ತಮಿಳುನಾಡು: ಅವರಿಬ್ಬರು ಅಪ್ರಾಪ್ತ ಬಾಲಕರು (Minor Boys), ಇನ್ನೂ ಬಾಳಿ ಬದುಕಬೇಕಾಗಿದ್ದ ವಯಸ್ಸು. ಎಲ್ಲರಂತೆ ಅವರೂ ಕ್ಲಾಸಿನಲ್ಲಿ (Class) ಒಟ್ಟಿಗೆ ಪಾಠ (Lesson) ಕೇಳುತ್ತಿದ್ದರು, ಹೊರಗಡೆ ಒಟ್ಟಿಗೆ ಆಟ (Playing) ಆಡುತ್ತಿದ್ದರು, ಕೆಲವೊಮ್ಮೆ ತಮಾಷೆ ಮಾಡುತ್ತಾ ಒಬ್ಬರಿಗೊಬ್ಬರ ಕಾಲು ಎಳೆದುಕೊಳ್ಳುತ್ತಿದ್ದರು. ಆದರೆ ಆ ತಮಾಷೆಯೇ (Comedy) ಒಂದಿನ ಒಬ್ಬನ ಬಾಳಿನಲ್ಲಿ ಅಮಾವಾಸ್ಯೆಯಂತೆ ಕತ್ತಲು ತುಂಬುತ್ತದೆ ಅಂತ ಬಹುಶಃ ಇಬ್ಬರಿಗೂ ಗೊತ್ತಿರಲಿಕ್ಕಿಲ್ಲ. ಆದರೆ ಗೊತ್ತಾಗುವಷ್ಟರಲ್ಲಿ ಎಲ್ಲಾ ಕೈ ಮೀರಿತ್ತು. ಹೌದು, ಒಬ್ಬನ ದೇಹದ ಆಕೃತಿ (Body Shape), ಅವನ ನಡಿಗೆ, ಆತನ ವ್ಯಕ್ತಿತ್ವದ ಬಗ್ಗೆ ಮತ್ತೊಬ್ಬ ವಿದ್ಯಾರ್ಥಿ (Student) ಹೀಯಾಳಿಸಿದ್ದಾನೆ. ಇದರಿಂದ ಕೋಪಗೊಂಡ ಆತ, ಸ್ನೇಹಿತ ಎನ್ನುವುದನ್ನೂ ನೋಡದೇ ಚಾಕುವಿನಿಂದ ಇರಿದು, ಇರಿದು ಕೊಂದಿದ್ದಾನೆ.
ತಮಿಳುನಾಡಿನಲ್ಲಿ ವಿದ್ಯಾರ್ಥಿಯಿಂದ ಸ್ನೇಹಿತನ ಕೊಲೆ
ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯಲ್ಲಿ 12ನೇ ತರಗತಿಯ ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿಯನ್ನು ಚಾಕುವಿನಿಂದ ಇರಿದು ಇರಿದು ಕೊಂದಿದ್ದಾನೆ. ಪಾರ್ಟಿ ಕೊಡುತ್ತೇನೆ ಅಂತ ಕರೆದು, ಸ್ನೇಹಿತನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಕೊಂದಿದ್ದಾನೆ. ಈ ವಿಷಯ ಕೇಳಿ ಕಲ್ಲಕುರಿಚಿ ಜಿಲ್ಲೆಯ ಜನ ಬೆಚ್ಚಿ ಬಿದ್ದಿದ್ದಾರೆ.
“ಹುಡುಗಿ” ಅಂತ ನಿಂದಿಸಿದ್ದಕ್ಕೆ ಕೊಲೆ
ಮೃತ ವಿದ್ಯಾರ್ಥಿಯು ಆರೋಪಿ ವಿದ್ಯಾರ್ಥಿಗೆ ಬಾಡಿ ಶೇಮಿಂಗ್ ಅಂದರೆ ಆತನ ದೇಹದ ಆಕೃತಿ, ಹಾವಭಾವದ ಬಗ್ಗೆ ಅವಹೇಳನ ಮಾಡಿದ್ದಕ್ಕಾಗಿ ಮೇ 14 ರಂದು ಶನಿವಾರ ಕೊಲೆ ಮಾಡಿದ್ದಾನೆ. ಮೃತ ವಿದ್ಯಾರ್ಥಿ ತನ್ನ ಸ್ನೇಹಿತನನ್ನು ʻಹುಡುಗಿʼ ಎಂದು ಕರೆದಿದ್ದಕ್ಕಾಗಿ ಕೃತ್ಯ ನಡೆದಿದೆ ಎಂದು ತಮಿಳುನಾಡು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Death from Rain: ಬೆಂಗಳೂರಲ್ಲಿ ಮಳೆಗೆ ಇಬ್ಬರು ಬಲಿ; ರಾತ್ರಿಯಿಡೀ ಪೈಪ್‌ನಲ್ಲೇ ಇತ್ತು ಕಾರ್ಮಿಕರ ಮೃತದೇಹ!
ಮನವಿ ಮಾಡಿದ್ದರೂ ಅಪಹಾಸ್ಯ ಮಾಡುತ್ತಿದ್ದ ಸ್ನೇಹಿತ
ಮೃತ ವಿದ್ಯಾರ್ಥಿ ಹಲವು ಬಾರಿ ತನ್ನ ಸ್ನೇಹಿತನನ್ನು ಬಾಡಿ ಶೇಮಿಂಗ್ ಬಗ್ಗೆ ನಿಂದಿಸಿದ್ದನಂತೆ. ಮತ್ತೊಮ್ಮೆ ಈ ರೀತಿ ನಡೆದುಕೊಳ್ಳದಂತೆ ಮನವಿ ಮಾಡದರೂ ತನ್ನ ಚಾಳಿಯನ್ನು ಮುಂದುವರೆಸಿದ್ದನಂತೆ.
ಪಾರ್ಟಿ ಕೊಡುವುದಾಗಿ ಕರೆಸಿ ಹತ್ಯೆ
ಆರೋಪಿ ವಿದ್ಯಾರ್ಥಿಯು ಪಾರ್ಟಿ ಮಾಡುವ ನೆಪದಲ್ಲಿ ಸ್ನೇಹಿತನನ್ನು ಕರೆಸಿದ್ದಾನೆ. ಆತನನ್ನು ಊರಿನಿಂದ ಹೊರಗೆ ಕರೆದೊಯುದು ಕಲ್ಲಕುರಿಚಿ ಜಿಲ್ಲೆಯ ಹೆದ್ದಾರಿಯ ಶಾಲೆಯ ಸಮೀಪ ಕುಡುಗೋಲು ಹಾಗೂ ಚಾಕುವಿನಿಂದ ಹಲವು ಬಾರಿ ಇರಿದು, ಕೊಂದಿದ್ದಾನೆ.
ಪೊಲೀಸರಿಂದ ಆರೋಪಿ ವಿದ್ಯಾರ್ಥಿ ವಿಚಾರಣೆ
ಬಾಡಿ ಶೇಮಿಂಗ್ ಆರೋಪದ ಮೇಲೆ 12ನೇ ತರಗತಿ ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿಯನ್ನು ಹತ್ಯೆ ಮಾಡಿರುವ ಘಟನೆ ತಜ್ಞರನ್ನು ಆತಂಕಕ್ಕೆ ದೂಡಿದೆ. ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅಪ್ರಾಪ್ತ ಬಾಲಕನನ್ನು ಬಾಲ ವೀಕ್ಷಣಾಲಯಕ್ಕೆ ಕಳುಹಿಸಿದ್ದಾರೆ. ಜೊತೆಗೆ ವಿಚಾರಣೆ ಮುಂದುವರೆಸಿದ್ದಾರೆ. ಇನ್ನು ರಾಜ್ಯ ಸರ್ಕಾರವು ವಿದ್ಯಾರ್ಥಿ ಕೌನ್ಸೆಲಿಂಗ್ ಅನ್ನು ಚುರುಕುಗೊಳಿಸಿದೆ,
ಇದನ್ನೂ ಓದಿ: Jilted Lover: ಮಾಜಿ ಲವರ್ನ ದ್ವೇಷ, ಆಗಷ್ಟೇ ಮದುವೆಯಾದ ಯುವಕನಿಗೆ ಸಿಕ್ಕಿತು ಶಾಕಿಂಗ್ ಗಿಫ್ಟ್!
ಬಾಡಿ ಶೇಮಿಂಗ್‌ನಿಂದ ಖಿನ್ನತೆ
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಡಾ.ಶರಣ್ಯಾ ಜೈಕುಮಾರ್ ಮಾತನಾಡಿ, ‘ಬಾಡಿ ಶೇಮಿಂಗ್ ಆತಂಕ, ಖಿನ್ನತೆಗೆ ಕಾರಣವಾಗುತ್ತದೆ, ದೇಹದ ಅಸ್ವಸ್ಥತೆಗೆ ಕಾರಣವಾಗುತ್ತದೆ. ಹಲವು ಬಾರಿ ಇದು ಕೋಪ ಅಥವಾ ತೀವ್ರ ಖಿನ್ನತೆಯಾಗಿ ಪ್ರತಿಫಲಿಸುತ್ತದೆ ಎಂದಿದ್ದಾರೆ. ಶಿಕ್ಷಕರನ್ನು ಗುರಿಯಾಗಿಸುವುದು, ಧೂಮಪಾನ, ಮದ್ಯಪಾನ ಮತ್ತು ತರಗತಿಗಳಲ್ಲಿ ಅನುಚಿತ ವರ್ತನೆ ಸೇರಿದಂತೆ ವಿದ್ಯಾರ್ಥಿಗಳ ವರ್ತನೆಯ ಸಮಸ್ಯೆಗಳಿಗೆ ಇದು ಕಾರಣವಾಗುತ್ತದೆ ಅಂತ ಎಚ್ಚರಿಸಿದ್ದಾರೆ. ಸಾಂಕ್ರಾಮಿಕ ರೋಗದ ನಡುವೆ ಸಾಮಾಜಿಕ ಸಂವಹನದ ಕೊರತೆಯನ್ನು ತಜ್ಞರು ದೂಷಿಸಿದರೆ, ಬಾಡಿ ಶೇಮಿಂಗ್‌ನಲ್ಲಿ ವಿದ್ಯಾರ್ಥಿಯೊಬ್ಬನ ಈ ಕೊಲೆ ಹೊಸ ಆತಂಕವನ್ನು ಹುಟ್ಟುಹಾಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ