Tamil Nadu ULB Electionನಲ್ಲೂ ಹಿಜಾಬ್​ ಗಲಾಟೆ; ಮತದಾನ ಮಾಡಲು ಬಂದ ಮಹಿಳೆಗೆ ಆಕ್ಷೇಪ

ಮಧುರೈ ಜಿಲ್ಲೆಯಲ್ಲಿ ಮತದಾನ ಮಾಡಲು ಬಂದ ಮತದಾರರು ಹಿಜಾಬ್‌ ಧರಿಸಿ ಮತಗಟ್ಟೆಗೆ ಬಂದಿದ್ದಾರೆ. ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸ್ಥಳೀಯ ಬಿಜೆಪಿ ಕಾರ್ಯಕರ್ತರು, ಮತದಾನ ಮಾಡಲು ಬಂದಿದ್ದವರನ್ನು ಮತಗಟ್ಟೆಯಿಂದ ಹೊರಗೆ ಕಳುಹಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪ್ರಮುಖ ರಾಜಕೀಯ ಪಕ್ಷಗಳ ಪ್ರತಿಷ್ಠೆಯ ಕಣವಾಗಿರುವ ತಮಿಳುನಾಡು ನಗರ ಸ್ಥಳೀಯ ಸಂಸ್ಥೆಗಳ (Tamilnadu urban Local Body Election) ಚುನಾವಣಾ ಕಣ ರಂಗೇರಿದೆ. ಜಿದ್ದಾಜಿದ್ದಿನಿಂದ ಕೂಡಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ತಮಿಳುನಾಡಿನಾದ್ಯಂತ ಬಿರುಸಿನ ಮತದಾನ (Voting) ನಡೆಯುತ್ತಿದ್ದು, ಶೇ 47. 18ರಷ್ಟು ಮತದಾನ ಆಗಿದೆ. ತಮಿಳುನಾಡಿನ 38 ಜಿಲ್ಲೆಗಳಲ್ಲಿ ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಪ್ರಕ್ರಿಯೆ ಆರಂಭಗೊಂಡಿದ್ದು, ಚಲನಚಿತ್ರ ನಟ-ನಟಿಯರು, ರಾಜಕೀಯ ನಾಯಕರು (Political Leader) ಸೇರಿದಂತೆ ಸಾರ್ವಜನಿಕರು ತಮ್ಮ ಹಕ್ಕು ಚಲಾಯಿಸಿದರು. ತೀವ್ರ ಪೈಪೋಟಿಯಿಂದ ಕೂಡಿರುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮತದಾನ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಡೆಸುವ ನಿಟ್ಟಿನಲ್ಲಿ ಚುನಾವಣಾ ಆಯೋಗ (Election Commission) ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿತ್ತು, ಎಲ್ಲಾ ಮತಗಟ್ಟೆ ಕೇಂದ್ರಗಳ ವೆಬ್‌ ಸ್ಟ್ರೀಮಿಂಗ್‌ ಮತ್ತು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವ ಮೂಲಕ ಹೆಚ್ಚಿನ ನಿಗಾವಹಿಸಿತು

ಅಲ್ಲದೆ ಶಾಂತ ರೀತಿಯಲ್ಲಿ ಚುನಾವಣೆ ನಡೆಸುವ ಸಲುವಾಗಿ ಎಲ್ಲಾ ಮತ ಕೇಂದ್ರಗಳ ಸುತ್ತ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದ್ದು, ಇದಕ್ಕಾಗಿ 1 ಲಕ್ಷ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿತು. ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಕಡೆಗಳಿಂದ ಒಟ್ಟು 31,150 ಮತಗಟ್ಟೆ ಕೇಂದ್ರಗಳನ್ನು ತೆರೆಯಲಾಗಿದ್ದು, ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಿ, ಹೆಚ್ಚಿನ ಭದ್ರತೆ ಒದಗಿಸಲಾಗಿತು.

ಮತದಾನದ ಕೊನೆಯ ಕೊನೆಯ 1 ಗಂಟೆ ಅವಧಿಯಲ್ಲಿ ಕೋವಿಡ್‌ ಸೋಂಕಿತರು ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಎಲ್ಲಾ ಕಡೆಗಳಲ್ಲಿ ಇವಿಎಂ ಯಂತ್ರದ ಮೂಲಕ ವೋಟಿಂಗ್‌ ವ್ಯವಸ್ಥೆ ಮಾಡಲಾಗಿದ್ದು, ಫೆ.22ರಂದು ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ.

ಕಣದಲ್ಲಿ ಪ್ರಮುಖ ಪಕ್ಷಗಳು: ಈ ಬಾರಿಯ ತಮಿಳುನಾಡು ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪ್ರಮುಖ ಪಕ್ಷಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ಎದುರಾಗಿದೆ. ಪ್ರಮುಖವಾಗಿ ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ), ಪ್ರತಿಪಕ್ಷ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ), ನಟ ಕಮಲ್‌ ಹಾಸನ್‌ ಅವರ ಮಕ್ಕಳ್‌ ನೀಧಿ ಮೈಯಂ (ಎಂಎನ್‌ಎಂ) ಜೊತೆಗೆ ತಮಿಳುನಾಡಿನಲ್ಲಿ ಅಸ್ತಿತ್ವ ಕಂಡುಕೊಳ್ಳಲು ಹವಣಿಸುತ್ತಿರುವ ರಾಷ್ಟ್ರೀಯ ಪಕ್ಷ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಪಕ್ಷಗಳು ಕಣದಲ್ಲಿವೆ. ಆಡಳಿತಾರೂಢ ಡಿಎಂಕೆ ಹಾಗೂ ತನ್ನ ಮಿತ್ರ ಪಕ್ಷಗಳು ಒಟ್ಟಾಗಿ ಚುನಾವಣೆ ಎದುರಿಸುತ್ತಿದ್ದು, ಕಳೆದ ವಿಧಾನಸಭಾ ಚುನಾವಣೆ ವೇಳೆ ಎಐಎಡಿಎಂಕೆ ಪಕ್ಷದೊಂದಿಗಿನ ಹೊಂದಾಣಿಕೆಯೊಂದಿಗೆ ಕಣಕ್ಕಿಳಿದಿದ್ದ ಪಿಎಂಕೆ ಹಾಗೂ ಬಿಜೆಪಿ ಈ ಬಾರಿ ಸ್ವತಂತ್ರವಾಗಿ ಚುನಾವಣೆ ಎದುರಿಸಿವೆ.

ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯ ಆವಡಿ ಮುನ್ಸಿಪಲ್‌ ಕಾರ್ಪೋರೇಷನ್‌ ಹೊರತುಪಡಿಸಿ 8 ಪಟ್ಟಣ ಪಂಚಾಯ್ತಿ, 6 ಪುರಸಭೆಗಳ 315 ವಾರ್ಡ್‌ಗಳ ಸದಸ್ಯರ ಆಯ್ಕೆಗಾಗಿ ಚುನಾವಣೆ ನಡೆಯುತ್ತಿದೆ. ಇನ್ನು ತಿರುವಣ್ಣಾಮಲೈ ಜಿಲ್ಲೆಯಲ್ಲಿ 10 ಪಟ್ಟಣ ಪಂಚಾಯ್ತಿ ಮತ್ತು 4 ಪುರಭಸೆಗಳ 273 ವಾರ್ಡ್‌ ಸದಸ್ಯರ ಆಯ್ಕೆಗಾಗಿ 454 ಮತಗಟ್ಟೆಗಳಲ್ಲಿ ಮತದಾನ ನಡೆಯಿತು

ಇದನ್ನು ಓದಿ: ಪ್ರಧಾನಿ ಮೋದಿ ಸೇರಿದಂತೆ ಹಲವರಿಂದ ಗೌರವ ನಮನ

ಚುನಾವಣೆ ವೇಳೆ ಹಿಜಾಬ್‌ ವಿವಾದ:
ಈ ನಡುವೆ ದೇಶದಲ್ಲಿ ದೊಡ್ಡಮಟ್ಟದ ಚರ್ಚೆಗೆ ಕಾರಣವಾಗಿರುವ ಹಿಜಾಬ್‌ ವಿವಾದ ತಮಿಳುನಾಡಿನಲ್ಲಿ ನಡೆದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಮತದಾನದ ವೇಳೆಯೂ ಸದ್ದು ಮಾಡಿದೆ. ಮಧುರೈ ಜಿಲ್ಲೆಯಲ್ಲಿ ಮತದಾನ ಮಾಡಲು ಬಂದ ಮತದಾರರು ಹಿಜಾಬ್‌ ಧರಿಸಿ ಮತಗಟ್ಟೆಗೆ ಬಂದಿದ್ದಾರೆ. ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸ್ಥಳೀಯ ಬಿಜೆಪಿ ಕಾರ್ಯಕರ್ತರು, ಮತದಾನ ಮಾಡಲು ಬಂದಿದ್ದವರನ್ನು ಮತಗಟ್ಟೆಯಿಂದ ಹೊರಗೆ ಕಳುಹಿಸಿದ್ದಾರೆ. ಹೀಗಾಗಿ ಮತಗಟ್ಟೆ ಕೇಂದ್ರದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಇದನ್ನು ಓದಿ: ಏರ್ ಇಂಡಿಯಾ ನೀಡಿದ ಎಚ್ಚರಿಕೆಗೆ ಅಧಿಕೃತ ಹೇಳಿಕೆ ನೀಡಿದ Builder.ai

ಹಲವು ಪ್ರಮುಖರಿಂದ ಮತದಾನ:
ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಹಲವು ಗಣ್ಯರು ತಮ್ಮ ಹಕ್ಕು ಚಲಾಯಿಸಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌, ತೆನಾಂಪೇಟೆಯ ವಾರ್ಡ್‌ ಸಂಖ್ಯೆ 122ರ ಮತ ಕೇಂದ್ರದಲ್ಲಿ ತಮ್ಮ ಹಕ್ಕು ಚಲಾಯಿಸಿದರೆ. ಸ್ಟಾಲಿನ್‌ ಅವರ ಪುತ್ರ ಉದಯನಿಧಿ ಸ್ಟಾಲಿನ್‌ ಚೆನ್ನೈನ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ತಮಿಳುನಾಡಿನ ಜಲಸಂಪನ್ಮೂಲ ಸಚಿವ ದೊರೈ ಮುರುಗನ್‌, ವೆಲ್ಲೂರಿನ ಕಟಪಾಡಿ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದರೆ. ಶಿಕ್ಷಣ ಸಚಿವ ಅನ್ಬಿಲ್‌ ಮಹೇಶ್‌ ಪೊಯ್ಯಮೊಳಿ ತಿರುಚಿರಾಪಳ್ಳಿಯಲ್ಲಿ ವೋಟ್‌ ಮಾಡಿದರು. ಅಲ್ಲದೆ ತೆಲಂಗಾಣ ರಾಜ್ಯಪಾಲ ತಮಿಳಿಸೈ ಸೌಂದರಾಜನ್‌ ಅವರು ಚೆನ್ನೈನ ಸಾಲಿಗ್ರಾಮದಲ್ಲಿ ಮತದಾನ ಮಾಡಿದರು.
Published by:Seema R
First published: