Football World Cup 2018

ತನ್ನ ವಿವಾಹದ ನೇರ ಪ್ರಸಾರದ ವರದಿಯನ್ನು ತಾನೇ ಮಾಡಿದ ಪತ್ರಕರ್ತ

news18
Updated:February 5, 2018, 6:31 PM IST
ತನ್ನ ವಿವಾಹದ ನೇರ ಪ್ರಸಾರದ ವರದಿಯನ್ನು ತಾನೇ ಮಾಡಿದ ಪತ್ರಕರ್ತ
news18
Updated: February 5, 2018, 6:31 PM IST
ನ್ಯೂಸ್​ 18 ಕನ್ನಡ

ಪತ್ರಿಕೋದ್ಯಮ ನಿಜಕ್ಕೂ ಒಂದು ಕಷ್ಟದ ಕೆಲಸ. ಪತ್ರಕರ್ತ ದಿನದ 24ಗಂಟೆಯೂ ಪತ್ರಕರ್ತನಾಗಿಯೇ ಇರುತ್ತಾನೆ. ಎಲ್ಲಿ ಬೇಕಾದರೂ, ಯಾವ ಪರಿಸ್ಥಿತಿಯಲ್ಲಿದ್ದರೂ ಕೆಲಸ ಮಾಡಲೇಬೇಕಾದ ವೃತ್ತಿಯಿದು. ಯುದ್ಧ ಭೂಮಿ ಇರಬಹದು, ನೀರೇ ಇಲ್ಲದ ಬಂಜರು ಪ್ರದೇಶ ಇರುಬಹುದು. ಎಂಥಾ ಪರಿಸ್ಥಿತಿ ಇದ್ದರೂ ಕೆಲಸ ಮಾಡಲು ಸಿದ್ಧರಾಗಿರಬೇಕು.

ಎಲ್ಲಿಂದ ಬೇಕಾದರೂ, ಯಾವಾಗ ಬೇಕಾದರೂ ವರದಿ ಮಾಡಲು ಸದಾ ಸಿದ್ಧವಾಗಿರುವ ಪಾಕಿಸ್ತಾನದ ಪತ್ರಕರ್ತರೊಬ್ಬರನ್ನು ನಿಮಗೆ ಪರಿಚಯಿಸಲಿದ್ದೇವೆ. ಆ ಪತ್ರಕರ್ತ ಮಾಡಿರುವ ವರದಿಯಿಂದಲೇ ಈಗ ಸುದ್ದಿಯಾಗಿದ್ದಾರೆ.ಪಾಕಿಸ್ತಾನದ ರಜಾಬಾದ್​ನ ನಿವಾಸಿ ಹನನ್​ ಬುಖ್ರಿ ಸಿಟಿ41 ವಾಹಿನಿಯಲ್ಲಿ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ವೃತ್ತಿಪರತೆ ಎಷ್ಟಿತ್ತೆಂದರೆ ಅವರು ತಮ್ಮ ವಿವಾಹದ ದಿನವೂ ಕೈಯಲ್ಲಿ ಮೈಕ್​ ಹಿಡಿದು ತಮ್ಮ ಮದುವೆಯ ಲೈಪ್​ ಅಪ್​ಡೇಟ್​ ಅನ್ನು ಖುದ್ದು ತಾವೇ ಸಿಟಿ 41 ವಾಹಿನಿಗೆ ವರದಿ ಮಾಡಿದ್ದಾರೆ.

ಕೈಯಲ್ಲಿ ಮೈಕ್​ ಹಿಡಿದ ಬುಖ್ರಿ ತಮ್ಮ ಮದುವೆಯ ಲೈವ್​ ಆರಂಭಿಸಿದ್ದು ಹೀಗೆ…ಇವತ್ತು ನನಗೆ ಮತ್ತು ನನ್ನ ಕುಟುಂಬದವರಿಗೆ ಸಂಭ್ರಮದ ದಿನ. ನಾನು ಪ್ರೇಮ ವಿವಾಹವಾಗುತ್ತಿದ್ದು, ನನ್ನ ಪತ್ನಿಯೂ ತುಂಬಾ ಖುಷಿಯಾಗಿದ್ದಾರೆ. ಕೇವಲ ನನ್ನ ಪತ್ನಿಯಷ್ಟೇ ಅಲ್ಲ, ಅವರ ಮನೆಯವರೂ ಖುಷಿಯಾಗಿದ್ದಾರೆ. ಇಲ್ಲಿರುವ ನಮ್ಮ ಪೋಷಕರೂ ಈ ದಿನಕ್ಕೆ ನಾನು ಕಂಡಿದ್ದ ಕನಸನ್ನು ನನಸು ಮಾಡಲು ತುಂಬಾ ಕಷ್ಟಪಟ್ಟಿದ್ದಾರೆ‘ ಎನ್ನುತ್ತಲೇ ಎಲ್ಲರ ಪರಿಚಯ ಮಾಡಿಕೊಡುತ್ತಾ ಪತ್ನಿಯ ಕಡೆ ಕ್ಯಾಮೆರಾ ತಿರುಗಿಸುತ್ತಾ ಹೋಗುತ್ತಾರೆ.ನಿನಗಾಗಿ ಸ್ಪೋಟ್ಸ್​ ಬೈಕ್​ಗಳು  ಹಾಗೂ ಕಾರನ್ನು ನಿನಗಾಗಿ ತಂದಿದ್ದೇನೆ. ನಿನಗೆ ಖುಷಿಯಾಗಿದೆಯಾ ಎನ್ನುತ್ತಾರೆ. ಅದಕ್ಕೆ ಉತ್ತರಿಸುವ ವಧು ನನ್ನ ಬಯಕೆಯನ್ನು ಈಡೇರಿಸಿದ್ದಕ್ಕೆ ಸಂತೋಷವಾಗಿದೆ. ಇನ್ನು ಮುಂದೆಯೂ ಇದೇ ರೀತಿ ನನ್ನ ಇಷ್ಟಗಳನ್ನು ಪೂರೈಸುವೆ ಎಂದು ಆಶಿಸುತ್ತೇನೆ ಎನ್ನುತ್ತಾರೆ. ಇದರ ವಿಡಿಯೋ ಲಿಂಕ್​ ಇಲ್ಲಿದೆ ನೋಡಿ.

ಬುಕ್ರಿ ವರದಿ ಮಾಡಿರುವ ಸಂಪೂರ್ಣ ವಿಡಿಯೋವನ್ನು ಸಿಟಿ 41 ವಾಹಿನಿಯ ಯೂಟ್ಯೂಬ್​ ಚಾನೆಲ್​ಗೆ ಅಪ್​ಲೋಡ್​ ಮಾಡಲಾಯಿತು. ನಂತರ ಈ ವಿಡಿಯೋವನ್ನು ಫೇಸ್​ಬುಕ್​ನ ‘ಪೀಪಲ್​ ಆಫ್​ ಪಾಕಿಸ್ತಾನ್​’ ಪುಟ ಶೇರ್​ ಮಾಡಿದ್ದು, ಈ ವಿಡಿಯೋ ಈಗ ವೈರಲ್​ ಆಗಿದೆ.
First published:February 5, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ