Video: ನ್ಯೂಸ್​​ ಓದುವಾಗ ಪಾರ್ಶ್ವವಾಯುವಿಗೆ ಒಳಗಾದ ಆ್ಯಂಕರ್​​! ವಿಡಿಯೋ ಇಲ್ಲಿದೆ ನೋಡಿ

ಎನ್​ಬಿಸಿ ಯೂನಿವರ್ಸಲ್​ ಪತ್ರಕರ್ತೆ ಜೂಲಿ ಚಿನ್​ ಅವರು ಸುದ್ದಿ ಓದುವಾಗ ಈ ಘಟನೆ ನಡೆದಿದೆ. ತುಲ್ಸಾದ ಎನ್​ಬಿಸಿ ಸ್ಟುಡಿಯೋದಲ್ಲಿ ಟೆಲಿಪ್ರಾಂಪ್ಟರ್​ ನೋಡುತ್ತಾ ಸುದ್ದಿ ಓದುವಾಗ ಈ ಸಮಸ್ಯೆ ಎದುರಿಸಿದ್ದಾರೆ.

ಜೂಲಿ ಚಿನ್

ಜೂಲಿ ಚಿನ್

  • Share this:
    ಟಿವಿ ಆ್ಯಂಕರ್​ವೊಬ್ಬರು (Tv Anchor) ಸುದ್ದಿಯನ್ನು (News) ಓದುತ್ತಿರುವ ವೇಳೆ ತೊದಲುತ್ತಿರುವ ವಿಡಿಯೋ (Video) ಕ್ಲಿಪ್​ ಅಂತರ್ಜಾಲದಲ್ಲಿ ವೈರಲ್​ (Viral)ಆಗಿದೆ. ಮಹಿಳಾ ಆ್ಯಂಕರ್​ಗೆ ಹಠಾತ್​ ಆಗಿ ಸ್ಟ್ರೋಕ್​ ಆಟ್ಯಾಕ್​ ಆಗುತ್ತದೆ ಈ ವೇಳೆ ಸುದ್ದಿ ಓದಲು ಕಷ್ಟಡುತ್ತಾರೆ. ಸದ್ಯ ಈ ದೃಶ್ಯ ಟ್ವಿಟ್ಟರ್​ನಲ್ಲಿ (Twitter) ವೈರಲ್​ ಆಗಿದೆ.

    ಅಂದಹಾಗೆಯೇ, ಎನ್​ಬಿಸಿ ಯೂನಿವರ್ಸಲ್​ ಪತ್ರಕರ್ತೆ ಜೂಲಿ ಚಿನ್​ ಅವರು ಸುದ್ದಿ ಓದುವಾಗ ಈ ಘಟನೆ ನಡೆದಿದೆ. ತುಲ್ಸಾದ ಎನ್​ಬಿಸಿ ಸ್ಟುಡಿಯೋದಲ್ಲಿ ಟೆಲಿಪ್ರಾಂಪ್ಟರ್​ ನೋಡುತ್ತಾ ಸುದ್ದಿ ಓದುವಾಗ ಈ ಸಮಸ್ಯೆ ಎದುರಿಸಿದ್ದಾರೆ. ಜೂಲಿ ಚಿನ್​ ಅವರು ನಾಸಾದ ಇತ್ತೀಚಿನ ರಾಕೆಟ್​ ಉಡಾವಣೆಯ ಬಗ್ಗೆ ಸುದ್ದಿಯನ್ನು ಓದುತ್ತಿರುತ್ತಾರೆ. ಈ ಸಮಯದಲ್ಲಿ ಅವರಿಗೆ ಓದಲು ಕಷ್ಟವಾಗುತ್ತದೆ. ನಂತರ ಅವರು ತನ್ನ ಸಹೋದ್ಯೋಗಿಗೆ

    ಎನ್‌ಬಿಸಿಯ ಹಿರಿಯ ಕಾರ್ಯನಿರ್ವಾಹಕ ಮೈಕ್ ಸಿಂಗ್ಟನ್ ಈ ವಿಡಿಯೋ ಹಂಚಿಕೊಂಡಿದ್ದು, ಜೂಲಿ ಚಿನ್​ ನಾಸಾದ ಇತ್ತೀಚಿನ ಉಡಾವಣೆಯ ಸುದ್ದಿಯನ್ನು ಓದುತ್ತಿರುದ್ದರು. ಆದರೆ ಈ ವೇಳೆ ಅವರು ಸಾಕಷ್ಟು ಬಾರಿ ತೊದಲುತ್ತಾರೆ. ಜೂಲಿ ನಂತರ ಪ್ರೇಕ್ಷಕರಿಗೆ ಕ್ಷಮೆಯಾಚಿಸಿ ತನ್ನ ಸಹೋದ್ಯೋಗಿಯೊಬ್ಬರು ಪ್ರಸ್ತುತಪಡಿಸಲಿರುವ ಹವಾಮಾನ ಕುರಿತ ಸುದ್ದಿಯ ಬಗ್ಗೆ ವಿಭಾಗವನ್ನು ವರ್ಗಾಯಿಸುತ್ತಾರೆ.

    ಜೂಲಿ ಇದ್ದಕ್ಕಿಂದ್ದಂತೆಯೇ ಸುದ್ದಿ ಓದುವ ವೇಳೆ ತೊದಲುತ್ತಾರೆ. ಬಳಿಕ ಆಕೆಗೆ ಏನೋ ಸಮಸ್ಯೆ ಆಗಿದೆ ಎಂಬ ಅರಿವಾಗುತ್ತದೆ. ಸ್ಟ್ರೋಕ್​ ಆದ ಅನುಭವವನ್ನು ಆಕೆ ಎದುರಿಸಿದಂತೆ ಅನಿಸುತ್ತದೆ. ತಕ್ಷಣ ಸುದ್ದಿ ಓದುತ್ತಿದ್ದ ಆಕೆ ಹವಮಾನ ವಿಭಾಗದ ಸಹೋದ್ಯೋಗಿಗೆ ಹಸ್ತಾಂತರಿಸುತ್ತಾರೆ.

    ಜೂಲಿ ದೇಹದಲ್ಲಿ ವ್ಯತ್ಯಾಸ ಕಂಡುಬಂದಂತೆ ಆಕೆಯ ಸಹೋದ್ಯೋಗಿಗಳು 911 ಕರೆ ಮಾಡುತ್ತಾರೆ. ಆಸ್ಪತ್ರೆಗೆ ಸೇರಿಸುತ್ತಾರೆ. ಸದ್ಯ ಜೂಲಿ ಆರೋಗ್ಯ ಚೆನ್ನಾಗಿದ್ದು, ಈಗ ಅವರು ಚೆತರಿಸಿಕೊಂಡಿದ್ದಾರೆ. ಆದರೆ ಸ್ಟ್ರೋಕ್ ಬಗ್ಗೆ ಎಚ್ಚರಿಕೆ ವಹಿಸುವಂತೆ ಮತ್ತು ಅಂತಹ ಮುನ್ಸೂಚನೆ ಬರುವ ಮುನ್ನ ಜಾಗೃತೆ ವಹಿಸಲು ತನ್ನ ಟಿವಿ ವೀಕ್ಷಕರೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.





    ಅಂದಹಾಗೆಯೇ ಈ ವಿಡಿಯೋವನ್ನು 390 ಸಾವಿರಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಸಿಂಗ್ಟನ್ ಜೂಲಿ ಚಿನ್ ಅವರ ಆರೋಗ್ಯದಲ್ಲಿನ ಬದಲಾವಣೆ ಬಗ್ಗೆ ಹೇಳಿದ್ದಾರೆ.





    ಜೂಲಿ ತಾನು ಆರೋಗ್ಯವಾಗಿದ್ದೇನೆ ಎಂಬುದನ್ನು ತೋರಿಸಲು ಮತ್ತು ಸ್ಟ್ರೋಕ್‌ನಿಂದ ಚೇತರಿಸಿಕೊಳ್ಳುತ್ತಿರುವುದರ ಬಗ್ಗೆ ಹೇಳಲು ಆಸ್ಪತ್ರೆಯಿಂದಲೇ ಫೋಟೋ ತೆಗೆದು ಪೋಸ್ಟ್ ಮಾಡಿದ್ದಾರೆ. ಶೀಘ್ರದಲ್ಲೇ ಕೆಲಸಕ್ಕೆ ಮರಳುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.

    ಜೂಲಿ ಅವರಲ್ಲಿ ವ್ಯತ್ಯಾಸ ಕಂಡದ್ದನ್ನು ಗಮನಿಸಿದ ಆಕೆಯ ಸಹೋದ್ಯೋಗಿಗಳು ತಕ್ಷಣ ಆಸ್ಪತ್ರೆಗೆ ಸೇರಿಸುವಲ್ಲಿ ಸಹಾಯ ಮಾಡಿದ್ದಾರೆ. ಹಾಗಾಗಿ ಅವರಿಗೆ ಧನ್ಯವಾದಗಳನ್ನು ಜೂಲಿ ತಿಳಿಸಿದ್ದಾರೆ.

    ಕೆಲವು ದಿನಗಳ ಹಿಂದೆ ಫರಾ ನಾಸರ್ ಎಂಬ ಪತ್ರಕರ್ತೆ ಲೈವ್ ಟಿವಿಯಲ್ಲಿ ಸುದ್ದಿ ನೀಡುತ್ತಿದ್ದಾಗ ನೊಣವನ್ನು ನುಂಗಿದ್ದರು. ನಂತರ ಆಕೆ ಘಟನೆಯ ಬಗ್ಗೆ ಟ್ವೀಟ್ ಮಾಡಿ ವಿಡಿಯೋವೊಂದು ಹೆಚ್ಚು ವೈರಲ್ ಆಗಿತ್ತು.
    Published by:Harshith AS
    First published: