Metro News: ಇನ್ಮುಂದೆ ಮೆಟ್ರೋದಲ್ಲಿ ಕುಳಿತು ಶಾಪಿಂಗ್ ಮಾಡಿ! ಬರ್ತಿದೆ ಹೊಸ ಆ್ಯಪ್​

ದೆಹಲಿ ಮೆಟ್ರೋ

ದೆಹಲಿ ಮೆಟ್ರೋ

Metro News: ಮೊಮೆಂಟಮ್ 2.0 ಎಂದು ಕರೆಯಲ್ಪಡುವ ಶಾಪಿಂಗ್ ಅಪ್ಲಿಕೇಶನ್ ಇನ್ನೂ ಆರಂಭಿಕ ಹಂತದಲ್ಲಿದೆ. ಒಮ್ಮೆ ಇದು ಸಂಪೂರ್ಣವಾಗಿ ಜಾರಿಗೆ ಬಂದ ನಂತರ, ಮೆಟ್ರೋದಲ್ಲಿ ಪ್ರಯಾಣಿಸುವಾಗ ಪ್ರಯಾಣಿಕರಿಗೆ ತಮಗೆ ಬೇಕಾದಂತಹ ವಸ್ತುಗಳನ್ನು ಖರೀದಿಸಲು ಸಹಾಯವಾಗುತ್ತದೆ.

  • Trending Desk
  • 2-MIN READ
  • Last Updated :
  • Delhi, India
  • Share this:

ಸಾಮಾನ್ಯವಾಗಿ ಈ ದೊಡ್ಡ ದೊಡ್ಡ ಮಹಾನಗರಗಳಲ್ಲಿ ಮನೆಯಿಂದ ಹೂರಗೆ ಹೋಗಿ ದುಡಿಯುವ ಜನರು ಬೆಳಗ್ಗೆ ಹೋದರೆ, ಮತ್ತೆ ಮನೆಗೆ ಹಿಂದಿರುಗಿ ಬರುವುದು ರಾತ್ರಿಯೇ (Night) ಆಗುತ್ತದೆ.  ಅಂತಹದರಲ್ಲಿ ಮನೆಗೆ ಬೇಕಾದ ಸಾಮಾನುಗಳನ್ನು, ತರಕಾರಿಗಳನ್ನು, ಹಣ್ಣುಗಳನ್ನು ಮತ್ತು ತಮಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡಲು ಆಗುವುದೇ ಇಲ್ಲ. ಅದೆಲ್ಲಾ ಶಾಪಿಂಗ್ (Shoping) ಏನೇ ಇದ್ದರೂ ಎಲ್ಲವೂ ವಿಕೇಂಡ್ ನಲ್ಲಿಯೇ ಆಗುತ್ತದೆ. ಆದರೆ ಈ ಮುಂಬೈ (Mumbai) ಅಂತಹ ನಗರಗಳಲ್ಲಿ ಲೋಕಲ್ ಟ್ರೈನ್ ನಲ್ಲಿ ಮಹಿಳೆಯರು ಸಂಜೆ ಮನೆಗೆ ಹೋಗುವಾಗ ಟ್ರೈನ್ ನಲ್ಲಿ ಕುಳಿತು ತರಕಾರಿಗಳನ್ನು ರೆಡಿ ಮಾಡಿಕೊಳ್ಳುವುದನ್ನು ನೋಡಿದ್ದೇವೆ. ಇದೀಗ ಈ ಸಮಸ್ಯೆ ಬಗೆಹರಿಸಲು ದೆಹಲಿ ಮೆಟ್ರೋ (DMRC) ಹೊಸ ಯೋಜನೆ ಜಾರಿಗೆ ತರಲು ಮುಂದಾಗಿದೆ.


ಪ್ರಯಾಣಿಕರಿಗಾಗಿ ಶಾಪಿಂಗ್ ಆ್ಯಪ್:


ಹೌದು, ದೆಹಲಿ ಮೆಟ್ರೋ ರೈಲು ನಿಗಮ (ಡಿಎಂಆರ್‌ಸಿ) ಶಾಪಿಂಗ್ ಮೊಬೈಲ್ ಅಪ್ಲಿಕೇಶನ್ ಅನ್ನು ಹೊರತರಲಿದೆಯಂತೆ. ಇದು ಪ್ರಯಾಣಿಕರಿಗೆ ಮೆಟ್ರೋದಲ್ಲಿ ಪ್ರಯಾಣಿಸುವಾಗ ವಿವಿಧ ಖರೀದಿಗಳನ್ನು ಮಾಡಲು ಮತ್ತು ಸ್ಮಾರ್ಟ್ ಕಾರ್ಡ್ ಗಳನ್ನು ರೀಚಾರ್ಜ್ ಮಾಡುವಂತಹ ಸೇವೆಗಳನ್ನು ಪಡೆಯಲು ಅನುವು ಮಾಡಿಕೊಡುತ್ತದೆ ಎಂದು ಯೋಜನೆಯ ಬಗ್ಗೆ ಅಧಿಕಾರಿಗಳು ತಿಳಿಸಿದ್ದಾರೆ.


ಮೆಟ್ರೋ ನಿಲ್ದಾಣದಲ್ಲಿ ಪಡೆಯಬಹುದು:


ಮೊಮೆಂಟಮ್ 2.0 ಎಂದು ಕರೆಯಲ್ಪಡುವ ಶಾಪಿಂಗ್ ಅಪ್ಲಿಕೇಶನ್ ಇನ್ನೂ ಆರಂಭಿಕ ಹಂತದಲ್ಲಿದೆ. ಒಮ್ಮೆ ಇದು ಸಂಪೂರ್ಣವಾಗಿ ಜಾರಿಗೆ ಬಂದ ನಂತರ, ಮೆಟ್ರೋದಲ್ಲಿ ಪ್ರಯಾಣಿಸುವಾಗ ಪ್ರಯಾಣಿಕರಿಗೆ ತಮಗೆ ಬೇಕಾದಂತಹ ವಸ್ತುಗಳನ್ನು ಖರೀದಿಸಲು ಮತ್ತು ಅವರು ಇಳಿದುಕೊಳ್ಳುವ ನಿಲ್ದಾಣದಲ್ಲಿ ಆ ಆರ್ಡರ್ ಮಾಡಿದ ವಸ್ತುಗಳನ್ನು ಸಂಗ್ರಹಿಸಲು ಅನುವು ಮಾಡಿಕೊಡುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಇದನ್ನೂ ಓದಿ:  Namma Metro: ಈವರೆಗೆ 38 ಜನರನ್ನು ಬಲಿ ಪಡೆದ ನಮ್ಮ ಮೆಟ್ರೋ ಕಾಮಗಾರಿ; ರಾಜ್ಯ ಸರ್ಕಾರದಿಂದ ಅಧಿಕೃತ ಮಾಹಿತಿ


ಉದಾಹರಣೆಗೆ, ಪ್ರಯಾಣಿಕರು ರಾಜೀವ್ ಚೌಕ್ ನಿಂದ ಹುಡಾ ಸಿಟಿ ಸೆಂಟರ್ ಗೆ ಪ್ರಯಾಣಿಸುತ್ತಿದ್ದರೆ ಮತ್ತು ತಮ್ಮ ಇಳಿಯುವ ನಿಲ್ದಾಣದಲ್ಲಿ ಕೆಲವು ವಸ್ತುಗಳನ್ನು ತೆಗೆದುಕೊಳ್ಳಲು ಬಯಸಿದರೆ, ಅವರು ಮೊಬೈಲ್ ಅಪ್ಲಿಕೇಶನ್ ನಲ್ಲಿ ಐಟಂಗಾಗಿ ಬುಕ್ ಮಾಡಲು ಸಾಧ್ಯವಾಗುತ್ತದೆ ಎಂದು ಡಿಎಂಆರ್‌ಸಿ ತಿಳಿಸಿದೆ.


ಶಾಪಿಂಗ್ ಆಪ್ ನಲ್ಲಿ ಏನೆಲ್ಲಾ ಖರೀದಿಸಬಹುದು?


ಮೆಟ್ರೋ ನಿಲ್ದಾಣಗಳಲ್ಲಿ ದಿನಸಿ ಮತ್ತು ಇತರ ಅಗತ್ಯ ವಸ್ತುಗಳನ್ನು ಖರೀದಿಸುವ ಅನುಕೂಲವನ್ನು ನಾವು ಮೆಟ್ರೋ ಪ್ರಯಾಣಿಕರಿಗೆ ಒದಗಿಸುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಯ್ದ ಬ್ರ್ಯಾಂಡ್ ಗಳು ತಮ್ಮ ಉತ್ಪನ್ನಗಳು ಮತ್ತು ಸೇವೆಗಳನ್ನು ಅಪ್ಲಿಕೇಶನ್ ನಲ್ಲಿ ತೋರಿಸುತ್ತವೆ ಮತ್ತು ಪ್ರಯಾಣಿಕರು ತಮ್ಮ ಮೆಟ್ರೋ ರೈಲು ಬರುವವರೆಗೆ ಕಾಯುತ್ತಿರುವಾಗ ತಮ್ಮ ಆಯ್ಕೆಯ ಸರಕುಗಳನ್ನು ಶಾಪಿಂಗ್ ಮಾಡಲು ಕ್ಯೂಆರ್ ಕೋಡ್ ಅನ್ನು ಬಳಸಲು ಸಾಧ್ಯವಾಗುತ್ತದೆ ಎಂದು ಡಿಎಂಆರ್‌ಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.




ಡಿಜಿಟಲ್ ಲಾಕರ್ ಸೌಲಭ್ಯ:


ಅಪ್ಲಿಕೇಶನ್ ಡಿಜಿಟಲ್ ಲಾಕರ್ ಗಳನ್ನು ಸಹ ಪರಿಚಯಿಸುತ್ತಿದೆ, ಅಲ್ಲಿ ಅಪ್ಲಿಕೇಶನ್ ಮೂಲಕ ಆರ್ಡರ್ ಮಾಡಿದ ಸರಕುಗಳನ್ನು ಖರೀದಿದಾರರು ಒಂದು ಕಡೆ ಜೋಪಾನವಾಗಿ ಇಟ್ಟುಕೊಳ್ಳಬಹುದು. ಈ ಸೌಲಭ್ಯವು ಆರಂಭದಲ್ಲಿ 50 ಪ್ರಮುಖ ಮೆಟ್ರೋ ನಿಲ್ದಾಣಗಳಲ್ಲಿ ಬರಲಿದೆ. ಆಯ್ದ ನಿಲ್ದಾಣಗಳಲ್ಲಿ 'ಸ್ಮಾರ್ಟ್ ಬಾಕ್ಸ್' ಎಂಬ ಡಿಜಿಟಲ್ ಲಾಕರ್ ಗಳನ್ನು ಡಿಎಂಆರ್‌ಸಿ ಇನ್ನೂ ಸ್ಥಾಪಿಸಬೇಕು.


ಈ ಅಪ್ಲಿಕೇಶನ್ ನಲ್ಲಿ ಇ-ಶಾಪಿಂಗ್ ಮೂಲಕ ಆರ್ಡರ್ ಮಾಡಿದ ಸರಕುಗಳನ್ನು ಈ ಸ್ಮಾರ್ಟ್ ಬಾಕ್ಸ್ ಗಳಲ್ಲಿ ಇರಿಸಿಕೊಳ್ಳಬಹುದು ಮತ್ತು ಖರೀದಿದಾರರು ತಮ್ಮ ಇಳಿಯುವ ನಿಲ್ದಾಣಕ್ಕೆ ಬಂದ ನಂತರ ಅವುಗಳನ್ನು ಕೋಡ್ ತಿಳಿಸುವ ಮೂಲಕ ಅವುಗಳನ್ನು ಪಡೆಯಬಹುದು ಎಂದು ಡಿಎಂಆರ್‌ಸಿ ತಿಳಿಸಿದೆ.


ಈ ಅಪ್ಲಿಕೇಶನ್ ಮೆಟ್ರೋ ಸ್ಮಾರ್ಟ್ ಕಾರ್ಡ್ ಗಾಗಿ ರೀಚಾರ್ಜ್ ಸೇವೆಗಳನ್ನು ಸಹ ನೀಡುತ್ತದೆ. "ಬಳಕೆದಾರರು ಸ್ಮಾರ್ಟ್ ಕಾರ್ಡ್ ನ ಮೂಲಕ ಅವರು ತಮ್ಮ ವಿಮೆಯ ಕಂತನ್ನು, ವಿದ್ಯುತ್ ಬಿಲ್, ಗ್ಯಾಸ್ ಬಿಲ್ ಅಥವಾ ಫಾಸ್ಟ್‌ಟ್ಯಾಗ್ ನಂತಹ ರೀಚಾರ್ಜ್ ಗಳನ್ನು ಸಹ ಮಾಡಿಕೊಳ್ಳಬಹುದು" ಎಂದು ಡಿಎಂಆರ್‌ಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ರೀತಿಯ ಸೌಲಭ್ಯ ನಮ್ಮ ಬೆಂಗಳೂರು ಮೆಟ್ರೋದಲ್ಲಿಯೂ ಬಂದಲ್ಲಿ ಉತ್ತಮ ಎಂಬ ಮಾತುಗಳು ಕೇಳಿಬರುತ್ತಿವೆ.

Published by:shrikrishna bhat
First published: