ಒಡವೆ ಮಾರಿ ಜೇನು ಸಾಕಣೆ ಮಾಡಿದವ ಈಗ ಕೋಟ್ಯಧಿಪತಿ..!

ಜೇನು ಸಾಕಣೆ ಹಣಗಳಿಸಿದ ಗೋಬಿಂದರ್ ಸಿಂಗ್​ ರಾಂಧಾವ

ಜೇನು ಸಾಕಣೆ ಹಣಗಳಿಸಿದ ಗೋಬಿಂದರ್ ಸಿಂಗ್​ ರಾಂಧಾವ

ಉದ್ಯಮ ಕೈಗೂಡುತ್ತಿಲ್ಲ ಎಂದು ಭಾವಿಸಿದ ಇಬ್ಬರು ಸ್ನೇಹಿತರು ಉದ್ಯಮದಿಂದ ಹಿಂದೆ ಸರಿದರು. ಆಗ ಗೋಬಿಂದರ್ ಅವರೇ ಒಬ್ಬಂಟಿಯಾಗಿ ಉದ್ಯಮ ನಡೆಸಿದರು. ಉದ್ಯಮದ ಪ್ರಾರಂಭದಲ್ಲಿ ಹಲವು ತೊಂದರೆ, ಸವಾಲುಗಳನ್ನು ಎದುರಿಸಿದ ಇವರು ಹಣಕ್ಕಾಗಿ ಮನೆಯಲ್ಲಿದ್ದ ಬಂಗಾರದ ಒಡವೆಗಳನ್ನು ಮಾರಿದರು. ಆದರೆ ಇದೀಗ ಕೋಟಿ ಕೋಟಿ ಸಂಪಾದನೆ ಮಾಡುತ್ತಿದ್ದಾರೆ.

ಮುಂದೆ ಓದಿ ...
  • Share this:

ಹುಟ್ಟಿದ್ದು ರೈತಾಪಿ ಕುಟುಂಬದಲ್ಲಿ. ಪ್ರಾರಂಭಿಸಿದ್ದು ಸಣ್ಣ ವ್ಯವಹಾರ. ಇದೀಗ ಈತ ಕೋಟಿಗಳ ಸರದಾರ. ಜೇನುಹನಿಯ ವ್ಯವಹಾರದಲ್ಲಿ ಕೋಟಿಗಟ್ಟಲೆ ಸಂಪಾದಿಸುವ ಮೂಲಕ ಒಳ್ಳೆಯ ವ್ಯಾಪಾರಿಯಾಗಿ ಹೊರಹೊಮ್ಮಿದವರೇ ಗೋಬಿಂದರ್ ಸಿಂಗ್ ರಾಂಧಾವ. ಇವರು ಹುಟ್ಟಿದ್ದು ಪಂಜಾಬಿನ ಲಾಂಧ ಎಂಬ ಗ್ರಾಮದಲ್ಲಿ. ತಂದೆ-ತಾಯಿ ಕೃಷಿಕರು. 2003ರಲ್ಲಿ ಗ್ರಾಮದ ಮುಖಂಡರಾದ ಸರ್ದಾರ್ ಬಾಲದೇವ್ ಸಿಂಗ್ ಮತ್ತು ಸರದಾರ ಜಗಜೀತ್ ಸಿಂಗ್ ಕಪೂರ್ ಅವರ ಕೃಷಿ ಚಟುವಟಿಕೆಗಳಿಂದ ಪ್ರೇರೇಪಿತನಾದ ನನಗೆ ಕೃಷಿಯ ಮೇಲೆ ಒಲವು ಬೆಳೆಯಿತು. ಹಾಗಾಗಿ ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಕೃಷಿಗೆ ಸಂಬಂಧಿಸಿದ ಒಂದು ವಾರದ ತರಬೇತಿಯನ್ನು ಪಡೆದುಕೊಂಡೆ. ನಂತರ ಇಬ್ಬರು ಸ್ನೇಹಿತರ ಜೊತೆಗೂಡಿ ಜೇನು ಸಾಕಾಣಿಕೆ ಆರಂಭಿಸಲು ಯೋಚಿಸಿ 2.8 ಲಕ್ಷ ಸಾಲ ಪಡೆದು 120 ಜೇನು ಪೆಟ್ಟಿಗೆಗಳನ್ನು ಖರೀದಿಸಿದೆವು ಎಂದು ಗೋಬಿಂದರ್ ಸಿಂಗ್ ಅವರು ಉದ್ಯಮ ಆರಂಭಿಸಿದ ಬಗೆಯನ್ನು ದ ಬೆಟರ್ ಇಂಡಿಯಾ ಜೊತೆ ಹಂಚಿಕೊಂಡಿದ್ದಾರೆ.


ಆದರೆ ಉದ್ಯಮ ಕೈಗೂಡುತ್ತಿಲ್ಲ ಎಂದು ಭಾವಿಸಿದ ಇಬ್ಬರು ಸ್ನೇಹಿತರು ಉದ್ಯಮದಿಂದ ಹಿಂದೆ ಸರಿದರು. ಆಗ ಗೋಬಿಂದರ್ ಅವರೇ ಒಬ್ಬಂಟಿಯಾಗಿ ಉದ್ಯಮ ನಡೆಸಿದರು. ಉದ್ಯಮದ ಪ್ರಾರಂಭದಲ್ಲಿ ಹಲವು ತೊಂದರೆ, ಸವಾಲುಗಳನ್ನು ಎದುರಿಸಿದ ಇವರು ಹಣಕ್ಕಾಗಿ ಮನೆಯಲ್ಲಿದ್ದ ಬಂಗಾರದ ಒಡವೆಗಳನ್ನು ಮಾರಿದರು. ಆದರೆ ಇದೀಗ ಕೋಟಿ ಕೋಟಿ ಸಂಪಾದನೆ ಮಾಡುತ್ತಿದ್ದಾರೆ.


Scientists discover honeybees can solve maths problems in groundbreaking research
ಜೇನು ನೊಣ


ಗೋಪಿಂದರ್ ಪಯಣ


2004ರಲ್ಲಿ ಜೇನುನೊಣಗಳಿಗೆ ವರ್ರೋ ಮೈಟ್ ಎಂಬ ಸೋಂಕು ಕಾಣಿಸಿಕೊಂಡಿದ್ದು, ಎಲ್ಲ ಜೇನುನೊಣಗಳಿಗೂ ಈ ಸೋಂಕು ಹರಡಿತು. ಸುಮಾರು ಶೇ 90ರಷ್ಟು ಜೇನುನೊಣಗಳು ಸೋಂಕಿನಿಂದ ಸಾವನ್ನಪ್ಪಿದವು. ಇದರಿಂದ ಸಾಕಷ್ಟು ಜೇನುನೊಣದ ಡಬ್ಬಗಳು ಖಾಲಿಯಾದ ಪರಿಣಾಮ ನಷ್ಟ ಅನುಭವಿಸಿದೆ. ಕೆಲವೇ ಬಾಕ್ಸ್‍ಗಳು ಮಾತ್ರ ಉಳಿದುಕೊಂಡವು. ನಷ್ಟ ಅಧಿಕವಾಗಿಯೇ ಉಂಟಾಗಿತ್ತು. ಚೇತರಿಸಿಕೊಳ್ಳಲು ಆಗುತ್ತೋ ಅಥವಾ ಇಲ್ಲವೋ ಏನೋ ಎನ್ನುವಷ್ಟರ ಮಟ್ಟಿಗೆ ಬಾಧಿಸಿತು. ಇದೇ ವೇಳೆ ನನ್ನ ಇಬ್ಬರು ಸ್ನೇಹಿತರು ನನ್ನನ್ನು ಬಿಟ್ಟರು. ಒಬ್ಬರು ಆಸ್ಟ್ರೇಲಿಯಾಕ್ಕೆ ತೆರಳಿದರೆ, ಮತ್ತೊಬ್ಬರು ಹೊಸ ವ್ಯವಹಾರ ಆರಂಭಿಸಿದರು. ಆದರೂ ಕುಗ್ಗದೆ ಜೇನು ಸಾಕಾಣಿಕೆಯನ್ನು ಮುಂದುವರಿಸಿದರು.


ಇದನ್ನೂ ಓದಿ: Bigg Boss: ಅವಳು ದೊಡ್ಡ ಫಿಗರ್ ಆದ್ರೆ ನಾನು ಅಷ್ಟೆ ಎಂದ ಅರವಿಂದ್​: ತರಾಟೆಗೆ ತೆಗೆದುಕೊಂಡ ನಿಧಿ ಸುಬ್ಬಯ್ಯ..!


2009ರಲ್ಲಿ ಜೇನುಹನಿಯನ್ನು ಆಮದು ಮತ್ತು ರಫ್ತು ಮಾಡುವ ಪರವಾನಿಗೆಯನ್ನು ಪಡೆದರು. ಆದರೆ ವ್ಯವಹಾರ ಸಣ್ಣ ಮಟ್ಟದಲ್ಲೇ ಸಾಗುತ್ತಿತ್ತು. ಇದರಿಂದ ಚೇತರಿಸಿಕೊಳ್ಳುವುದು ಕಷ್ಟಸಾಧ್ಯವಾಗಿತ್ತು. ನಾನು ತಿಂಗಳಿಗೆ 20,000 ಸಂಪಾದಿಸುತ್ತಿದ್ದೆ. ಇದರ ಜೊತೆಗೆ ಸಾಲಗಳು, ಬಡ್ಡಿಯೇ ಲಕ್ಷಗಟ್ಟಲೇ ಬರುತ್ತಿತ್ತು ಎಂದು ತಮ್ಮ ಕಷ್ಟದ ದಿನಗಳನ್ನು ಮೆಲುಕು ಹಾಕಿದರು. ಅಂಗಡಿಯನ್ನು ಸ್ಥಾಪಿಸಲು ಗಣನೀಯ ಮೊತ್ತವನ್ನು ಹೂಡಿಕೆ ಮಾಡಿದ್ದೆ. ಮತ್ತೆ ಪ್ರಚಾರ ಹಾಗೂ ಮಾರ್ಕೆಟಿಂಗ್‍ಗೆ ಸ್ವಲ್ಪ ಹಣ ಉಳಿಸಿಕೊಂಡಿದ್ದೆ. ಆದರೆ ಮಾರಾಟ ಮಾತ್ರ ಹೆಚ್ಚಳವಾಗುತ್ತಿರಲಿಲ್ಲ. ಹಾಗಾಗಿ ಸಾಲದ ಬಡ್ಡಿಯನ್ನು ಭರಿಸುವ ಸಲುವಾಗಿ ಒಂದೆರಡು ಬಾರಿ ಚಿನ್ನಾಭರಣಗಳನ್ನು ಮಾರಾಟ ಮಾಡಿದೆ ಎಂದು ಹೇಳಿದರು.


ಅಭಿವೃದ್ಧಿ ಕಂಡಿತು ಜೇನು ಸಾಕಾಣಿಕೆ


ವರ್ಷಗಳು ಕಳೆದಂತೆ ನಿಧಾನವಾಗಿ ವ್ಯವಹಾರ ಕೈಗೆ ಹತ್ತಿತು. ಯುಎಸ್‍ಎಯಿಂದ ಬಹಳಷ್ಟು ಆರ್ಡರ್​ಗಳು ಬರಲು ಪ್ರಾರಂಭವಾದವು. 2012-13ರಲ್ಲಿ ರಫ್ತು ಮಾಡಲು ಆರಂಭಿಸಿದೆವು. ಇದು ಏರಿಕೆ ಕಂಡಿತು. ಇದರಿಂದ ಅಧಿಕ ಲಾಭ ಗಳಿಸಿದೆ. ದೇಶೀಯ ಮಾರುಕಟ್ಟೆಯ ಜೊತೆಗೆ, ಅವರ ಉತ್ಪನ್ನಗಳಿಗೆ ಯುಎಸ್‍ಎಯಿಂದ ಗಮನಾರ್ಹ ಬೇಡಿಕೆ ಇದೆ. ಈಗ ಯುರೋಪಿಯನ್ ಮಾರುಕಟ್ಟೆಯನ್ನು ಗುರಿಯಾಗಿಸಿಕೊಂಡಿದ್ದಾರೆ. ನಾನು ಜೇನುತುಪ್ಪ, ಬೀ ಮೇಣ, ಬೀ ಪರಾಗ,  ಜೇನುನೊಣ ವಿಷ, ರಾಯಲ್ ಜೆಲ್ಲಿ ಮತ್ತು ವ್ಯಾಪಾರ ಬೀ ವಸಾಹತುಗಳಂತಹ ಉತ್ಪನ್ನಗಳಿಂದ ವರ್ಷಕ್ಕೆ 4 ರಿಂದ 5 ಕೋಟಿ ಸಂಪಾದಿಸುತ್ತಿದ್ದೇನೆ ಎಂದು ಹೆಮ್ಮೆಯಿಂದ ಹೇಳುತ್ತಾರೆ.


ಇದೀಗ 310 ರೈತರನ್ನು ಒಳಗೊಂಡಿರುವ ಸ್ವಂತ ಸಂಸ್ಥೆ ಸ್ಥಾಪಿಸಿದ್ದು, ಇವರಿಗೆ ಜೇನು ಸಾಕಾಣಿಕೆಯ ತರಬೇತಿ ನೀಡುತ್ತಿದ್ದಾರೆ. ರೈತ ನರೇಂದರ್ ಪಾಲ್ ಸಿಂಗ್, ಕಳೆದ 10 ವರ್ಷಗಳಲ್ಲಿ ಗೋಬಿಂದರ್ ನನಗೆ ಉತ್ತಮ ಲಾಭದ ಭರವಸೆ ನೀಡಿದ ನಂತರ ಜೇನುತುಪ್ಪವನ್ನು ಮಾರಾಟ ಮಾಡಲು ನಾನು ಎರಡು ಅಂಗಡಿಗಳನ್ನು ಸ್ಥಾಪಿಸಿದೆ. ಇಂದು, ಮಾರಾಟ ಮತ್ತು ಇತರ ಖರ್ಚುಗಳನ್ನು ನಿಭಾಯಿಸಿ ತಿಂಗಳಿಗೆ 35,000 ರೂ ಲಾಭ ಗಳಿಸುತ್ತೇನೆ ಎಂದಿದ್ದಾರೆ.


ಇದನ್ನೂ ಓದಿ: Milana Nagaraj: ಬಿಳಿ ಬಣ್ಣದ ಡ್ರೆಸ್​ನಲ್ಲಿ ಸಿಂಪಲ್ ಲುಕ್ಸ್​ನಲ್ಲಿ ಮಿಲನಾ ನಾಗರಾಜ್​..!


ಜೇನುನೊಣಗಳನ್ನು ಕೊಲ್ಲಲು ರೈತರು ಕೀಟನಾಶಕಗಳನ್ನು ಸಿಂಪಡಿಸಲು ಒಲವು ತೋರುತ್ತಿರುವುದರಿಂದ ಕೆಲವು ಸವಾಲುಗಳು ಮುಂದುವರಿಯುತ್ತವೆ ಎಂದು ಗೋಬಿಂದರ್ ಹೇಳುತ್ತಾರೆ. ರೈತರಿಗೆ ಇದರ ಬಗ್ಗೆ ಅರಿವು ಮೂಡಿಸಲಾಗುತ್ತದೆ. ಆದರೆ ಬೀ ಬಾಕ್ಸ್ ಕಳ್ಳತನದ ಪ್ರಕರಣಗಳು ಮುಂದುವರಿದಂತೆ ನಷ್ಟಗಳು ಮುಂದುವರಿಯುತ್ತವೆ ಎಂದು ಅವರು ಹೇಳಿದ್ದಾರೆ.


ಅವರ ಪ್ರಯಾಣವನ್ನು ಹಿಂತಿರುಗಿ ನೋಡಿದಾಗ, ಗೋಬಿಂದರ್ ಅವರು ಯಾವುದೇ ಸವಾಲುಗಳು ಮತ್ತು ಕಠಿಣ ಸಮಯಗಳನ್ನು ಎದುರಿಸಲು ಹಿಂಜರಿಯುವುದಿಲ್ಲ. ಯಾವುದೇ ವ್ಯವಹಾರದಲ್ಲಿ ತಾಳ್ಮೆ ಅತ್ಯಂತ ಮಹತ್ವದ್ದಾಗಿದೆ. ಸಂಬಳ ಪಡೆಯುವ ಉದ್ಯೋಗಿ ಒಂದು ತಿಂಗಳಲ್ಲಿ ಆದಾಯ ಪಡೆಯುತ್ತಾನೆ. ಆದರೆ ಇದು ವ್ಯವಹಾರ. ಹೇಗೆ ಇದ್ದರೂ ನಾನು ಕೆಲಸ ಮಾಡುವುದನ್ನು ಆನಂದಿಸುತ್ತೇನೆ ಏಕೆಂದರೆ ಅದು ಉದ್ಯೋಗಕ್ಕಿಂತ ಹೆಚ್ಚು ಲಾಭದಾಯಕವಾಗಿದೆ ಎಂದು ಹೇಳುತ್ತಾರೆ.

Published by:Anitha E
First published: