• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • Narendra Modi: ಭಾರತದ ಪ್ರಧಾನಿ ವಿರುದ್ಧ ಸಾಕ್ಷ್ಯಚಿತ್ರ ತಯಾರಿಸಿದ್ದ ಬಿಬಿಸಿಗೆ ಸಂಕಷ್ಟ, ಬಿತ್ತು 10 ಸಾವಿರ ಕೋಟಿ ಮಾನನಷ್ಟ ಮೊಕದ್ದಮೆ!

Narendra Modi: ಭಾರತದ ಪ್ರಧಾನಿ ವಿರುದ್ಧ ಸಾಕ್ಷ್ಯಚಿತ್ರ ತಯಾರಿಸಿದ್ದ ಬಿಬಿಸಿಗೆ ಸಂಕಷ್ಟ, ಬಿತ್ತು 10 ಸಾವಿರ ಕೋಟಿ ಮಾನನಷ್ಟ ಮೊಕದ್ದಮೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

2002ರ ಗುಜರಾತ್ (Gujarat) ಗಲಭೆಗಳನ್ನು ಉಲ್ಲೇಖಿಸಿ ಅಂದಿನ ರಾಜ್ಯದ ಮುಖ್ಯಮಂತ್ರಿ ಮೋದಿ ಕುರಿತು ಬಿಬಿಸಿಯ 'ಇಂಡಿಯಾ: ದಿ ಮೋದಿ ಕ್ವೆಶ್ಚನ್' (India: The Modi Question) ಸಾಕ್ಷ್ಯಚಿತ್ರ ವಿವಾದಕ್ಕೀಡಾಗಿತ್ತು.

 • Share this:

ನವದೆಹಲಿ: ಜಾಗತಿಕ ಸುದ್ದಿ ಸಂಸ್ಥೆಯಾದ ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ (BBC) ಇತ್ತೀಚೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಕುರಿತು ನಿರ್ಮಿಸಿದ್ದು ಸಾಕ್ಷ್ಯಚಿತ್ರವನ್ನು (Documentary) ಸಾಕಷ್ಟು ವಿವಾದಕ್ಕೀಡಾಗಿತ್ತು. 2002ರ ಗುಜರಾತ್ (Gujarat) ಗಲಭೆಗಳನ್ನು ಉಲ್ಲೇಖಿಸಿ ಅಂದಿನ ರಾಜ್ಯದ ಮುಖ್ಯಮಂತ್ರಿ ಮೋದಿ ಕುರಿತು ಬಿಬಿಸಿಯ 'ಇಂಡಿಯಾ: ದಿ ಮೋದಿ ಕ್ವೆಶ್ಚನ್' (India: The Modi Question) ಸಾಕ್ಷ್ಯಚಿತ್ರ ವಿವಾದಕ್ಕೀಡಾಗಿತ್ತು. ಪ್ರಧಾನಿಗೆ ಅವಮಾನ ಮಾಡುತ್ತಿದೆ ಎಂದು ಈ ಸಾಕ್ಷ್ಯಚಿತ್ರವನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಇದೀಗ ಸಾಕ್ಷ್ಯಚಿತ್ರವು ಭಾರತ, ನ್ಯಾಯಾಂಗ ಮತ್ತು ಪ್ರಧಾನಿಯ ಚಿತ್ರಣವನ್ನು ದೂಷಿಸುತ್ತದೆ ಎಂದು ಗುಜರಾತ್​ ಮೂಲದ ಎನ್‌ಜಿಒ ಸಲ್ಲಿಸಿದ ಮಾನನಷ್ಟ ಮೊಕದ್ದಮೆ ಪ್ರಕರಣ ದಾಖಲಿಸಲಾಗುತ್ತು. ಇದೀಗ ದೆಹಲಿ ಹೈಕೋರ್ಟ್ ಸೋಮವಾರ ಬಿಬಿಸಿಗೆ ಸಮನ್ಸ್ ಜಾರಿ ಮಾಡಿದೆ.


ಗುಜರಾತ್ ಮೂಲದ ಎನ್​ಜಿಒ ಸಂಸ್ಥೆ, ಜಸ್ಟಿಸ್ ಆನ್ ಟ್ರಯಲ್ ಎಂಬ ಸಂಸ್ಥೆಯು ದೆಹಲಿ ಹೈಕೋರ್ಟ್‌ನಲ್ಲಿ ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ (ಬಿಬಿಸಿ) ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ಹೂಡಿದೆ. ಬಿಬಿಸಿಯ ಎರಡು ಭಾಗಗಳ ಸಾಕ್ಷ್ಯಚಿತ್ರ 'ಇಂಡಿಯಾ: ದಿ ಮೋದಿ ಕ್ವೆಶ್ಚನ್' ಶೀರ್ಷಿಕೆಯು ಪ್ರಧಾನ ಮಂತ್ರಿ ಪ್ರತಿಷ್ಠೆಗೆ ಮಸಿ ಬಳಿದಿದೆ. ಪ್ರಧಾನಿ ಅವರ ಮೇಲೆ ಮಾನಹಾನಿಕರವಾದ ಆರೋಪವನ್ನು ಮಾಡುತ್ತದೆ. ದೇಶ ಮತ್ತು ನ್ಯಾಯಾಂಗದ ಪ್ರತಿಷ್ಠೆಯ ಅವಮಾನ ಮಾಡಿದ ಎಂದು ಎನ್​ಜಿಒ ಸಂಸ್ಥೆ ವಾದ ಮಂಡಿಸಿತ್ತು. ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್​ ಬಿಬಿಸಿ ಯುಕೆ ಜೊತೆಗೆ, ಬಿಬಿಸಿ ಇಂಡಿಯಾಗೂ ಸಮನ್ಸ್ ಜಾರಿ ಮಾಡಿದೆ.


ಇದನ್ನೂ ಓದಿ: Narendra Modi: ಈ ದೇಶದ ಪ್ರಧಾನಿಯೇ ಖುದ್ದು ಮೋದಿ ಕಾಲಿಗೆ ಬಿದ್ರು! ಇದೇ ಮೊದಲ ಬಾರಿಗೆ ಸಂಪ್ರದಾಯ ಬದಲಿಸಿಕೊಂಡ ದ್ವೀಪರಾಷ್ಟ್ರ


ಸಾಕ್ಷ್ಯವನ್ನು ಸಲ್ಲಿಸಲು ಸೂಚನೆಗಳು


ಈ ಅರ್ಜಿ ಸಲ್ಲಿಸಿರುವ ಎನ್‌ಜಿಒ ಪರವಾಗಿ ಹಿರಿಯ ವಕೀಲ ಹರೀಶ್ ಸಾಳ್ವೆ ವಾದ ಮಂಡಿಸಿದರು. ಭಾರತ ಮತ್ತು ನ್ಯಾಯಾಂಗ ಸೇರಿದಂತೆ ಇಡೀ ದೇಶವನ್ನು ದೂಷಿಸಲು ಈ ಸಾಕ್ಷ್ಯಚಿತ್ರವನ್ನು ಮಾಡಿದ ಬಿಬಿಸಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗಿದೆ ಎಂದು ಅವರು ಹೇಳಿದರು. ಈ ಸಾಕ್ಷ್ಯಚಿತ್ರದ ಮೂಲಕ ಪ್ರಧಾನಿಗೆ ಉದ್ದೇಶಪೂರ್ವಕ ಅವಮಾನ ಮಾಡಲಾಗಿದೆ ಎಂದು ಸಾಳ್ವೆ ವಾದಿಸಿದರು. ಸಾಕ್ಷ್ಯಚಿತ್ರವು ಮಾನಹಾನಿಕರ ಮತ್ತು ದೇಶದ ಘನತೆಗೆ ಕಳಂಕ ತಂದಿದೆ ಎಂದು ವಾದಿಸಿದ್ದಾರೆ ಎಂದು ಪಿಟಿಐ ವರದಿ ತಿಳಿಸಿದೆ. ಪರಿಣಾಮವಾಗಿ, ಈ ಬಗ್ಗೆ ಸಂಪೂರ್ಣ ಸಾಕ್ಷ್ಯವನ್ನು ಸಲ್ಲಿಸುವಂತೆ ನ್ಯಾಯಮಂಡಳಿ ಬಿಬಿಸಿಗೆ ನೋಟಿಸ್ ಜಾರಿ ಮಾಡಿದೆ. ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 15ಕ್ಕೆ ಮುಂದೂಡಲಾಗಿದೆ.
10000 ಕೋಟಿ ಮಾನನಷ್ಟ ಮೊಕದ್ದಮೆ


ಸಾಕ್ಷ್ಯಚಿತ್ರ ದೇಶದ ಪ್ರತಿಷ್ಠೆಗೆ ಮಸಿ ಬಳಿಯುವ ವಿಷಯವನ್ನು ಒಳಗೊಂಡಿದೆ ಮತ್ತು ಭಾರತದ ಪ್ರಧಾನ ಮಂತ್ರಿ, ಭಾರತೀಯ ನ್ಯಾಯಾಂಗ ಮತ್ತು ಭಾರತೀಯ ಕ್ರಿಮಿನಲ್ ನ್ಯಾಯ ವ್ಯವಸ್ಥೆಯ ವಿರುದ್ಧ ಸುಳ್ಳು ಮತ್ತು ಮಾನಹಾನಿಕರ ಆರೋಪಗಳನ್ನು ಮತ್ತು ಒಳನೋಟಗಳನ್ನು ಹೊಂದಿದೆ ಎಂದು ವಾದಿಸಲಾಗಿದೆ. ಪ್ರತಿವಾದಿಗಳ ಮೇಲಿನ ನಡವಳಿಕೆಯು ಕ್ರಮಬದ್ಧವಾಗಿದೆ ಎಂದು ನ್ಯಾಯಾಲಯವು ಗಮನಿಸಿದೆ.


ಇದನ್ನೂ ಓದಿ:  Mangaluru News: ಪ್ರಧಾನಿ ಮುಂದೆ ಕಾಂತಾರ ನೃತ್ಯ! ತುಳು ಸಂಸ್ಕೃತಿಯ ʼವಾ ಪೊರ್ಲು ಯಾʼ


ಪ್ರಧಾನಿ ಮೋದಿ ಟೀಕೆ


ಕೇಂದ್ರ ಸರ್ಕಾರ ಈಗಾಗಲೇ ಬಿಬಿಸಿ ಸಾಕ್ಷ್ಯಚಿತ್ರ 'ಇಂಡಿಯಾ: ದಿ ಮೋದಿ ಕ್ವೆಶ್ಚನ್' ಅನ್ನು ನಿಷೇಧಿಸಿದೆ. 2002ಗುಜರಾತ್ ಗಲಭೆಗಳ ಸಮಯದಲ್ಲಿ ಪ್ರಧಾನಿ ಮೋದಿ ಅವರು ಆ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಅಂದಿನ ಆ ಘಟನೆ ನಂತರ ಅವರ ಮೇಲೆ ಹಲವು ಆರೋಪಗಳು ಬಂದಿದ್ದವು. ಆದರೆ ಅವರ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಆದರೂ ಇದಕ್ಕೆ ವ್ಯತಿರಿಕ್ತವಾಗಿ ಬಿಬಿಸಿ ಮೋದಿ ವಿರುದ್ಧ ಸಾಕ್ಷ್ಯಚಿತ್ರ ಮಾಡಿದೆ.

top videos


  ಈ ಸರಣಿಯು ಭಾರತೀಯ ನ್ಯಾಯ ವ್ಯವಸ್ಥೆಯ ಮೇಲಿನ ದಾಳಿಯಾಗಿದೆ ಎಂದು ಬಿಜೆಪಿ ಆರೋಪಿಸಿದೆ. ತಮ್ಮ ಪಕ್ಷ ಮತ್ತು ಮೋದಿಯನ್ನು ಗುರಿಯಾಗಿಸಿಕೊಂಡು ಬಿಬಿಸಿ ಈ ಸಾಕ್ಷ್ಯಚಿತ್ರವನ್ನು ಮಾಡಿದೆ ಎಂದು ಪಕ್ಷದ ವಲಯಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ನಂತರ ತೆರಿಗೆ ವಂಚನೆಯ ಆರೋಪದ ಮೇಲೆ ಬಿಬಿಸಿ ಕಚೇರಿಗಳಲ್ಲಿಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದರು.

  First published: