Biden-Kamala Harris: ಜೋ ಬೈಡನ್​, ಕಮಲಾ ಹ್ಯಾರಿಸ್​ ನಡುವೆ ಶೀತಲಸಮರ? ಅಮೆರಿಕ ಮಾಧ್ಯಮಗಳಲ್ಲಿ ಹೀಗೊಂದು ಗುಸುಗುಸು!

Rift between Joe Biden & Kamala Harries : ಅಮೆರಿಕದ ಅಧ್ಯಕ್ಷ ಜೋ ಬೈಡನ್​ ಹಾಗೂ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​ ನಡುವೆ ಬಿರುಕು ಮೂಡಿದ್ಯಾ ಎಂಬ ಪ್ರಶ್ನೆ ಮೂಡಿದೆ. ಇವರಿಬ್ಬರ ನಡುವೆ ಶೀತಲಸಮರ ನಡೆಯುತ್ತಿದೆ ಎಂಬ ವಿಚಾರ, ಅಮೆರಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

ಜೋ ಬೈಡನ್​ ಮತ್ತು ಕಮಲಾ ಹ್ಯಾರಿಸ್​

ಜೋ ಬೈಡನ್​ ಮತ್ತು ಕಮಲಾ ಹ್ಯಾರಿಸ್​

  • Share this:
ಡೊನಾಲ್ಡ್​ ಟ್ರಂಪ್(Donald Trump)​ರನ್ನು ಸೋಲಿಸಿ ಜೋ ಬೈಡನ್​(Joe Biden) ಅಮೆರಿಕ ಅಧ್ಯಕ್ಷ(America President) ಪಟ್ಟಕ್ಕೇರಿದ್ದರು. ಇದು ಇಡೀ ವಿಶ್ವದಲ್ಲಿ ಸಂಚಲನ ಮೂಡಿಸಿತ್ತು. 2020ರ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್​ ಟ್ರಂಪ್​ ಪರಾಭವಗೊಂಡಿದ್ದರು. ಭಾರತದಲ್ಲೂ ಜೋ ಬೈಡನ್​ ಹೆಸರು ಮನೆ ಮಾತಾಗಿತ್ತು. ಕಾರಣ ಜೋ ಬೈಡನ್​ ಅಲ್ಲ, ಅಮೆರಿಕ ಉಪಾಧ್ಯಕ್ಷೆ(America Vice Persident) ಕಮಲಾ ಹ್ಯಾರಿಸ್(Kamala Harris)​. ಹೌದು, ಕಮಲಾ ಹ್ಯಾರಿಸ್​ ಭಾರತ ಮೂಲದವರು. ಅಮೆರಿಕದಲ್ಲಿ ಉಪಾಧ್ಯಕ್ಷೆಯಾದ ವಿಚಾರ ಸಖತ್​ ಸುದ್ದಿಯಾಗಿತ್ತು. ಆದರೆ ಈಗ ಅಮೆರಿಕದ ಅಧ್ಯಕ್ಷ ಜೋ ಬೈಡನ್​ ಹಾಗೂ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​ ನಡುವೆ ಬಿರುಕು ಮೂಡಿದ್ಯಾ ಎಂಬ ಪ್ರಶ್ನೆ ಮೂಡಿದೆ. ಇವರಿಬ್ಬರ ನಡುವೆ ಶೀತಲಸಮರ ನಡೆಯುತ್ತಿದೆ ಎಂಬ ವಿಚಾರ, ಅಮೆರಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಅದಕ್ಕೂ ಒಂದು ಕಾರಣವಿದೆ. ಅದು ಇಬ್ಬರು ಅಧಿಕಾರ ಪಡೆದ ಬಳಿಕ ಎಲ್ಲಾ ಕಾರ್ಯಕ್ರಮಗಳಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಇತ್ತೀಚೆಗೆ ಎಲ್ಲಿಯೂ ಇವರಿಬ್ಬರು ಜೊತೆಯಾಗಿ ಕಾಣಿಸಿಕೊಂಡಿಲ್ಲ. ಹೀಗಾಗಿ ಇಂಥದ್ದೊಂದು ಗುಸುಗುಸು ಶುರುವಾಗಿದೆ.

ಅಧ್ಯಕ್ಷ ಹುದ್ದೆ ಏರುತ್ತಾರಾ ಕಮಲಾ ಹ್ಯಾರಿಸ್​?

ಅಧಿಕಾರಕ್ಕೇರಿದ ದಿನಗಳಲ್ಲಿ ಜೋ ಬೈಡನ್​ ಹೆಚ್ಚು ಜನಪ್ರಿಯತೆಗಳಿಸಿದ್ದರು. ಆದರೆ ದಿನಕಳೆದಂತೆ ಜೋ ಬೈಡನ್​ ಜನಪ್ರಿಯ ಕಡಿಮೆಯಾಗುತ್ತಿದೆ. ಹೀಗಾಗಿ ಜೋ ಬೈಡನ್​ ಅವರಿಂದ ಕಮಲಾ ಹ್ಯಾರಿಸ್​ ಅಂತರ ಕಾಪಾಡಿಕೊಳ್ಳುತ್ತಿದ್ದಾರೆ. 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆ, ಅಥವಾ ಅದಕ್ಕೂ ಮೊದಲು ಅಮೆರಿಕ ಅಧ್ಯಕ್ಷ ಹುದ್ದೆ ಏರಲು ಕಮಲಾ ಹ್ಯಾರಿಸ್​ ಪ್ಲ್ಯಾನ್​ ಮಾಡಿಕೊಂಡಿರಬಹುದು ಎಂದು ಅಮೆರಿಕ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದೆ. ಬೈಡನ್​ ಹಾಗೂ ಕಮಲಾ ಪರ ವರದಿ ಪ್ರಸಾರ ಮಾಡುತ್ತಿದ್ದ ಮಾಧ್ಯಮಗಳೇ ಈ ರೀತಿ ವರದಿ ಮಾಡುತ್ತಿದೆ.

ಇದನ್ನು ಓದಿ : Ravi Chaudharyಯನ್ನು ಪ್ರಮುಖ ಪೆಂಟಗನ್ ಹುದ್ದೆಗೆ ನಾಮಿನೇಟ್ ಮಾಡಿದ Joe Biden

ಸಾರ್ವಜನಿಕವಾಗಿ  ಒಟ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ

ಸಾರ್ವಜನಿಕವಾಗಿ ಇಬ್ಬರೂ ಒಂದಾಗಿ ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ. ಹೀಗಾಗಿ ಈ ಗುಸುಗುಸು ಹೆಚ್ಚಾಗಿದೆ. ಇವರಿಬ್ಬರ ನಡುವೆ ಶೀತಲಸಮರ ಇರುವುದು ನಿಜ ಅಂತ ಹೇಳಲಾಗುತ್ತಿದೆ. ಕಳೆದ ಜನವರಿಯಲ್ಲಿ ಇಬ್ಬರು 20 ಕಾರ್ಯಕ್ರಮಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದರು. ಫ್ರೆಬ್ರವರಿಯಲ್ಲಿ ಈ ಸಂಖ್ಯೆ ಡಬಲ್​ ಆಗಿತ್ತು. ಆಗಸ್ಟ್​ ತಿಂಗಳಲ್ಲಿ ಮತ್ತೆ ಅದು 16ಕ್ಕೆ ಕುಸಿದಿತ್ತು. ಇನ್ನು ಅಕ್ಟೋಬರ್​ನಲ್ಲಿ ಕೇವಲ ಒಂದು ಕಾರ್ಯಕ್ರಮದಲ್ಲಿ ಮಾತ್ರ ಇಬ್ಬರು ಒಟ್ಟಾಗಿ ಭಾಗಿಯಾಗಿದ್ದರು.

ಕಮಲಾಗೆ ಕೆಲಸದ ಒತ್ತಡ?

ಕಮಲಾ ಹ್ಯಾರಿಸ್​ ತಮಗೆ ಸೂಕ್ತ ಖಾತೆ ನೀಡಿಲ್ಲ ಎಂಬ ಅಸಮಾಧಾನ ಹೊಂದಿದ್ದಾರೆ ಅಂತ ಒಂದು ಮಾಧ್ಯಮ ವರದಿ ಮಾಡಿದೆ. ಮತ್ತೊಂದು ಮಾಧ್ಯಮ ಜೈ ಬೈಡನ್​, ಕಮಲಾ ಹ್ಯಾರಿಸ್​​ ನಿರ್ವಹಿಸಲಾಗದಷ್ಟು ಕೆಲಸಗಳನ್ನು ಅವರಿಗೆ ವಹಿಸಿದ್ದಾರೆ. ಹೀಗಾಗಿ ಅವರು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿಲ್ಲ.ಕಳೆದ ಮಂಗಳವಾರ ಭಾರತೀಯ ಸಮುದಾಯ ಆಯೋಜಿಸಿದ್ದ ದೀಪಾವಳಿ ಕಾರ್ಯಕ್ರಮದಲ್ಲೂ ಕಮಲಾ ಹೆಚ್ಚು ಹೊತ್ತು ಕಾಣಿಸಿಕೊಳ್ಳಲಿಲ್ಲ. ಇದು ಅವರ ಕಾರ್ಯಭಾರ ಹೆಚ್ಚಾಗಿರುವುದರ ಉದಾಹರಣೆ ಎಂದು ಹೇಳಿದೆ.

ಇದನ್ನು ಓದಿ : ಚೀನಾ-ತೈವಾನ್ ನಡುವಿನ ಕಿತ್ತಾಟಕ್ಕೆ ಕಾರಣವೇನು..? ಭಾರತಕ್ಕೆ ಪರಿಣಾಮಗಳೇನು..? ಇಲ್ಲಿದೆ ವಿವರ..

ಬೈಡೆನ್‌ ವಿರುದ್ಧ ಲೈಂಗಿಕ ಕಿರುಕುಳ ಆರೋಪ

ಹಿಂದೆ ಡೆಮಾಕ್ರೆಟ್‌ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬೈಡೆನ್‌ ಮತ್ತು ಕಮಲಾ ಪ್ರತಿಸ್ಪರ್ಧಿಗಳಾಗಿದ್ದರು. ಆಗ ಬೈಡೆನ್‌ ವಿರುದ್ಧ ಲೈಂಗಿಕ ಕಿರುಕುಳ ಸೇರಿದಂತೆ ಹಲವು ವಿಷಯಗಳಲ್ಲಿ ಕಮಲಾ ಬಹಿರಂಗವಾಗಿಯೇ ಟೀಕೆ ಮಾಡಿದ್ದರು. ಆದರೆ ಬಳಿಕ ಬೈಡೆನ್‌ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಆಯ್ಕೆಯಾದ ಬಳಿಕ ಅಚ್ಚರಿಯ ರೀತಿಯಲ್ಲಿ ಕಮಲಾ ಅವರನ್ನೇ ಉಪಾಧ್ಯಕ್ಷೆ ಅಭ್ಯರ್ಥಿಯಾಗಿ ಆಯ್ಕೆ ಮಾಡಿಕೊಂಡಿದ್ದರು. ಆದರೆ ಇಲ್ಲಿಯವರೆಗೂ ಇವರಿಬ್ಬರ ನಡುವೆ ಭಿನ್ನಭಿಪ್ರಾಯ ಇರುವ ಬಗ್ಗೆ ಎಲ್ಲಿಯೂ ಹೇಳಿಕೊಂಡಿಲ್ಲ.
Published by:Vasudeva M
First published: