India-Pakistan: ಗಡಿದಾಟಿ ಭಾರತಕ್ಕೆ ಬಂದ ಪಾಕಿಸ್ತಾನದ ಮಗು! ಮರಳಿ ತಾಯಿ ಮಡಿಲು ಸೇರಿದ್ದು ಹೇಗೆ ಕಂದಮ್ಮ?

ನಾಲ್ಕು ವರ್ಷದ ಪುಟ್ಟ ಕಂದಮ್ಮನಿಗೆ ಅದು ಭಾರತದ ಗಡಿಯೋ, ಪಾಕಿಸ್ತಾನದ ಗಡಿಯೋ ಎನ್ನುವ ಕಲ್ಪನೆಯೂ ಇಲ್ಲ. ಹೀಗೆ ಪಾಕಿಸ್ತಾನದ ಗಡಿ ದಾಟಿ, ಭಾರತದ ಗಡಿಯೊಳಕ್ಕೆ ಬಂದು ಬಿಟ್ಟಿದೆ. ಆ ಮಗು ಗಡಿ ದಾಟಿ ಬಂದಿದ್ದನ್ನು ಭಾರತೀಯ ಸೇನೆಯ ಅಧಿಕಾರಿಗಳು ನೋಡಿದ್ದಾರೆ. ಮುಂದೆ ಏನಾಯ್ತು ಅಂತ ತಿಳಿಯಲು ಈ ಸುದ್ದಿ ಓದಿ…

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪಂಜಾಬ್: ಜಾತಿ (Cast) ಭೇಧ, ಧರ್ಮ (Religion) ಭೇದ ಇಂತಹ ಗಡಿಗಳೆಲ್ಲ (Border) ದೊಡ್ಡವರಿಗೆ ಮಾತ್ರ ಇರುತ್ತದೆ. ಆದರೆ ಚಿಕ್ಕಮಕ್ಕಳಿಗೆ (Children) ಯಾವ ಭೇದವೂ ಇಲ್ಲ, ಯಾವ ಗಡಿಯೂ ಇಲ್ಲ. ಚಿಕ್ಕ ಮಕ್ಕಳ ನಿರ್ಮಲ ಮನಸ್ಸಿನಲ್ಲಿ ಎಲ್ಲರೂ ಒಂದೇ. ನಮ್ಮವರು, ಮನೆಯವರು, ಪಕ್ಕದ ಮನೆಯವರು, ಅಪರಿಚಿತರು ಎಂಬ ಭೇದ ಭಾವವಿಲ್ಲ. ಮನಸ್ಸಿನ ಗಡಿಯನ್ನೂ ದಾಟುವ ಪುಟ್ಟ ಮಕ್ಕಳು ಒಮ್ಮೊಮ್ಮೆ ದೇಶದ ಗಡಿಯಲ್ಲೂ (Country Border) ದಾಟುವುದಿದೆ. ಇಲ್ಲಿ ಆಗಿದ್ದು ಅದೇ, ನಾಲ್ಕು ವರ್ಷದ ಪುಟ್ಟ ಕಂದಮ್ಮನಿಗೆ ಅದು ಭಾರತದ ಗಡಿಯೋ (Indian Border), ಪಾಕಿಸ್ತಾನದ ಗಡಿಯೋ (Pakistan Border) ಎನ್ನುವ ಕಲ್ಪನೆಯೂ ಇಲ್ಲ. ಹೀಗೆ ಪಾಕಿಸ್ತಾನದ ಗಡಿ ದಾಟಿ, ಭಾರತದ ಗಡಿಯೊಳಕ್ಕೆ ಬಂದು ಬಿಟ್ಟಿದೆ. ಆ ಮಗು ಗಡಿ ದಾಟಿ ಬಂದಿದ್ದನ್ನು ಭಾರತೀಯ ಸೇನೆಯ ಅಧಿಕಾರಿಗಳು (Indian Army Officers) ನೋಡಿದ್ದಾರೆ. ಮುಂದೆ ಏನಾಯ್ತು ಅಂತ ತಿಳಿಯಲು ಈ ಸುದ್ದಿ ಓದಿ…

ಪಾಕಿಸ್ತಾನದಿಂದ ಭಾರತದ ಗಡಿಯೊಳಕ್ಕೆ ಬಂದ ಮಗು

ಪಂಜಾಬ್(Punjab) ನ ಅಬೋಹರ್​ ಸೆಕ್ಟರ್​​ನ ಫಾಜಿಲ್ಕಾ  ಜಿಲ್ಲೆಯಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ಪಾಕಿಸ್ತಾನದಿಂದ ನಾಲ್ಕು ವರ್ಷದ ಮಗುವೊಂದು ಭಾರತದ ಗಡಿಯೊಳಗೆ ಬಂದು ಬಿಟ್ಟಿದೆ. ಏನೂ ಅರಿಯದ ಪುಟ್ಟ ಮಗು ಪೋಷಕರಿಂದ ತಪ್ಪಿಸಿಕೊಂಡು, ಪಾಕಿಸ್ತಾನದ ಗಡಿಗೆ ಬಂದಿದೆ. ಹಾಗೇ ಬಂದಿದ್ದೇ ಗಡಿ ದಾಟಿ ಈ ಕಡೆಯ ಭಾರತದ ಭೂ ಪ್ರದೇಶದೊಳಕ್ಕೂ ಬಂದು ಬಿಟ್ಟಿದೆ.

ಮಗುವನ್ನು ನೋಡಿದ ಭಾರತೀಯ ಗಸ್ತು ಪಡೆ ಅಧಿಕಾರಿಗಳು

ಮಗು ಪಾಕಿಸ್ತಾನದ ಗಡಿ ದಾಟಿ, ಭಾರತದ ಗಡಿಯೊಳಕ್ಕೆ ಪ್ರವೇಶ ಮಾಡಿದ್ದನ್ನು ಭಾರತೀಯ ಸೇನೆಯ ಅಧಿಕಾರಿಗಳು ನೋಡಿದ್ದಾರೆ. ಭಾರತೀಯ ಗಡಿ ಭದ್ರತಾ ಪಡೆ ಸಿಬ್ಬಂದಿಗಳು ಕೂಡಲೇ ಆ ಮಗುವನ್ನು ತಮ್ಮ ವಶಕ್ಕೆ ಪಡೆದಿದ್ದಾರೆ. ಆ ಮಗು ಭಯಪಡಬಹುದು ಎಂಬ ಕಾರಣಕ್ಕೆ ಮುದ್ದು ಮಾಡುತ್ತಲೇ ಮಾತನಾಡಿಸಿದ್ದಾರೆ.

ಇದನ್ನೂ ಓದಿ: Yogi Adityanath: ಇಂದಿನಿಂದ ಉತ್ತರ ಪ್ರದೇಶದಲ್ಲಿ 'ಯೋಗಿ ಯುಗ' ಪುನಾರಂಭ! ಮಹತ್ವದ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ ಬಸವರಾಜ ಬೊಮ್ಮಾಯಿ

ಪಾಕಿಸ್ತಾನಕ್ಕೆ ಮರಳಿ ಕಳಿಸಿಕೊಟ್ಟ ಸೇನಾ ಅಧಿಕಾರಿಗಳು

ಭಾರತೀಯ ಗಡಿ ಭದ್ರತಾ ಪಡೆಯ ಸಿಬ್ಬಂದಿ ಆ ಮಗುವನ್ನು ವಿಚಾರಸಿದ್ದಾರೆ. ಆ ಮಗು ಕೊಟ್ಟ ಮಾಹಿತಿಯಿಂದ ಅದು ಪಾಕಿಸ್ತಾನದ ಪೋಷಕರ ಮಗು ಎನ್ನುವುದು ತಿಳಿದಿದೆ. ಕೂಡಲೇ ಪಾಕಿಸ್ತಾನ ಸೇನೆಗೆ ಸುದ್ದಿ ಮುಟ್ಟಿಸಿದ್ದಾರೆ. ಬಳಿಕ ಮಾನವೀಯತೆಯ ಆಧಾರದ ಮೇಲೆ ಮಗುವನ್ನು ಮರಳಿಸಿದ್ದಾರೆ. ಪಾಕ್​ ರೇಂಜರ್​​ಗಳನ್ನು ಕರೆಸಿ, ಮಗುವನ್ನು ಅವರ ಸುಪರ್ದಿಗೆ ಒಪ್ಪಿಸಿದ್ದಾರೆ. ಬಳಿಕ ಮಗು ಸುರಕ್ಷಿತವಾಗಿ ಪಾಕಿಸ್ತಾನದಲ್ಲಿರುವ ತನ್ನ ತಂದೆ-ತಾಯಿಯ ಮಡಿಲು ಸೇರಿದೆ.



ಟ್ವಟ್ಟರ್‌ನಲ್ಲಿ ಪೋಸ್ಟ್ ಹಾಕಿದ ಭಾರತೀಯ ಸೇನೆ

ಈ ಘಟನೆ ಬಗ್ಗೆ ಭಾರತೀಯ ಸೇನೆ ಅಧಿಕಾರಿಗಳು ಟ್ವೀಟ್ಟರ್‌ನಲ್ಲಿ ಹಂಚಿ ಕೊಂಡಿದ್ದಾರೆ. 3ರಿಂದ 4 ವರ್ಷ ಅಂದಾಜು ವಯಸ್ಸಿನ ಮಗು ಗಡಿ ದಾಟಿ ಬಂದಿತ್ತು. ಅದನ್ನು ಮಾನವೀಯತೆಯ ಅಧಾರದ ಮೇಲೆ ವಾಪಸ್ ಪಾಕಿಸ್ತಾನ ಸೇನೆಗೆ ಹಸ್ತಾಂತರಿಸಲಾಗಿದೆ ಅಂತ ಟ್ವೀಟ್ಟರ್‌ನಲ್ಲಿ ಪೋಸ್ಟ್ ಹಾಕಲಾಗಿದೆ. ಇದಕ್ಕೆ ಸಾವಿರಾರು ಮಂದಿ ಪ್ರತಿಕ್ರಿಯಿಸಿದ್ದು, ಭಾರತೀಯ ಸೇನೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ರಷ್ಯಾ ಅಧ್ಯಕ್ಷ Vladimir Putin ಬಳಿಯಿರುವ ಆಸ್ತಿ, ಐಷಾರಾಮಿ ವಸ್ತುಗಳ ಪಟ್ಟಿ ನೋಡಿದ್ರೆ ಹುಬ್ಬೇರಿಸುತ್ತೀರಿ!

7 ಮಂದಿ ನುಸುಳುಕೋರರ ಬಂಧನ

ಮತ್ತೊಂದೆಡೆ ಗುಜರಾತ್‌(Gujarat)ನ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಈ ವರ್ಷ ಏಳು ಪಾಕಿಸ್ತಾನಿ ಮೀನುಗಾರರನ್ನು ಬಂಧಿಸಿದೆ ಮತ್ತು 24 ಮೀನುಗಾರಿಕೆ ದೋಣಿಗಳನ್ನು ವಶಪಡಿಸಿಕೊಂಡಿದೆ. ಕಚ್ ಜಿಲ್ಲೆಯ ಕ್ರೀಕ್ ಮತ್ತು ಹರಾಮಿ ನಲ್ಲಾ ಪ್ರದೇಶದಲ್ಲಿ ಭದ್ರತಾ ಸನ್ನಿವೇಶವನ್ನು ಪರಿಶೀಲಿಸಿದ ಬಿಎಸ್‌ಎಫ್ ಮಹಾನಿರ್ದೇಶಕ ಪಂಕಜ್ ಕುಮಾರ್ ಸಿಂಗ್ ಈ ವಿಚಾರ ತಿಳಿಸಿದ್ದಾರೆ.
Published by:Annappa Achari
First published: