Pakistani Drone: ಭಾರತಕ್ಕೆ ಹೆರೊಯಿನ್ ಹೊತ್ತು ಬಂದ ಪಾಕ್ ಡ್ರೋನ್! ನಾಲ್ವರು ಪೆಡ್ಲರ್‌ ಗಳ ಅರೆಸ್ಟ್

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಗಡಿಯಲ್ಲಿ ಪಾಕಿಸ್ತಾನದ ಹುಚ್ಚಾಟಗಳು ಒಂದಲ್ಲ ಒಂದು ರೀತಿಯಲ್ಲಿ ನಡೆಯುತ್ತಲೇ ಇರುತ್ತದೆ. ಪಾಕ್ ನಿಂದ ಡ್ರಗ್ಸ್ ಹೊತ್ತು ಭಾರತಕ್ಕೆ ಬರುತ್ತಿರುವ ಡ್ರೋನ್ ಗಳ ಬಗ್ಗೆ ಇತ್ತೀಚೆಗೆ ಸಾಕಷ್ಟು ವರದಿಗಳು ಕೇಳಿ ಬರುತ್ತಿವೆ. ಮತ್ತದೇ ಪ್ರಕರಣ ನಿನ್ನೆ ಮುಂಜಾನೆ ಬಿಎಸ್‌ಎಫ್‌ನ ಖಯಾಲಿವಾಲಾ ಔಟ್‌ಪೋಸ್ಟ್ ಬಳಿ ನಡೆದಿದೆ.

ಮುಂದೆ ಓದಿ ...
  • Share this:

ಗಡಿಯಲ್ಲಿ ಪಾಕಿಸ್ತಾನದ (Pakistan) ಹುಚ್ಚಾಟಗಳು ಒಂದಲ್ಲ ಒಂದು ರೀತಿಯಲ್ಲಿ ನಡೆಯುತ್ತಲೇ ಇರುತ್ತದೆ. ಪಾಕ್ ನಿಂದ ಡ್ರಗ್ಸ್ (Drugs) ಹೊತ್ತು ಭಾರತಕ್ಕೆ (India) ಬರುತ್ತಿರುವ ಡ್ರೋನ್ ಗಳ ಬಗ್ಗೆ ಇತ್ತೀಚೆಗೆ ಸಾಕಷ್ಟು ವರದಿಗಳು ಕೇಳಿ ಬರುತ್ತಿವೆ. ಮತ್ತದೇ ಪ್ರಕರಣ ನಿನ್ನೆ ಮುಂಜಾನೆ ಬಿಎಸ್‌ಎಫ್‌ನ ಖಯಾಲಿವಾಲಾ (Khayaliwala) ಔಟ್‌ಪೋಸ್ಟ್ (Outpost) ಬಳಿ ನಡೆದಿದೆ. ಪಾಕಿಸ್ತಾನದ ಡ್ರೋನ್ (Drone) ಒಂದು ಇಲ್ಲಿ ಬರೋಬ್ಬರಿ 3.5 ಕೆಜಿ ಹೆರೊಯಿನ್ (Heroin) ಅನ್ನು ಎಸೆದು ಹೋಗಿದೆ. ಈ ವೇಳೆ ಪಂಜಾಬ್ ಮೂಲದ ಇಬ್ಬರು ಪೆಡ್ಲರ್‌ಗಳು ಸರಕುಗಳನ್ನು ತೆಗೆದುಕೊಳ್ಳಲು ಸ್ಥಳಕ್ಕೆ ಧಾವಿಸಿದಾಗ, ಅಲ್ಲೇ ಸಮೀಪದಲ್ಲಿದ್ದ ಇಬ್ಬರು ರೈತರು ಅವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.


ಹೆರೊಯಿನ್ ಹೊತ್ತು ಬಂದ ಪಾಕ್ ಡ್ರೋನ್
ಹೆರೊಯಿನ್ ಹೊತ್ತು ಬಂದ ಪಾಕ್ ಡ್ರೋನ್ ಖಯಾಲಿವಾಲಾ ಔಟ್‌ಪೋಸ್ಟ್ ಬಳಿ ಮೊದಲೇ ಗೊತ್ತು ಪಡಿಸಿದ ಪೆಡ್ಲರ್‌ಗಳು ಇರುವ ಸ್ಥಳದಲ್ಲಿ ಸರಕನ್ನು ಎಸೆದಿದೆ. ಈ ವೇಳೆ ಸರಕುಗಳನ್ನು ತೆಗೆದುಕೊಳ್ಳುಲು ಇಬ್ಬರು ಆಗಮಿಸಿದರು. ಆರೋಪಿಗಳನ್ನು ಘರಿಂಡಾದ ನಿರ್ಮಲ್ ಸಿಂಗ್, ಅಲಿಯಾಸ್ ಸೋನು, ಅಮೃತಸರದ ಚೆಹರ್ತಾದ ರಣವೀರ್ ಸಿಂಗ್, ಅಲಿಯಾಸ್ ಕಾಕಾ, ಭುಲ್ಲರ್ ಬೆಟ್ ನಿವಾಸಿ ಜಸ್ಪ್ರೀತ್ ಸಿಂಗ್, ಅಲಿಯಾಸ್ ಜಾಸ್ ಮತ್ತು ಕಪುರ್ತಲಾದ ಲವ್ಪ್ರೀತ್ ಸಿಂಗ್ ಅಲಿಯಾಸ್ ಲವ್ ಎಂದು ಗುರುತಿಸಲಾಗಿದೆ.


ಖಯಾಲಿವಾಲಾ ಔಟ್‌ಪೋಸ್ಟ್ ನ ಪಿಲ್ಲರ್ ಸಂಖ್ಯೆ 365ರ ಬಳಿ ನಿನ್ನೆ ಮುಂಜಾವು 2:30ರ ಸುಮಾರಿಗೆ ಇಬ್ಬರು ರೈತರು ಬೆಳೆಗಳಿಗೆ ಹೊಲದಲ್ಲಿ ನೀರು ಹಾಯಿಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ. ಇಬ್ಬರು ಯುವಕರು ಪ್ಯಾಕೆಟ್‌ಗಳನ್ನು ಎತ್ತುತ್ತಿರುವುದನ್ನು ಗಮನಿಸಿದ ಇಬ್ಬರೂ ರೈತರು ಅವರ ಹಿಂದೆ ಓಡಿ ಆರೋಪಿಗಳನ್ನು ಹಿಡಿದಿದ್ದಾರೆ.


ಇದನ್ನೂ ಓದಿ:   Russia ದಾಳಿಗೆ ಉಕ್ರೇನ್ ಹೇಗೆ ಛಿದ್ರಗೊಂಡಿದೆ ಅನ್ನೋದಕ್ಕೆ ಈ ಸ್ಯಾಟ್​​ಲೈಟ್​​ ಫೋಟೋಗಳೇ ಸಾಕ್ಷಿ


ನಂತರ, ಸ್ಥಳೀಯರು ಬಿಎಸ್‌ಎಫ್ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದು, ಕಾರಿನಲ್ಲಿ ಕಾಯುತ್ತಿದ್ದ ಅವರ ಇಬ್ಬರು ಸಹಚರರನ್ನು ಸೇರಿ ನಾಲ್ವರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿ, ಪ್ರಕರಣದ ಮುಂದಿನ ತನಿಖೆಕೈಗೊಂಡಿದ್ದಾರೆ.


ವಾರದ ಹಿಂದಷ್ಟೇ ನಡೆದಿತ್ತು ಇಂತದ್ದೇ ಪ್ರಕರಣ
ಕಳೆದ ಒಂದು ವಾರದ ಹಿಂದೆ ಇಂತದ್ದೇ ಪ್ರಕರಣ ನಡೆದಿತ್ತು. ಪಾಕಿಸ್ತಾನ ಮೂಲದ ಕಳ್ಳಸಾಗಾಣಿಕೆದಾರರು ಭಾರತದ ಭೂಪ್ರದೇಶದೊಳಗೆ ಮಾದಕವಸ್ತುಗಳನ್ನು ಕಳುಹಿಸುವ ಪ್ರಯತ್ನವನ್ನು ವಿಫಲಗೊಳಿಸಿದ ಶ್ರೀಗಂಗಾನಗರ ಪೊಲೀಸರು 6.32 ಕೆಜಿ ತೂಕದ ಏಳು ಪ್ಯಾಕೆಟ್ ಹೆರೊಯಿನ್ ಅನ್ನು ವಶಪಡಿಸಿಕೊಂಡಿದ್ದರು. ಶ್ರೀಗಂಗಾನಗರ ಪೊಲೀಸರು ಮತ್ತು ರಾಜಸ್ಥಾನದ ವಿಶೇಷ ಗುಪ್ತಚರ ಘಟಕ (ಸಿಐಡಿ) ಗಡಿಯಾಚೆಗಿನ ಮಾದಕ ದ್ರವ್ಯದಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಜಿಲ್ಲೆಯ ವಿವಿಧ ಸ್ಥಳಗಳಿಂದ ಐವರನ್ನು ಬಂಧಿಸಿದ್ದರು.


ಪೊಲೀಸರ ಪ್ರಕಾರ, ಶ್ರೀಗಂಗಾನಗರ ಜಿಲ್ಲೆಯ ಶ್ರೀಕರನ್‌ಪುರ ಪ್ರದೇಶದ ಮಜಿವಾಲಾ ಗಡಿ ಹೊರಠಾಣೆ ಬಳಿ ಪಾಕಿಸ್ತಾನದಿಂದ ಟೇಕಾಫ್ ಆದ ಡ್ರೋನ್ ಮೂಲಕ ಪ್ಯಾಕೆಟ್‌ಗಳನ್ನು ಬೀಳಿಸಲಾಗಿದೆ. ಆರೋಪಿಗಳನ್ನು ವೀರಪಾಲ್ ಸಿಂಗ್, ಸುರೇಂದ್ರ ಸಿಂಗ್ ರೈಸಿಖ್, ಸುಖದೇವ್ ಸಿಂಗ್ ರಾಮನಾ, ಪೃಥ್ವಿ ವಿಷ್ಣೋಯ್ ಮತ್ತು ಸೋನಾ ಸಿಂಗ್ ಎಂದು ಗುರುತಿಸಲಾಗಿತ್ತು.


ಇದನ್ನೂ ಓದಿ:   Iran Train Accident: ಇರಾನ್​ನಲ್ಲಿ ಭೀಕರ ರೈಲು ಅಪಘಾತ; ಕನಿಷ್ಠ 17 ಜನರ ಸಾವು, 50ಕ್ಕೂ ಹೆಚ್ಚು ಜನರಿಗೆ ಗಾಯ


ಗಡಿ ಜಿಲ್ಲೆಗಳಲ್ಲಿ ಇತ್ತೀಚಿನ ಘಟನೆಗಳು


  • ಏಪ್ರಿಲ್ 29: ಅಮೃತಸರದ ಧನೋ ಕಲನ್ ಗ್ರಾಮದ ಬಳಿ ಡ್ರೋನ್ ತಡೆಹಿಡಿಯಲಾಯಿತು

  • ಏಪ್ರಿಲ್ 25: ಅಮೃತಸರ ಸೆಕ್ಟರ್ ನಲ್ಲಿ 1 ಕೆಜಿ ಹೆರಾಯಿನ್ ಪತ್ತೆ

  • ಏಪ್ರಿಲ್ 23: ಅಮೃತಸರ ಸೆಕ್ಟರ್ ನಲ್ಲಿ 3.9 ಕೆಜಿ ಹೆರೊಯಿನ್ ವಶ

  • ಏಪ್ರಿಲ್ 19: 2.1 ಕೆಜಿ ಹೆರೊಯಿನ್, ಒಂದು ಪಿಸ್ತೂಲ್ ಅಮೃತಸರ ಕ್ಷೇತ್ರದಲ್ಲಿ ಬಿಟ್ಟುಹೋಗಿರುವುದು ಪತ್ತೆ

  • ಏಪ್ರಿಲ್ 7: ಫಿರೋಜ್‌ಪುರ ವಲಯದಿಂದ 1.2 ಕೆಜಿ ಹೆರೊಯಿನ್ ವಶ

  • ಏಪ್ರಿಲ್ 4: ತರ್ನ್ ತರನ್‌ನಲ್ಲಿ 2.2 ಕೆಜಿ ಹೆರೊಯಿನ್ ಪತ್ತೆಯಾಗಿದೆ

  • ಮೇ 2: ಅಬೋಹರ್ ಸೆಕ್ಟರ್‌ನ ಜೋಧವಾಲಾ ಗ್ರಾಮದಲ್ಲಿ 2.9 ಕೆಜಿ ಹೆರೊಯಿನ್ ಪತ್ತೆ

  • ಮೇ 2: ಅಮೃತಸರ ಸೆಕ್ಟರ್‌ನ ಹೊಲವೊಂದರಲ್ಲಿ ಮೂರು ಪ್ಯಾಕೆಟ್ ಹೆರೊಯಿನ್ ಪತ್ತೆ

  • ಮೇ 6: ಅಮೃತಸರ ವಲಯದಲ್ಲಿ 510 ಗ್ರಾಂ ಹೆರೊಯಿನ್ ವಶ

top videos
    First published: