ಕೆಎಸ್ಆರ್​ಟಿಸಿ ಬಸ್ ಎದುರು ಅಡ್ಡಾದಿಡ್ಡಿ ಬೈಕ್ ಓಡಿಸಿದ ಸವಾರನಿಗೆ ಬಿತ್ತು ಭಾರೀ ದಂಡ

ಬಸ್​ ಚಾಲಕ, ನಿರ್ವಾಹಕ, ಪ್ರಯಾಣಿಕರು ಎಷ್ಟೇ ಮನವಿ ಮಾಡಿಕೊಂಡರೂ ಬೈಕ್​ ಸವಾರ ಮಾತ್ರ ಮಧ್ಯೆ ರಸ್ತೆಯಲ್ಲಿ ಸಾಗುವುದು, ಅಡ್ಡಾದಿಡ್ಡಿ ಬೈಕ್​ ಓಡಿಸುವುದು ಮಾಡುತ್ತಲೇ ಇದ್ದ. ನಾಲ್ಕು ಕಿಮೀ ವರೆಗೆ ಹೀಗೆ ಸಾಗಿಯೇ ಇತ್ತು.

ksrtc

ksrtc

 • Share this:
  ಕಾಸರಗೋಡು (ಅಕ್ಟೋಬರ್​ 2): ರಸ್ತೆಯಲ್ಲಿ ಹೋಗುವಾಗ ನೀವು ನಿಧಾನವಾಗಿ ಸಾಗುತ್ತಿದ್ದೀರಿ ಎಂದಾದರೆ ಹಿಂದಿನಿಂದ ಬರುವ ವಾಹನಗಳಿಗೆ ಮುಂದೆ ತೆರಳಲು ಅನುವು ಮಾಡಿಕೊಡಬೇಕು. ಆದರೆ ಕೆಲವರು ದುರುದ್ದೇಶದಿಂದ ಹಿಂದಿನಿಂದ ಬರುವ ವಾಹನಗಳಿಗೆ ತೆರಳಲು ದಾರಿ ಬಿಟ್ಟು ಕೊಡುವುದಿಲ್ಲ. ಇದೇ ರೀತಿ ಮಾಡಿದ ಬೈಕ್​ ಚಾಲಕ ಈಗ ದೊಡ್ಡ ಮೊತ್ತದ ದಂಡ ತೆತ್ತಿದ್ದಾನೆ! ಕಣ್ಣೂರಿನಿಂದ ಕಾಸರಗೋಡಿಗೆ ಕೇರಳ ರಸ್ತೆ ಸಾರಿಗೆ ಸಂಸ್ಥೆಗೆ (ಕೆಎಸ್​ಆರ್​ಟಿಸಿ) ಸೇರಿದ ಬಸ್​ ಸಂಚರಿಸುತ್ತಿತ್ತು. ಬಸ್​ ತುಂಬ ಪ್ರಯಾಣಿಕರೂ ಇದ್ದರು. ಪೆರುಂಬಾ ಸಮೀಪ ಬೈಕ್​ ಸವಾರನೋರ್ವ ಬಸ್​ನ ಹಿಂದಿಕ್ಕಿ ಮುಂದೆ ಸಾಗಿದ್ದ. ಬಸ್​ ಓವರ್​ ಟೇಕ್​ ಮಾಡಿದ ಬೆನ್ನಲ್ಲೇ ಬೈಕ್​ನ ವೇಗವನ್ನು ಕಡಿಮೆ ಮಾಡಿದ್ದ.

  ಬಸ್​ ಚಾಲಕ ಕೆಲವು ನಿಮಿಷ ತಾಳ್ಮೆಯಿಂದ ಇದನ್ನು ನೋಡಿದ್ದ. ಆದರೆ, ಬೈಕ್​ ಸವಾರ ವೇಗವಾಗಿ ಸಾಗುವಂತೆಯಾಗಲೀ ಅಥವಾ ದಾರಿ ಬಿಟ್ಟುಕೊಡುವಂತೆಯಾಗಲೀ ಕಾಣಲಿಲ್ಲ. ಹೀಗಾಗಿ ನಿರಂತರವಾಗಿ ಹಾರ್ನ್​ ಮಾಡಿದ್ದ. ಇದರಿಂದ ಕಿರಿಕಿರಿಗೊಳಗಾದ ಬಸ್​ ಪ್ರಯಾಣಿಕರು ಹಾರ್ನ್​ ಮಾಡದಂತೆ ಬಸ್​ ಚಾಲಕನಿಗೆ ತಾಕೀತು ಮಾಡಿದ್ದರು. ಈ ವೇಳೆ ಬಸ್​ ಚಾಲಕ ಬೈಕ್​ ಸಾವರ ತೊಂದರೆ ಕೊಡುತ್ತಿರುವ ಬಗ್ಗೆ ಪ್ರಯಾಣಿಕರಿಗೆ ತಿಳಿಸಿದ್ದ.

  ಬಸ್​ ಚಾಲಕ, ನಿರ್ವಾಹಕ, ಪ್ರಯಾಣಿಕರು ಎಷ್ಟೇ ಮನವಿ ಮಾಡಿಕೊಂಡರೂ ಬೈಕ್​ ಸವಾರ ಮಾತ್ರ ಮಧ್ಯೆ ರಸ್ತೆಯಲ್ಲಿ ಸಾಗುವುದು, ಅಡ್ಡಾದಿಡ್ಡಿ ಬೈಕ್​ ಓಡಿಸುವುದು ಮಾಡುತ್ತಲೇ ಇದ್ದ. ನಾಲ್ಕು ಕಿಮೀ ವರೆಗೆ ಹೀಗೆ ಸಾಗಿಯೇ ಇತ್ತು. ಈ ಘಟನೆಯನ್ನು ಕೆಲ ಪ್ರಯಾಣಿಕರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಬೈಕ್​ನ ಸಂಖ್ಯೆಯನ್ನೂ ಉಲ್ಲೇಖ ಮಾಡಿದ್ದರು.  ವಿಡಿಯೋ ವೈರಲ್​ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಮೋಟಾರು ವಾಹನ ಇಲಾಖೆ ಬೈಕ್​ ಸವಾರನ ಮನೆಗೆ ತೆರಳಿ ಕ್ಲಾಸ್​ ತೆಗೆದುಕೊಂಡಿದೆ. ಅಷ್ಟೇ ಅಲ್ಲ ಬರೋಬ್ಬರಿ 10,500 ರೂಪಾಯಿ ದಂಡ ವಿಧಿಸಿದೆ. ಈ ಮೂಲಕ ಅಡ್ಡಾದಿಡ್ಡಿ ಬೈಕ್​ ಓಡಿಸಿದವನಿಗೆ ಪಾಠ ಕಲಿಸಿದೆ.
  Published by:Rajesh Duggumane
  First published: