ಇಕ್ಕಟ್ಟಾಗಿರುವ ಪಾರ್ಕಿಂಗ್​ನಿಂದ ಕಾರು ತೆಗೆದ ವ್ಯಕ್ತಿಯ ಕೌಶಲ್ಯಕ್ಕೆ ನೆಟ್ಟಿಗರು ಫಿದಾ: ವಿಡಿಯೋ ವೈರಲ್​..!

ಒಂದೆಡೆ ಕಾರು ಪಾರ್ಕಿಂಗ್ ಸ್ಥಳದಲ್ಲಿ ಹಿಂದೆ ಮುಂದೆ ಕೊಂಚವೂ ಜಾಗವಿಲ್ಲದಂತೆ ಕಾರುಗಳು ನಿಂತಿರುತ್ತವೆ. ಅಲ್ಲಿಗೆ ಬಂದ ವ್ಯಕ್ತಿಯೊಬ್ಬರು ತನ್ನ ಜೊತೆಯಲ್ಲಿದ್ದ ವ್ಯಕ್ತಿಗೆ ಸ್ವಲ್ಪ ನೋಡುವಂತೆ ಹೇಳಿ ಮುಂದೆ ಹಾಗೂ ಹಿಂದೆಯೂ ಬಹಳ ಅಂಟಿಕೊಂಡು ನಿಂತಿದ್ದ ಕಾರುಗಳಿಗೆ ಕೊಂಚವೂ ಹಾನಿಯಾಗದಂತೆ ಕಾರನ್ನು ಹೊರತೆಗೆಯುತ್ತಾರೆ.

ಇಕ್ಕಟ್ಟಾದ ಪಾರ್ಕಿಂಗ್​ನಿಂದ ಕಾರನ್ನು ಡ್ಯಾಮೇಜ್ ಆಗದಂತೆ ಹೊರ ತೆಗೆದ ವ್ಯಕ್ತಿ

ಇಕ್ಕಟ್ಟಾದ ಪಾರ್ಕಿಂಗ್​ನಿಂದ ಕಾರನ್ನು ಡ್ಯಾಮೇಜ್ ಆಗದಂತೆ ಹೊರ ತೆಗೆದ ವ್ಯಕ್ತಿ

  • Share this:
ಕಾರು ಚಲಾಯಿಸುವುದು ಬಹುತೇಕರ ಕನಸು. ಆದರೆ ಕಾರು ಚಾಲನೆ ಅಷ್ಟು ಸುಲಭದ ಕೆಲಸವಲ್ಲ. ಕೆಲವೊಮ್ಮೆ ಕಾರಿನ ಬಗ್ಗೆ ಸಂಪೂರ್ಣ ಬಲ್ಲವರಿಂದಲೂ ಎಡವಟ್ಟು, ಅಪಘಾತಗಳು ಸಂಭವಿಸುವುದುಂಟು. ಈ ಎಲ್ಲ ಕಾರಣಗಳಿಂದ ಕಾರು ಚಾಲನೆಯನ್ನು ಒಂದು ಕೌಶಲ್ಯ ಎಂದೇ ಕರೆಯಲಾಗುತ್ತದೆ. ಕಾರು ಚಾಲನೆ ಎಂದರೆ ಕೇವಲ ಕಾರು ಓಡಿಸುವುದು ಮಾತ್ರವಲ್ಲ. ಇದು ಕಾರು ನಿಲ್ಲಿಸುವುದು, ನಿಲ್ಲಿಸಿದ ಕಾರನ್ನು ಯಾವುದಕ್ಕೂ ಹಾನಿಯಾಗದಂತೆ ತೆಗೆಯುವುದು, ಟ್ರಾಫಿಕ್‍ನಲ್ಲಿ ಚಲಾಯಿಸುವುದು ಈ ಎಲ್ಲ ಅಂಶಗಳನ್ನು ಒಳಗೊಂಡಿರುತ್ತದೆ. ಇವೆಲ್ಲವುದರ ಜೊತೆಗೆ ಕಾರು ಚಾಲಕನಿಗೆ ಮುಖ್ಯವಾಗಿ ಪಾರ್ಕಿಂಗ್​ನಲ್ಲಿ ಕಾರನ್ನು ನಿಲ್ಲಿಸುವುದು ಮತ್ತು ಹೊರಗೆ ತೆಗೆಯುವ ಕಲೆ ಕರಗತವಾಗಿರಬೇಕು. ಇಲ್ಲವಾದಲ್ಲಿ ತಮ್ಮ ಕಾರಿನ ಜೊತೆಗೆ ಬೇರೆಯವರ ಕಾರಿಗೂ ಹಾನಿಯಾಗೋದು ಖಂಡಿತ. ಇದೇ ಕಾರಣಕ್ಕೆ ನ್ಯೂಯಾರ್ಕಿನ ಒಬ್ಬ ವ್ಯಕ್ತಿ ಈಗ ವೈರಲ್ ಆಗುತ್ತಿದ್ದಾರೆ. ಆತ ಇಕ್ಕಟ್ಟಾಗಿರುವ ಪಾರ್ಕಿಂಗ್​ನಿಂದ  ಕಾರನ್ನು ಹೊರತೆಗೆಯುವ ಚಾಕಚಕ್ಯತೆ ವೈರಲ್ ಆಗುತ್ತಿದೆ.

ಒಂದೆಡೆ ಕಾರು ಪಾರ್ಕಿಂಗ್ ಸ್ಥಳದಲ್ಲಿ ಹಿಂದೆ ಮುಂದೆ ಕೊಂಚವೂ ಜಾಗವಿಲ್ಲದಂತೆ ಕಾರುಗಳು ನಿಂತಿರುತ್ತವೆ. ಅಲ್ಲಿಗೆ ಬಂದ ವ್ಯಕ್ತಿಯೊಬ್ಬರು ತನ್ನ ಜೊತೆಯಲ್ಲಿದ್ದ ವ್ಯಕ್ತಿಗೆ ಸ್ವಲ್ಪ ನೋಡುವಂತೆ ಹೇಳಿ ಮುಂದೆ ಹಾಗೂ ಹಿಂದೆಯೂ ಬಹಳ ಅಂಟಿಕೊಂಡು ನಿಂತಿದ್ದ ಕಾರುಗಳಿಗೆ ಕೊಂಚವೂ ಹಾನಿಯಾಗದಂತೆ ಕಾರನ್ನು ಹೊರತೆಗೆಯುತ್ತಾರೆ. ಆ ವಿಡಿಯೋದಲ್ಲಿ ಹಿಂದೆ ಹಾಗೂ ಮುಂದೆ ನಿಂತಿರುವ ಕಾರಿನ ಬಂಪರ್​ಗಳಿಗೆ ಆತನ ಕಾರು ತಾಕಿದರೂ ಸ್ವಲ್ಪ ತೊಂದರೆಯಾಗದ ರೀತಿಯಲ್ಲಿ ಕಾರನ್ನು ಪಾರ್ಕಿಂಗ್ ಸ್ಥಳದಿಂದ ಹೊರಗೆ ತೆಗೆದು ಹೊರಡುತ್ತಾರೆ.ಈತ ಕಾರು ತೆಗೆದಯುವ ಪರಿಯು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, 27 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಈ ವಿಡಿಯೋ ಪೀಪಲ್ ಎಂಬ ಖಾತೆಯಲ್ಲಿ ಈ ಪಾರ್ಕಿಂಗ್ ಸ್ಥಳದಿಂದ ನೀವು ಸಹ ಹೊರಬರಬಹುದೇ ಎಂಬ ಅಡಿ ಬರಹದಡಿ ಶೇರ್ ಆಗಿದೆ. ಈ ವ್ಯಕ್ತಿ ಯಾರು ನ್ಯೂಯಾರ್ಕಿನ ಯಾವ ಸ್ಥಳದಲ್ಲಿ ನಡೆದಿದೆ ಎಂಬ ನಿಖರ ಮಾಹಿತಿ ಇಲ್ಲ.


ಇದನ್ನೂ ಓದಿ: ಬಿಗ್​ ಬಾಸ್​ ಮನೆಯಲ್ಲಿ ಪ್ರಶಾಂತ್ ಸಂಬರಗಿ ತುಂಟಾಟ: ಫಜಿತಿಗೆ ಸಿಲುಕಿದ್ದ ದಿವ್ಯಾ ಉರುಡುಗ..!

ಆದರೆ ಈತನ ಕಾರು ಚಾಲನೆಯ ಕೌಶಲ್ಯತೆಗೆ ನೆಟ್ಟಿಗರು ಮಾತ್ರ ಫುಲ್ ಫಿದಾ ಆಗಿದ್ದಾರೆ. ಇನ್ನು, ಕೆಲವರು ನ್ಯೂಯಾರ್ಕಿನಲ್ಲಿ ಇಂತಹ ಸಂಗತಿಗಳು ಸರ್ವೇ ಸಾಮಾನ್ಯ ಎಂದಿದ್ದಾರೆ. ನೆಟ್ಟಿಗರೊಬ್ಬರು ಕಮೆಂಟ್ ಮಾಡಿ, ಇದಕ್ಕೆ ನಿಜವಾಗಿಯೂ ಪ್ರತಿಭೆ ಮತ್ತು ತಾಳ್ಮೆ ಮುಖ್ಯ ಎಂದು ಹೇಳಿದ್ದಾರೆ.

ಮತ್ತೊಬ್ಬರು, ಅದ್ಭುತ, ನಾನಾಗಿದ್ದರೆ ಮೊದಲು ಅಳುತ್ತಿದೆ ಎಂದು ಆ ವ್ಯಕ್ತಿಯ ಪ್ರತಿಭೆಯನ್ನು ಕೊಂಡಾಡಿದ್ದಾರೆ. ಮತ್ತೊಬ್ಬರು ಇದು ನನಗೆ ಆತಂಕ ಉಂಟು ಮಾಡುತ್ತಿದೆ ಎಂದು ಹೇಳಿದ್ದಾರೆ. ಮತ್ತೊಬ್ಬರು ನಾನು ನ್ಯೂಯಾರ್ಕಿನ ವ್ಯಕ್ತಿಯಾಗಿ ಅಂತಹ ಸ್ಥಳದಿಂದ ಸುಲಭವಾಗಿ ಹೊರಬರಬಹುದು ಎಂದು ಹೇಳಿದ್ದಾರೆ. ಮತ್ತೊಬ್ಬರು ಈ ವ್ಯಕ್ತಿಯಿಂದ ಇಂತಹ ಇಕ್ಕಟ್ಟಾದ ಸ್ಥಳದಿಂದ ಕಾರನ್ನು ಹೇಗೆ ಹೊರತೆಗೆಯುವುದು ಎಂಬ ಬಗ್ಗೆ ಕೆಲವು ಸಲಹೆಗಳನ್ನು ಪಡೆಯೋಣ ಎಂದಿದ್ದಾರೆ.

ಇದನ್ನೂ ಓದಿ: Bigg Boss Kannada 8: ಪ್ರಶಾಂತ್​ ಸಂಬರಗಿ ಮೇಲೆ ಕೈ ಎತ್ತಿದ್ದ ವಿಷಯವಾಗಿ ಕಿಚ್ಚನ ಕೈಯಲ್ಲಿ ಬುದ್ಧಿ ಹೇಳಿಸಿಕೊಂಡ ವೈಷ್ಣವಿ ಗೌಡ..!

ಇದು ಅದ್ಭುತ..! ಯಾರಾದರೂ ಈ ವ್ಯಕ್ತಿ ಈ ರೀತಿಯಲ್ಲಿ ಕಾರನ್ನು ಹೊರ ತೆಗೆಯುತ್ತಾರೆ ಎಂದು ಭಾವಿಸಿದ್ದೀರಾ? ಎಂದು ಪ್ರಶ್ನಿಸಿದ್ದಾರೆ. ಇದನ್ನೇ ಕಾರಿನ ಕೌಶಲ್ಯ ಎನ್ನುವುದು. ಇದನ್ನು ಎಲ್ಲರಿಂದಲೂ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ ಈ ವ್ಯಕ್ತಿಯು ಕಾರಿನ ಚಾಲನೆಯಲ್ಲಿ ಎಷ್ಟು ನಿಸ್ಸೀಮರಾಗಿದ್ದಾರೆ ಎಂದು ತಿಳಿಯುತ್ತದೆ.


Published by:Anitha E
First published: