• Home
 • »
 • News
 • »
 • national-international
 • »
 • Solar System: ಜೀವ ವಿಕಾಸಕ್ಕೆ ಆಧಾರವಾಗಿದ್ದ ಸೌರವ್ಯೂಹದ ಮೊದಲ ಗ್ರಹ ಮಂಗಳ ಅಂತ ಖಾತ್ರಿಪಡಿಸಿದ ಹೊಸ ಸಂಶೋಧನೆ!

Solar System: ಜೀವ ವಿಕಾಸಕ್ಕೆ ಆಧಾರವಾಗಿದ್ದ ಸೌರವ್ಯೂಹದ ಮೊದಲ ಗ್ರಹ ಮಂಗಳ ಅಂತ ಖಾತ್ರಿಪಡಿಸಿದ ಹೊಸ ಸಂಶೋಧನೆ!

ಮಂಗಳ ಗ್ರಹ

ಮಂಗಳ ಗ್ರಹ

ಕೋಪನ್ ಹೇಗನ್ ವಿಶ್ವವಿದ್ಯಾನಿಲಯ ತಂಡವು ಮಂಗಳ ಗ್ರಹವು ಹಿಂದೊಮ್ಮೆ ಸಾಗರದಿಂದ ಆವೃತವಾಗಿತ್ತು ಹಾಗೂ ಸೌರವ್ಯೂಹದಲ್ಲೇ ಜೀವ ವಿಕಸನವನ್ನು ಬೆಂಬಲಿಸಿದ ಮೊದಲ ಗ್ರಹವಾಗಿದೆ ಎಂಬುದನ್ನು ಪತ್ತೆಹಚ್ಚಿದೆ. ಈ ವಿಚಾರದ ಬಗ್ಗೆ ನೆಟ್ಟಿಗರು ಒಂದೊಂದು ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಹಾಗದರೆ ಬನ್ನಿ ಇದರ ಬಗ್ಗೆ ಸತ್ಯಾಂಶವನ್ನು ತಿಳಿದುಕೊಳ್ಳೋಣ ಬನ್ನಿ.

ಮುಂದೆ ಓದಿ ...
 • Share this:

  ಕೋಪನ್ ಹೇಗನ್ (Copenhagen) ವಿಶ್ವವಿದ್ಯಾನಿಲಯ ತಂಡವು ಮಂಗಳ ಗ್ರಹವು (Mars) ಹಿಂದೊಮ್ಮೆ ಸಾಗರದಿಂದ ಆವೃತವಾಗಿತ್ತು ಹಾಗೂ ಸೌರವ್ಯೂಹದಲ್ಲೇ (Solar System) ಜೀವ ವಿಕಸನವನ್ನು ಬೆಂಬಲಿಸಿದ ಮೊದಲ ಗ್ರಹವಾಗಿದೆ ಎಂಬುದನ್ನು ಪತ್ತೆಹಚ್ಚಿದೆ. ಈ ವಿಚಾರದ ಬಗ್ಗೆ ನೆಟ್ಟಿಗರು (Nettie) ಒಂದೊಂದು ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಹಾಗದರೆ ಬನ್ನಿ ಇದರ ಬಗ್ಗೆ ಸತ್ಯಾಂಶವನ್ನು (Real Fact) ತಿಳಿದುಕೊಳ್ಳೋಣ ಬನ್ನಿ.


  ಭೂಮಿ-ಚಂದ್ರನ ವ್ಯವಸ್ಥೆ ರೂಪಿಸಿದ ಶಕ್ತಿಯುತ ಘರ್ಷಣೆ


  ಅಧ್ಯಯನದ ಪ್ರಕಾರ 4.5 ಶತಕೋಟಿ ವರ್ಷಗಳ ಹಿಂದೆ ಮಂಗಳ ಗ್ರಹವು ರೂಪುಗೊಂಡ ನೂರು ಮಿಲಿಯನ್ ವರ್ಷಗಳ ನಂತರ ಕ್ಷುದ್ರಗ್ರಹಗಳಿಂದ ಸ್ಫೋಟಗೊಂಡಿದೆ ಎಂದು ಸಂಶೋಧನಾ ತಂಡ ತಿಳಿಸಿದೆ.


  ಈ ಅವಧಿಯ ನಂತರ, ಭೂಮಿಯ ಮೇಲಿನ ಸಂಭಾವ್ಯ ಜೀವನಕ್ಕೆ ಏನಾದರೂ ದುರಂತ ಸಂಭವಿಸಿದೆ ಹಾಗೂ ಭೂಮಿ ಮತ್ತು ಮಂಗಳನ ಗಾತ್ರದ ಮತ್ತೊಂದು ಗ್ರಹದ ನಡುವೆ ದೈತ್ಯಾಕಾರದ ಘರ್ಷಣೆ ಸಂಭವಿಸಿದೆ ಎಂದು ನಂಬಲಾಗಿದೆ. ಇದು ಶಕ್ತಿಯುತ ಘರ್ಷಣೆಯಾಗಿದ್ದು ಅದು ಭೂಮಿ-ಚಂದ್ರನ ವ್ಯವಸ್ಥೆಯನ್ನು ರೂಪಿಸಿತು.


  ಸಂಪೂರ್ಣ ಗ್ರಹ ನೀರಿನಿಂದ ಆವೃತಗೊಂಡಿತ್ತು


  ಸಂಪೂರ್ಣ ಮಂಗಳ ಗ್ರಹವು ನೀರಿನಿಂದ ಆವೃತವಾಗಿರುವಷ್ಟು ಜಲಸಂಪನ್ಮೂಲ ಗ್ರಹದಲ್ಲಿತ್ತು ಎಂಬುದಾಗಿ ಇನ್ನೊಂದು ಅಧ್ಯಯನ ಸಂಶೋಧನೆ ನಡೆಸಿದೆ.


  ಜೀವ ವಿಕಾಸಕ್ಕೆ ಕಾರಣವಾಗಿರುವ ಎರಡು ಪ್ರಮುಖ ಅಂಶಗಳು ಮಂಗಳ ಗ್ರಹದಲ್ಲಿತ್ತು ಎಂಬುದಾಗಿ ಅಧ್ಯಯನವು ಸೂಚಿಸಿದ್ದು ಆ ಅಂಶಗಳೆಂದರೆ ನೀರು ಹಾಗೂ ಸಾವಯವ ರಸಾಯನಶಾಸ್ತ್ರವಾಗಿದೆ.


  ಈ ಎರಡೂ ಅಂಶಗಳು ಇಲ್ಲದಿದ್ದರೆ ಜೀವ ವಿಕಸನ ಸಾಧ್ಯವಿಲ್ಲ ಎಂದು ಸ್ಟಾರ್ ಮತ್ತು ಪ್ಲಾನೆಟ್ ಫಾರ್ಮೇಶನ್ ಕೇಂದ್ರದ ಪ್ರೊಫೆಸರ್ ಮಾರ್ಟಿನ್ ಬಿಜ್ಜಾರೊ ತಿಳಿಸಿದ್ದಾರೆ.


  A new research confirmed that Mars was the first planet of the solar system which was the basis for the evolution of life
  ಮಂಗಳ ಗ್ರಹ


  ಚರ್ಚೆಯ ವಿಷಯವಾಗಿರುವ ಕೆಲವು ಅಂಶಗಳು


  ಮಂಗಳನ ಮೇಲ್ಮೈಯಲ್ಲಿ ಎಷ್ಟು ನೀರು ಅಸ್ತಿತ್ವದಲ್ಲಿದೆ ಮತ್ತು ಎಷ್ಟು ಸಮಯದವರೆಗೆ ಎಂಬುದು ಇನ್ನೂ ಚರ್ಚೆಯ ವಿಷಯವಾಗಿದೆ. ಹೊಸ ಸಂಶೋಧನೆಯು ಕ್ಷುದ್ರಗ್ರಹಗಳು ಕನಿಷ್ಠ 980 ಅಡಿ (300 ಮೀಟರ್) ಆಳವಾದ ಮಂಗಳದ ಮೇಲ್ಮೈಗೆ ಸಾಕಷ್ಟು ನೀರನ್ನು ತಲುಪಿಸಿದೆ ಎಂದು ಸೂಚಿಸುತ್ತದೆ.


  ಕೆಲವು ಪ್ರದೇಶಗಳಲ್ಲಿ, ಸಾಗರವು 0.62 ಮೈಲುಗಳಷ್ಟು (ಒಂದು ಕಿಲೋಮೀಟರ್) ಆಳವಿರಬಹುದು ಎಂಬುದು ಬಿಜ್ಜಾರೊ ಮಾತಾಗಿದೆ.


  ಆದಾಗ್ಯೂ, ಮೇಲ್ಮೈ ನೀರು ಎಷ್ಟು ಆವರಿಸಿದೆ ಎಂಬುದು ಇನ್ನೂ ಅನಿಶ್ಚಿತವಾಗಿದೆ. ಹಿಂದಿನ ಸಂಶೋಧನೆಯು ಪ್ರಾಚೀನ ಸಾಗರವು ತಗ್ಗು ಪ್ರದೇಶದಲ್ಲಿ ಉತ್ತರ ಗೋಳಾರ್ಧದ ಹೆಚ್ಚಿನ ಭಾಗವನ್ನು ಆವರಿಸಿದೆ ಎಂದು ತಿಳಿಸಿದೆ.


  ಮಂಗಳ ಗ್ರಹದಲ್ಲಿ ನೀರಿತ್ತು ಎಂಬುದಕ್ಕೆ ದಾಖಲೆಗಳೇನು?


  ವಿಜ್ಞಾನಿಗಳು ಭೂಮಿಯ ಮೇಲೆ ಪತ್ತೆಯಾದ ಮಂಗಳದ ಹೊರಪದರದ ಉಲ್ಕಾಶಿಲೆಯ ತುಣುಕುಗಳನ್ನು ವಿಶ್ಲೇಷಿಸಿದ್ದು, ಇದು ಬಹುಶಃ ಕ್ಷುದ್ರಗ್ರಹ ಇಲ್ಲವೇ ಧೂಮಕೇತುವಾಗಿದ್ದು ಮಂಗಳ ಗ್ರಹಕ್ಕೆ ಗಟ್ಟಿಯಾಗಿ ಅಪ್ಪಳಿಸಿವೆ.


  ಈ ಕಾರಣದಿಂದ ಬಂಡೆ ಹಾಗೂ ಇತರ ಶಿಲಾಖಂಡರಾಶಿಗಳು ಶತಕೋಟಿ ವರ್ಷಗಳ ಹಿಂದೆ ಬಾಹ್ಯಾಕಾಶಕ್ಕೆ ಉಡಾಯಿಸಲ್ಪಟ್ಟವು ಅಂತಿಮವಾಗಿ ಭೂಮಿಗೆ ಬಂದವು ಹೀಗಾಗಿ ಮಂಗಳ ಗ್ರಹವು ಹಿಂದೊಮ್ಮೆ ನೀರಿನ ಅಸ್ತಿತ್ವವನ್ನು ಹೊಂದಿತ್ತು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ ಎಂದು ತಿಳಿಸಿದ್ದಾರೆ.


  ಇದನ್ನೂ ಓದಿ: Mars Transit: ಇಂದಿನಿಂದ ಕುಂಭ ರಾಶಿ ಪ್ರವೇಶಿಸಲಿರುವ ಮಂಗಳ ಗ್ರಹ; ಈ 6 ರಾಶಿಯವರಿಗೆ ಸಮಸ್ಯೆ


  ಪುರಾವೆಗಳು ನಶಿಸಿ ಹೋಗಿವೆ


  ಮಂಗಳವು ಭೂಮಿಗಿಂತ ತುಂಬಾ ಚಿಕ್ಕದಾಗಿದೆ ಮತ್ತು ಭೂಮಿಯ ಒಳಭಾಗದಂತೆಯೇ ಶಾಶ್ವತವಾಗಿ ಚಲಿಸುವ ಮತ್ತು ಮರುಬಳಕೆ ಮಾಡುವ ಟೆಕ್ಟೋನಿಕ್ ಪ್ಲೇಟ್‌ಗಳನ್ನು ಹೊಂದಿಲ್ಲ, ಈ ಪ್ರಕ್ರಿಯೆಯು ನಮ್ಮ ಗ್ರಹದ ಇತಿಹಾಸದ ಮೊದಲ 500 ಮಿಲಿಯನ್ ವರ್ಷಗಳಲ್ಲಿ ಏನಾಯಿತು ಎಂಬುದರ ಎಲ್ಲಾ ಪುರಾವೆಗಳನ್ನು ಅಳಿಸಿಹಾಕಿದೆ.


  ಮಂಗಳ ಗ್ರಹದಲ್ಲಿ ಜೀವ ವಿಕಾಸ


  ಮಂಗಳ ಗ್ರಹವು ಮೂಲತಃ ಕಾಸ್ಮಿಕ್ ವಿಕಿರಣದಿಂದ ಸ್ಫೋಟಗೊಂಡಿದ್ದು, ಗ್ರಹದ ಮೇಲ್ಮೈಯನ್ನು ಬಹುಪಾಲು ಕ್ರಿಮಿನಾಶಕವಾಗಿಸುತ್ತದೆ. ಮತ್ತು ಇದೀಗ ಮಂಗಳ ಗ್ರಹದಲ್ಲಿ ಯಾವುದೇ ಜೀವಿಗಳು ಅಸ್ತಿತ್ವದಲ್ಲಿದ್ದರೆ, ಅದು ಬಹುಶಃ 1 ರಿಂದ 2 ಮೀಟರ್ ಆಳದಲ್ಲಿರಬೇಕು ಎಂದು ಬಿಜ್ಜಾರೊ ತಿಳಿಸಿದ್ದಾರೆ.


  ಈ ಹೊಸ ಸಂಶೋಧನೆಯಿಂದ ತಿಳಿದುಬಂದ ಅಂಶವೇನೆಂದರೆ ಭೂಮಿಗೂ ಮುಂಚೆ ಮಂಗಳ ಗ್ರಹದಲ್ಲಿ ಸಾಗರಗಳಿದ್ದವು ಹಾಗೂ ಜೀವ ವಿಕಾಸಕ್ಕೆ ಸೂಕ್ತವಾದ ವಾತಾವರಣವನ್ನು ಆ ಸಮಯದಲ್ಲಿ ಗ್ರಹ ಹೊಂದಿರಲೂಬಹುದು ಎಂಬುದು ಅಧ್ಯಯನಕಾರರ ಅಭಿಪ್ರಾಯವಾಗಿದೆ.

  Published by:Gowtham K
  First published: