Train Crash: ಗೂಡ್ಸ್‌-ಪ್ಯಾಸೆಂಜರ್‌ ರೈಲುಗಳ ಪರಸ್ಪರ ಮುಖಾಮುಖಿ; ಕನಿಷ್ಟ 16 ಸಾವು, 85 ಮಂದಿಗೆ ಗಾಯ!

ಗೂಡ್ಸ್‌-ಪ್ಯಾಸೆಂಜರ್‌ ರೈಲು ಡಿಕ್ಕಿ

ಗೂಡ್ಸ್‌-ಪ್ಯಾಸೆಂಜರ್‌ ರೈಲು ಡಿಕ್ಕಿ

ರೈಲು ಅಪಘಾತ ನಡೆದ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಅಗ್ನಿಶಾಮಕ ದಳದ ವಕ್ತಾರ, ಎರಡು ರೈಲುಗಳ ಮಧ್ಯೆ ಸಂಭವಿಸಿದ ಅಪಘಾತದ ತೀವ್ರತೆಗೆ ರೈಲು ನಜ್ಜುಗುಜ್ಜಾಗಿದೆ. ಅತ್ಯಂತ ಸವಾಲಿನ ರೀತಿಯಲ್ಲಿ ರೈಲುಗಳನ್ನು ಸ್ಥಳಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಮುಂದೆ ಓದಿ ...
  • Share this:

ಗ್ರೀಸ್‌: ಉತ್ತರ ಗ್ರೀಸ್‌ನಲ್ಲಿ (Northern Greece) ಸಂಭವಿಸಿದ ಭೀಕರ ರೈಲು (Train Accident) ಅಪಘಾತದಲ್ಲಿ ಕನಿಷ್ಠ 16 ಮಂದಿ ಸಾವನ್ನಪ್ಪಿ 80ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿರುವ ಆಘಾತಕಾರಿ ಘಟನೆ ಸಂಭವಿಸಿದೆ. ಬುಧವಾರ ಮುಂಜಾನೆ ಈ ಆಘಾತಕಾರಿ ದುರ್ಘಟನೆ ಸಂಭವಿಸಿದ್ದು, ಪ್ರಯಾಣಿಕ ರೈಲೊಂದು (Passenger Train) ಎದುರಿನಿಂದ ಬರುತ್ತಿದ್ದ ಸರಕು ಸಾಗಾಣೆಯ ರೈಲಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಈವರೆಗೆ ಪ್ರಯಾಣಿಕ ರೈಲಿನಿಲ್ಲಿದ್ದ 16 ಮಂದಿ ಸಾವನ್ನಪ್ಪಿದ್ದಾರೆ. 85ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.


ಉತ್ತರ ಅಥೆನ್ಸ್‌ನಿಂದ ಸುಮಾರು 380 ಕಿಮೀ ದೂರದಲ್ಲಿರುವ ಟೆಂಪೆ ಎಂಬಲ್ಲಿ ಈ ರೈಲು ಅಪಘಾತ ಸಂಭವಿಸಿದ್ದು, ಅಪಘಾತದ ತೀವ್ರತೆಗೆ ರೈಲು ಭೋಗಿಗಳಿಗೆ ಬೆಂಕಿನ ಹತ್ತಿಕೊಂಡಿದೆ. ಇದರಿಂದ ಮೂರು ಭೋಗಿಗಳು ಸುಟ್ಟು ಭಸ್ಮವಾಗಿದ್ದು, ಈ ಭೋಗಿಗಳಲ್ಲಿದ್ದ 25ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದೆ. ಗಾಯಾಳುಗಳನ್ನು ಸ್ಥಳೀಯ ಲಾರಿಸ್ಸಾದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.


ಇದನ್ನೂ ಓದಿ: Tumkur: ನವ ದಂಪತಿ ಬಾಳಲ್ಲಿ ಘೋರ ದುರಂತ, 2 ತಿಂಗಳ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ ಅಪಘಾತದಲ್ಲಿ ಸಾವು!


ದಟ್ಟವಾದ ಹೊಗೆಯ ಮಧ್ಯೆಯೂ ಮುಂದುವರಿದ ರಕ್ಷಣಾ ಕಾರ್ಯ


ರೈಲು ಅಪಘಾತ ನಡೆದ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಅಗ್ನಿಶಾಮಕ ದಳದ ವಕ್ತಾರ ವಾಸಿಲಿಸ್ ವರ್ತಕೊಯಾನಿಸ್, ಎರಡು ರೈಲುಗಳ ಮಧ್ಯೆ ಸಂಭವಿಸಿದ ಅಪಘಾತದ ತೀವ್ರತೆಗೆ ರೈಲು ನಜ್ಜುಗುಜ್ಜಾಗಿದೆ. ಅತ್ಯಂತ ಸವಾಲಿನ ರೀತಿಯಲ್ಲಿ ರೈಲುಗಳನ್ನು ಸ್ಥಳಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಿದ್ದಾರೆ. ಅಲ್ಲದೇ ಹತ್ತಾರು ಆಂಬುಲೆನ್ಸ್‌ಗಳು ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಹೆಡ್‌ಲಾಂಪ್‌ಗಳನ್ನು ಧರಿಸಿ ರಕ್ಷಣಾ ಸಿಬ್ಬಂದಿ ದಟ್ಟವಾದ ಹೊಗೆಯ ಮಧ್ಯೆಯೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.


ಇದನ್ನೂ ಓದಿ: Metro Pillar Accident: “ಒಂದು ಕೋಟಿ ಕೊಟ್ರೆ ನನ್ನ ಮಗಳು, ಮೊಮ್ಮಗನನ್ನು ಮರಳಿ ಕೊಡ್ತೀರಾ?” ಮೆಟ್ರೋ​ ಅಪಘಾತದಲ್ಲಿ ನೊಂದ ತಂದೆಯ ಪ್ರಶ್ನೆ


ಅಲ್ಲದೇ, ಅಪಘಾತದ ಕಾರಣದಿಂದ ಉಂಟಾದ ಬೆಂಕಿ ತಗುಲಿ ದೇಹವನ್ನು ಸುಟ್ಟುಕೊಂಡಿರುವ ಪ್ರಯಾಣಿಕರಿಗೆ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಆರೈಕೆ ಮಾಡಲಾಗುತ್ತಿದೆ. ಇನ್ನು ಈ ಭಯಾನಕ ಘಟನೆಯನ್ನು ವಿವರಿಸಲು ಕಷ್ಟ ಸಾಧ್ಯ, ಇದು ಅತೀ ಭೀಕರ ಅಪಘಾತವಾಗಿದೆ ಎಂದು ಕೇಂದ್ರ ಥೆಸ್ಸಾಲಿ ಪ್ರದೇಶದ ಪ್ರಾದೇಶಿಕ ಗವರ್ನರ್ ಕೋಸ್ಟಾಸ್ ಅಗೋರಾಸ್ಟೋಸ್ ಅವರು ದೂರದರ್ಶನಕ್ಕೆ ಹೇಳಿಕೆ ನೀಡಿದ್ದಾರೆ.


ಕ್ರೇನ್‌ಗಳನ್ನು ಬಳಸಿ ರಕ್ಷಣಾ ಕಾರ್ಯಾಚರಣೆ


ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಸರ್ಕಾರಿ ಅಧಿಕಾರಿಗಳು, ರೈಲಿನ ಮುಂಭಾಗದ ಭಾಗವನ್ನು ಒಡೆದು ಹಾಕಲಾಗಿದೆ. ನಾವು ಕ್ರೇನ್‌ಗಳನ್ನು ಬಳಸಿ ರೈಲಿನ ಅವಶೇಷಗಳು ಮತ್ತು ಭೋಗಿಗಳನ್ನು ಮೇಲಕ್ಕೆ ಎತ್ತಲು ಪ್ರಯತ್ನ ಪಡುತ್ತಿದ್ದೇವೆ. ಅಪಘಾತ ಸಂಭವಿಸಿದ ಪ್ರದೇಶದ ಸುತ್ತಮುತ್ತ ಕಲ್ಲುಗಳ ರಾಶಿ ಇರೋದರಿಂದ ತೆರವು ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ. ರಕ್ಷಣಾ ಕಾರ್ಯಾಚರಣೆಗೆ ಸೇನೆಯ ಸಹಕಾರ ಕೋರಿದ್ದೇವೆ ಎಂದು ಹೇಳಿದ್ದಾರೆ.


ರೈಲು ನಿರ್ವಾಹಕ ಹೆಲೆನಿಕ್ ಟ್ರೈನ್ ಅವರು ಹೇಳುವ ಪ್ರಕಾರ, ಅಪಘಾತಕ್ಕೆ ಗುರಿಯಾದ ಪ್ರಯಾಣಿಕ ರೈಲಿನಲ್ಲಿ ಒಟ್ಟು 350 ಪ್ರಯಾಣಿಕರು ಇದ್ದರು. ಈ ಪ್ಯಾಸೆಂಜರ್ ರೈಲು ಅಥೆನ್ಸ್‌ನಿಂದ ಉತ್ತರ ನಗರದ ಥೆಸಲೋನಿಕಿಗೆ ತೆರಳುತ್ತಿತ್ತು ಎಂದು ಹೇಳಿದ್ದಾರೆ.


ಇದನ್ನೂ ಓದಿ: Rajiv Gandhi: ಟಿಪ್ಪು ಸುಲ್ತಾನ್ ಸೆಟ್‌ನಲ್ಲಿ ನಡೆದಿತ್ತು ಅಗ್ನಿ ಅವಘಡ; ಮಾಜಿ ಪ್ರಧಾನಿ ರಾಜೀವ್ ಗಾಂಧಿ ಸಹಾಯ ಸ್ಮರಿಸಿದ ನಟ ಸಂಜಯ್ ಖಾನ್

Published by:Avinash K
First published: