VIDEO: ಧೀರೂಭಾಯಿ ಅಂಬಾನಿ ಚೌಕದಲ್ಲಿ ಮನಸೊರೆಗೊಂಡ ಸಂಗೀತ ಕಾರಂಜಿ ಪ್ರದರ್ಶನ

ಆಕಾಶ್​ ಅಂಬಾನಿ-ಶ್ಲೋಕಾ ವಿವಾಹ ಸಮಾರಂಭದ ಪ್ರಮುಖ ಪ್ರದರ್ಶನ ಎನ್ನಲಾಗಿರುವ ರಾಸ್​ಲೀಲಾ ಕಾರ್ಯಕ್ರಮಗಳನ್ನು ಇಲ್ಲಿ ಆಯೋಜಿಸಲಾಗುತ್ತಿದೆ.

zahir | news18
Updated:March 12, 2019, 8:08 PM IST
VIDEO: ಧೀರೂಭಾಯಿ ಅಂಬಾನಿ ಚೌಕದಲ್ಲಿ ಮನಸೊರೆಗೊಂಡ ಸಂಗೀತ ಕಾರಂಜಿ ಪ್ರದರ್ಶನ
.
  • News18
  • Last Updated: March 12, 2019, 8:08 PM IST
  • Share this:
ಮುಂಬೈ ನಗರದ ಮೇಲಿನ ಪ್ರೀತಿಯ ಧ್ಯೋತಕವಾಗಿ ರಿಲಯನ್ಸ್ ಇಂಡಸ್ಟ್ರೀಸ್ ವತಿಯಿಂದ ನಗರದಲ್ಲಿ ಧೀರೂಭಾಯಿ ಅಂಬಾನಿ ಚೌಕವನ್ನು ಮಾರ್ಚ್​ 6 ರಂದು ನೀತಾ ಮತ್ತು ಮುಖೇಶ್ ಅಂಬಾನಿ ಅವರು ಉದ್ಘಾಟಿಸಿದ್ದರು. ಅಲ್ಲದೆ ಈ ಅಂಬಾನಿ ಸ್ಕ್ವೈರ್​ ಅನ್ನು ಮುಂಬೈ ನಿವಾಸಿಗಳಿಗೆ ಸಮರ್ಪಿಸಿದ್ದರು. ಎರಡು ವಿಶೇಷ ಸಂಗೀತ ಕಾರಂಜಿಗಳನ್ನು ಒಳಗೊಂಡಿರುವ ಈ ವಿಶೇಷ ಚೌಕದಲ್ಲಿ ಇಂದು 7000 ಭಾರತೀಯ ಸಶಸ್ತ್ರ ಪಡೆ ಮತ್ತು ಪೊಲೀಸ್ ಹಾಗೂ ಅವರ ಕುಟುಂಬಗಳಿಗೆ ವಿಶೇಷ ಪ್ರದರ್ಶನ ಏರ್ಪಡಿಸಲಾಗಿದೆ.

ಆಕಾಶ್ ಅಂಬಾನಿ- ಶ್ಲೋಕಾ ವಿವಾಹ ಕಾರ್ಯಕ್ರಮದ ಬೆನ್ನಲ್ಲೇ ಈ ಪ್ರದರ್ಶನ ಏರ್ಪಡಿಸಲಾಗಿದ್ದು, ಈ ಮೂಲಕ ಪೊಲೀಸ್​ ಪಡೆಗಳಿಗೆ ಗೌರವ ಸೂಚಿಸಿ ಯುವಜೋಡಿಗಳಿಗೆ ಆಶೀರ್ವದಿಸುವಂತೆ ಕೋರಲಾಗಿದೆ. ಈ ಕಾರ್ಯಕ್ರಮದಲ್ಲಿ ಅದ್ಭುತವಾದ ಕಾರಂಜಿ ನೃತ್ಯ , ಏರಿಯಲ್ ಡ್ಯಾನ್ಸ್​ ಆ್ಯಕ್ಟ್​ ಮತ್ತು ಜಲ ಕಾರಂಜಿಗಳೊಂದಿಗೆ ನೀರಿನ ಸಮ್ಮೋಹನಗೊಳಿಸುವ ವರ್ಣರಂಜಿತ ಚಲನೆಗಳನ್ನು ಸಂಯೋಜಿಸಲಾಗುತ್ತದೆ.

ಅಷ್ಟೇ ಅಲ್ಲದೆ ಆಕಾಶ್​ ಅಂಬಾನಿ-ಶ್ಲೋಕಾ ವಿವಾಹ ಸಮಾರಂಭದ ಪ್ರಮುಖ ಪ್ರದರ್ಶನ ಎನ್ನಲಾಗಿರುವ ರಾಸ್​ಲೀಲಾ ಕಾರ್ಯಕ್ರಮಗಳನ್ನು ಇಲ್ಲಿ ಆಯೋಜಿಸಲಾಗುತ್ತಿದೆ. ಇದರಲ್ಲಿ ದೇಶ ವಿದೇಶದ 150ಕ್ಕಿಂತ ಕಲಾವಿದರು ಭಾಗವಹಿಸಲಿದ್ದು, ಭಗವಾನ್ ಕೃಷ್ಣ, ರಾಧೆ ಮತ್ತು ವೃಂದಾವನ ಗೋಪಿಕಾರ ರಾಸ್​ಲೀಲಾ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ.

'ದೇಶ ಭದ್ರತೆಗಾಗಿ ಹಗಲಿರುಳು ದುಡಿಯುತ್ತಿರುವ ಹೆಮ್ಮೆಯ ಭದ್ರತಾ ಪಡೆಯೊಂದಿಗೆ ನಮ್ಮ ಸಂತೋಷವನ್ನು ಹಂಚಿಕೊಳ್ಳುತ್ತಿದ್ದೇವೆ. ಧೀರೂಭಾಯಿ ಅಂಬಾನಿ ಸ್ಕ್ವೇರ್​ನಲ್ಲಿರುವ ವಿಶೇಷ ಸಂಗೀತ ಕಾರಂಜಿ ಪ್ರದರ್ಶನ ಕಾರ್ಯಕ್ರಮದ ಮೂಲಕ ನಮಗೆ ಭದ್ರತೆ ಒದಗಿಸುತ್ತಿರುವ ಕುಟುಂಬದೊಂದಿಗೆ ಸಂತಸ ಹಂಚಿಕೊಳ್ಳಲು ಬಯಸುತ್ತೇವೆ' ಎಂದು ನೀತಾ ಅಂಬಾನಿ ಹೇಳಿದ್ದಾರೆ.

ಧೀರೂಭಾಯಿ ಅಂಬಾನಿ ಚೌಕವು ಮುಂಬೈನ ಜಿಯೋ ವರ್ಲ್ಡ್ ಸೆಂಟರ್​ನ ಭಾಗವಾಗಿದ್ದು, ಅತಿದೊಡ್ಡ ಹಾಗೂ ಅತ್ಯುತ್ತಮ ಜಾಗತಿಕ ಸಮಾವೇಶ ಸವಲತ್ತು-ಸೌಲಭ್ಯಗಳನ್ನು ಭಾರತದಲ್ಲಿ ಹೊಂದುವ ಉದ್ದೇಶದಿಂದ, ರಿಲಯನ್ಸ್ ಇಂಡಸ್ಟ್ರೀಸ್ ಹಾಗೂ ಮುಂಬಯಿ ಮೆಟ್ರೋಪಾಲಿಟನ್ ರೀಜನ್ ಡೆವೆಲಪ್ಮೆಂಟ್ ಅಥಾರಿಟಿ ಜಂಟಿಯಾಗಿ ಇದನ್ನು ಅಭಿವೃದ್ಧಿಪಡಿಸಿದೆ.

ಇಲ್ಲಿ 45 ಅಡಿ ಎತ್ತರದಲ್ಲಿ ಚಿಮ್ಮುವಂತಹ ಕಾರಂಜಿಗಳನ್ನು ನಿರ್ಮಿಸಲಾಗಿದ್ದು, ಇದಕ್ಕಾಗಿ 600 ಎಲ್​ಇಡಿ ದೀಪಗಳನ್ನು ಬಳಸಲಾಗಿದೆ. ಅಲ್ಲದೆ 392 ನೀರಿನ ನಳಿಕೆಗಳು ಈ ಅಧ್ಬುತ ಕಾರಂಜಿಯಲ್ಲಿ ಒಳಗೊಂಡಿದೆ. ಇದು ಮುಂದಿನ ದಿನಗಳಲ್ಲಿ ಮುಂಬೈ ನಗರದ ಹೊಸ ಆಕರ್ಷಣೆ ಕೇಂದ್ರ ಬಿಂದುವಾಗುವ ನಿರೀಕ್ಷೆಯಿದೆ.
ಸುಮಾರು 2000 ಸೌಲಭ್ಯವಂಚಿತ ಮಕ್ಕಳನ್ನು, ಧೀರೂಭಾಯಿ ಅಂಬಾನಿ ಚೌಕದಲ್ಲಿ ಮನಸೂರೆಗೊಳ್ಳುವ ಸಂಗೀತ ಕಾರಂಜಿ ಪ್ರದರ್ಶನಕ್ಕಾಗಿ ಆಹ್ವಾನಿಸಿ ಈ ಹಿಂದೆ ಇದನ್ನು ಅಂಬಾನಿ ಕುಟುಂಬ ಉದ್ಘಾಟಿಸಿರುವುದು ವಿಶೇಷವಾಗಿತ್ತು.
First published: March 12, 2019, 8:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading