• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • 2nd World War: 2ನೇ ಮಹಾಯುದ್ಧದಲ್ಲಿ ಸೆರೆಯಾಗಿದ್ದ ಕೈದಿ ಈಗ ಹೇಗಿದ್ದಾನೆ? ವೈರಲ್ ಆಯ್ತು ಇತಿಹಾಸಕಾರನ ಪೋಸ್ಟ್

2nd World War: 2ನೇ ಮಹಾಯುದ್ಧದಲ್ಲಿ ಸೆರೆಯಾಗಿದ್ದ ಕೈದಿ ಈಗ ಹೇಗಿದ್ದಾನೆ? ವೈರಲ್ ಆಯ್ತು ಇತಿಹಾಸಕಾರನ ಪೋಸ್ಟ್

ಡಾ. ಬೌಮನ್ ಅವರು ಶೇರ್​ ಮಾಡಿರುವ ಫೋಟೋ

ಡಾ. ಬೌಮನ್ ಅವರು ಶೇರ್​ ಮಾಡಿರುವ ಫೋಟೋ

ಡಾ. ಘೀ ಬೌಮನ್ ಅವರು ಭಾರತದಲ್ಲಿ 2ನೇ ಮಹಾಯುದ್ಧದ ಐತಿಹಾಸಿಕ ವಿಚಾರಗಳನ್ನು ಸಂಶೋಧಿಸುವಾಗ ವ್ಯಕ್ತಿಯೊಬ್ಬರ ವಿಚಾರಣೆಯ ಕುರಿತು ವಿಷಯಗಳು ಬಹಿರಂಗಗೊಂಡಿವೆ. ಆ ವಿಚಾರಣೆಯ ಕುರಿತು ಟ್ವಿಟರ್‌ನಲ್ಲಿ ಪೋಸ್ಟ್‌ ಶೇರ್‌ ಮಾಡುವ ಮೂಲಕ ಮಹಾಯುದ್ಧದ ಸಮಯ ಕೈದಿಗಳ ವಿಚಾರಣೆ ಹೇಗೆ ನಡೆಯುತ್ತಿತ್ತು ಎಂಬುದರ ಬಗ್ಗೆ ತಿಳಿಸಿದ್ಧಾರೆ.

ಮುಂದೆ ಓದಿ ...
  • Share this:

ಭಾರತದಲ್ಲಿ ಬ್ರಿಟಿಷ್‌ ಸಾಮ್ರಾಜ್ಯದ (British Empire) ಆಳ್ವಿಕೆಯಿದ್ದ ಸಮಯದಲ್ಲಿಯೇ ಎರಡನೇ ವಿಶ್ವ ಮಹಾಯುದ್ಧ (Second World War) ನಡೆದಿರುವ ಸಂಗತಿ ಇತಿಹಾಸ ಬಲ್ಲ ಪ್ರತಿಯೊಬ್ಬರಿಗೂ ತಿಳಿದಿರುವ ಸಂಗತಿ. ಆ ಮಹಾಯುದ್ಧದಲ್ಲಿ ಭಾರತದ ಪಾತ್ರ ಬಹು ಮುಖ್ಯವಾಗಿತ್ತು ಎಂದು ನೀವು ಈ ಹಿಂದೆ ಇತಿಹಾಸದ ಅಧ್ಯಯನದಲ್ಲಿ ಓದಿದ್ದೀರಿ. ಆದರೆ ನಮ್ಮ ಶಾಲಾ ಪಠ್ಯ ಪುಸ್ತಕಗಳಲ್ಲಿ ಯುದ್ಧದ ಇತಿಹಾಸದ (War History) ಬಗ್ಗೆ ಮತ್ತು ಶತ್ರು ಶಿಬಿರದಿಂದ ಭಾರತೀಯ ಸೈನಿಕರು ಕೈದಿಗಳಾಗಿದ್ದು ಹೇಗೆ? ಎಂಬುದನ್ನು ವಿವರಿಸುವಷ್ಟು ಪಠ್ಯಪುಸ್ತಕಗಳಲ್ಲಿ ವಿಸ್ತಾರದ ಮಾಹಿತಿ ನಮಗೆ ದೊರಕುವುದಿಲ್ಲ. ನಾವಿಂದು ಈ ಲೇಖನದಲ್ಲಿ ಮಹಾ ಯುದ್ಧದ ಮತ್ತೊಂದು ಮುಖವನ್ನು ನಿಮಗೆ ಪರಿಚಯ ಮಾಡಹೊರಟಿದ್ದೇವೆ.


ನಮ್ಮಲ್ಲಿ ಹೆಚ್ಚಿನವರು ಮಹಾಯುದ್ಧದ ರಾಜಕೀಯ ಬಿಕ್ಕಟ್ಟನ್ನು ನಿಭಾಯಿಸುವಲ್ಲಿ ನಾಯಕರ ಪಾತ್ರ ಎಷ್ಟಿತ್ತು? ಹೇಗಿತ್ತು? ಎಂಬುದರ ಬಗ್ಗೆ ಮಾತ್ರ ತಿಳಿದುಕೊಂಡಿದ್ದಾರೆ. ಆದರೆ ಯುದ್ಧದ ಬಗ್ಗೆ ಆಳವಾದ ಮಾಹಿತಿ ಮತ್ತು ಯುದ್ಧದಿಂದ ಉಂಟಾದ ಮೂಲಭೂತ ಸಮಸ್ಯೆಗಳ ಬಗ್ಗೆ ಯಾರಿಗೂ ಅಷ್ಟಾಗಿ ಗೊತ್ತಿಲ್ಲ. ಆದರೆ ಇದರ ಕುರಿತು ಇತಿಹಾಸಕಾರರು ಯುದ್ಧ ಚಿತ್ರಣದ ಬಗ್ಗೆ ಸ್ಪಷ್ಟ ಮಾಹಿತಿ ನೀಡಲು ಸಾಕಷ್ಟು ಸಮಯದಿಂದ ಶ್ರಮ ವಹಿಸುತ್ತಲೇ ಇದ್ದಾರೆ ಎಂಬುದು ನಿಜಾಂಶವಾಗಿದೆ.


ಇತಿಹಾಸಕಾರರು ಏನ್‌ ಹೇಳ್ತಿದಾರೆ?


ಡಾ. ಘೀ ಬೌಮನ್ ಅವರು ಭಾರತದಲ್ಲಿ ಎರಡನೇ ಮಹಾಯುದ್ಧದ ಕರಾಳ ಐತಿಹಾಸಿಕ ವಿಚಾರಗಳನ್ನು ಸಂಶೋಧಿಸುವಾಗ ವ್ಯಕ್ತಿಯೊಬ್ಬರ ವಿಚಾರಣೆಯ ಕುರಿತು ಆಸಕ್ತಿದಾಯಕ ವಿಷಯಗಳು ಬಹಿರಂಗಗೊಂಡಿವೆ. ಆ ವಿಚಾರಣೆಯ ಕುರಿತು ಟ್ವಿಟರ್‌ನಲ್ಲಿ ಪೋಸ್ಟ್‌ ಅನ್ನು ಶೇರ್‌ ಮಾಡುವ ಮೂಲಕ ಮಹಾಯುದ್ಧದ ಸಮಯ ಕೈದಿಗಳ ವಿಚಾರಣೆ ಹೇಗೆ ನಡೆಯುತ್ತಿತ್ತು ಎಂಬುದರ ಬಗ್ಗೆ ಜಗತ್ತಿಗೆ ತಿಳಿಸಿದ್ಧಾರೆ.


ಇದನ್ನೂ ಓದಿ: ಯೋಗಿ ಆದಿತ್ಯನಾಥ್‌ರನ್ನು ನನ್ನಷ್ಟು ಬೇರಾರೂ ಇಷ್ಟ ಪಡಲಾರರು; ಕಂಗನಾ ರಣಾವತ್‌


ಡಾ. ಬೌಮನ್ ಪ್ರಾರಂಭಿಸಿದ ವಿಸ್ತೃತ ಹುಡುಕಾಟಕ್ಕೆ ನಾವು ತೆರೆದುಕೊಳ್ಳುವ ಮೊದಲು, ಡಾ. ಬೌಮನ್ ಅಭ್ಯಾಸ ಮಾಡುವ ಇತಿಹಾಸಶಾಸ್ತ್ರದ ಬಗ್ಗೆ ಮತ್ತು ಬ್ರಿಟಿಷ್ ಸಾಮ್ರಾಜ್ಯದ ದಾಖಲೆಗಳ ಧೂಳಿನಲ್ಲಿ ಮರೆತು ಹೋದ ಅದೆಷ್ಟೋ ಪುಟಗಳಲ್ಲಿ ಇರುವ ವಿಶೇಷ ವರದಿಗಳ ಬಗ್ಗೆ ನಾವಿಲ್ಲಿ ಮೊದಲು ತಿಳಿದುಕೊಳ್ಳೋಣ.


ಡಾ. ಬೌಮನ್‌ ಅವರ ಸಂಶೋಧನೆಯ ಪ್ರಾಥಮಿಕ ಮೂಲಗಳಿವು


ಡಾ. ಬೌಮನ್‌ರ ಸಂಶೋಧನೆಯು ಡೈರಿಗಳು, ನಿಯತಕಾಲಿಕಗಳು, ಭಾಷಣಗಳು, ಸಂದರ್ಶನಗಳು, ಪತ್ರಗಳು, ಮೆಮೊಗಳು, ಛಾಯಾಚಿತ್ರಗಳನ್ನು ಒಳಗೊಂಡಿರುವ ಪ್ರಾಥಮಿಕ ಮೂಲಗಳನ್ನು ಆಧರಿಸಿದೆ. ಎರಡನೆಯ ಮಹಾಯುದ್ಧದ ಸಮಯದಲ್ಲಿ ಯುದ್ಧ ಕೈದಿಯಾಗಿ ಸೆರೆಹಿಡಿಯಲ್ಪಟ್ಟ ಜೈ ಲಾಲ್ ಎಂಬ ವ್ಯಕ್ತಿಯ ಬಗ್ಗೆ ಈ ಪ್ರಾಥಮಿಕ ಮೂಲಗಳಲ್ಲಿ ಸಿಕ್ಕಿದೆ ಎಂದು ಬೌಮನ್‌ ತಿಳಿಸಿದ್ದಾರೆ.


ಟ್ವಿಟರ್‌ನಲ್ಲಿ ವಿಶ್ವ ಮಹಾಯುದ್ಧ 2 ರ ಬಗ್ಗೆ ಪೋಸ್ಟ್‌ ಹಂಚಿಕೊಂಡ ಇತಿಹಾಸಕಾರ ಬೌಮನ್‌


“ಭಾರತೀಯ ಟ್ವಿಟರ್ - ನೀವು ನನಗೆ ಸಹಾಯ ಮಾಡಬಹುದೇ? ನಾನು ಎರಡನೇ ಮಹಾಯುದ್ಧದ ಸಮಯದಲ್ಲಿದ್ದ ಭಾರತೀಯ ಸೇನೆಯ ಯುದ್ಧ ಕೈದಿಯನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದೇನೆ. ಕೆಳಗಿನ ಈ ಫೋಟೋದಲ್ಲಿ ಆ ವ್ಯಕ್ತಿ ಇರಬಹುದು. ಅವರ ಹೆಸರು ಜೈ ಲಾಲ್, ಅವರು 1922 ರ ಸುಮಾರಿಗೆ ದೆಹಲಿಯ ಪಶ್ಚಿಮಕ್ಕೆ 90 ಕಿಮೀ ದೂರದ ಹರಿಯಾಣದಲ್ಲಿರುವ ಗೋಧನಾ ತೆಹಸಿಲ್‌ನ ರೋಹ್ಟಕ್‌ನ ಮದೀನಾ ಗ್ರಾಮದಲ್ಲಿ ಜನಿಸಿದವರಾಗಿದ್ದಾರೆ, ”ಎಂದು ಪೋಸ್ಟ್‌ನಲ್ಲಿ ಬರೆದಿದ್ದಾರೆ. ಅವರ ಅಧಿಕೃತ ಟ್ವಿಟರ್ ಅಕೌಂಟ್​ನಲ್ಲಿ ಏಪ್ರಿಲ್ 10, 2023 ರಂದು ಪೋಸ್ಟ್‌ ಮಾಡಿದ್ದಾರೆ.



“ ಜೈ ಲಾಲ್‌ ಅವರು ಎಲ್‌ ಅಲಮೈನ್‌ನಲ್ಲಿ ಸೆರೆಯಾಳಾಗಿದ್ದಾಗ ಅವರ ವಯಸ್ಸು ಬರೋಬ್ಬರಿ 49. ಅವರು 1942 ಜೂನ್‌ನಲ್ಲಿ ಎಲ್ ಅಲಮೈನ್‌ನಲ್ಲಿ ಬಂಧಿಯಾಗಿದ್ದಾಗ ಇಟಲಿ ಮತ್ತು ಫ್ರಾನ್ಸ್‌ನ ಜೈಲಿನಿಂದ ಎಸ್ಕೇಪ್ ಆಗುವುದರೊಂದಿಗೆ ಪಿಒಡಬ್ಲ್ಯೂ ಆಗಿ ಅಸಾಮಾನ್ಯ ವೃತ್ತಿಜೀವನವನ್ನು ಹೊಂದಿದ್ದರು. Haute-Saone ಡಿಪಾರ್ಟ್‌ಮೆಂಟ್‌ನಲ್ಲಿ #ಫ್ರೆಂಚ್‌ರೆಸಿಸ್ಟೆನ್ಸ್ ಗ್ರೂಪ್ ಅನ್ನು ಪ್ರಾರಂಭಿಸಿ ಉತ್ತಮವಾಗಿ ಕಾರ್ಯ ನಿರ್ವಹಿಸುವ ಸಲುವಾಗಿ ಜೈ ಲಾಲ್‌ ಅವರಿಗೆ ಇಂಡಿಯನ್ ಆರ್ಡರ್ ಆಫ್ ಮೆರಿಟ್ ನೀಡಲಾಯಿತು” ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪೋಸ್ಟ್‌ನಲ್ಲಿ ಬರೆದಿದ್ದಾರೆ.


ಡಾ. ಬೌಮನ್ ಅವರು ಶೇರ್​ ಮಾಡಿರುವ ಫೋಟೋ


ಬೌಮನ್‌ ಅವರು ಅಪರೂಪದ ಫೋಟೋವನ್ನು ಪೋಸ್ಟ್​ ಮಾಡುತ್ತ, “ ಜೈ ಲಾಲ್‌ ಅವರು 18 ನೇ ಭಾರತೀಯ ಪದಾತಿ ದಳದಲ್ಲಿದ್ದರು ಹಾಗೂ ರಾಯಲ್ ಇಂಡಿಯನ್ ಆರ್ಮಿ ಸರ್ವೀಸ್​​ ಕಾರ್ಪ್ಸ್‌ನಲ್ಲಿದ್ದರು. ಅವರ ಸೇವಾ ಸಂಖ್ಯೆ 904935. ಅವರ ನಿಖರವಾದ ಫೋಟೋ ನನ್ನ ಬಳಿ ಇಲ್ಲ. ಇದರಿಂದ ನನಗೆ ಭಯವಾಗಿದೆ” ಎಂದು ಡಾ. ಘೀ. ಬೌಮನ್‌ ಅವರು ಹಂಚಿಕೊಂಡಿದ್ದಾರೆ.


ಈ ಪೋಸ್ಟ್‌ ನೋಡಿರುವ ನೆಟಿಜನ್‌ಗಳು ತೀವ್ರ ಕುತೂಹಲಗೊಂಡಿದ್ದಾರೆ. ಅನೇಕ ಪ್ರತಿಕ್ರಿಯೆಗಳನ್ನು ನೋಡುಗರು ನೀಡುತ್ತಿದ್ದಾರೆ. ಆ ವ್ಯಕ್ತಿ ಯಾರು ಎಂದು ಇನ್ನು ನಿಖರವಾಗಿ ತಿಳಿಯುವ ಅವಶ್ಯಕತೆ ಖಂಡಿತ ಇದೆ. ಇನ್ನೂ ಕೆಲವು ಮಾಹಿತಿಯೊಂದಿಗೆ ಈ ವಿಷಯವನ್ನು ಮತ್ತಷ್ಟು ಸ್ಪಷ್ಟವಾಗಿ ಹೇಗೆ ಕಂಡುಹಿಡಿಯಬಹುದು ಎಂದು ಕೆಲವರು ಸೂಚಿಸಿದರೆ, ಇತರರು ಇತಿಹಾಸದ ಆಳತೆ ಬಹು ದೊಡ್ಡದು ಎಂದು ಪ್ರತಿಕ್ರಿಯೆ ನೀಡಿದ್ದಾರೆ.


ನೆಟಿಜನ್‌ಗಳ ಪ್ರತಿಕ್ರಿಯೆಗಳು ಹೇಗಿವೆ?


“ಯಾರೋ ನನಗೆ ಹೇಳಿದ ನೆನಪು , ಈ ಮುಂಚೆ L/Nk ಜೈ ಲಾಲ್ ಸೋನಿಪತ್ ಹರಿಯಾಣದಲ್ಲಿ ವಾಸಿಸುತ್ತಿದ್ದರು. ಆದರೆ ನಂತರ ಅವರ ಕುಟುಂಬವು ದೆಹಲಿಗೆ ಸ್ಥಳಾಂತರಗೊಂಡಿತು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯುತ್ತೇನೆ. ಈಗ ನನ್ನ ಹತ್ತಿರ ಅವರ ಸೇವಾ ಸಂಖ್ಯೆ ಇರುವುದರಿಂದ ಅವರನ್ನು ಹುಡುಕುವುದು ಸ್ವಲ್ಪ ಸುಲಭ” ಎಂದು STAVKA (@Maverickmusafir) ಎಂಬ ಅಧಿಕೃತ ಖಾತೆಯ ವ್ಯಕ್ತಿ ಪ್ರತಿಕ್ರಿಯೆ ನೀಡಿದ್ದಾರೆ.




“ ಅವರ ಈ ಹುಡುಕಾಟಕ್ಕೆ ಒಂದು ಸುಂದರ ಅಂತ್ಯವನ್ನು ಕಾತರದಿಂದ ಎದುರು ನೋಡುತ್ತಿದ್ದೇನೆ” ಎಂದು ಸೂರಜ್ ವಿ ನಾಯರ್ (@soorajvnair) ಏಪ್ರಿಲ್ 11, 2023 ರಂದು ಪ್ರತಿಕ್ರಿಯೆ ನೀಡಿದ್ದಾರೆ.

top videos


    “ಈ ಎಲ್ಲ ಪ್ರಯತ್ನಗಳನ್ನು ನೋಡಿ ಸಂತೋಷವಾಗುತ್ತದೆ. ಈ ಎಲ್ಲ ಪ್ರಯತ್ನಗಳು ಯಶಸ್ವಿಯಾಗುತ್ತವೆ ಎಂದು ಭಾವಿಸುತ್ತೇವೆ” ಎಂದು ಸಂಜಯ್ ಬಲರಾಮ್ (@SanjayBalram) ಏಪ್ರಿಲ್ 11, 2023 ರಂದು ಪ್ರತಿಕ್ರಿಯೆ ನೀಡಿದ್ದಾರೆ.

    First published: