HOME » NEWS » National-international » A PREMATURELY BORN BABY HAS CREATED A BUZZ ON SOCIAL MEDIA DUE TO THICK BROWN HAIR ON HIS HEAD STG AE

ನಿಗದಿತ ಸಮಯಕ್ಕಿಂತ ಮುಂಚೆ ಜನಿಸಿದ ಮಗುವಿನ ತಲೆಯಲ್ಲಿ ದಟ್ಟವಾದ ಕೂದಲು: ವೈರಲ್​ ಆಯ್ತು ಫೋಟೋ

ಉತ್ತರ ಐರ್ಲೆಂಡ್‍ನ ಜಾಕ್ಸನ್ ಜೇಮ್ಸ್ ಅಯರ್ಸ್ ಎಂಬ ಮಗು ಎಂಟು ವಾರಗಳ ಮೊದಲೇ ಜನಿಸಿದೆ. ಈ ಮಗುವಿಗೆ ಬೇರೆ ನವಜಾತ ಶಿಶುಗಳಿಗೆ ತಲೆಯಲ್ಲಿ ಇರುವಷ್ಟು ಪ್ರಮಾಣಕ್ಕಿಂತ ಹೆಚ್ಚಾಗಿಯೇ ದಟ್ಟವಾದ ಕೂದಲಿದೆ. ಇದು ಕುಟುಂಬದವರ ಜೊತೆಗೆ ನೆಟ್ಟಿಗರನ್ನೂ  ಆಶ್ಚರ್ಯಚಕಿತರನ್ನಾಗಿ ಮಾಡಿದೆ.

Trending Desk
Updated:June 19, 2021, 2:01 PM IST
ನಿಗದಿತ ಸಮಯಕ್ಕಿಂತ ಮುಂಚೆ ಜನಿಸಿದ ಮಗುವಿನ ತಲೆಯಲ್ಲಿ ದಟ್ಟವಾದ ಕೂದಲು: ವೈರಲ್​ ಆಯ್ತು ಫೋಟೋ
ವೈರಲ್​ ಆಗುತ್ತಿರುವ ಮಗುವಿನ ಫೋಟೋ
  • Share this:
ಕೆಲವೊಮ್ಮೆ ಗರ್ಭಿಣಿ ಮಹಿಳೆಯರಿಗೆ ನಿಗದಿತ ಸಮಯಕ್ಕಿಂತ ಮುಂಚಿತವಾಗಿಯೇ ಹೆರಿಗೆ ಆಗುತ್ತದೆ.  ಹೀಗೆ ನಿಗದಿತ ಸಮಯಕ್ಕಿಂರ ಮೊದಲೇ ಜನಿಸಿದ ಮಗುವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದಿಯಲ್ಲಿದೆ. ಯಾವ ಕಾರಣಕ್ಕೆ ಎಂದು ನೀವು ಕೇಳಬಹುದು. ಹೌದು, ತನ್ನ ತಲೆಯಲ್ಲಿರುವ ದಟ್ಟವಾದ ಕೂದಲಿನ ಕಾರಣಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯ ವಿಷಯವಾಗಿದೆ ಈ ಮಗು. ಅಕಾಲಿಕವಾಗಿ ಜನನವಾದ ಈ ಮಗು ಕಂದು ಬಣ್ಣದ ದಟ್ಟವಾದ ಕೂದಲನ್ನು ಹೊಂದಿದೆ. ಇದರಿಂದ ಇದೀಗ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಆಕರ್ಷಣೆಯ ಕೇಂದ್ರಬಿಂದುವಾಗಿದೆ.

ಉತ್ತರ ಐರ್ಲೆಂಡ್‍ನ ಜಾಕ್ಸನ್ ಜೇಮ್ಸ್ ಅಯರ್ಸ್ ಎಂಬ ಮಗು ಎಂಟು ವಾರಗಳ ಮೊದಲೇ ಜನಿಸಿದೆ. ಈ ಮಗುವಿಗೆ ಬೇರೆ ನವಜಾತ ಶಿಶುಗಳಿಗೆ ತಲೆಯಲ್ಲಿ ಇರುವಷ್ಟು ಪ್ರಮಾಣಕ್ಕಿಂತ ಹೆಚ್ಚಾಗಿಯೇ ದಟ್ಟವಾದ ಕೂದಲಿದೆ. ಇದು ಕುಟುಂಬದವರ ಜೊತೆಗೆ ನೆಟ್ಟಿಗರನ್ನೂ  ಆಶ್ಚರ್ಯಚಕಿತರನ್ನಾಗಿ ಮಾಡಿದೆ.

Premature Baby, Hair, Hyperinsulinism, Jaxon James Ayers, Social Media, Viral Photo,ಅಕಾಲಿಕ ಮಗು, ಕೂದಲು, ಹೈಪರ್‍ಇನ್ಸುಲಿನಿಸಮ್, ಜಾಕ್ಸನ್ ಜೇಮ್ಸ್ ಅಯರ್ಸ್, ಸಾಮಾಜಿಕ ಜಾಲತಾಣ, ವೈರಲ್ ಫೋಟೋ
ವೈರಲ್​ ಆಗುತ್ತಿರುವ ಮಗುವಿನ ಫೋಟೋ


ಜಾಕ್ಸನ್ ಜೇಮ್ಸ್ ಅಯರ್ಸ್‍ಗೆ ಈಗ ಮೂರು ತಿಂಗಳು. ಆದರೆ ಈ ಮಗುವಿಗೆ ವಯೋಸಹಜಕ್ಕಿಂತ ತ್ವರಿತಗತಿಯಲ್ಲಿ ಹಾಗೂ ದಟ್ಟವಾಗಿ ಕೂದಲು ಬೆಳೆಯುತ್ತಿದೆ. ಇದರ ಬಗ್ಗೆ ಹೇಳಿಕೊಳ್ಳಲು ಖುಷಿಯಾಗುತ್ತದೆ ಎಂದು ಹೇಳುತ್ತಾರೆ ಮಗುವಿನ ತಾಯಿ ಶಾನನ್ ಅಯರ್ಸ್​.

ಇದನ್ನೂ ಓದಿ: ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ ಸತೀಶ್​ ನೀನಾಸಂ:ಪೆಟ್ರೋಮ್ಯಾಕ್ಸ್​ ಟೀಸರ್​ ರಿಲೀಸ್ ಡೇಟ್​​ ಮುಂದಕ್ಕೆ

ಜಾಕ್ಸನ್ ಜೇಮ್ಸ್ ಅಯರ್ಸ್‍ನ ಜನನದ ನಂತರ ಸ್ಥಿತಿಯನ್ನು ಹೈಪರ್​ಇನ್ಸುಲಿನಿಸಂ ಎಂದು ಕರೆಯಲಾಗುತ್ತಿತ್ತು. ಹಾಗಾಗಿ ಈತನ ದೇಹದಲ್ಲಿರುವ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ನಿರಂತರವಾಗಿ ಹಾಲುಣಿಸಬೇಕಾಗಿತ್ತು ಮತ್ತು ನಿರಂತರವಾಗಿ ಸಮಯಕ್ಕೆ ಸರಿಯಾಗಿ ಔಷಧಿಗಳನ್ನು ಕೊಡುವ ಮೂಲಕ ಆತನ ಆರೋಗ್ಯವನ್ನು ಕಾಪಾಡಬೇಕಾಗಿತ್ತು. ಇದರ ಅಡ್ಡಪರಿಣಾಮವೇ ಕೂದಲ ಬೆಳವಣಿಗೆ. ಹೌದು, ಸಾಮಾನ್ಯ ಮಗುವಿಗಿಂತ ಹೆಚ್ಚಾಗಿ ಈತನಲ್ಲಿ ಹೆಚ್ಚಿನ ಕೂದಲು ಕಾಣಿಸಿಕೊಳ್ಳಲು ಕಾರಣವಾಯಿತು ಎಂದು ತಾಯಿ ಶಾನನ್ ಮಾಹಿತಿ ನೀಡಿದ್ದಾರೆ.

ಹೈಪರ್​ಇನ್ಸುಲಿನಿಸಂ ಇದು ಸುಮಾರು 30,000 ಮಕ್ಕಳಲ್ಲಿ ಒಂದು ಮಗುವಿಗೆ ಕಾಣಿಸಿಕೊಳ್ಳುತ್ತದೆ. ಈ ಮಗುವಿನ ಪ್ಯಾಂಕ್ರಿಸ್ ಅಧಿಕ ಪ್ರಮಾಣದ ಇನ್ಸುಲಿನ್ ಅನ್ನು ಬಿಡುಗಡೆ ಮಾಡುತ್ತದೆ. ಇದು ದೇಹದಲ್ಲಿ ಸಕ್ಕರೆ ಮಟ್ಟವನ್ನು ಅತಿ ಕಡಿಮೆಗೊಳಿಸುತ್ತದೆ. ಇದಕ್ಕೆ ಹಾಲುಣಿಸುವ ಮೂಲಕ ಹಾಗೂ ಡಯಾಕ್ಸೈಡ್ ಎಂದು ಕರೆಯಲ್ಪಡುವ ಔಷಧೋಪಚಾರದ ಮೂಲಕ ಮಗುವಿನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾಗುತ್ತದೆ. ಈ ಡಯಾಕ್ಸೈಡ್‍ನಿಂದ ಕೂದಲು ಅಧಿಕವಾಗಿ ಬೆಳೆಯಲು ಕಾರಣವಾಗುತ್ತದೆ. ಇದು ತಲೆ ಮಾತ್ರವಲ್ಲ ತೋಳು ಹಾಗೂ ಕಾಲುಗಳ ಮೇಲೂ ಬೆಳವಣಿಗೆಯಾಗುತ್ತದೆ ಎಂದು ಡೈಲಿ ಮೇಲ್‍ಗೆ ಮಗುವಿನ ತಾಯಿ ಶಾನನ್ ಮಾಹಿತಿ ನೀಡಿದ್ದಾರೆ.ನನ್ನ ಮಗುವನ್ನು ಹಾಗೂ ಆತನಿಗಿರುವ ಕೂದಲನ್ನು ಕಂಡು ಕೆಲವರು ಬೆರಗಾಗಿದ್ದಾರೆ. ಮತ್ತೆ ಕೆಲವರು ಬೇಗನೆ ಹೇರ್​ಕಟ್​ ಮಾಡಬಹುದು ಎಂದು ತಮಾಷೆ ಮಾಡುತ್ತಾರೆ ಎಂದು ಹೇಳುತ್ತಾರೆ ಶಾನನ್.

ಇದನ್ನೂ ಓದಿ: RIP Milkha Singh: ಫ್ಲೈಯಿಂಗ್​ ಸಿಖ್​ ಮಿಲ್ಕಾ ಸಿಂಗ್​ ನಿಧನ: ಪ್ರಧಾನಿ ಸೇರಿದಂತೆ ಗಣ್ಯರಿಂದ ಸಂತಾಪ..!

ಮಗು ಜನಿಸಿದ ನಂತರ ಆತನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದೆ. ನಾನು ಎಲ್ಲ ತಂದೆ-ತಾಯಿಯಂತೆ ನಾನೂ ತಾಯಿಯಾಗಿರುವುದನ್ನು ಹಾಗೂ ನಾನು ಮಗು ಪಡೆದಿರುವ ಖುಷಿಯನ್ನು ಇಡೀ ಜಗತ್ತಿಗೆ ತಿಳಿಸಬೇಕೆಂಬ ಖುಷಿಯಿಂದ ಹಂಚಿಕೊಂಡೆ. ನನ್ನ ತಾಯ್ತನದ ಬಗ್ಗೆ ಹೆಮ್ಮೆ ಎನಿಸಿತು. ಆದರೆ ನನ್ನ ಈ ಖುಷಿ ಇಷ್ಟೊಂದು ಮಟ್ಟಿಗೆ ವೈರಲ್ ಆಗುತ್ತದೆ ಎಂದು ನಾನು ಭಾವಿಸಿರಲಿಲ್ಲ. ಹೌದು, ನನ್ನ ಮಗುವಿನ ಕೂದಲಿನ ಕಾರಣಕ್ಕೆ ಇಷ್ಟರ ಮಟ್ಟಿಗೆ ವೈರಲ್ ಆಗಿದೆ ಎಂದು ತಿಳಿಯಿತು ಮತ್ತು ಜನರು ಕೂದಲನ್ನು ಕಂಡು ಅಚ್ಚರಿಗೊಂಡಿದ್ದಾರೆ ಎಂಬುದು ತಿಳಿಯಿತು ಎಂದಿದ್ದಾರೆ.

ಇನ್ನು, ಸಾಮಾಜಿಕ ಜಾಲತಾಣ ಎಂದ ಮೇಲೆ ಅಲ್ಲಿ ನಕಾರಾತ್ಮಕ ಹಾಗೂ ಸಕಾರಾತ್ಮಕ ಅಂಶಗಳೆರಡು ಇದ್ದೇ ಇರುತ್ತದೆ. ಕೆಲವರು ನಾನು ನನ್ನ ಮಗುವಿನ ಹುಬ್ಬನ್ನು ಹಾಗೂ ಕೂದಲನ್ನು ಎಡಿಟ್ ಮಾಡಿದ್ದೇನೆ ಎಂಬ ಆರೋಪಿಸಿದ್ದಾರೆ. ಅದರ ಹೊರತಾಗಿ ಬಂದಂತಹ ಕೆಲವು ಅಭಿಪ್ರಾಯಗಳು ನನ್ನ ಸಂತಸ ಇಮ್ಮಡಿಗೊಳಿಸಿದೆ ಎಂದು ಸಹ ಹೇಳಿಕೊಂಡಿದ್ದಾರೆ.
Published by: Anitha E
First published: June 19, 2021, 1:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories