ಉತ್ತರ ಪ್ರದೇಶ: ಹಿಂದೂ (Hindu) ಧರ್ಮದ ಯುವತಿಯನ್ನು ಪ್ರೀತಿಸಿ ಮದುವೆಯಾದ ಮುಸ್ಲಿಂ (Muslim) ಧರ್ಮದ ಯುವಕನೊಬ್ಬ, ಆಕೆಯನ್ನು ಕೊಂದು (Murder) ಬೆಡ್ ರೂಂ (Bed Room) ಅಡಿಯಲ್ಲೇ ಹೂತು ಹಾಕಿರುವ ಘಟನೆ ಉತ್ತರ ಪ್ರದೇಶದಲ್ಲಿ (Uttar Pradesh) ನಡೆದಿದೆ. ಲಖಿಂಪುರ ಖೇರಿ ಜಿಲ್ಲೆಯ (Lakhimpur Kheri) ಹಫೀಜಾಪುರ (Hafijapur) ಎಂಬ ಗ್ರಾಮದಲ್ಲಿ ಇಂಥದ್ದೊಂದು ಭೀಕರ ಘಟನೆ ನಡೆದಿದೆ. ಮೊಹಮ್ಮದ್ ವಾಸಿ (Mohammed Wasi) ಎಂಬಾತ ತನ್ನ ಪತ್ನಿ ಉಮಾ ಶರ್ಮಾ ಅಲಿಯಾಸ್ ಅಕ್ಷಾ ಫಾತೀಮಾ (Uma Sharma alias Aksha Fatima) ಎಂಬಾಕೆಯನ್ನು ಬರ್ಬರವಾಗಿ ಕೊಂದು ಹಾಕಿದ್ದಾನೆ. ಆಕೆಗೆ ಥಳಿಸಿ, ಬಳಿಕ ವಿದ್ಯುತ್ ಶಾಕ್ (electric shock) ನೀಡಿ, ನಂತರ ಆಕೆಯ ಶವವನ್ನು (Dead body) ತನ್ನ ಮನೆಯ ಕೊಠಡಿಯಲ್ಲಿ ಹೂತು ಹಾಕಿದ್ದಾನೆ.
ಹಿಂದೂ ಯುವತಿಯನ್ನು ಮದುವೆಯಾಗಿದ್ದ ಮುಸ್ಲಿಂ ಯುವಕ
ಆರೋಪಿ ಮೊಹಮ್ಮದ್ ವಾಸಿ ತನ್ನದೇ ಊರಿನ ಹಿಂದೂ ಯುವತಿ ಉಮಾ ಶರ್ಮಾ ಎಂಬಾಕೆಯನ್ನು ಪ್ರೀತಿಸುತ್ತಿದ್ದ. ಮನೆಯವರ ವಿರೋಧದ ನಡುವೆಯೂ ಉಮಾ ಶರ್ಮಾ ಆತನನ್ನು ವಿವಾಹವಾಗಿದ್ದಳು. ಅವರ ಮದುವೆಯ ನಂತರ ಆಕೆ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಳು. ಉಮಾ ಶರ್ಮಾ ಅಂತಿದ್ದ ತನ್ನ ಹೆಸರನ್ನು ಅಕ್ಷಾ ಫಾತೀಮಾ ಅಂತ ಬದಲಾಯಿಸಿಕೊಂಡಳು. ದಂಪತಿಗೆ ಇಬ್ಬರು ಮಕ್ಕಳೂ ಇದ್ದಾರೆ.
ವಿದ್ಯುತ್ ಶಾಕ್ ಕೊಟ್ಟು ಹೆಂಡತಿಯನ್ನು ಕೊಂದ ಪಾಪಿ
ಮೊದ ಮೊದಲು ಪತ್ನಿ ಅಕ್ಷಾ ಫಾತೀಮಾ ಜೊತೆ ಚೆನ್ನಾಗಿಯೇ ಇದ್ದ ಮೊಹಮ್ಮದ್ ವಾಸಿ, ಬಳಿಕ ಕಿರುಕುಳ ಕೊಡೋದಕ್ಕೆ ಶುರು ಮಾಡಿದ್ದನಂತೆ. ಆಗಾಗ್ಗೆ ತನ್ನ ಹೆಂಡತಿಯೊಂದಿಗೆ ಜಗಳವಾಡುತ್ತಿದ್ದನು. ಡಿ. 21ರಂದು ಬುಧವಾರ ಆರೋಪಿಯ ತಾಯಿ ಮನೆಯಲ್ಲಿ ಇಲ್ಲದಿದ್ದಾಗ ಇಬ್ಬರ ನಡುವೆ ಜಗಳ ನಡೆದಿದೆ. ವಾಸಿ ತನ್ನ ಹೆಂಡತಿಯನ್ನು ಕ್ರೂರವಾಗಿ ಥಳಿಸಿದ್ದಾನೆ ಎನ್ನಲಾಗಿದೆ. ನಂತರ ಅವಳು ಮಲಗಿದ ಬಳಿಕ ಆಕೆಯ ಕೈಕಾಲು ಕಟ್ಟಿ, ವಿದ್ಯುತ್ ಶಾಕ್ ನೀಡಿದ್ದಾನೆ. ಈ ವೇಳೆ ಆಕೆ ವಿದ್ಯುತ್ ಆಘಾತ ತಾಳಲಾರದೇ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ.
ಇದನ್ನೂ ಓದಿ: Paragliding: ನೂರಾರು ಅಡಿ ಎತ್ತರದಿಂದ ಬಿದ್ದ ಪ್ಯಾರಾಗ್ಲೈಡರ್, ನಿಂತೇಹೋಯ್ತು ಉಸಿರು
ಬೆಡ್ ರೂಂನಲ್ಲೇ ಹೆಂಡತಿ ಶವ ಹೂತು ಹಾಕಿದ ಪಾಪಿ!
ಇನ್ನು ಹೆಂಡತಿಯನ್ನು ಕೊಲೆ ಮಾಡಿದ ಬಳಿಕ ಮೊಹಮ್ಮದ್ ವಾಸಿ ಕಂಗಾಲಾಗಿದ್ದಾನೆ. ಏನು ಮಾಡಬೇಕು ಅಂತ ತೋಚದೇ ಅಕ್ಷಾ ಫಾತೀಮಾ ಶವವನ್ನು ತಮ್ಮ ಬೆಡ್ ರೂಂನಲ್ಲಿಯೇ ಹೊಂಡ ತೆಗೆದು, ಹೂತು ಹಾಕಿದ್ದಾನೆ. ಸಾಲದ್ದಕ್ಕೆ ಅದೇ ಕೋಣೆಯಲ್ಲಿ
ಅತ್ತೆಯಿಂದ ಸೊಸೆ ಕೊಲೆ ಪ್ರಕರಣ ಬೆಳಕಿಗೆ
ಕೊಲೆಯಾದ ಎರಡು ದಿನಗಳ ನಂತರ ಕಾನ್ಪುರದಲ್ಲಿದ್ದ ವಾಸಿಯ ತಾಯಿ ಆಶಿಯಾ ಬೇಗಂ ವಾಸಿಗೆ ಕರೆ ಮಾಡಿದಾಗ ಅಕ್ಷಾ ಎಲ್ಲೋ ಹೋಗಿದ್ದಾಳೆ ಎಂದು ತಿಳಿಸಿದ್ದ. ಹಿಂದಿರುಗಿದ ನಂತರ ಆರೋಪಿಯ ತಾಯಿ ಶುಕ್ರವಾರ ತನ್ನ ಸೊಸೆ ನಾಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ನಂತರ ಪೊಲೀಸರು ಆಕೆಗಾಗಿ ಹುಡಕಾಟ ಆರಂಭಿಸಿದ್ದಾರೆ. ಬಳಿಕ ಅನುಮಾನಗೊಂಡು ಮೊಹಮ್ಮದ್ ವಾಸಿಯನ್ನು ಪ್ರಶ್ನಿಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಇದೀಗ ಪತಿ ಮೊಹಮ್ಮದ್ ವಾಸಿಯನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: Gujarat: ಕೆಲಸದಿಂದ ಕಿತ್ತು ಹಾಕಿದ್ದಕ್ಕೆ, ಯಜಮಾನ, ಆತನ ತಂದೆ, ಚಿಕ್ಕಪ್ಪಗೆ ಚಾಕು ಇರಿತ!
ಜಾಮೀನು ಅರ್ಜಿ ವಾಪಸ್ ಪಡೆದ ಶ್ರದ್ಧಾ ಕೊಲೆ ಆರೋಪಿ ಅಫ್ತಾಬ್
ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಶ್ರದ್ಧಾ ವಾಕರ್ ಕೊಲೆ ಪ್ರಕರಣದ ಆರೋಪಿ ಅಫ್ತಾಬ್ ಅಮೀನ್ ಪೂನವಾಲಾ ಜಾಮೀನು ಅರ್ಜಿಯನ್ನು ವಾಪಸ್ ಪಡೆದಿದ್ದಾನೆ. ಈತ ಜಾಮೀನು ಕೋರಿ ದೆಹಲಿಯ ಜಿಲ್ಲಾ ನ್ಯಾಯಾಲಯದ ಮೆಟ್ಟಿಲೇರಿದ್ದ. ಇದೀಗ ತನ್ನ ಜಾಮೀನು ಅರ್ಜಿಯನ್ನು ವಾಪಸ್ ತೆಗೆದುಕೊಂಡಿದ್ದಾನೆ. ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಅಫ್ತಾಬ್ ನವೆಂಬರ್ 17 ರಂದು ಜಾಮಿನು ಅರ್ಜಿ ಸಲ್ಲಿಸಿದ್ದ. ನ್ಯಾಯಾಲಯ ವಿಚಾರಣೆಯನ್ನು ಮುಂದೂಡಿತ್ತು. ಈ ಮಧ್ಯೆ ಆರೋಪಿ ಜಾಮೀನು ಅರ್ಜಿಯನ್ನು ಹಿಂದಕ್ಕೆ ತೆಗೆದುಕೊಂಡಿದ್ದಾನೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ