ಮನೆಯಿಂದ ಕಾಣೆಯಾಗಿದ್ದ ಜ್ಯೋತಿ ದಾಗಾ ಎಂಬಾಕೆ, ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಬಳಿಕ ಬಾವಿಯಲ್ಲಿ ಆಕೆಯ ಶವ ಪತ್ತೆಯಾಗಿತ್ತು. ಆಕೆ ಅಂತ್ಯಸಂಸ್ಕಾರ ನಡೆಯುವಾಗ ಯುವಕನೋರ್ವ ಚಿತೆಗೆ ಹಾರಿದ್ದಾನೆ.
ಮಧ್ಯಪ್ರದೇಶ: ತನ್ನ ಸೋದರ ಸಂಬಂಧಿಯ (Relative) ಸಾವಿನಿಂದ (Death) ಮನನೊಂದ ವ್ಯಕ್ತಿಯೋರ್ವ ಉರಿಯುತ್ತಿರುವ ಚಿತೆಗೆ ಹಾರಿ ಆತ್ಮಹತ್ಯೆ (Suicide) ಮಾಡಿಕೊಂಡಿರುವ ಆಘಾತಕಾರಿ ಘಟನೆ ಮಧ್ಯ ಪ್ರದೇಶದಲ್ಲಿ (Madhya Pradesh) ನಡೆದಿದೆ. ಸಾಗರ ಜಿಲ್ಲೆಯ ಮಜ್ಗವಾನ್ ಗ್ರಾಮದಲ್ಲಿ ಜ್ಯೋತಿ ದಾಗಾ ಎಂಬ ಮಹಿಳೆ ಬಾವಿಗೆ ಜಾರಿ ಸಾವನ್ನಪ್ಪಿದ್ದಾರೆ. ಆಕೆಯ ಅಂತ್ಯಕ್ರಿಯೆಯನ್ನು (Funeral) ನೆರವೇರಿಸಲಾಯಿತು. ಚಿತೆಗೆ ಬೆಂಕಿ ಹಚ್ಚಿದ ನಂತರ ಸಂಬಂಧಿಕರು ತಮ್ಮ, ತಮ್ಮ ಮನೆಗಳಿಗೆ ತೆರಳಿದರು. ಸ್ವಲ್ಪ ಸಮಯದ ನಂತರ ಸ್ಮಶಾನಕ್ಕೆ ಆಕೆಯ ಸೋದರ ಸಂಬಂಧಿ, 21 ವರ್ಷದ ಕರಣ್ ಎಂಬಾತ ಆಗಮಿಸಿದ್ದ. ಜನರೆಲ್ಲ ನೋಡ ನೋಡುತ್ತಿದ್ದಂತೆಯೇ ಅನಾಹುತ ಮಾಡಿಕೊಂಡು ಬಿಟ್ಟಿದ್ದಾನೆ.
ಚಿತೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಯುವಕ
ಮನೆಯಿಂದ ಕಾಣೆಯಾಗಿದ್ದ ಜ್ಯೋತಿ ದಾಗಾ ಎಂಬಾಕೆ, ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಬಳಿಕ ಬಾವಿಯಲ್ಲಿ ಆಕೆಯ ಶವ ಪತ್ತೆಯಾಗಿತ್ತು. ಇದಕ್ಕೆ ಕಾರಣ ಏನು ಅಂತ ತಿಳಿದು ಬಂದಿಲ್ಲ. ಮನೆಯವರೆಲ್ಲ ದುಃಖದಲ್ಲೇ ಆಕೆಯ ಅಂತ್ಯಸಂಸ್ಕಾರ ನೆರವೇರಿಸಿದರು. ಇನ್ನು ಜ್ಯೋತಿ ಸಾವಿನಿಂದ ಆಕೆಯ ಸೋದರ ಸಂಬಂಧಿ ವರುಣ್ ಎಂಬಾತ ತೀವ್ರ ದುಃಖಕ್ಕೆ ಒಳಗಾಗಿದ್ದ. ಸೋದರಿಯ ಅಂತ್ಯಸಂಸ್ಕಾರ ನೋಡಲು 450 ಕಿಲೋ ಮೀಟರ್ ದೂರದಿಂದ ಬೈಕ್ ಓಡಿಸಿಕೊಂಡು ಬಂದಿದ್ದ ಎನ್ನಲಾಗಿದೆ.
ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಯುವಕ
ತೀವ್ರ ದುಃಖದಲ್ಲೇ ಆಕೆಯ ಅಂತ್ಯಸಂಸ್ಕಾರ ಮಾಡಿದ್ದ ಜಾಗಕ್ಕೆ ಬಂದಿದ್ದ. ಆ ಯುವಕ ತನ್ನ ಸಹೋದರಿಯ ದೇಹಕ್ಕೆ ನಮಸ್ಕರಿಸಿ ನಂತರ ಆಕೆಯ ಚಿತಾಗಾರದಲ್ಲಿ ಮಲಗಿದ್ದಾನೆ. ಇದನ್ನು ಕಂಡ ಕೂಡಲೇ ಗ್ರಾಮಸ್ಥರು ಆತನ ಮನೆಯವರಿಗೆ ಮಾಹಿತಿ ನೀಡಿದ್ದಾರೆ. ಆದರೆ ಕುಟುಂಬಸ್ಥರು ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ಕರಣ್ ಚಿತೆಗೆ ಹಾರಿ ಗಂಭೀರವಾಗಿ ಗಾಯಗೊಂಡಿದ್ದರು. ನಂತರ ಕೂಡಲೇ ಆತನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಭಾನುವಾರ ಬೆಳಗ್ಗೆ ಕರಣ್ ಅಂತ್ಯ ಸಂಸ್ಕಾರವನ್ನು ಜ್ಯೋತಿ ಚಿತಾಗಾರದ ಬಳಿ ನೆರವೇರಿಸಲಾಯಿತು. ಇದೀಗ ಪೊಲೀಸರು ಈ ಘಟನೆ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ಬಹೇರಿಯಾ ಪೊಲೀಸ್ ಠಾಣೆಯ ಇನ್ಚಾರ್ಜ್ ದಿವ್ಯಾ ಪ್ರಕಾಶ್ ತ್ರಿಪಾಠಿ ತಿಳಿದ್ದಾರೆ.
ಬೆಂಗಳೂರಲ್ಲಿ ವಿದ್ಯಾರ್ಥಿಆತ್ಮಹತ್ಯೆ
ಅಮ್ಮ-ಅಪ್ಪನನ್ನು ಬಿಟ್ಟು ಹಾಸ್ಟೆಲ್ನಲ್ಲಿ ಉಳಿದುಕೊಂಡು ಕಲಿಯುವ ವಿದ್ಯಾರ್ಥಿಗಳು ಎಲ್ಲದಕ್ಕೂ ನಿರ್ಭಂದಗಳನ್ನು ಅನುಭವಿಸುತ್ತಾರೆ. ಕಾಲೇಜು, ಶಾಲೆ, ಅಥವಾ ಹಾಸ್ಟೆಲ್ಗಳಲ್ಲಿ ವಿದ್ಯಾರ್ಥಿಗಳ ಸುರಕ್ಷತೆಗಾಗಿ ಈ ರೀತಿಯ ನಿಯಮಗಳನ್ನು ಮಾಡಿರಲಾಗುತ್ತದೆ. ಬಹಳಷ್ಟು ಸಲ ಈ ನಿರ್ಬಂಧಗಳು ಮಕ್ಕಳಿಗೆ ತೊಂದರೆ ಎನಿಸಿದರೂ ಬಹಳಷ್ಟು ಸಲ ಇದು ಗುಣವೂ ಹೌದು. ಆದರೆ ಇಲ್ಲೊಂದು ಪ್ರಕರಣದಲ್ಲಿ ಹಾಸ್ಟೆಲ್ ರೂಲ್ಸ್ನಿಂದಾಗಿ 14 ವರ್ಷದ ಬಾಲಕ ಮಾಡಿಕೊಂಡಿರುವ ಘಟನೆ ನಡೆದಿದೆ. ಬೆಂಗಳೂರಿನ ಹೊಸಕೋಟೆಯ ಶಾಲಾ ಹಾಸ್ಟೆಲ್ನಲ್ಲಿ 14 ವರ್ಷದ ಬಾಲಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಹದಿಹರೆಯದ ಬಾಲಕ ಜೂನ್ 11ರಂದು ತನ್ನ ತಾಯಿಗೆ ಕರೆ ಮಾಡಿ ಶುಭಾಶಯ ಕೋರಲು ಮೊಬೈಲ್ ಫೋನ್ಗಾಗಿ ವಾರ್ಡನ್ಗೆ ವಿನಂತಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ವಾರ್ಡನ್ ಫೋನ್ ಕೊಟ್ಟಿರಲಿಲ್ಲ ಎನ್ನಲಾಗಿದೆ. ಭಾನುವಾರ ಬೆಳಗ್ಗೆ ಹಾಸ್ಟೆಲ್ನಲ್ಲಿದ್ದ ಇತರೆ ವಿದ್ಯಾರ್ಥಿಗಳು ಬಾಲಕ ಶವವನ್ನು ಕಂಡು ಹಾಸ್ಟೆಲ್ ಆಡಳಿತ ಮಂಡಳಿಗೆ ಮಾಹಿತಿ ನೀಡಿದ್ದಾರೆ. ಬಾಲಕನ ಪೋಷಕರು ದಿನದ ನಂತರ ಹಾಸ್ಟೆಲ್ ತಲುಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.
Published by:Annappa Achari
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ