ದೆಹಲಿ: ಕೇವಲ ಒಂದೇ ಒಂದು ಫೋನ್ ಕರೆಗೆ 4 ಸಚಿವರು ಸೇರಿದಂತೆ 11 ಜನ ಕೇಂದ್ರ ಸಚಿವರು ಬುಧವಾರ ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ಕೊಟ್ಟರು. ಈ ಎಲ್ಲಾ ಬದಲಾವಣೆಗಳು, ಬೆಳವಣಿಗೆಗಳು ನಡೆದಿದ್ದು ಬುಧವಾರ (ಜುಲೈ 7) ಸಂಜೆ ಹೊತ್ತಿಗೆ ಎಂದರೆ ಆಶ್ಚರ್ಯ ಪಡೆಬೇಕಾಗಿಲ್ಲ.
ರವಿಶಂಕರ್ ಪ್ರಸಾದ್, ಪ್ರಕಾಶ್ ಜಾವಡೇಕರ್, ಹರ್ಷವರ್ಧನ್, ರಮೇಶ್ ಪೋಖ್ರಿಯಾಲ್ ನಿಸಾಂಕ್ ಇವರೇ ಆ ನಾಲ್ಕು ಜನ ಹಿರಿಯ ಸಚಿವರು. ಸರ್ಕಾರದ ಉನ್ನತ ಮೂಲಗಳ ಹೇಳಿದಂತೆ ಒಂದೇ ಒಂದು ಫೋನ್ ಕರೆ ಇವರ ಸಚಿವ ಸ್ಥಾನವನ್ನ ಕಿತ್ತುಕೊಂಡಿತು ಎಂದಿದೆ.
ಎರಡನೇ ಅವಧಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಮೊದಲ ಕ್ಯಾಬಿನೆಟ್ ಪುನರ್ರಚನೆ ಮಾಡಲು ಸಿದ್ಧತೆ ನಡೆಸುತ್ತಿದ್ದಂತೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ತಮ್ಮ ಫೋನ್ ಕೈಗೆತ್ತಿಕೊಂಡು 11 ಕರೆಗಳನ್ನು ಮಾಡಿದರು. ನಡ್ಡಾ 11 ಸಚಿವರಿಗೆ ಕರೆ ಮಾಡಿ ನಿಮ್ಮ, ನಿಮ್ಮ ಪತ್ರಗಳನ್ನು ತಯಾರು ಮಾಡಿಕೊಳ್ಳಿ ಎಂದಷ್ಟೇ ಹೇಳಿದರು ಎಂದು ಸಿಎನ್ಎನ್- ನ್ಯೂಸ್ 18 ವರದಿ ಹೇಳಿದೆ.
ಪ್ರಧಾನಿ ಮೋದಿ ಅವರ ನೂತನ ಸವಿವ ಸಂಪುಟ ಹೊಸಾ ಮುಖ, ಮುನ್ನುಗ್ಗುವ, ಯುವಕರಿಗೆ ಹೆಚ್ಚಿನ ಆಧ್ಯತೆ ನೀಡಬೇಕು ಎನ್ನುವ ಅಜೆಂಡಾ ಇಟ್ಟುಕೊಂಡು ರಚಿಸಲಾಯಿತು. ಬುಧವಾರ ಸಂಜೆಯೇ ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ ಅವರು ರವಿಶಂಕರ್ ಪ್ರಸಾದ್, ಪ್ರಕಾಶ್ ಜಾವಡೇಕರ್, ಹರ್ಷವರ್ಧನ್, ರಮೇಶ್ ಪೋಖ್ರಿಯಾಲ್, ಸದಾನಂದ ಗೌಡ, ಸಂತೋಷ್ ಗಂಗ್ವಾರ್, ಸಂಜಯ್ ದೋತ್ರೆ, ದೇಬಸ್ರಿ ಚೌದರಿ, ರತನ್ ಲಾಲ್ ಕಠಾರಿಯಾ, ಪ್ರತಾಪ್ ಚಂದ್ರ ಸಾರಂಗಿ, ಬಾಬುಲ್ ಸುಪ್ರಿಯೋ ಅವರ ರಾಜಿನಾಮೆ ಪತ್ರಗಳನ್ನು ಅಂಗೀಕರಿಸಿದರು.
6 ಕ್ಯಾಬಿನೆಟ್ ದರ್ಜೆಯ ಸಚಿವರು, 1 ರಾಜ್ಯ (ಸ್ವತಂತ್ರ) 5 ರಾಜ್ಯ ಖಾತೆ ಸಚಿವರು ರಾಜಿನಾಮೆ ನೀಡಿದಂತಾಗಿದೆ. ತಮ್ಮ ಸ್ಥಾನಗಳಿಗೆ ರಾಜಿನಾಮೆ ನೀಡಿದ ತಕ್ಷಣ ಅನೇಕರು ತಮ್ಮ ಸಾಮಾಜಿಕ ಜಾಲತಾಣಗಳ ಸ್ವವಿರದಲ್ಲಿ ಬದಲಾವಣೆ ಮಾಡಿದ್ದಾರೆ. ರವಿಶಂಕರ್ ಪ್ರಸಾದ್ ತಮ್ಮ ಟ್ವೀಟರ್ ಬಯೋ ದಲ್ಲಿ ಪಾಟ್ನಾ ಸಾಹಿಬ್ ಲೋಕಸಭಾ ಕ್ಷೇತ್ರದ ಸದಸ್ಯ, ಬಿಹಾರ ಮತ್ತು ಬಿಜೆಪಿ ಕಾರ್ಯಕರ್ತ ಎಂದು ಬದಲಾಯಿಸಿದ್ದರೆ. ಪ್ರಕಾಶ್ ಜಾವಡೇಕರ್ ರಾಜ್ಯ ಸಭಾ ಸದಸ್ಯ ಎಂದು ಬದಲಾಯಿಸಿದ್ದಾರೆ.
ಇದನ್ನೂ ಓದಿ: BJP : ನಮ್ಮ ರಾಜ್ಯದಲ್ಲಿ ಮಾತ್ರ ಬಿಜೆಪಿ ರೂಲ್ಸ್ ಫಾಲೋ ಆಗ್ತಾ ಇಲ್ಲ: ಸಿಎಂ ಬದಲಾವಣೆಗೆ ಟಾಂಗ್ ಕೊಟ್ಟ ಸಂಸದ ಬಸವರಾಜು
ಹೊಸಾ ಸಚಿವರಲ್ಲಿ 8 ಮಂದಿ ವಕೀಲರಿದ್ದು, ನಾಲ್ಕು ಮಂದಿ ವೈದ್ಯರಿದ್ದಾರೆ, ಇಬ್ಬರು ಮಾಜಿ ಐಎಎಸ್ ಅಧಿಕಾರಿಗಳು, ಮತ್ತು ನಾಲ್ಕು ಮಂದಿ ಎಂಬಿಎ ಪದವೀಧರರು, ಇದರ ಜೊತೆಗೆ ಎಂಜಿನಿಯರಿಂಗ್ ಹಾಗೂ ಇತರೇ ಕೌಶಲಗಳನ್ನು ಹೊಂದಿರುವ ಉತ್ಸಾಹಿಗಳನ್ನೇ ತಮ್ಮ ಸುತ್ತಾ ಸೇರಿಸಿಕೊಂಡಿದ್ದಾರೆ. ಏಕೆಂದರೆ ಕೊರೋನಾ ಕಾಲದಲ್ಲಿ ಬಿಜೆಪಿಗೆ ಸಾಕಷ್ಟು ಹೊಡೆತಗಳು ಬಿದ್ದಿದ್ದು, ಜನರಲ್ಲಿ ಬಿಜೆಪಿ ಬೇಡ ಎನ್ನುವ ಅಭಿಪ್ರಾಯ ದಟ್ಟವಾಗುತ್ತಿದೆ. ಆದ ಕಾರಣ 2024 ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು 15 ಕ್ಯಾಬಿನೆಟ್ ದರ್ಜೆ, 28 ರಾಜ್ಯ ಸಚಿವ ಹುದ್ದೆಗಳನ್ನು ಹೊಸಾ ಮುಖಗಳಿಗೆ ನೀಡಿರುವುದು ಎನ್ನಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ