Jayalalitha: ಜಯಲಲಿತಾ ತಂದೆಯೇ ನನ್ನ ತಂದೆ, ಅವ್ರ ಆಸ್ತಿಯಲ್ಲಿ ನನಗೂ ಪಾಲು ಬೇಕು! ಕೋರ್ಟ್ ಮೆಟ್ಟಿಲೇರಿದ ವೃದ್ಧ

ಜೆ.ಜಯಲಲಿತಾ ಅವರ ಸಹೋದರ ಎಂದು ಹೇಳಿಕೊಂಡು ವ್ಯಕ್ತಿ ಓರ್ವರು ಮದ್ರಾಸ್ ಹೈಕೋರ್ಟ್‌ ಮೊರೆ ಹೋಗಿದ್ದಾರೆ. ಮೈಸೂರಿನ ವ್ಯಾಸಪುರಂನ ನಿವಾಸಿ, 83 ವರ್ಷದ ವಾಸುದೇವನ್ ಎನ್ನುವವರು ತಾನು ಜಯಲಲಿತಾ ಅವರ ಸಹೋದರ ಅಂತ ಹೇಳಿಕೊಂಡಿದ್ದಾರೆ.

ತಮಿಳುನಾಡು ಮಾಜಿ ಸಿಎಂ ಜಯಲಲಿತಾ

ತಮಿಳುನಾಡು ಮಾಜಿ ಸಿಎಂ ಜಯಲಲಿತಾ

  • Share this:
ತಮಿಳುನಾಡು: ಮಾಜಿ ಸಿಎಂ ಜೆ. ಜಯಲಲಿತಾಗೆ (Ex CM J. Jayallitha) ಸ್ವಂತ ಮಕ್ಕಳಿಲ್ಲ. ಸುಧಾಕರನ್ (Sudhakaran) ಎಂಬುವರು ಅವರ ದತ್ತು ಪುತ್ರ (adopted son) ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ನಾನು ಜಯಲಲಿತಾ ಕುಟುಂಬಸ್ಥ (Family) ಅಂತ ಹೇಳಿಕೊಂಡು, ಅವರ ಆಸ್ತಿಯಲ್ಲಿ (Property) ನನಗೂ ಪಾಲು ಸಿಗಬೇಕು ಅಂತ ಕೆಲವರು ಹೇಳುತ್ತಲೇ ಇದ್ದಾರೆ. ಇದೀಗ ಈ ಲಿಸ್ಟ್‌ಗೆ (List) ಹೊಸ ಸೇರ್ಪಡೆಯಾಗಿದೆ. ಇದೀಗ 83 ವರ್ಷದ ವ್ಯಕ್ತಿಯೊಬ್ಬರು ನಾನು ಜಯಲಲಿತಾ ಸಹೋದರ (Brother), ಜಯಲಲಿತಾ ಆಸ್ತಿಯಲ್ಲಿ ನನಗೂ ಪಾಲು (Share) ಬೇಕು ಅಂತ ಮದ್ರಾಸ್ ಹೈಕೋರ್ಟ್ (Madras High Court) ಮೆಟ್ಟಿಲೇರಿದ್ದಾರೆ. ಮೈಸೂರು (Mysore) ನಿವಾಸಿ, 83 ವರ್ಷದ ವಾಸುದೇವನ್ (Vasudevan) ಎಂಬುವರು ಇದೀಗ ಮದ್ರಾಸ್ ಹೈಕೋರ್ಟ್‌ನಲ್ಲಿ ಧಾವೆ ಹೂಡಿದ್ದಾರೆ.

“ನಾನು ಜಯಲಲಿತಾ ಸಹೋದರ” ಎಂದ ವೃದ್ಧ

ಜೆ.ಜಯಲಲಿತಾ ಅವರ ಸಹೋದರ ಎಂದು ಹೇಳಿಕೊಂಡು ವ್ಯಕ್ತಿ ಓರ್ವರು ಮದ್ರಾಸ್ ಹೈಕೋರ್ಟ್‌ ಮೊರೆ ಹೋಗಿದ್ದಾರೆ. ಮೈಸೂರಿನ ವ್ಯಾಸಪುರಂನ ನಿವಾಸಿ, 83 ವರ್ಷದ ವಾಸುದೇವನ್ ಎನ್ನುವವರು ತಾನು ಜಯಲಲಿತಾ ಅವರ ಸಹೋದರ ಅಂತ ಹೇಳಿಕೊಂಡಿದ್ದಾರೆ. ಜಯಲಲಿತಾ ಅವರ ಆಸ್ತಿಯಲ್ಲಿ ನನಗೂ ಶೇ. 50ರಷ್ಟು ಪಾಲು ಬೇಕು ಅಂತ ವಾಸುದೇವನ್ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

“ಜಯಲಲಿತಾ ತಂದೆಯೇ ನನ್ನ ತಂದೆ”

ಜಯಲಲಿತಾ ಅವರ ತಂದೆ ಜಯರಾಮ್ ಅವರೇ ನನ್ನ ತಂದೆ ಅಂತ ವಾಸುದೇವನ್ ಹೇಳಿದ್ದಾರೆ. ಜಯರಾಮ್ ಅವರ ಮೊದಲ ಪತ್ನಿ ಜೆ. ಜಯಮ್ಮ ಅವರಿಗೆ ನಾನು ಒಬ್ಬನೇ ಮಗ ಮತ್ತು ನಾನು ಅವರ ಏಕೈಕ ವಾರಸುದಾರ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Bharat Ratna: ಎಂಜಿಆರ್, ಜಯಲಲಿತಾಗೆ ಭಾರತ ರತ್ನ ನೀಡಿ! ಎಐಎಡಿಎಂಕೆ ಜನರಲ್ ಕೌನ್ಸಿಲ್ ಸಭೆಯಲ್ಲಿ ಶಿಫಾರಸು

“ನನ್ನ ತಂದೆಯ 2ನೇ ಹೆಂಡತಿಯ ಮಕ್ಕಳು”

ನನ್ನ ತಾಯಿ ಜಯಮ್ಮ ಅವರನ್ನು ಜಯರಾವ್​ ಅವರು ಮೊದಲೇ ಮದುವೆಯಾಗಿದ್ದರು. ನಂತರ ಅವರ ಪತ್ನಿಯಾಗಿ ಬಂದದ್ದು ವೇದವಲ್ಲಿ ಅಲಿಯಾಸ್ ವೇದಮ್ಮ. ಈ ಎರಡನೆಯ ಪತ್ನಿಗೆ ಹುಟ್ಟಿದ್ದು, ಜಯಕುಮಾರ್ ಮತ್ತು ಜಯಲಲಿತಾ. ಆದ್ದರಿಂದ ಜಯಲಲಿತಾ ಮತ್ತು ಜಯಕುಮಾರ್ ನನ್ನ ಸಹೋದರ ಮತ್ತು ಸಹೋದರಿಯರು ಎಂದು ವಾಸುದೇವನ್​ ಹೇಳಿದ್ದಾರೆ.

“ನನ್ನ ತಾಯಿಯೂ ಕೋರ್ಟ್‌ನಲ್ಲಿ ಕೇಸ್ ಹಾಕಿದ್ದರು”

1950ರಲ್ಲಿ ನನ್ನ ತಾಯಿ ಜಯಮ್ಮ ಮೈಸೂರು ನ್ಯಾಯಾಲಯದಲ್ಲಿ ಜೀವನಾಂಶಕ್ಕಾಗಿ ಮೊಕದ್ದಮೆ ಹೂಡಿದಾಗ ಆ ಪ್ರಕರಣದಲ್ಲಿ ನನ್ನ ತಂದೆಯ ಎರಡನೇ ಪತ್ನಿ ವೇದವಲ್ಲಿ, ಮಕ್ಕಳಾದ ಜಯಕುಮಾರ್ ಮತ್ತು ಜಯಲಲಿತಾ ಅವರನ್ನು ಪ್ರತಿವಾದಿಗಳಾಗಿ ಸೇರಿಸಲಾಗಿತ್ತು. ಇದೇ ನಾನು ಅವರ ಸಹೋದರ ಎನ್ನುವುದಕ್ಕೆ ಸಾಕ್ಷಿ. ಈ ಪ್ರಕರಣ ಇತ್ಯರ್ಥದಲ್ಲಿ ಅಂತ್ಯಗೊಂಡಿತು ಅಂತ ಅವರು ತಿಳಿಸಿದ್ದಾರೆ.

“ನಾನೇ ಜಯಲಲಿತಾ ಉತ್ತರಾಧಿಕಾರಿ”

ಜಯಕುಮಾರ್ ಅವರು ಜಯಲಲಿತಾ ಅವರಿಗಿಂತ ಮುಂಚೆಯೇ ನಿಧನರಾದರು. ಹಾಗಾಗಿ ಇಂದು ಜಯಲಲಿತಾ ಕುಟುಂಬದಲ್ಲಿ ಇರುವುದು ನಾನೊಬ್ಬನೇ. ನಾನು ಸಹೋದರನಾಗಿ ಜಯಲಲಿತಾ ಅವರ ನೇರ ಉತ್ತರಾಧಿಕಾರಿ. ಹಾಗಾಗಿ ಜಯಲಲಿತಾ ಅವರ ಆಸ್ತಿಯಲ್ಲಿ ಶೇ 50ರಷ್ಟು ನನಗೆ ನೀಡಬೇಕು ಎಂದಿರುವ ವಾಸುದೇವನ್​, ಈ ಕುರಿತು ಆದೇಶ ಹೊರಡಿಸುವಂತೆ ಕೋರ್ಟ್‌ಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: AIADMK Tussle: ಪಳನಿಸ್ವಾಮಿ vs ಪನ್ನೀರಸೆಲ್ವಂ: ಎಐಎಡಿಎಂಕೆ ಪಕ್ಷದಿಂದ ಪನ್ನೀರಸೆಲ್ವಂ ಬಣವೇ ಉಚ್ಛಾಟನೆ

“ಆದೇಶ ತಿದ್ದುಪಡಿ ಮಾಡಿ ನನ್ನನ್ನೂ ಸೇರಿಸಿ”

ಮದ್ರಾಸ್ ಹೈಕೋರ್ಟ್ 2020 ರಲ್ಲಿ ತೀರ್ಪು ನೀಡಿ ಜೆ. ದೀಪಕ್ ಮತ್ತು ಜೆ. ದೀಪಾ ಮಾತ್ರ ಜಯಲಲಿತಾ ಅವರ ಉತ್ತರಾಧಿಕಾರಿಗಳು ಎಂದು ಹೇಳಿತ್ತು. ಆ ತೀರ್ಪಿನಲ್ಲಿ ನನ್ನನ್ನು ಸೇರಿಸಿ ತಿದ್ದುಪಡಿ ಮಾಡಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.
Published by:Annappa Achari
First published: