Viral News: ಮಗನನ್ನು ಕಂಬಕ್ಕೆ ಕಟ್ಟಿ, ಕಣ್ಣಿಗೆ ಖಾರದ ಪುಡಿ ಹಾಕಿ ಹೊಡೆದ ತಾಯಿ! ಅಷ್ಟಕ್ಕೂ ಆ ಬಾಲಕ ಮಾಡಿದ್ದೇನು?

ತಾಯಿಯೊಬ್ಬಳು ತನ್ನ 15 ವರ್ಷದ ಮಗನಿಗೆ ಹಿಗ್ಗಾ ಮುಗ್ಗ ಥಳಿಸಿದ್ದಾಳೆ. ಆತನ ಕೈಕಾಲು ಕಟ್ಟಿ, ವಿದ್ಯುತ್ ಕಂಬಕ್ಕೆ ಬಿಗಿದು, ಕಣ್ಣಿಗೆ ಖಾರದ ಮೆಣಸಿನ ಪುಡಿ ಹಾಕಿ, ಚೆನ್ನಾಗಿ ಥಳಿಸಿದ್ದಾಳೆ. ಅಷ್ಟಕ್ಕೂ ಆ ತಾಯಿ ಮಗನ ಮೇಲೆ ಹಲ್ಲೆ ಮಾಡುವುದಕ್ಕೂ ದೊಡ್ಡದಾದ ಕಾರಣ ಇದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ತೆಲಂಗಾಣ: ತಾಯಿ (Mother) ಅಂದ್ರೆ ಮಮತೆಯ ಮೂರ್ತಿ ಅಂತಾರೆ. ನನಗೆ ಕಷ್ಟ ಆದರೂ ನನ್ನ ಮಕ್ಕಳಿಗೆ (Children) ಕಷ್ಟ ಬರಬಾರದು ಅಂತ ತಾಯಿ ಮಕ್ಕಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುತ್ತಾಳೆ. ಆದರೆ ಮಕ್ಕಳು ತಪ್ಪು ಮಾಡಿದಾಗ ಕೆಲವೊಮ್ಮೆ ಆಕೆ ಕೊಡುವ ಶಿಕ್ಷೆಯೂ (Punishment) ಉಗ್ರವಾಗಿರುತ್ತದೆ. ಇಲ್ಲಿ ಆಗಿದ್ದೂ ಅದೆ, ತಾಯಿಯೊಬ್ಬಳು ತನ್ನ 15 ವರ್ಷದ ಮಗನಿಗೆ (Son) ಹಿಗ್ಗಾ ಮುಗ್ಗ ಥಳಿಸಿದ್ದಾಳೆ. ಆತನ ಕೈಕಾಲು ಕಟ್ಟಿ, ವಿದ್ಯುತ್ ಕಂಬಕ್ಕೆ ಬಿಗಿದು, ಕಣ್ಣಿಗೆ ಖಾರದ ಮೆಣಸಿನ ಪುಡಿ (Chilly Powder) ಹಾಕಿ, ಚೆನ್ನಾಗಿ ಥಳಿಸಿದ್ದಾಳೆ. ಅಷ್ಟಕ್ಕೂ ಆ ತಾಯಿ ಮಗನ ಮೇಲೆ ಹಲ್ಲೆ ಮಾಡುವುದಕ್ಕೂ ದೊಡ್ಡದಾದ ಕಾರಣ ಇದೆ. ಇದೀಗ ಆ ತಾಯಿ ತನ್ನ ಮನನನ್ನು ಥಳಿಸುತ್ತಿರುವ ವಿಡಿಯೋ (Video) ವೈರಲ್ (Viral) ಆಗಿದ್ದು, ನೆಟ್ಟಿಗರು ಪರ ಮತ್ತು ವಿರೋಧದ ಕಾಮೆಂಟ್ (Comment) ಮಾಡುತ್ತಿದ್ದಾರೆ.

ಘಟನೆ ನಡೆದಿದ್ದು ಎಲ್ಲಿ?

ತೆಲಂಗಾಣ ರಾಜ್ಯದ ಹೈದ್ರಾಬಾದ್ ಸಮೀಪದ ಸೂರ್ಯಪೇಟೆಯಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ದಿನಗೂಲಿ ನೌಕರನ 15 ವರ್ಷದ ಪುತ್ರನಿಗೆ ಆತನ ತಾಯಿಯೇ ಥಳಿಸಿದ್ದಾಳೆ. ಆತನ ಕೈಕಾಲು ಕಟ್ಟಿ, ವಿದ್ಯುತ್ ಕಂಬಕ್ಕೆ ಬಿಗಿದು, ಕಣ್ಣಿಗೆ ಖಾರದ ಮೆಣಸಿನ ಪುಡಿ ಹಾಕಿ, ಚೆನ್ನಾಗಿ ಥಳಿಸಿದ್ದಾಳೆ.

ಗಾಂಜಾ ವ್ಯಸನ ಬಿಡಿಸಲು ತಾಯಿಯಿಂದ ಥಳಿತ

ಇಷ್ಟಕ್ಕೂ ತಾಯಿ ತನ್ನ 15 ವರ್ಷದ ಮಗನನ್ನು ಈ ರೀತಿಯಾಗಿ ಥಳಿಸಲು ಬಲವಾದ ಕಾರಣ ಇದೆ. ಅದೇನೆಂದರೆ ಗಾಂಜಾ ವ್ಯಸನ. 15 ವರ್ಷದ ಬಾಲಕ ಈಗಾಗಲೇ ಗಾಂಜಾ ವ್ಯಸನಿಯಾಗಿದ್ದನಂತೆ. ಸ್ನೇಹಿತರ ಜೊತೆ ಸೇರಿ ಮಾದಕ ವಸ್ತುಗಳ ಸೇವನೆಯಲ್ಲಿ ತೊಡಗಿದ್ದನಂತೆ. ಈ ಗಾಂಜಾ ಸೇವನೆಯ ಚಟ ಬಿಡಿಸುವುದಕ್ಕಾಗಿ ತಾಯಿ ಈ ರೀತಿಯ ಉಗ್ರ ಶಿಕ್ಷೆ ಕೊಟ್ಟಿದ್ದಾಳೆ.

 ಇದನ್ನೂ ಓದಿ: Viral News: ಗಲಾಟೆ ನಡುವೆಯೇ ಉರಿಯುತ್ತಿರುವ ಕಟ್ಟಡದಿಂದ ಮಗುವನ್ನು ರಕ್ಷಿಸಿ Real Hero ಆದ ಕಾನ್ಸ್‌ಟೇಬಲ್!

ಗಾಂಜಾ ಬಿಡುತ್ತೀನಿ ಅಂತ ಮಾತುಕೊಟ್ಟ ಮಗ

ಹುಡುಗನಿಗೆ ಈ ಹಿಂದೆ ಮನೆಯವರೆಲ್ಲ ತುಂಬಾ ಸಲ ಬುದ್ಧಿ ಹೇಳಿದ್ದಾರೆ. ಆದರೆ ಆತ ಕೇಳದೇ, ತನ್ನ ಚಟ ಮುಂದುವರಿಸಿದ್ದಾನೆ. ಹೀಗಾಗಿ ಮಗ ಗಾಂಜಾ ವ್ಯಸನಿಯಾಗಿರುವುದನ್ನು ನೋಡಿ ಸಹಿಸಲಾಗದೇ ತಾಯಿ ಹುಡುಗನಿಗೆ ಥಳಿಸಿ ಮುಖಕ್ಕೆ ಮೆಣಸಿನಕಾಯಿ ಪುಡಿ ಹಚ್ಚಿದ್ದಾರೆ. ಒಂದು ವರ್ಷದೊಳಗೆ ಗಾಂಜಾ ಸೇವಸಿವುದನ್ನು ಬಿಡುವುದಾಗಿ ಭರವಸೆ ನೀಡಿದ ಬಳಿಕ ಆತನನ್ನು ಬಿಟ್ಟಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್

ಹೀಗೆ ತಾಯಿ ತನ್ನ ಮಗನನ್ನು ಥಳಿಸುತ್ತಿರುವ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿ, ಸೋಶಿಯಲ್ ಮೀಡಿಯಾಕ್ಕೆ ಹಾಕಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ಜನರು ಪರ ವಿರೋಧದ ಕಾಮೆಂಟ್ ಮಾಡಿದ್ದಾರೆ. ಬಾಲಕನನ್ನು ಥಳಿಸಿದ್ದು ಸರಿಯಲ್ಲ ಅಂತ ಕೆಲವರು ಹೇಳಿದ್ದಾರೆ. ಇನ್ನು ಕೆಲವರು ದಾರಿ ತಪ್ಪಿದ ಬಾಲಕನಿಗೆ ಸರಿಯಾದ ಶಿಕ್ಷೆಯಾಯಿತು ಎಂದಿದ್ದಾರೆ, ಇನ್ನು ಕೆಲವರು ಬಾಲಕ ಮಾಡಿದ್ದು ತಪ್ಪೇ, ಹಾಗಂತ ಆತನ ತಾಯಿ ಅಷ್ಟು ಕ್ರೂರವಾಗಿ ವರ್ತಿಸಿ, ಆ ರೀತಿಯ ಶಿಕ್ಷೆ ಕೊಡಬಾರದಿತ್ತು ಅಂತ ಹೇಳಿದ್ದಾರೆ.

ಇದನ್ನೂ ಓದಿ: Amit Shah: ಲೋಕಸಭೆಯಲ್ಲಿ ಕ್ರಿಮಿನಲ್ ಪ್ರೊಸೀಜರ್ ಬಿಲ್ ಪಾಸ್..! ಸಂತ್ರಸ್ತರಿಗೆ ಇದರಿಂದೇನು ಲಾಭ?

ಹೆಚ್ಚುತ್ತಿದೆ ಮಾದಕ ವಸ್ತುಗಳ ಹಾವಳಿ

ಇತ್ತೀಚಿನ ದಿನಗಳಲ್ಲಿ ತೆಲಂಗಾಣದಲ್ಲಿ ಡ್ರಗ್ಸ್ ಹಾವಳಿ ಹೆಚ್ಚಾಗಿದ್ದು, ರಾಜ್ಯದಲ್ಲಿ ಮಾದಕ ವ್ಯಸನ ಮತ್ತು ಮಾದಕ ವಸ್ತುಗಳ ಸೇವನೆಗೆ ಕಡಿವಾಣ ಹಾಕುವಂತೆ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
Published by:Annappa Achari
First published: