ಉತ್ತರ ಪ್ರದೇಶ: ಆಕೆ ನವವಿವಾಹಿತೆ (Newly Married Woman), ಮದುವೆಯಾಗಿ (Marriage) ಹೆಚ್ಚೇನೂ ದಿನಗಳಾಗಿರಲಿಲ್ಲ. ಕೇವಲ ಮೂರೇ ಮೂರು ದಿನಗಳು (3 Days) ಕಳೆದಿತ್ತು ಅಷ್ಟೇ. ಗಂಡನ (Husband) ಮನೆಗೆ ಕಾಲಿಟ್ಟಿದ್ದ ಆಕೆ, ಹೊಸ ಬದುಕು ಕಟ್ಟಿಕೊಳ್ಳುವ ಕನಸು ಕಾಣುತ್ತಿದ್ದಳು. ಗಂಡ, ಮಕ್ಕಳು, ಅತ್ತೆ, ಮಾವ, ಕುಟುಂಬಸ್ಥರೊಂದಿಗೆ (Family) ತುಂಬು ಜೀವನ ನಡೆಸಬೇಕು, ನೂರಾರು ವರ್ಷಗಳ ಕಾಲ ಸುಖವಾಗಿ ಬಾಳಬೇಕು ಅಂತ ಆಸೆ ಪಟ್ಟಿದ್ದಳು. ಆದರೆ ಆಸೆ ಪಟ್ಟಿದ್ದೆಲ್ಲ ಸಿಗಲೇ ಬೇಕು ಅಂತ ಏನೂ ಇಲ್ವಲ್ಲ? ಆಕೆ ಒಂದು ಎಣಿಸಿದ್ದರೆ, ವಿಧಿ ಎಣಿಸಿದ್ದೇ ಬೇರೆಯಾಗಿತ್ತು. ಮದುವೆಯಾಗಿ ಮೂರನೇ ದಿನಕ್ಕೆ ಬೆಳಗ್ಗೆ ಎದ್ದವಳೇ. ಸ್ನಾನ (Bath) ಮಾಡಬೇಕು ಅಂತ ಬಾತ್ರೂಂಗೆ (Bathroom) ಹೋದಳು. ಅಷ್ಟೇ ನೋಡಿ.. ಆಕೆ ವಾಪಸ್ ಬರಲೇ ಇಲ್ಲ! ಅಷ್ಟಕ್ಕೂ ಏನಾಯ್ತು ಅಲ್ಲಿ, ಬಾತ್ರೂಂನ ಒಳಗೆ ನಡೆದಿದ್ದೇನು? ಇಲ್ಲಿದೆ ನೋಡಿ, ನೀವೂ ಎಚ್ಚೆತ್ತುಕೊಳ್ಳಬೇಕಾದ ಸ್ಟೋರಿ..
ಈ ದುರ್ಘಟನೆ ನಡೆದಿದ್ದು ಎಲ್ಲಿ?
ಉತ್ತರ ಪ್ರದೇಶ ರಾಜ್ಯದ ಫಿರೋಜಾಬಾದ್ನಲ್ಲಿ ಇಂಥದ್ದೊಂದು ದುರ್ಘಟನೆ ಸಂಭವಿಸಿದೆ. 27 ವರ್ಷದ ಬ್ಯಾಂಕ್ ಉದ್ಯೋಗಿ ನಿಧಿ ಗುಪ್ತಾ ಎಂಬಾಕೆಯೇ ಮೃತಪಟ್ಟಿದ್ದಾಳೆ. ಕಳೆದ 3 ದಿನಗಳ ಹಿಂದಷ್ಟೇ ಬಳೆ ಉದ್ಯಮಿ ನಿಶ್ಚಲ್ ಗುಪ್ತಾ ಎಂಬುವರನ್ನು ಮದುವೆಯಾಗಿದ್ದಳು. ಆದರೆ ಮೂರೇ ದಿನಕ್ಕೆ ನಿಧಿ ಬದುಕು ಮುಗಿದು ಹೋಗಿದೆ.
ಸ್ನಾನದ ಮನೆಯಲ್ಲೇ ಅಡಗಿ ಕುಳಿತಿದ್ದ ಯಮ!
ನಿಧಿ ಗುಪ್ತಾ ನಿಶ್ಚಲ್ ಗುಪ್ತಾನನ್ನು ಮದುವೆಯಾಗಿ, ಗಂಡನ ಮನೆಗೆ ಸೇರಿದ್ದಾಳೆ. ಮೊದಲ ಹಾಗೂ ಎರಡನೇ ದಿನ ಗಂಡನ ಜೊತೆ, ಕುಟುಂಬಸ್ಥರ ಜೊತೆ ಚೆನ್ನಾಗಿಯೇ ಇದ್ದಾಳೆ. ಮೂರನೇ ದಿನವೂ ನಾರ್ಮಲ್ ಆಗಿಯೇ ಇದ್ದ ನಿಧಿ, ಸ್ನಾನ ಮಾಡುವುದಕ್ಕೆ ಅಂತ ಹೊರಟಿದ್ದಾಳೆ. ಸ್ನಾನದ ರೂಮಿಗೆ ಹೋಗಿದ್ದೊಂದೇ ಬಂತು. ಮತ್ತೆ ಆಕೆ ಅಲ್ಲಿಂದ ವಾಪಸ್ ಬಂದಿದ್ದು ಶವವಾಗಿ!
ಇದನ್ನೂ ಓದಿ: Rape : ಅಪ್ರಾಪ್ತೆಯನ್ನು ರೇಪ್ ಮಾಡಿ ವಿಡಿಯೋ ವೈರಲ್ ಮಾಡಿದ ಕಿರಾತಕ
ಗ್ಯಾಸ್ ಲೀಕ್ ಆಗಿ ಮೃತಪಟ್ಟ ನಿಧಿ
ನಿಧಿ ಗುಪ್ತಾ ಸ್ನಾನಕ್ಕೆ ಹೋಗಿದ್ದ ಬಾತ್ ರೂಂನಲ್ಲಿ ಗ್ಯಾಸ್ ಗೀಸರ್ ಅಳವಡಿಸಲಾಗಿತ್ತು. ಆದರೆ ಅದು ನಿಧಿ ಹೋಗುವ ಮುನ್ನವೇ ಲೀಕ್ ಆಗಿ, ಗ್ಯಾಸ್ ಹೊರಬಂದಿದೆ. ಅಷ್ಟೇ ನೋಡಿ, ಒಮ್ಮೆ ಉಸಿರು ಎಳೆದುಕೊಂಡ ನಿಧಿಗೆ ಉಸಿರೇ ಕಟ್ಟಿದಂತಾಗಿದೆ. ಒಮ್ಮೆ ಜೋರಾಗಿ ಕಿರಿಚಾಡಿ, ಬಾಗಿಲು ಬಡಿಯುವ ಪ್ರಯತ್ನ ಮಾಡಿದ್ದಾಳೆ. ಆದರೆ ಮುಂದೆ ಅವಳಿಗೆ ಅವಕಾಶವೇ ಕೊಡದಂತೆ ವಿಷಾನಿಲ ಆಕೆಯ ದೇಹ ಸೇರಿದೆ. ಕ್ಷಣಮಾತ್ರದಲ್ಲೇ ನಿಧಿ ಅಲ್ಲಿಯೇ ಪ್ರಾಣಬಿಟ್ಟಿದ್ದಾಳೆ.
ಸಹಾಯಕ್ಕೆ ಕೂಗಿದರೂ ಹೊರಕ್ಕೆ ಕೇಳಿಸಲಿಲ್ಲ
ಮದುವೆಯಾಗಿ ಕೇವಲ ಮೂರು ದಿನಗಳು ಕಳೆದಿತ್ತಷ್ಟೇ. ಆ ಮನೆಯಲ್ಲಿ ಮದುವೆ ಸಂಭ್ರಮ ಇನ್ನೂ ಮನೆಮಾಡಿತ್ತು. ಬಂದ ನೆಂಟರು, ಆಪ್ತರೆಲ್ಲ ಅಲ್ಲೇ ಇದ್ದರು. ಎಲ್ಲರೂ ತಮಾಷೆ ಮಾಡುವುದು, ಗದ್ದಲ ಮಾಡುವುದರಲ್ಲೇ ಬ್ಯುಸಿಯಾಗಿದ್ದರು. ಹೀಗಾಗಿ ಒಳಗಡೆ ಬಾತ್ ರೂಂನಲ್ಲಿ ನಿಧಿ ಒಮ್ಮೆ ಕಿರುಚಿಕೊಂಡಿದ್ದು ಯಾರಿಗೂ ಕೇಳಲೇ ಇಲ್ಲ.
ಮನೆಯವರು ಬಂದು ನೋಡುವಷ್ಟರಲ್ಲಿ ಕಾಲ ಮಿಂಚಿ ಹೋಗಿತ್ತು
ಸ್ನಾನಕ್ಕೆ ಹೋಗಿದ್ದ ನಿಧಿ ಗುಪ್ತಾ ಇನ್ನೂ ಬರಲಿಲ್ಲವಲ್ಲ ಅಂತ ಮನೆಯ ಹೆಂಗಸರು ನೋಡಿದ್ದಾರೆ. ಬೇಗ ಸ್ನಾನ ಮುಗಿಸಿ ಬರುವಂತೆ ಹೊರಗಿನಿಂದ ಬಾಗಿಲು ಬಡಿದ್ದಾರೆ. ಒಂದೆರಡು ಬಾರಿ ಬಾಗಿಲು ಬಡಿದರೂ ಯಾವುದೇ ರೆಸ್ಪಾನ್ಸ್ ಬರಲಿಲ್ಲ. ಆಗ ಮನೆಯವರೆಲ್ಲ ಗಾಬರಿಯಿಂದ ಬಾಗಿಲು ಒಡೆದು ನೋಡಿದ್ದಾರೆ. ಅಷ್ಟರಲ್ಲಿ ನಿಧಿ ಪ್ರಾಣಪಕ್ಷಿ ಹಾರಿಹೋಗಿದ್ದು, ಆಕೆ ಶವವಾಗಿ ಪತ್ತೆಯಾಗಿದ್ದಳು.
ಇದನ್ನೂ ಓದಿ: Hijab Controversy: ಹೈಕೋರ್ಟ್ನಲ್ಲಿ ಹಿಜಾಬ್ ಪ್ರಕರಣ ವಿಚಾರಣೆ, ಇಂದೇ ತೀರ್ಪು ಪ್ರಕಟ ಸಾಧ್ಯತೆ
ಗ್ಯಾಸ್ನಲ್ಲಿ ಇರುವುದು ಡೇಂಜರ್ ಕಾರ್ಬನ್ ಮೊನಾಕ್ಸೈಡ್
ಸಾಮಾನ್ಯವಾಗಿ ಗ್ಯಾಸ್ ಗೀಸರ್ನೊಳಗೆ ಕಾರ್ಬನ್ ಮೊನಾಕ್ಸೈಡ್ ಎಂಬ ರಾಸಾಯನಿಕ ಅನಿಲ ಬಳಸಿರುತ್ತಾರೆ. ಇದು ಮನುಷ್ಯನ ಉಸಿರಾಟದಲ್ಲಿ ಸೇರಿದರೆ ಅಪಾಯಕಾರಿ. ಇದು ದೇಹದೊಳಗಿನ ಆಮ್ಲಜನಕ ಬಳಕೆ ಅಸ್ತವ್ಯಸ್ತ ಮಾಡಿ, ಕೇಂದ್ರ ನರಮಂಡಲವನ್ನು ಡ್ಯಾಮೇಜ್ ಮಾಡುತ್ತದೆ. ಬಳಿಕ ಹೃದಯದ ಮೇಲೆ ಹೆಚ್ಚು ಅವಲಂಬಿತವಾಗಿರುವ ಅಂಗ ವ್ಯವಸ್ಥೆಗಳನ್ನು ಹಾಳು ಮಾಡುತ್ತದೆ. ಕೇವಲ 2-3 ಉಸಿರಾಟದ ನಂತರ ಪ್ರಜ್ಞಾಹೀನತೆ ಆಗುತ್ತದೆ. ಬಳಿಕ ಮೂರು ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಸಾವು ಸಂಭವಿಸುವ ಸಾಧ್ಯತೆ ಇರುತ್ತದೆ.
ಸದ್ಯ ಸಂಭ್ರಮ ಇದ್ದಿದ್ದ ಮನೆಯಲ್ಲಿ ಶೋಕ ಆವರಿಸಿದೆ. ಮಗಳನ್ನು ಕಳೆದುಕೊಂಡು ಹೆತ್ತವರು, ಸೊಸೆಯನ್ನು ಕಳೆದುಕೊಂಡು ಕುಟುಂಬಸ್ಥರು ಕಣ್ಣೀರಿಡುತ್ತಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಮುಂದುವರೆಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ