Volcano Blast: ಪೆಸಿಫಿಕ್ ಜ್ವಾಲಾಮುಖಿ ಸ್ಫೋಟ, ಯಪ್ಪಾ.. ಕಳೆದ 100 ವರ್ಷದಲ್ಲಿ ಈ ರೀತಿ ಆಗಿರಲಿಲ್ವಂತೆ!

ಈ ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ ಸಾವಿರಾರು ಮೈಲುಗಳಷ್ಟು ದೂರದಲ್ಲಿರುವ ಅಲಾಸ್ಕಾದ ಜನರು ಕೂಡ ಈ ಸ್ಫೋಟ(Blast)ವನ್ನು ಕೇಳಿಸಿಕೊಳ್ಳುವಷ್ಟು ದೊಡ್ಡ ಶಬ್ಧವನ್ನು ಹೊಂದಿತ್ತು . ಇದು ಕಳೆದ 100 ವರ್ಷಗಳಲ್ಲಿ ಭೂಮಿ(Earth)ಯ ಮೇಲೆ ಸಂಭವಿಸಿದ ಅತ್ಯಂತ ದೊಡ್ಡ ಘಟನೆಗಳಲ್ಲಿ ಒಂದಾಗಿದೆ ಎಂದು ಎನ್‌ಪಿಆರ್‌(NPR) ವರದಿ ಮಾಡಿದೆ.

ಸಮುದ್ರದಲ್ಲಿ ಜ್ವಾಲಾಮುಖಿ ಸ್ಫೋಟ

ಸಮುದ್ರದಲ್ಲಿ ಜ್ವಾಲಾಮುಖಿ ಸ್ಫೋಟ

  • Share this:
ಪೆಸಿಫಿಕ್‌ನ ದ್ವೀಪ ರಾಷ್ಟ್ರವಾದ ಟೊಂಗಾ(Tonga), ನೀರೊಳಗಿನ ಜ್ವಾಲಾಮುಖಿ(Underwater Volcano) ಸ್ಫೋಟಕ್ಕೆ ನಿದರ್ಶನವಾಯಿತು. ಈ ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ ಸಾವಿರಾರು ಮೈಲುಗಳಷ್ಟು ದೂರದಲ್ಲಿರುವ ಅಲಾಸ್ಕಾದ ಜನರು ಕೂಡ ಈ ಸ್ಫೋಟ(Blast)ವನ್ನು ಕೇಳಿಸಿಕೊಳ್ಳುವಷ್ಟು ದೊಡ್ಡ ಶಬ್ಧವನ್ನು ಹೊಂದಿತ್ತು . ಇದು ಕಳೆದ 100 ವರ್ಷಗಳಲ್ಲಿ ಭೂಮಿ(Earth)ಯ ಮೇಲೆ ಸಂಭವಿಸಿದ ಅತ್ಯಂತ ದೊಡ್ಡ ಘಟನೆಗಳಲ್ಲಿ ಒಂದಾಗಿದೆ ಎಂದು ಎನ್‌ಪಿಆರ್‌(NPR) ವರದಿ ಮಾಡಿದೆ. ಯು ಸ್ ಭೂವಿಜ್ಞಾನ ಸಮೀಕ್ಷೆಯ ಭೂವಿಜ್ಞಾನಿ ಮೈಕೆಲ್ ಪೋಲೆಂಡ್, "ಈ ಸ್ಫೋಟವು 1883 ರ ಇಂಡೋನೇಷ್ಯಾದ ಕ್ರಾಕಟೌ(Indonesian Volcano) ಸ್ಫೋಟದ ನಂತರದ ಅತ್ಯಂತ ದೊಡ್ಡ ಸ್ಫೋಟವಾಗಿದೆ" ಎಂದು ಎನ್‌ಪಿಆರ್‌ ಗೆ ತಿಳಿಸಿದರು. ಈ ಪ್ರಬಲ ಸ್ಫೋಟವು ಸುನಾಮಿಯನ್ನು ಪ್ರಚೋದಿಸಿದಲ್ಲದೆ ಅದರ ಪರಿಣಾಮದಿಂದಾಗಿ ದ್ವೀಪವು ಸರ್ವನಾಶವಾಯಿತು. ಪರಮಾಣು ಶಸ್ತ್ರಾಸ್ತ್ರ(Nuclear Weapons)ಗಳ ಸ್ಫೋಟದ ಇಳುವರಿಯನ್ನು ಅಳೆಯಲು ಬಳಸುವ ಪ್ರಮಾಣವನ್ನೇ ಸಂಶೋಧಕರು ಈ ಸ್ಪೋಟದ ಬಲವನ್ನು ಅಳೆಯಲು ಬಳಸಿದರು.

ನೀರಿನೊಳಗೆ ಸ್ಫೋಟಗೊಂಡ ಫೆಸಿಫಿಕ್​ ಜ್ವಾಲಾಮುಖಿ!

ಗೊಡ್ಡಾರ್ಡ್ ಬಾಹ್ಯಾಕಾಶ ಹಾರಾಟ ಕೇಂದ್ರದ ನಾಸಾದ ಮುಖ್ಯ ವಿಜ್ಞಾನಿ ಜೇಮ್ಸ್ ಗಾರ್ವಿನ್, ತಾವು ಕಂಡುಕೊಂಡ ಸಂಖ್ಯೆಯು "ಸುಮಾರು 10 ಮೆಗಾಟನ್ ಟಿಎನ್‌ಟಿಗೆ ಸಮಾನವಾಗಿದೆ" ಎಂದು ಎನ್‌ಪಿಆರ್‌ಗೆ ತಿಳಿಸಿದರು. ಜ್ವಾಲಾಮುಖಿ ಸ್ಫೋಟವು 10 ಮೆಗಾಟನ್‌ಗಳಷ್ಟು ಟಿ ನ್ ಟಿ ಗೆ ಸಮನಾದ ಸ್ಫೋಟಕ ಇಳುವರಿಯನ್ನು ಹೊಂದಿದ್ದು ಇದು ಸರಿಸುಮಾರು 667 "ಲಿಟಲ್ ಬಾಯ್" ಪರಮಾಣು ಬಾಂಬುಗಳ ಬಲಕ್ಕೆ ಸಮನಾಗಿತ್ತು.

15 ಸಾವಿರ ಟನ್​ TNT ಬಲದಿಂದ ಸ್ಫೋಟ!

"ಲಿಟಲ್ ಬಾಯ್" ಎಂಬುದು ಯುದ್ಧದಲ್ಲಿ ಬಳಸಲಾದ ಎರಡು ಪರಮಾಣು ಶಸ್ತ್ರಾಸ್ತ್ರಗಳಲ್ಲಿ ಮೊದಲನೆಯ ಪರಮಾಣು ಶಸ್ತ್ರಾಸ್ತ್ರದ ಅಡ್ಡಹೆಸರು. ಜಪಾನ್‌ನ ಹಿರೋಷಿಮಾ, B-29 ಸೂಪರ್‌ಫೋರ್ಟ್ರೆಸ್ ಬಾಂಬರ್‌ನಿಂದ ಬೀಳಿಸಿದ ಹೆಚ್ಚು-ಪುಷ್ಟೀಕರಿಸಿದ ಯುರೇನಿಯಂ ಬಾಂಬ್‌ನ ಪ್ರಭಾವದಿಂದ ನೆಲಸಮವಾಯಿತು. ಅಂದಾಜು 15,000 ಟನ್ ಟಿಎನ್‌ಟಿ ಬಲದೊಂದಿಗೆ ಬಾಂಬ್ ಗಾಳಿಯಲ್ಲಿ ಸ್ಫೋಟಿಸಿತು.

ಇದನ್ನು ಓದಿ: ದೇವಸ್ಥಾನ ಲೂಟಿ ಮಾಡಲು 7 ಬೀದಿ ನಾಯಿಗಳಿಗೆ ವಿಷವಿಕ್ಕಿ ಕೊಂದ

ಸ್ಫೋಟದಿಂದ 170 ದ್ವೀಪಗಳಿಗೆ ಶಾಕ್​!

ಶೀತಲ ಸಮರದ ಸಮಯದಲ್ಲಿ, ಸೋವಿಯತ್ ಒಕ್ಕೂಟದ ಜೊತೆ ಸೇರಿ ಯುಎಸ್ ಹೆಚ್ಚು ಶಕ್ತಿಶಾಲಿ ಅಣ್ವಸ್ತ್ರಗಳನ್ನು ಪರೀಕ್ಷಿಸಿತು. ಯುನೈಟೆಡ್ ಸ್ಟೇಟ್ಸ್ ಇದುವರೆಗೆ ಪರೀಕ್ಷಿಸಿದ ಅತ್ಯಂತ ಶಕ್ತಿಶಾಲಿ ಪರಮಾಣು ಅಸ್ತ್ರವೆಂದರೆ ಕ್ಯಾಸಲ್ ಬ್ರಾವೋ, ಇದು ಮಾರ್ಚ್ 1, 1954 ರಂದು 15 ಮೆಗಾಟನ್ ಶಕ್ತಿಯೊಂದಿಗೆ ಸ್ಫೋಟಿಸಿತು. ಸ್ಫೋಟದ ನಂತರ ನುಕು' ಅಲೋಫಾ ವಿಮಾನ ನಿಲ್ದಾಣವು ಬೂದಿಯಿಂದ ಮುಚ್ಚಲ್ಪಟ್ಟು ತುರ್ತು ಪರಿಸ್ಥಿತಿಯ ಪರಿಹಾರ ವಿಮಾನಗಳು ಕೆಳಗಿಳಿಯದಂತೆ ತಡೆದವು. ಟೊಂಗಾದ 170 ದ್ವೀಪಗಳು ಕೂಡ ಸ್ಫೋಟದಿಂದ ಪ್ರಭಾವಿತವಾದವು ಎಂದು ಎನ್‌ಪಿಆರ್ ವರದಿ ಮಾಡಿದೆ.

ಕೇಬಲ್​ ಹಾನಿಯಿಂದ ದ್ವೀಪಗಳ ಸಂವಹನ ಕಡಿತ!

ನೀರೊಳಗಿನ ಕೇಬಲ್ ಹಾನಿಯಿಂದಾಗಿ ದ್ವೀಪಗಳ ನಡುವಿನ ಸಂವಹನವು ಕಡಿತಗೊಂಡು ಅಂತರ್-ದ್ವೀಪ ಮತ್ತು ಅಂತರಾಷ್ಟ್ರೀಯ ಕರೆಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ ಎಂದು ವರದಿಯಾಗಿದೆ.ಈ ಘಟನೆಯಲ್ಲಿ ಅನೇಕರು ಗಾಯಗೊಂಡಿರುವುದರ ಜೊತೆಗೆ ಕನಿಷ್ಠ ಮೂರು ಜನರು ಸಾವನ್ನಪ್ಪಿದ್ದಾರೆ ಎಂದು ಟೊಂಗಾ ಸರ್ಕಾರ ದೃಢಪಡಿಸಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಬ್ರಿಟಿಷ್ ಪ್ರಜೆ, 65 ವರ್ಷದ ಮ್ಯಾಂಗೋ ದ್ವೀಪದ ಮಹಿಳೆ ಮತ್ತು 49 ವರ್ಷದ ನೋಮುಕಾ ದ್ವೀಪದ ವ್ಯಕ್ತಿ ಇವರೆಲ್ಲರು ಸಾವನ್ನಪ್ಪಿದ್ದಾರೆ ಎಂಬುದು ವರದಿಯಾಗಿದೆ.

ಇದನ್ನು ಓದಿ: ವಿದೇಶಕ್ಕೆ ಕೂದಲು ರಫ್ತು ನಿಷೇಧಿಸಿದ ಕೇಂದ್ರ ಸರ್ಕಾರ: ಕೊಪ್ಪಳದಲ್ಲಿ ಮತ್ತೆ ಗರಿಗೆದರಿದ ಕೂದಲು ಉದ್ಯಮ

ಮ್ಯಾಂಗೋ ದ್ವೀಪದಲ್ಲಿನ ಮನೆಗಳು ನಾಶ!

ರಾಷ್ಟ್ರದ ಪ್ರಮುಖ ದ್ವೀಪವಾದ ತೊಗಟಾಪು ಮತ್ತು 'ಯುವಾ ಮತ್ತು ಹಾ'ಪೈ ದ್ವೀಪಗಳಲ್ಲಿ 15 ಮೀಟರ್‌ಗಳಷ್ಟು ಸುನಾಮಿ ಅಲೆಗಳು ಎದ್ದವು. ಸರ್ಕಾರದ ವರದಿಯ ಪ್ರಕಾರ, ಮ್ಯಾಂಗೋ ದ್ವೀಪದಲ್ಲಿನ ಎಲ್ಲಾ ಮನೆಗಳು ನಾಶವಾದವು ಮತ್ತು ಫೋನೊಯಿಫುವಾ ಮತ್ತು ನೊಮುಕಾ ದ್ವೀಪಗಳಲ್ಲಿ ವ್ಯಾಪಕ ಹಾನಿ ವರದಿಯಾಗಿದೆ. USGS ವಿಜ್ಞಾನಿ ಪೋಲೆಂಡ್ ಪ್ರಕಾರ, ಸ್ಫೋಟವು ಅದರ ಶಕ್ತಿ ಮತ್ತು ವಿನಾಶದ ಹೊರತಾಗಿಯೂ ತುಲನಾತ್ಮಕವಾಗಿ ಚಿಕ್ಕದಾಗಿದೆ. 1991 ರ ಮೌಂಟ್ ಪಿನಾಟುಬೊ ಸ್ಫೋಟದಂತೆ - ಗಂಟೆಗಳ ಕಾಲ ಬೂದಿಯನ್ನು ಉಗುಳುವ ಕೆಲವು ಸ್ಫೋಟಗಳಂತಲ್ಲದೆ - ಈ ಸ್ಫೋಟವು 60 ನಿಮಿಷಗಳಿಗಿಂತ ಕಡಿಮೆ ಕಾಲ ಬೂದಿಯನ್ನು ಬಿಡುಗಡೆ ಮಾಡಿತು ಎಂದು ಎನ್‌ಪಿಆರ್‌ ವರದಿ ಮಾಡಿದೆ.
First published: