• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • NMACC: ಭಾರೀ ಸದ್ದು ಮಾಡ್ತಿರೋ ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್‌ನ ಉದ್ದೇಶವೇನು? ಇಲ್ಲಿದೆ ಡೀಟೇಲ್ಸ್‌

NMACC: ಭಾರೀ ಸದ್ದು ಮಾಡ್ತಿರೋ ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್‌ನ ಉದ್ದೇಶವೇನು? ಇಲ್ಲಿದೆ ಡೀಟೇಲ್ಸ್‌

Nita Mukesh Ambani Cultural Centre

Nita Mukesh Ambani Cultural Centre

ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್ ಭಾರತದ ಅತ್ಯಂತ ಶ್ರೀಮಂತ ಸಾಂಸ್ಕೃತಿಕ ಕಲೆಗಳನ್ನು ಜಗತ್ತಿಗೆ ಮುಂದೆ ಪ್ರದರ್ಶನ ಮಾಡುವ ಮತ್ತು ವಿಶ್ವದ ಅತ್ಯುತ್ತಮ ಸಾಂಸ್ಕೃತಿಕ ಕಲೆಗಳನ್ನು ಭಾರತಕ್ಕೆ ಸ್ವಾಗತಿಸುವ ಕೇಂದ್ರವಾಗಲಿದೆ ಎಂದು ನೀತಾ ಅಂಬಾನಿ ಅಭಿಪ್ರಾಯಪಟ್ಟಿದ್ದಾರೆ.

  • News18 Kannada
  • 3-MIN READ
  • Last Updated :
  • Mumbai, India
  • Share this:

ಮುಂಬೈ: ಮುಂಬೈನ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ಈಗ ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್ (ಎನ್‌ಎಂಎಸಿಸಿ) (Neeta Mukesh Ambani Cultural Centre) ಸದ್ದು ಮಾಡ್ತಿದೆ. ಈಗಾಗಲೇ ಅದ್ಧೂರಿ ಕಾರ್ಯಕ್ರಮದ ಮೂಲಕ ನೀತಾ ಮುಕೇಶ್ ಅಂಬಾನಿ (Neeta Mukesh Ambani) ಕಲ್ಚರಲ್ ಸೆಂಟರ್ ಅನಾವರಣಗೊಂಡಿದ್ದು, ಬಾಲಿವುಡ್‌ ಸೇರಿದಂತೆ, ದೇಶದ ಸ್ಟಾರ್‌ ವ್ಯಕ್ತಿಗಳು ಈ ಮೆಗಾ ಈವೆಂಟ್‌ಗೆ ಸಾಕ್ಷಿಯಾಗಿದ್ದಾರೆ.


ರಿಲಯನ್ಸ್ ಫೌಂಡೇಶನ್‌ನ ಸಂಸ್ಥಾಪಕಿ ಮತ್ತು ಅಧ್ಯಕ್ಷೆಯಾಗಿರುವ ನೀತಾ ಮುಕೇಶ್ ಅಂಬಾನಿ ಅವರ ಕನಸಿನ ಕೂಸಾಗಿರುವ ಎನ್‌ಎಂಎಸಿಸಿ ಸಂಸ್ಥೆ, ಭಾರತೀಯ ಕಲೆ ಮತ್ತು ಸಂಸ್ಕೃತಿಯ ಶ್ರೇಷ್ಠತೆಯನ್ನು ಜಗತ್ತಿನಾದ್ಯಂತ ಪರಿಚಯಿಸಲು ಮತ್ತು ಜಗತ್ತಿನ ಗಮನ ಸೆಳೆಯುವ ನಿಟ್ಟಿನಲ್ಲಿ ಕೆಲಸ ಮಾಡಲಿದೆ. ಮುಂಬೈನ ಮಧ್ಯಭಾಗದಲ್ಲಿರುವ ಈ ಕಲ್ಚರಲ್ ಸೆಂಟರ್‌, ಭಾರತದ ಅತ್ಯಂತ ಅತ್ಯಾಧುನಿಕ, ಅಪ್ರತಿಮ ಮತ್ತು ವಿಶ್ವ-ದರ್ಜೆಯ ಸಾಂಸ್ಕೃತಿಕ ಕೇಂದ್ರ ಎನಿಸಿಕೊಳ್ಳಲಿದೆ. ಈಗಾಗಲೇ ಚೊಚ್ಚಲ ಸಾಂಸ್ಕೃತಿಕ ಕಲೆಗಳ ಪ್ರದರ್ಶನಕ್ಕೂ ಎನ್‌ಎಂಎಸಿಸಿ ಸಿದ್ಧಗೊಳ್ಳುತ್ತಿದೆ.


ಇದನ್ನೂ ಓದಿ: Nita Ambani: ನೀತಾ ಮುಕೇಶ್ ಅಂಬಾನಿಯ ಮನಮೋಹಕ ಭರತನಾಟ್ಯಕ್ಕೆ ಮನಸೋತ ಬಾಲಿವುಡ್ ದಿಗ್ಗಜರು!


ಈ ಬಗ್ಗೆ ಮಾತನಾಡಿರುವ ರಿಲಯನ್ಸ್ ಫೌಂಡೇಶನ್‌ನ ಸಂಸ್ಥಾಪಕಿ ಮತ್ತು ಎನ್‌ಎಂಎಸಿಸಿ ಅಧ್ಯಕ್ಷೆಯಾಗಿರುವ ನೀತಾ ಮುಕೇಶ್ ಅಂಬಾನಿ, ಈ ಸಾಂಸ್ಕೃತಿಕ ಕೇಂದ್ರವನ್ನು ಹುಟ್ಟುಹಾಕಿದ್ದೇ ಒಂದು ಪವಿತ್ರವಾದ ಕೆಲಸವಾಗಿದೆ. ಸಿನಿಮಾ ಮತ್ತು ಸಂಗೀತ, ನೃತ್ಯ ಮತ್ತು ನಾಟಕ, ಸಾಹಿತ್ಯ ಮತ್ತು ಜಾನಪದ, ಕಲೆ ಮತ್ತು ಕರಕುಶಲ, ವಿಜ್ಞಾನ ಮತ್ತು ಆಧ್ಯಾತ್ಮಿಕತೆ ಹೀಗೆ ನಮ್ಮ ಕಲಾತ್ಮಕ ಮತ್ತು ಸಾಂಸ್ಕೃತಿಕ ಪರಂಪರೆಗೆ ಉತ್ತೇಜನ ನೀಡಲು ಮತ್ತು ಅವುಗಳನ್ನು ಉಳಿಸಿಕೊಂಡ ಬರಲು ನಾವು ವೇದಿಕೆಯನ್ನು ಕಲ್ಪಿಸಲು ಉತ್ಸುಕರಾಗಿದ್ದೇವೆ ಎಂದು ಹೇಳಿದರು.


ಅಲ್ಲದೇ, ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್ ಭಾರತದ ಅತ್ಯಂತ ಶ್ರೀಮಂತ ಸಾಂಸ್ಕೃತಿಕ ಕಲೆಗಳನ್ನು ಜಗತ್ತಿಗೆ ಮುಂದೆ ಪ್ರದರ್ಶನ ಮಾಡುವ ಮತ್ತು ವಿಶ್ವದ ಅತ್ಯುತ್ತಮ ಸಾಂಸ್ಕೃತಿಕ ಕಲೆಗಳನ್ನು ಭಾರತಕ್ಕೆ ಸ್ವಾಗತಿಸುವ ಕೇಂದ್ರವಾಗಲಿದೆ ಎಂದು ನೀತಾ ಅಂಬಾನಿ ಅಭಿಪ್ರಾಯಪಟ್ಟಿದ್ದಾರೆ.


ಎನ್‌ಎಂಎಸಿಸಿ ಉದ್ದೇಶವೇನು?


ಯುಎಸ್‌ ಅಥವಾ ಯೂರೋಪ್‌ನಲ್ಲಿ ಇರುವಂತಹ ಅತ್ಯಾಧುನಿಕ ಮಟ್ಟದ ಸೌಕರ್ಯಗಳನ್ನು ಭಾರತೀಯ ಚಿತ್ರಕಲೆಗಾರರು, ಕಲಾವಿದರು ಮತ್ತು ನಿರ್ದೇಶಕರಿಗೆ ಒದಗಿಸಿ ಎನ್‌ಎಂಎಸಿಸಿ ಸಾಂಸ್ಕೃತಿಕ ಕೇಂದ್ರವನ್ನು ಅಂತರಾಷ್ಟ್ರೀಯ ತಾಣವನ್ನಾಗಿ ಪರಿವರ್ತಿಸುವುದು ನೀತಾ ಅಂಬಾನಿಯವರ ಗುರಿಯಾಗಿದೆ. ಸದ್ಯ ನಾಲ್ಕು ಅಂತಸ್ತಿನ ಎನ್‌ಎಂಎಸಿಸಿ ಕೇಂದ್ರದ ಒಳಗೆ ಮೂರು ಚಿತ್ರಮಂದಿರಗಳು ಮತ್ತು 16,000 ಚದರ ಅಡಿ ವಿಸ್ತೀರ್ಣದ ಪ್ರದರ್ಶನ ಸ್ಥಳವನ್ನು ಕಾಣಬಹುದು. ಆ ಪೈಕಿ 2,000 ಆಸನಗಳ ಗ್ರ್ಯಾಂಡ್ ಥಿಯೇಟರ್ ಬೃಹತ್ ವೇದಿಕೆ ಆಗಿದ್ದರೆ ಇನ್ನೊಂದು ಕಮಲದ ಆಕಾರದಲ್ಲಿ 8,400 ವಿಸ್ತೀರ್ಣದ ಸ್ವರೋಸ್ಕಿ ಕ್ರಿಸ್ಟಲ್ಸ್‌ ನೋಡುಗರನ್ನು ಬೆರಗುಗೊಳಿಸುತ್ತದೆ.


ಇದನ್ನೂ ಓದಿ: NMACC Event: ನೀತಾ ಅಂಬಾನಿ ಕನಸಿನ ಕಲ್ಚರಲ್ ಸೆಂಟರ್ ಉದ್ಘಾಟನೆಯಲ್ಲಿ ಬಾಲಿವುಡ್ ದಿಗ್ಗಜರ ಸಮಾಗಮ


ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್‌ನ ಉದ್ಘಾಟನಾ ಸಮಾರಂಭದ ವೇಳೆ ನೀತಾ ಅಂಬಾನಿ ಅವರು ರಘುಪತಿ ರಾಘವ ರಾಜಾರಂ ಹಾಡಿನ ಭರತನಾಟ್ಯಂ ನೃತ್ಯ ಮಾಡುವ ಮೂಲಕ ಎಲ್ಲರನ್ನೂ ಅಚ್ಚರಿ ಮೂಡಿಸಿದ್ದರು. ಕೆಂಪು ಬಣ್ಣದ ಲೆಹಂಗಾ ಮತ್ತು ತಿಳಿ ಗುಲಾಬಿ ಬಣ್ಣದ ದುಪ್ಪಟ್ಟಾ ಧರಿಸಿ ಭರತನಾಟ್ಯ ನೃತ್ಯ ಮಾಡಿರುವ ನೀತಾ ಮುಕೇಶ್ ಅಂಬಾನಿ ಅವರು ನೆರೆದಿದ್ದ ಎಲ್ಲರಿಗೂ ಸಾಂಸ್ಕೃತಿಕ ರಸದೌತಣವನ್ನು ನೀಡಿದ್ದರು.  ತನ್ನ 6ನೇ ವಯಸ್ಸಿನಿಂದಲೂ ಭರತನಾಟ್ಯ ನೃತ್ಯ ಮಾಡುತ್ತಿದ್ದ ನೀತಾ ಅಂಬಾನಿ ಅವರು ಅತ್ಯುತ್ತಮ ನೃತ್ಯ ಕಲಾವಿದೆಯೂ ಹೌದು.

top videos



    ನೀತಾ ಅಂಬಾನಿ ಅವರು ಎನ್‌ಎಂಎಸಿಸಿ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಮಾಡಿದ್ದ ಭರತನಾಟ್ಯ ನೃತ್ಯದ ವಿಡಿಯೋವನ್ನು ಬಾಲಿವುಡ್ ದಿಗ್ಗಜರು ತಮ್ಮ ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿ ಶೇರ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.

    First published: