• Home
  • »
  • News
  • »
  • national-international
  • »
  • HIV ಸೋಂಕು ಕಂಡು ಹಿಡಿದಿದ್ದ ವಿಜ್ಞಾನಿ ನಿಧನ, ಹೇಗಿತ್ತು ಗೊತ್ತಾ ಲೂಕ್ ಮೊಂಟಾಗ್ನಿಯರ್ ಜೀವನ?

HIV ಸೋಂಕು ಕಂಡು ಹಿಡಿದಿದ್ದ ವಿಜ್ಞಾನಿ ನಿಧನ, ಹೇಗಿತ್ತು ಗೊತ್ತಾ ಲೂಕ್ ಮೊಂಟಾಗ್ನಿಯರ್ ಜೀವನ?

ವಿಜ್ಞಾನಿ ಲೂಕ್ ಮೊಂಟಾಗ್ನಿಯರ್

ವಿಜ್ಞಾನಿ ಲೂಕ್ ಮೊಂಟಾಗ್ನಿಯರ್

2020ರಲ್ಲಿ ಸಾರ್ಕ್‌ ಕೋವ್-2, ಕೋವಿಡ್ 19ಗೆ ಕಾರಣವಾಗುವ ವೈರಸ್ ಪ್ರಯೋಗಾಲಯದಲ್ಲಿ ಮಾನವ ನಿರ್ಮಿತವಾಗಿದೆ ಅಂತ ಲೂಕ್ ಹೇಳಿದ್ದರು. ಆದರೆ ಮಾಂಟಾಗ್ನಿಯರ್‌ನ ತೀರ್ಮಾನಗಳನ್ನು ವೈಜ್ಞಾನಿಕ ಸಮುದಾಯವು ತಿರಸ್ಕರಿಸಿತು.

  • Share this:

ಪ್ಯಾರಿಸ್: ಒಂದು ಕಾಲದಲ್ಲಿ ಇಡೀ ಜಗತ್ತನ್ನೇ (World) ತಲ್ಲಣ ಗೊಳಿಸಿದ್ದ ಮಾರಕ ಕಾಯಿಲೆ (Dangerous Disease) ಅಂದರೆ ಏಡ್ಸ್ (Aids) ಅಥವಾ ಎಚ್ಐವಿ (HIV). ಈ ಕಾಯಿಲೆಗೆ ಮದ್ದಿಲ್ಲ ಅಂತ ಇಡೀ ಜಗತ್ತು ಬೆಚ್ಚಿ ಬಿದ್ದಿತ್ತು. ಬಳಿಕ ಈ ಕಾಯಿಲೆ ಮೇಲೆ ಸಾಕಷ್ಟು ಅಧ್ಯಯನ, ಸಂಶೋಧನೆ ನಡೆದು, ಹೊಸ ಹೊಸ ವಿಚಾರಗಳು ಜಗಜ್ಜಾಹೀರ ಆದವು. ಅಂದಹಾಗೆ ಮೂಲದಲ್ಲಿ ಈ ಎಚ್‌ಐವಿಯನ್ನು ಕಂಡು ಹಿಡಿದವರು ಯಾರು? ಅವರೇ ಖ್ಯಾತ ವಿಜ್ಞಾನಿ (Scientist) ಲೂಕ್ ಮೊಂಟಾಗ್ನಿಯರ್ (Luke Montagnier). ನೊಬೆಲ್ (Nobel) ಪ್ರಶಸ್ತಿಯನ್ನೂ (Prize) ಪಡೆದಿದ್ದ ಸಂಶೋಧಕ, ವಿಜ್ಞಾನಿ ಲೂಕ್ ಮೊಂಟಾಗ್ನಿಯರ್ ಇದೀಗ ನಿಧನರಾಗಿದ್ದಾರೆ.


89ನೇ ವಯಸ್ಸಿನಲ್ಲಿ ಪ್ಯಾರಿಸ್‌ನಲ್ಲಿ ನಿಧನ


ವೈರಾಲಜಿಯಲ್ಲಿ ಖ್ಯಾತರಾಗಿದ್ದ ಲೂಕ್ ಮೊಂಟಾಗ್ನಿಯರ್ ತಮ್ಮ 89ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಪ್ಯಾರಿಸ್‌ನ ಪಶ್ಚಿಮ ಉಪನಗರ ನ್ಯೂಲ್ಲಿ ಸುರ್ ಸೈನ್‌ನಲ್ಲಿರುವ ಅಮೆರಿಕನ್ ಹಾಸ್ಪಿಟಲ್ ಆಫ್ ಪ್ಯಾರಿಸ್‌ನಲ್ಲಿ ಲೂಕ್ ಕೊನೆಯುಸಿರೆಳೆದಿದ್ದಾರೆ. ವಯೋ ಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಲೂಕ್, ಇಂದು ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ.


ವಿಜ್ಞಾನ ಕ್ಷೇತ್ರದಲ್ಲಿ ಅಪಾರ ಸಾಧನೆ


18 ಆಗಸ್ಟ್, 1932ರಂದು ಫ್ರಾನ್ಸ್‌ನ ಛಾಬ್ರಿಸ್ ಎಂಬಲ್ಲಿ ಲೂಕ್ ಮೊಂಟಾಗ್ನಿಯರ್ ಜನಿಸಿದರು. ಲೂಕ್ ವೈರಾಲಜಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ವಿಜ್ಞಾನದಲ್ಲಿ ಸಾಕಷ್ಟು ಆಸಕ್ತಿಯಿದ್ದ ಅವರು, ಆ ನಿಟ್ಟಿನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ವಿಜ್ಞಾನ ಕ್ಷೇತ್ರದಲ್ಲಿ ಹೊಸ ಹೊಸ ಸಂಶೋಧನೆ ಮಾಡಿ, ಮಾನವರಿಗೆ ಉಪಯೋಗವಾಗುವಂತಹ ಕೆಲಸ ಮಾಡಬೇಕು ಅಂತ ಅವರ ಮನಸ್ಸು ಸದಾ ತುಡಿಯುತ್ತಿತ್ತು.


ಇದನ್ನೂ ಓದಿ: Death Case: ಕರಣ್ ಜೋಸೆಫ್‌ನನ್ನು ಯಾರೂ ಕೊಂದಿಲ್ಲ! ಹಾಗಾದರೆ ಸತ್ತಿದ್ದು ಹೇಗೆ?


ಫ್ರಾನ್ಸ್‌ನ ಪೊಯಿಟಿಯರ್ಸ್ ವಿಶ್ವವಿದ್ಯಾಲಯದಲ್ಲಿ ವಿಜ್ಞಾನಕ್ಕೆ ಸಂಬಂಧಿದಂತೆ ಉನ್ನತ ಶಿಕ್ಷಣ ಪಡೆದರು. 1961 ರಲ್ಲಿ, ಮೊಂಟಾಗ್ನಿಯರ್ ಡೊರೊಥಿಯಾ ಅಕರ್ಮನ್ ಅವರನ್ನು ವಿವಾಹವಾದರು ಮತ್ತು ಅವರಿಗೆ ಮೂರು ಮಕ್ಕಳಿದ್ದರು.


ಎಚ್ಐವಿ ವೈರಾಣು ಕಂಡು ಹಿಡಿದ ಸಾಧಕ


1983ರಲ್ಲಿ ಏಡ್ಸ್‌ಗೆ ಕಾರಣವಾಗುವ ವೈರಸ್‌ ಅನ್ನು ಕಂಡು ಹಿಡಿದರು. ಎಚ್ಐವಿ ಅಂದರೆ  ಹ್ಯೂಮನ್ ಇಮ್ಯುನೋ ಡಿಫಿಶಿಯನ್ಸಿ ವೈರಸ್ (Human Immunodeficiency Virus) ಅನ್ನು ಗುರುತಿಸಿದ ತಂಡವನ್ನು ಇವರು ಮುನ್ನಡೆಸಿದ್ದರು. ಈ ಮೂಲಕ 2008ರಲ್ಲಿ ವೈದ್ಯಕೀಯ ನೊಬೆಲ್ ಪ್ರಶಸ್ತಿ ಲೂಕ್ ಅವರನ್ನು ಹುಡುಕಿಬಂದಿತ್ತು. ತಮ್ಮ ಸಹೋದ್ಯೋಗಿ ಫ್ರಾಂಕೋಯಿಸ್ ಬ್ಯಾರೆ ಸಿನೋಸ್ಸಿ ಜೊತೆ ಪ್ರಶಸ್ತಿ ಹಂಚಿಕೊಂಡಿದ್ದರು.


ಸಾಧಕನಿಗೆ ಸಾಲು ಸಾಲು ಪ್ರಶಸ್ತಿ


ನೊಬೆಲ್ ಪ್ರಶಸ್ತಿ ಪಡೆಯುವ ಮೊದಲು ಹಾಗೂ ಪಡೆದ ನಂತರವೂ ಲೂಕ್ ಮೊಂಟಾಗ್ನಿಯರ್ ಹಲವು ಪ್ರಶಸ್ತಿ, ಪುರಸ್ಕಾರಗಳಿಗೆ ಭಾಜನರಾದರು. 1986ರಲ್ಲಿ ನ್ಯಾಷನಲ್ ಆರ್ಡರ್ ಆಫ್ ಮೆರಿಟಿ, ಲೀಜನ್ ಡಿ ಹಾನರ್ ಸೇರಿದಂತೆ 20ಕ್ಕೂ ಹೆಚ್ಚು ಪ್ರತಿಷ್ಠಿತ ಪ್ರಶಸ್ತಿ, ಪುರಸ್ಕಾರಗಳನ್ನು ಪಡೆದರು.


ಅವರು ಲಾಸ್ಕರ್ ಪ್ರಶಸ್ತಿ, ಷೀಲೆ ಅವಾರ್ಡ್, ಲೂಯಿಸ್ ಜೆಯಾಂಟೆಟ್ ಪ್ರೈಜ್ ಪಾರ್ ಮೆಡಿಸಿನ್ 1987ರಲ್ಲಿ ಗೋಲ್ಡನ್ ಪ್ಲೇಟ್ ಪ್ರಶಸ್ತಿ, ಅರಬ್‌ನ ನೊಬೆಲ್ ಪ್ರಶಸ್ತಿ ಎಂದೇ ಕರೆಯಲಾಗುವ ಕಿಂಗ್ ಫೈಸಲ್ ಇಂಟರ್‌ ನ್ಯಾಷನಲ್ ಪ್ರಶಸ್ತಿಗಳೂ ಇವರನ್ನು ಅರಸಿ ಬಂದವು. ಲೂಕ್ ಟಾಗ್ನಿಯರ್‌ ಅವರಿಗೆ 2010 ರಲ್ಲಿ ವಿಟ್ಟೆಯರ್ ಕಾಲೇಜ್‌ನಿಂದ ಗೌರವ ಡಾಕ್ಟರ್ ಆಫ್ ಹ್ಯೂಮನ್ ಲೆಟರ್ಸ್ (LHD) ನೀಡಲಾಯಿತು.


ಇದನ್ನೂ ಓದಿ: OMG.. ಇವನಿಗೆ ಒಂದೆರಡಲ್ಲ, 78 ಬಾರಿ ಕೊರೋನಾ ಪಾಸಿಟಿವ್! 14 ತಿಂಗಳಿಂದ ಕ್ವಾರಂಟೈನ್‌ನಲ್ಲೇ ವಾಸ


ಲೂಕ್ ಹಲವು ವಿವಾದಗಳು


ಈ ಖ್ಯಾತ ವಿಜ್ಞಾನಿ, ನೊಬೆಲ್ ಪ್ರಶಸ್ತಿ ಪುರಸ್ಕೃತ ಸಂಶೋಧಕ ಹಲವು ವಿವಾದಗಳನ್ನೂ ಹುಟ್ಟು ಹಾಕಿದ್ದರು. 2009 ರಲ್ಲಿ, ಮಾಂಟಾಗ್ನಿಯರ್ ಎರಡು ಸ್ವತಂತ್ರವಾಗಿ ತಯಾರಿಸಿದ, ವಿವಾದಾತ್ಮಕ ಸಂಶೋಧನಾ ಅಧ್ಯಯನಗಳನ್ನು ಪ್ರಕಟಿಸಿದರು.


ಕೋವಿಡ್ ವೈರಾಣು ಬಗ್ಗೆಯೂ ಹೇಳಿಕೆ


2020 ರಲ್ಲಿ, ಸಾರ್ಕ್‌ ಕೋವ್-2, ಕೋವಿಡ್ 19ಗೆ ಕಾರಣವಾಗುವ ವೈರಸ್, ಪ್ರಯೋಗಾಲಯದಲ್ಲಿ ಮಾನವ ನಿರ್ಮಿತವಾಗಿದೆ ಅಂತ ಲೂಕ್ ಹೇಳಿದ್ದರು. ಇದು ಎಚ್ಐವಿ ಅಥವಾ ಏಡ್ಸ್‌ಗಾಗಿ ಲಸಿಕೆಯನ್ನು ರಚಿಸುವ ಪ್ರಯತ್ನದ ಪರಿಣಾಮವಾಗಿರಬಹುದು ಎಂದು ಮಾಂಟಾಗ್ನಿಯರ್ ವಾದಿಸಿದರು. ಆದರೆ ಮಾಂಟಾಗ್ನಿಯರ್‌ನ ತೀರ್ಮಾನಗಳನ್ನು ವೈಜ್ಞಾನಿಕ ಸಮುದಾಯವು ತಿರಸ್ಕರಿಸಿತು.

Published by:Annappa Achari
First published: