣಿಸಿಕೊಂಡು ಗುರುವಾರ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

news18-kannada
Updated:April 16, 2021, 9:55 PM IST
KumbaMela: ಕುಂಭ ಮೇಳದಲ್ಲಿ ಏರಿಕೆಯಾಗುತ್ತಲೇ ಇದೆ ಸೋಂಕಿತರ ಸಂಖ್ಯೆ; ಕೋವಿಡ್​​ನಿಂದ ಸಾಧು ಸಾವು
ಸಾಂದರ್ಭಿಕ ಚಿತ್ರ
  • Share this:
ದೇಶದಲ್ಲಿ ಅಂಕೆಗೆ ಸಿಗದಂತೆ ಕೋವಿಡ್​ ಪ್ರಕರಣಗಳು ದಾಖಲಾಗುತ್ತಿದ್ದು, ಸರ್ಕಾರವನ್ನು ಚಿಂತೆಗೆ ದೂಡಿದೆ. ಈ ನಡುವೆ ಹರಿದ್ವಾರದಲ್ಲಿ ನಡೆಯುತ್ತಿರುವ ಕುಂಭ ಮೇಳದಲ್ಲಿ ಸೋಂಕಿನಿಂದಾಗಿ ಸಾಧುವೊಬ್ಬರು ಸಾವನ್ನಪ್ಪಿದ್ದಾರೆ. ಅಲ್ಲದೇ ಈ ಧಾರ್ಮಿಕದಲ್ಲಿ ಮೇಳದಲ್ಲಿ ಭಾಗಿಯಾದ 80 ಸಾಧು ಸಂತರಲ್ಲಿ ಕೋವಿಡ್​ ದೃಢಗೊಂಡಿದೆ. ಸರ್ಕಾರ ಮುನ್ನೆಚ್ಚರಿಕೆ ಕ್ರಮವಾಗಿ ಈ ಮೇಳ ನಡೆಸಲಾಗುತ್ತಿದೆ ಎಂದು ಹೇಳಿದರೂ ಅನೇಕ ಭಕ್ತರು ಕೋವಿಡ್​ ನಿಯಮಾವಳಿಗಳನ್ನು ನಿರ್ಲಕ್ಷಿಸುತ್ತಿರುವುದು ಕಂಡು ಬಂದಿದೆ. ಕಳೆದ 24 ಗಂಟೆಯೊಳಗೆ ಹರಿದ್ವಾರದಲ್ಲಿ 2 ಲಕ್ಷದ 17 ಸಾವಿರ ಹೊಸ ಪ್ರಕರಣ ದಾಖಲಾಗಿದೆ. ಕುಂಭ ಮೇಳ ಆರಂಭವಾದ ದಿನದಂದ ಅಂದರೆ, ಏಪ್ರಿಲ್​ 1ರಿಂದ 20 ಲಕ್ಷಕ್ಕೂ ಹೆಚ್ಚಿನ ಪ್ರಕರಣಗಳು ದಾಖಲಾಗಿದೆ ಎಂದು ಹರಿದ್ವಾರದ ಅಧಿಕಾರಿಗಳು ತಿಳಿಸಿದ್ದಾರೆ.

ಕೋವಿಡ್​ ಎರಡನೇ ಅಲೆಯಿಂದ ದೇಶ ತತ್ತರಿಸುತ್ತಿರುವ ಈ ಸಂದರ್ಭದಲ್ಲಿ ಕುಂಭ ಮೇಳ ನಡೆಸುವ ಬಗ್ಗೆ ತಜ್ಞರು ಈ ಹಿಂದೆಯೇ ಎಚ್ಚರಿಸಿದ್ದರು. ಅಲ್ಲದೇ ಈ ಕುಂಭ ಮೇಳದ ಕೋವಿಡ್​ ಸೂಪರ್​ಸ್ಪ್ರೆಡರ್​ ಆಗಲಿದೆ ಎಂದು ಕೂಡ ತಿಳಿಸಿದ್ದರು. ಸಾಮಾಜಿಕ ಅಂತರವಿಲ್ಲದೇ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗಿಯಾಗುತ್ತಿರುವ ಬಗ್ಗೆ ಅನೇಕ ಆಕ್ಷೇಪಗಳು ವ್ಯಕ್ತವಾಗಿದ್ದು, ಅಲ್ಲದೆ ಈ ಕುಂಭ ಮೇಳವನ್ನು ಮೊಟಕುಗೊಳಿಸುವಂತೆ ಕೂಡ ಅನೇಕರು ಒತ್ತಾಯಿಸಿದ್ದರು. ಈ ನಡುವೆ ಸರ್ಕಾರ ಮಾತ್ರ ಎರಡುವಾರ ಮುಂಚೆ ಈ ಕುಂಭ ಮೇಳವನ್ನು ರದ್ದು ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಗಂಗಾ ನದಿಯ ತಟದಲ್ಲಿ 12 ವರ್ಷಗಳಿಗೊಮ್ಮೆ ನಡೆಯುವ ಈ ಕುಂಭ ಮೇಳದಲ್ಲಿ ಪವಿತ್ರ ಸ್ನಾನ ಮಾಡಲು ದೇಶದ ಮೂಲೆ ಮೂಲೆಯಿಂದ ಭಕ್ತರು, ಸಂತರು ಆಗಮಿಸುತ್ತಾರೆ. ಅತಿಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗಿಯಾಗುವ ಹಿನ್ನಲೆ ಸ್ನಾನ ಮಾಡುವ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ತಿಳಿಸಲಾಗಿತ್ತು. ಆದರೆ, ಈ ಸಲಹೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ.

ಇದನ್ನು ಓದಿ: Kumbh Mela: ಕೋವಿಡ್​ ಆತಂಕ: ಕುಂಭಮೇಳವನ್ನು ನಿಲ್ಲಿಸುವ ಯಾವುದೇ ಯೋಜನೆ ಇಲ್ಲ; ಅಧಿಕಾರಿಗಳ ಸ್ಪಷ್ಟನೆ

ಹಿಂದೂ ಅಕಾದಸ್​ ಮುಖ್ಯಸ್ಥ ಮಹಾಮಂಡಲೇಶ್ವರ ಕಪಿಲ್​ ದೇವ್​ ಅವರಿಗೆ ಸೋಂಕು ಕಾಣಿಸಿಕೊಂಡು ಗುರುವಾರ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಕುಂಭ ಮೇಳಕ್ಕೆ ಹಾಜರಾಗುವ ಭಕ್ತರು 72 ಗಂಟೆಗಳ ಮುಂಚೆ ಕೊವೀಡ್​ ನೆಗಟಿವ್​ ವರದಿ ನೀಡಬೇಕು. ಈ ನಡುವೆ ಸೋಮವಾರ ಕುಂಭಮೇಳದಲ್ಲಿ ಭಾಗಿಯಾಗಿದ್ದ ಭಕ್ತರಿಗೆ ಕೊರೋನಾ ಪರೀಕ್ಷೆ ನಡೆಸಲಾಗಿತ್ತು. ಈ ವೇಳೆ ಸುಮಾರು 2000ಕ್ಕೂ ಅಧಿಕ ಮಂದಿಯಲ್ಲಿ ಸೋಂಕು ಕಂಡು ಬಂದಿದೆ.

ಇದನ್ನು ಓದಿ: ಕುಂಭಮೇಳದಿಂದ 1,086 ಕೋವಿಡ್ ಕೇಸ್​​ ದಾಖಲು; ತಬ್ಲಿಘಿ ಪ್ರಕರಣಕ್ಕೆ ಹೋಲಿಕೆ ಬೇಡ ಎಂದ ಉತ್ತರಾಖಂಡ್ ಸಿಎಂ!ಪ್ರತಿನಿತ್ಯ 25 ಸಾವಿರಕ್ಕೂ ಹೆಚ್ಚು ಭಕ್ತರು ಪ್ರತಿನಿತ್ಯ ಕುಂಭ ಮೇಳದಲ್ಲಿ ಭಾಗಿಯಾಗುತ್ತಿದ್ದಾರೆ. ಇನ್ನು ಏ. 27 ರಂದು ನಡೆಯುವ ಪವಿತ್ರ ದಿನದಂದು 2-3 ಮಿಲಿಯನ್​ ಜನರು ಭಾಗಿಯಾಗುವ ನಿರೀಕ್ಷೆ ಕೂಡ ಇದೆ.
Published by: Seema R
First published: April 16, 2021, 9:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories