• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • Toshakhana Case: ಬಂಧನ ಭೀತಿಯಲ್ಲಿದ್ದ ಇಮ್ರಾನ್‌ಖಾನ್‌ಗೆ ಬಿಗ್ ರಿಲೀಫ್‌; ವಾರಂಟ್‌ ರದ್ದುಗೊಳಿಸಿದ ನ್ಯಾಯಾಲಯ!

Toshakhana Case: ಬಂಧನ ಭೀತಿಯಲ್ಲಿದ್ದ ಇಮ್ರಾನ್‌ಖಾನ್‌ಗೆ ಬಿಗ್ ರಿಲೀಫ್‌; ವಾರಂಟ್‌ ರದ್ದುಗೊಳಿಸಿದ ನ್ಯಾಯಾಲಯ!

ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್

ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್

ಪಿಟಿಐ ಪಕ್ಷದ ಕಾರ್ಯಕರ್ತರು ನ್ಯಾಯಾಲಯದ ಕಟ್ಟಡದ ಮೇಲೆ ಕಲ್ಲು ತೂರಾಟ ನಡೆಸಿದಾಗ ಪೊಲೀಸರು ಅಶ್ರುವಾಯು ಸಿಡಿಸಿ ಅವರನ್ನು ಚದುರಿಸಿದರು. ಈ ವೇಳೆ ನ್ಯಾಯಾಲಯದ ಒಳಗಿದ್ದ ಜನರು ಕೂಡ ತೊಂದರೆಗಳನ್ನು ಎದುರಿಸಿದರು.

 • News18 Kannada
 • 2-MIN READ
 • Last Updated :
 • New Delhi, India
 • Share this:

ಲಾಹೋರ್‌: ತೋಷಖಾನಾ ಪ್ರಕರಣಕ್ಕೆ (Toshakhana Case) ಸಂಬಂಧಿಸಿದಂತೆ ಇಮ್ರಾನ್ ಖಾನ್ (Imran Khan) ವಿರುದ್ಧ ಹೊರಡಿಸಲಾಗಿದ್ದ ಬಂಧನ ವಾರಂಟ್ ಅನ್ನು ಪಾಕಿಸ್ತಾನದ ನ್ಯಾಯಾಲಯ ರದ್ದುಗೊಳಿಸಿದೆ. ಜೊತೆಗೆ ಪೊಲೀಸರು ಮತ್ತು ಪಿಟಿಐ ಕಾರ್ಯಕರ್ತರ ನಡುವಿನ ಘರ್ಷಣೆಯ ನಂತರ ಉಂಟಾದ ಗೊಂದಲದಿಂದ ಪ್ರಕರಣದ ವಿಚಾರಣೆಯನ್ನು ಮಾರ್ಚ್ 30 ಕ್ಕೆ ಮುಂದೂಡಿದ್ದಾರೆ.


ಚುನಾವಣಾ ಸಮಯದಲ್ಲಿ ತನ್ನ ಆಸ್ತಿ ಘೋಷಣೆ ವೇಳೆ ಉಡುಗೊರೆಗಳ ವಿವರಗಳನ್ನು ಮರೆಮಾಚಿದ್ದಕ್ಕಾಗಿ ಪಾಕಿಸ್ತಾನದ ಚುನಾವಣಾ ಆಯೋಗವು ಸಲ್ಲಿಸಿದ ದೂರಿನ ವಿಚಾರಣೆಗೆ ಹಾಜರಾಗಲು ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಮುಂದೆ ಹಾಜರಾಗಲು ಇಮ್ರಾನ್‌ಖಾನ್ ಲಾಹೋರ್‌ನಿಂದ ಇಸ್ಲಾಮಾಬಾದ್‌ಗೆ ಆಗಮಿಸಿದರು. ಈ ವೇಳೆ ನ್ಯಾಯಾಲಯದ ಸಂಕೀರ್ಣದ ಹೊರಗೆ ಅವರ ಬೆಂಬಲಿಗರು ಮತ್ತು ಪೊಲೀಸರ ನಡುವೆ ಘರ್ಷಣೆಯ ನಡೆಯಿತು. 


ಇದನ್ನೂ ಓದಿ: Explained: ಹತ್ಯೆಗೀಡಾಗ್ತಾರಾ ಪಾಕಿಸ್ತಾನ ಮಾಜಿ ಪಿಎಂ ಇಮ್ರಾನ್ ಖಾನ್? ನರೆ ರಾಷ್ಟ್ರದಲ್ಲಿ ಸಂಘರ್ಷದ ಕಿಡಿ!


ದೋಷಾರೋಪಣೆ ಮಾಡದೆ ವಾಪಸ್


ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ನ್ಯಾಯಾಲಯದ ಮುಂದೆ ನಡೆದ ಹೈಡ್ರಾಮಾದಿಂದಾಗಿ ಜಡ್ಜ್ ಮುಂದೆ ಹಾಜರಾಗಲು ಕೆಲವು ಗಂಟೆ ಹಿಡಿಯಿತು. ನ್ಯಾಯಾಧೀಶರು ಕೂಡ ಇಮ್ರಾನ್‌ ಖಾನ್‌ಗೆ ಕಾದು ಅವರು ಬಂದ ನಂತರ ಖಾನ್ ಸಹಿ ಪಡೆದು ಕೊಂಡರು. ಈ ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಜಾಫರ್ ಇಕ್ಬಾಲ್ ಅವರು, ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ವಿರುದ್ಧ ತೋಷಖಾನಾ ಭ್ರಷ್ಟಾಚಾರ ಪ್ರಕರಣದಲ್ಲಿ ಹೊರಡಿಸಲಾಗಿದ್ದ ಬಂಧನ ವಾರಂಟ್‌ಗಳನ್ನು ರದ್ದುಗೊಳಿಸಿದರು, ಜೊತೆಗೆ ಅವರನ್ನು ದೋಷಾರೋಪಣೆ ಮಾಡದೆ ಮನೆಗೆ ತೆರಳಲು ಅನುಮತಿಸಿದರು.


ಪಿಟಿಐ ಪಕ್ಷದ ಕಾರ್ಯಕರ್ತರು ನ್ಯಾಯಾಲಯದ ಕಟ್ಟಡದ ಮೇಲೆ ಕಲ್ಲು ತೂರಾಟ ನಡೆಸಿದಾಗ ಪೊಲೀಸರು ಅಶ್ರುವಾಯು ಸಿಡಿಸಿ ಅವರನ್ನು ಚದುರಿಸಿದರು. ಈ ವೇಳೆ ನ್ಯಾಯಾಲಯದ ಒಳಗಿದ್ದ ಜನರು ಕೂಡ ತೊಂದರೆಗಳನ್ನು ಎದುರಿಸಿದರು.


ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಪಿಟಿಐ ಪಕ್ಷದ ಹಿರಿಯ ನಾಯಕ ಶಾ ಮಹಮೂದ್ ಖುರೇಷಿ, ಇಮ್ರಾನ್ ಖಾನ್ ಅವರು ನ್ಯಾಯಾಲಯಕ್ಕೆ ಹಾಜರಾಗುವ ಬಗ್ಗೆ ಎಲ್ಲಾ ಕಾನೂನು ಔಪಚಾರಿಕತೆಗಳನ್ನು ಪೂರೈಸಿದ್ದಾರೆ ಮತ್ತು ಅವರು ಆವರಣದಿಂದ ನಿರ್ಗಮಿಸುತ್ತಿದ್ದಾರೆ ಎಂದು ದೃಢಪಡಿಸಿದರು. ಹೀಗಾಗಿ, ಇಮ್ರಾನ್ ಖಾನ್ ಅವರು ಪ್ರಕರಣದಲ್ಲಿ ದೋಷಾರೋಪಣೆ ಮಾಡದೆ ಹೊರಟರು.


ಇದನ್ನೂ ಓದಿ: Crime News: ಪಾಕಿಸ್ತಾನದಲ್ಲಿ ಹಿಂದೂ ವೈದ್ಯನ ಕತ್ತು ಸೀಳಿ ಕೊಲೆ; ಕಾರ್ ಚಾಲಕನಿಂದಲೇ ಕೃತ್ಯ!


ಇದಕ್ಕೂ ಮುನ್ನ ತೋಷಖಾನಾ ಪ್ರಕರಣದ ವಿಚಾರಣೆಗೆ ಇಸ್ಲಾಮಾಬಾದ್‌ಗೆ ತೆರಳುತ್ತಿದ್ದ ವೇಳೆ ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಇಮ್ರಾನ್ ಖಾನ್ ಅವರ ಬೆಂಗಾವಲು ವಾಹನ ಪಲ್ಟಿ ಹೊಡೆದ ಘಟನೆಯೂ ನಡೆಯಿತು.


ಈ ಸಂಬಂಧ ವಿಚಾರಣೆಗೆ ಹಾಜರಾಗುವುದಕ್ಕೂ ಮುನ್ನ ಟ್ವಿಟರ್‌ನಲ್ಲಿ ಟ್ವೀಟ್ ಮಾಡಿದ್ದ ಇಮ್ರಾನ್ ಖಾನ್, ನನ್ನ ವಿರುದ್ಧದ ಎಲ್ಲಾ ಪ್ರಕರಣಗಳಲ್ಲಿ ನಾನು ಜಾಮೀನು ಪಡೆದಿದ್ದರೂ, ಪಿಡಿಎಂ ಸರ್ಕಾರವು ನನ್ನನ್ನು ಬಂಧಿಸಲು ಉದ್ದೇಶಿಸಿದೆ ಎಂಬುದು ಈಗ ಸ್ಪಷ್ಟವಾಗಿದೆ. ಅವರ ದುಷ್ಕೃತ್ಯದ ಉದ್ದೇಶಗಳನ್ನು ತಿಳಿದಿದ್ದರೂ, ನಾನು ಇಸ್ಲಾಮಾಬಾದ್ ಮತ್ತು ನ್ಯಾಯಾಲಯಕ್ಕೆ ಹೋಗುತ್ತಿದ್ದೇನೆ. ನಾನು ಕಾನೂನಿನ ನಿಯಮವನ್ನು ನಂಬುತ್ತೇನೆ. ಈ ವಂಚಕರ ಗುಂಪಿನ ಕೆಟ್ಟ ಉದ್ದೇಶ ಎಲ್ಲರಿಗೂ ಸ್ಪಷ್ಟವಾಗಿದೆ’ ಎಂದು ಹೇಳಿದ್ದರು.


ಲಾಹೋರ್‌ನ ಸಂಪೂರ್ಣ ಮುತ್ತಿಗೆಯು ನಾನು ಒಂದು ಪ್ರಕರಣದಲ್ಲಿ ನ್ಯಾಯಾಲಯದ ಮುಂದೆ ಹಾಜರಾಗುವುದನ್ನು ಖಚಿತಪಡಿಸಿಕೊಳ್ಳಲು ಅಲ್ಲ, ಆದರೆ, ನಮ್ಮ ಚುನಾವಣಾ ಪ್ರಚಾರವನ್ನು ಮುನ್ನಡೆಸಲು ಸಾಧ್ಯವಾಗದ ಕಾರಣ ನನ್ನನ್ನು ಜೈಲಿಗೆ ಕರೆದೊಯ್ಯುವ ಉದ್ದೇಶವನ್ನು ಹೊಂದಿತ್ತು ಎಂಬುದು ಈಗ ಸ್ಪಷ್ಟವಾಗಿದೆ ಎಂದು ಅವರು ಹೇಳಿದ್ದರು.

Published by:Avinash K
First published: