• Home
  • »
  • News
  • »
  • national-international
  • »
  • Tweet: ಸೌದಿ ಅರೇಬಿಯಾ ವಿರುದ್ಧ ಟ್ವೀಟ್‌ ಮಾಡಿದ್ದಕ್ಕಾಗಿ ಯುಎಸ್ ನಾಗರಿಕನಿಗೆ 16 ವರ್ಷ ಜೈಲುಶಿಕ್ಷೆ!

Tweet: ಸೌದಿ ಅರೇಬಿಯಾ ವಿರುದ್ಧ ಟ್ವೀಟ್‌ ಮಾಡಿದ್ದಕ್ಕಾಗಿ ಯುಎಸ್ ನಾಗರಿಕನಿಗೆ 16 ವರ್ಷ ಜೈಲುಶಿಕ್ಷೆ!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

2018 ರಲ್ಲಿ ಯುಎಸ್ ಮೂಲದ ಅಂಕಣಕಾರ ಜಮಾಲ್ ಖಶೋಗಿ ಅವರ ಹತ್ಯೆಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದ ಸೌದಿ ಮೂಲದ ಯುಎಸ್ ಪ್ರಜೆ ಸಾದ್ ಇಬ್ರಾಹಿಂ ಅಲ್ಮಾಡಿ ಅವರಿಗೆ 16 ವರ್ಷಗಳ ಸೆರೆವಾಸವನ್ನು ಸೌದಿ ನ್ಯಾಯಾಲಯ ವಿಧಿಸಿರುವುದಾಗಿ ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ. ಸೌದಿ ಮೂಲದ ಯುಎಸ್ ಪ್ರಜೆ ಸಾದ್ ಇಬ್ರಾಹಿಂ ಅಲ್ಮಾಡಿಯ ಬಂಧನವನ್ನು ಸ್ಟೇಟ್ ಡಿಪಾರ್ಟ್ಮೆಂಟ್ ದೃಢಪಡಿಸಿದೆ ಮತ್ತು ಯುನೈಟೆಡ್ ಸ್ಟೇಟ್ಸ್ ಡಿಸೆಂಬರ್‌ನಲ್ಲಿ ಮತ್ತು ಇತ್ತೀಚೆಗೆ ಅವರ ಪ್ರಕರಣವನ್ನು ಪ್ರಸ್ತಾಪಿಸಿದೆ ಎಂದು ಹೇಳಿದೆ.

ಮುಂದೆ ಓದಿ ...
  • Share this:

ಸೌದಿ ಅರೇಬಿಯಾದಲ್ಲಿ(Saudi Arabia) ನಡೆಯುತ್ತಿರುವ ಭ್ರಷ್ಟಾಚಾರ ಹಾಗೂ 2018 ರಲ್ಲಿ ಯುಎಸ್ ಮೂಲದ ಅಂಕಣಕಾರ ಜಮಾಲ್ ಖಶೋಗಿ ಅವರ ಹತ್ಯೆಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದ ಸೌದಿ ಮೂಲದ ಯುಎಸ್ ಪ್ರಜೆ ಸಾದ್ ಇಬ್ರಾಹಿಂ ಅಲ್ಮಾಡಿ ಅವರಿಗೆ 16 ವರ್ಷಗಳ ಸೆರೆವಾಸವನ್ನು ಸೌದಿ ನ್ಯಾಯಾಲಯ (Saudi Court) ವಿಧಿಸಿರುವುದಾಗಿ ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ. ಸೌದಿ ಮೂಲದ ಯುಎಸ್ ಪ್ರಜೆ ಸಾದ್ ಇಬ್ರಾಹಿಂ ಅಲ್ಮಾಡಿಯ ಬಂಧನವನ್ನು ಸ್ಟೇಟ್ ಡಿಪಾರ್ಟ್ಮೆಂಟ್ ದೃಢಪಡಿಸಿದೆ ಮತ್ತು ಯುನೈಟೆಡ್ ಸ್ಟೇಟ್ಸ್ ಡಿಸೆಂಬರ್‌ನಲ್ಲಿ ಮತ್ತು ಇತ್ತೀಚೆಗೆ ಅವರ ಪ್ರಕರಣವನ್ನು ಪ್ರಸ್ತಾಪಿಸಿದೆ ಎಂದು ಹೇಳಿದೆ. ಸೌದಿ ಸಂಸ್ಥಾನದ ಕುರಿತು ಟ್ವೀಟ್ (Tweet) ಮಾಡಿದ್ದಕ್ಕಾಗಿ ಅಲ್ಮಾಡಿ ಅವರಿಗೆ 16 ವರ್ಷಗಳ ಕಠಿಣ ಸೆರೆಮನೆವಾಸವನ್ನು (Jail) ವಿಧಿಸಿರುವುದಾಗಿ ಅವರ ಪುತ್ರ ದೃಢೀಕರಿಸಿದ್ದಾರೆ.


ಟ್ವೀಟ್ ಮಾಡಿದ್ದಕ್ಕಾಗಿ ಸೆರೆಮನೆವಾಸ
ರಿಯಾದ್ ಹಾಗೂ ವಾಷಿಂಗ್ಟನ್ ಚಾನಲ್‌ಗಳ ಮೂಲಕ ಸೌದಿ ಸರಕಾರಕ್ಕೆ ಉನ್ನತ ಮಟ್ಟದಲ್ಲಿ ಈ ಪ್ರಕರಣದ ಕುರಿತು ನಮ್ಮ ಕಳವಳವನ್ನು ನಿರಂತರವಾಗಿ ಹಾಗೂ ತೀವ್ರವಾಗಿ ವ್ಯಕ್ತಪಡಿಸಿದ್ದೇವೆ ಎಂದು ಸ್ಟೇಟ್ ಡಿಪಾರ್ಟ್‌ಮೆಂಟ್ ವಕ್ತಾರ ವೇದಾಂತ್ ಪಟೇಲ್ ತಿಳಿಸಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಚಲಾಯಿಸುವ ಹಕ್ಕು ಪ್ರತಿಯೊಬ್ಬರಿಗೂ ಇದ್ದು ಇದನ್ನು ಎಂದಿಗೂ ಅಪರಾಧವಾಗಿ ಕಾಣಬಾರದು ಎಂದು ತಿಳಿಸಿದ್ದಾರೆ.


ಫ್ಲೋರಿಡಾದಲ್ಲಿ ವಾಸವಾಗಿದ್ದ ತಮ್ಮ ಕುಟುಂಬವನ್ನು ಭೇಟಿಮಾಡಲು ಹೋಗಿದ್ದ ಅಲ್ಮಾಡಿಯನ್ನು ಕಳೆದ ಏಳು ವರ್ಷಗಳಲ್ಲಿ ಅವರು ಬರೆದ 14 ಟ್ವೀಟ್‌ಗಳಿಗೆ ಸಂಬಂಧಿಸಿದಂತೆ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಯಿತು ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.


16 ವರ್ಷ ಜೈಲುವಾಸ 16 ವರ್ಷ ಪ್ರಯಾಣ ನಿಷೇಧ
72 ರ ಹರೆಯದ ಅಲ್ಮಾಡಿ ಅವರಿಗೆ ಅಕ್ಟೋಬರ್ 3 ರಂದು 16 ವರ್ಷಗಳ ಜೈಲು ಶಿಕ್ಷೆ ವಿಧಿಸುವುದರ ಜೊತೆಗೆ ಇನ್ನೂ 16 ವರ್ಷಗಳ ಪ್ರಯಾಣ ನಿಷೇಧವನ್ನು ವಿಧಿಸಲಾಗಿದೆ ಎಂದು ಇಬ್ರಾಹಿಂ ಉಲ್ಲೇಖಿಸಿದ್ದಾರೆ. ತನ್ನ ತಂದೆ ಸೌದಿಯ ಭ್ರಷ್ಟಾಚಾರ ಹಾಗೂ ಅಂಕಣಕಾರ ಜಮಾಲ್ ಖಶೋಗಿ ಅವರ ಹತ್ಯೆಯನ್ನು ಉಲ್ಲೇಖಿಸಿ ಸೌಮ್ಯ ರೀತಿಯ ಟ್ವೀಟ್‌ಗಳನ್ನೇ ಮಾಡಿದ್ದಾರೆ ಹಾಗೂ ತಮ್ಮ ಅಭಿಪ್ರಾಯಗಳನ್ನು ಮಂಡಿಸಿರುವುದು ಮಾತ್ರ ಎಂಬುದು ಪುತ್ರ ಇಬ್ರಾಹಿಂ ಹೇಳಿಕೆಯಾಗಿದೆ.


ಇದನ್ನೂ ಓದಿ:  Second Home Visa: ಶ್ರೀಮಂತರಿಗೆ ಇಂಡೋನೇಷ್ಯಾದಿಂದ “ಸೆಕೆಂಡ್‌ ಹೋಮ್” ವೀಸಾ ಆಫರ್!


ತಮ್ಮ ಟ್ವೀಟ್‌ಗಳ ಮೂಲಕ ಅಲ್ಮಾಡಿ ಭಯೋತ್ಪಾದನೆಗೆ ಬೆಂಬಲವನ್ನು ವ್ಯಕ್ತಪಡಿಸಿದ್ದು ಧನಸಹಾಯವನ್ನು ನೀಡುವುದರೊಂದಿಗೆ ರಾಜ್ಯವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂಬುದಾಗಿ ವರದಿಯಾಗಿದೆ ಎಂದು ಪುತ್ರ ಇಬ್ರಾಹಿಂ ತಿಳಿಸಿದ್ದಾರೆ. ವಿಚಾರಣೆಗಾಗಿ ಮೂಲತಃ ಸೌದಿ ಅರೇಬಿಯಾ ನಂತರದ ದಿನಾಂಕವನ್ನು ನೀಡಿದ್ದರಿಂದ ಶಿಕ್ಷೆಯ ಸಮಯದಲ್ಲಿ ಯಾವುದೇ ಯುಎಸ್ ಪ್ರತಿನಿಧಿ ಹಾಜರಿರಲಿಲ್ಲ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ. ಅಕ್ಟೋಬರ್ 3 ರ ನಂತರ ನಾವು ಸೌದಿ ಸರಕಾರದಿಂದ ಯಾವುದೇ ಮಾಹಿತಿಯನ್ನು ಪಡೆದುಕೊಂಡಿಲ್ಲ ಎಂದು ಪಟೇಲ್ ತಿಳಿಸಿದ್ದಾರೆ.


ವಾಷಿಂಗ್ಟನ್ ಪೋಸ್ಟ್‌ಗಾಗಿ ಲೇಖನ ಬರೆಯುತ್ತಿದ್ದ ಖಶೋಗಿ ಅವರ ಸಾವು ವಾಷಿಂಗ್ಟನ್‌ನಲ್ಲಿ ಆಕ್ರೋಶವನ್ನು ಉಂಟುಮಾಡಿತ್ತು, ಅದಾಗ್ಯೂ ಆಗಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಸೌದಿಯ ಶಕ್ತಿಯುತ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಅವರನ್ನು ಪ್ರಮುಖ ಘಟನೆಗಳಿಂದ ತಾವು ರಕ್ಷಿಸಿರುವುದಾಗಿ ಬಡಾಯಿ ಕೊಚ್ಚಿಕೊಂಡಿದ್ದರು.


ಅನಿಲ ಬೆಲೆ ತಗ್ಗಿಸಲು ಸೌದಿ ಸಹಾಯ
ಜುಲೈನಲ್ಲಿ ಸೌದಿ ಅರೇಬಿಯಾಗೆ ಬಿಡೆನ್ ಪ್ರಯಾಣಿಸಿದ್ದರು ಹಾಗೂ ಹೆಚ್ಚಿನ ತೈಲವನ್ನು ಉತ್ಪಾದಿಸುವ ಮೂಲಕ ಅನಿಲ ಬೆಲೆಗಳನ್ನು ತಗ್ಗಿಸಲು ಸೌದಿಯ ಸಹಾಯವನ್ನು ಬಯಸುತ್ತಿರುವುದಾಗಿ ತಿಳಿಸಿದ್ದು ರಾಜಕುಮಾರನೊಂದಿಗೆ ಜೊತೆಯಾಗಿ ಫೋಟೋ ತೆಗೆಸಿಕೊಂಡಿರುವುದು ಇದಕ್ಕೆ ಸಾಕ್ಷಿಯಾಗಿದೆ ಎಂದು ಸುದ್ದಿ ಪತ್ರಿಕೆ ವರದಿ ಮಾಡಿದೆ.


ಆದರೆ ಸೌದಿ ಅರೇಬಿಯಾ ನೇತೃತ್ವದ OPEC+, ಯುಎಸ್ ಕಾಂಗ್ರೆಸ್ ಚುನಾವಣೆಗಳಿಗೆ ಮುಂಚಿತವಾಗಿ ತೈಲ ಉತ್ಪಾದನೆಯಲ್ಲಿ ಕಡಿತವನ್ನು ಘೋಷಿಸಿದ್ದು, ಬಿಡೆನ್ ಅನ್ನು ಆಕ್ರೋಶಗೊಳಿಸಿದೆ.


ಇದನ್ನೂ ಓದಿ:  Singapore: ಸಿಂಗಾಪುರ್ 100% ಸುರಕ್ಷಿತ ದೇಶ ಎಂಬುದನ್ನು ಖಾತ್ರಿಪಡಿಸಲು ಈ ಟಿಕ್‌ಟಾಕರ್ ಮಾಡಿದ ಸಾಹಸವೇನು? ಇಲ್ಲಿದೆ ರೋಚಕ ಸ್ಟೋರಿ!


ಸೌದಿ ಅರೇಬಿಯಾ ಹಿಂದಿನಿಂದಲೂ ಮಾನವ ಹಕ್ಕುಗಳ ಕುರಿತು ಟೀಕೆಗಳನ್ನು ಎದುರಿಸುತ್ತಿದೆ. ಬ್ಲಾಗರ್ ಮತ್ತು ಸಾಮಾಜಿಕ ಹಕ್ಕುಗಳ ಕಾರ್ಯಕರ್ತ ರೈಫ್ ಬದಾವಿ ಅವರು ಮಾರ್ಚ್ ವರೆಗೆ 10 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸಿದ್ದರು ಹಾಗೂ ತಮ್ಮ ವೆಬ್‌ಸೈಟ್‌ನಲ್ಲಿರುವ ವಿಷಯದ ಆರೋಪಕ್ಕಾಗಿ ಸಾರ್ವಜನಿಕವಾಗಿ ಅವರಿಗೆ 50 ಬಾರಿ ಛೀಮಾರಿ ಹಾಕಲಾಗಿತ್ತು.

Published by:Ashwini Prabhu
First published: